ಕರ್ನಾಟಕ ರಕ್ಷಣಾ ವೇದಿಕೆ ನಡೆಸಿರುವ ಬೆಳಗಾವಿ ಗಡಿ ಹೋರಾಟಗಳ ಸಮಗ್ರ ಚಿತ್ರಣ
1956ರಲ್ಲಿ ಭಾಷಾವಾರು ಪ್ರಾಂತ್ಯಗಳು ವಿಂಗಡನೆಗೊಂಡು ರಾಜ್ಯಗಳು ಏಕೀಕರಣ ಆದಾಗಿಂದ ಬೆಳಗಾವಿಯಲ್ಲಿ ನೆಲೆಗೊಂಡ ಕೆಲವು ಮರಾಠಿ ನಾಯಕರು ರಾಜಕೀಯ ದುರುದ್ದೇಷದಿಂದ ಪಕ್ಕದ ಮಹಾರಾಷ್ಟ್ರ ಸರ್ಕಾರದ ಪರವಾಗಿ ಕೆಲಸ ಮಾಡುತ್ತಾ, ಬೆಳಗಾವಿಯಲ್ಲಿರುವ ಮರಾಠಿಗರು ಕನ್ನಡಿಗರೊಡನೆ ಬೆರೆಯದಂತೆ ಮಾಡಿ, ಆಗಿಂದಾಗ್ಗೆ ಕನ್ನಡಿಗರನ್ನು ಕೆಣಕುತ್ತಾ, ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ಹುನ್ನಾರ ಮಾಡುತ್ತಿರುವುದು ತಮಗೆಲ್ಲಾ ತಿಳಿದಿರುವ ವಿಷಯವೇ ಆಗಿದೆ.
ಮೈಸೂರು-ಮಹಾರಾಷ್ಟ್ರ-ಕೇರಳ ರಾಜ್ಯಗಳಲ್ಲಿ ಭಾಷಾವಾರು ಪ್ರಾಂತ್ಯ ರಚನೆಯ ಪ್ರಕ್ರಿಯೆ ಸರಿಯಾಗಿ ನಡಿಯದೇ ಗಡಿ ವಿವಾದ ಭುಗಿಲೆದ್ದಾಗ 1966ರ ಕೊನೆಯಲ್ಲಿ ಕೇಂದ್ರ ಸರ್ಕಾರದಿಂದ ಮೆಹರ್ಚಂದ್ ಮಹಾಜನ್ ಆಯೋಗ ರಚನೆಯಾಗಿ, ಆಯೋಗ ನೀಡುವ ತೀರ್ಪಿಗೆ ನಾವು ತಲೆಬಾಗುತ್ತೀವಿ ಎಂಬ ಹುಸಿ ಮಾತನ್ನು ಕೊಟ್ಟ ಮಹಾರಾಷ್ಟ್ರ ಕೊಟ್ಟ ಮಾತಿಗೆ ತಪ್ಪಿದ್ದಲ್ಲದೆ, ಇವತ್ತಿನವರೆಗೂ ಗಡಿ ಸಮಸ್ಯೆ ಬಗೆಹರಿಯುವುದಕ್ಕೆ ಬಿಡದೆ ರಾಜಕೀಯ ದುರುದ್ದೇಶಗಳಿಂದ ಇಂದಿಗೂ ನಾಡದ್ರೋಹಿ ಸಂಘಟನೆಯಾದ ಎಂ.ಇ.ಎಸ್. ಗೆ ತನ್ನ ಕ್ಕುಮ್ಮಕ್ಕು ನೀಡುತ್ತಾ ಬಂದಿದೆ. ಜೊತೆಗೆ, ಬೆಳಗಾವಿಯ ಮಹಾನಗರ ಪಾಲಿಕೆಗೆ ಕನ್ನಡಿಗರು ಆಯ್ಕೆಯಾಗದಂತೆ ತಡೆಯುವ ದುಸ್ಸಾಹಸಕ್ಕೆ ಹಲವುಬಾರಿ ಕೈಹಾಕಿದೆ ಮತ್ತು ಪಾಲಿಕೆಯಲ್ಲಿನ ಮಾಹಾರಾಷ್ಟ ಮೂಲದ ಅಧಿಕಾರಿಗಳು ಎಂ.ಇ.ಎಸ್. ಕುತಂತ್ರಗಳಿಗೆ ಇಂಬು ನೀಡುವ ಕೆಲಸವನ್ನು ಹಲವುಬಾರಿ ಮಾಡಿದ್ದಾರೆ. ಇಷ್ಟೇ ಅಲ್ಲದೆ ಪ್ರತಿವರ್ಷ ಬೆಳಬಾವಿಯಲ್ಲಿ ಕನ್ನಡ ರಾಜ್ಯೋತ್ಸವದಂದು ಕರಾಳ ದಿನ ಆಚರಿಸುವುದು, ಮೇ ತಿಂಗಳಿನಲ್ಲಿ ಮರಾಠಿ ಮಹಾಮೇಳಾವ ನಡೆಸುವುದು, ಅಂತ ಮೇಳಗಳಲ್ಲಿ ಕನ್ನಡಿಗರ ಭಾವನೆ ಕೆರಳಿಸುವಂತ ಪ್ರಚೋದನಕಾರಿ ಭಾಷಣಗಳನ್ನು ಮಹಾರಾಷ್ಟ್ರದ ರಾಜಕಾರಣಿಗಳಿಂದ ಮಾಡಿಸುವುದು, ಇತ್ಯಾದಿ ಕೆಲಸಗಳಿಗೆ ಕೈಹಾಕಿದ್ದು, ಈ ಬಾರಿಯೂ ಮೇ ೨೦ ರಂದು ಬೆಳಗಾವಿಯಲ್ಲಿ ಇಂತಹದ್ದೇ ಒಂದು ಮೇಳವನ್ನು ನಡೆಸಲು ಮುಂದಾಗಿದೆ.
ಮೈಸೂರು-ಮಹಾರಾಷ್ಟ್ರ-ಕೇರಳ ರಾಜ್ಯಗಳಲ್ಲಿ ಭಾಷಾವಾರು ಪ್ರಾಂತ್ಯ ರಚನೆಯ ಪ್ರಕ್ರಿಯೆ ಸರಿಯಾಗಿ ನಡಿಯದೇ ಗಡಿ ವಿವಾದ ಭುಗಿಲೆದ್ದಾಗ 1966ರ ಕೊನೆಯಲ್ಲಿ ಕೇಂದ್ರ ಸರ್ಕಾರದಿಂದ ಮೆಹರ್ಚಂದ್ ಮಹಾಜನ್ ಆಯೋಗ ರಚನೆಯಾಗಿ, ಆಯೋಗ ನೀಡುವ ತೀರ್ಪಿಗೆ ನಾವು ತಲೆಬಾಗುತ್ತೀವಿ ಎಂಬ ಹುಸಿ ಮಾತನ್ನು ಕೊಟ್ಟ ಮಹಾರಾಷ್ಟ್ರ ಕೊಟ್ಟ ಮಾತಿಗೆ ತಪ್ಪಿದ್ದಲ್ಲದೆ, ಇವತ್ತಿನವರೆಗೂ ಗಡಿ ಸಮಸ್ಯೆ ಬಗೆಹರಿಯುವುದಕ್ಕೆ ಬಿಡದೆ ರಾಜಕೀಯ ದುರುದ್ದೇಶಗಳಿಂದ ಇಂದಿಗೂ ನಾಡದ್ರೋಹಿ ಸಂಘಟನೆಯಾದ ಎಂ.ಇ.ಎಸ್. ಗೆ ತನ್ನ ಕ್ಕುಮ್ಮಕ್ಕು ನೀಡುತ್ತಾ ಬಂದಿದೆ. ಜೊತೆಗೆ, ಬೆಳಗಾವಿಯ ಮಹಾನಗರ ಪಾಲಿಕೆಗೆ ಕನ್ನಡಿಗರು ಆಯ್ಕೆಯಾಗದಂತೆ ತಡೆಯುವ ದುಸ್ಸಾಹಸಕ್ಕೆ ಹಲವುಬಾರಿ ಕೈಹಾಕಿದೆ ಮತ್ತು ಪಾಲಿಕೆಯಲ್ಲಿನ ಮಾಹಾರಾಷ್ಟ ಮೂಲದ ಅಧಿಕಾರಿಗಳು ಎಂ.ಇ.ಎಸ್. ಕುತಂತ್ರಗಳಿಗೆ ಇಂಬು ನೀಡುವ ಕೆಲಸವನ್ನು ಹಲವುಬಾರಿ ಮಾಡಿದ್ದಾರೆ. ಇಷ್ಟೇ ಅಲ್ಲದೆ ಪ್ರತಿವರ್ಷ ಬೆಳಬಾವಿಯಲ್ಲಿ ಕನ್ನಡ ರಾಜ್ಯೋತ್ಸವದಂದು ಕರಾಳ ದಿನ ಆಚರಿಸುವುದು, ಮೇ ತಿಂಗಳಿನಲ್ಲಿ ಮರಾಠಿ ಮಹಾಮೇಳಾವ ನಡೆಸುವುದು, ಅಂತ ಮೇಳಗಳಲ್ಲಿ ಕನ್ನಡಿಗರ ಭಾವನೆ ಕೆರಳಿಸುವಂತ ಪ್ರಚೋದನಕಾರಿ ಭಾಷಣಗಳನ್ನು ಮಹಾರಾಷ್ಟ್ರದ ರಾಜಕಾರಣಿಗಳಿಂದ ಮಾಡಿಸುವುದು, ಇತ್ಯಾದಿ ಕೆಲಸಗಳಿಗೆ ಕೈಹಾಕಿದ್ದು, ಈ ಬಾರಿಯೂ ಮೇ ೨೦ ರಂದು ಬೆಳಗಾವಿಯಲ್ಲಿ ಇಂತಹದ್ದೇ ಒಂದು ಮೇಳವನ್ನು ನಡೆಸಲು ಮುಂದಾಗಿದೆ.
ಈ
ಸಂದರ್ಭದಲ್ಲಿ, ಬೆಳಗಾವಿಯಲ್ಲಿನ ಈ ಗಡಿ ಸಮಸ್ಯೆಯನ್ನು ಬಗೆಹರಿಸಲು ಮತ್ತು ಎಂ.ಇ.ಎಸ್.
ನಂತಹ ನಾಡದ್ರೋಹಿ ಸಂಘಟನೆಗಳ ವಿರುದ್ಧ ಹಲವಾರು ಬಾರಿ ನಿರಂತರ ಹೋರಾಟಗಳನ್ನು
ನಡೆಸುಕೊಂಡು ಬಂದಿರುವ ಕರ್ನಾಟಕ ರಕ್ಷಣಾ ವೇದಿಕೆ, ಈ ವಿಚಾರವಾಗಿ ಇದುವರೆಗೂ ನಡೆಸಿರುವ
ಎಲ್ಲ ಹೋರಾಟಗಳ ಸಮಗ್ರ ಚಿತ್ರಣದ ವಿವರಗಳನ್ನು ಕೆಳಗೆ ನೋಡಿ:
ಕನ್ನಡ ವಿರೋಧಿ ಧೋರಣೆಯಿದ್ದ ಬೆಳಗಾವಿಯ ಮಹಾಪೌರ ವಿಜಯ ಮೋರೆ ವಿರುದ್ಧ ೨೦೦೫ ರಲ್ಲಿ ಹೋರಾಟಕ್ಕೆ ನಾಂದಿ
ಬೆಳಗಾವಿಯಲ್ಲಿ ಮರಾಠಿ ಪ್ರತ್ಯೇಕತೆಯ ದನಿಯೆತ್ತಿ, ಕನ್ನಡಿಗರು ಮರೆತ ಒಗ್ಗಟ್ಟನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ರಾಜಕೀಯ ಪ್ರಾಬಲ್ಯ ಸಾಧಿಸಿ ಸೊಕ್ಕಿನಿಂದ ಮೆರೆದಾಡುತ್ತಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿಯು ೨೦೦೫ರಲ್ಲಿ ಬೆಳಗಾವಿ ನಗರಪಾಲಿಕೆಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ನಿರ್ಣಯ ಮಂಡಿಸಿದಾಗ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟಕ್ಕೆ ಮುಂದಾಯಿತು. ೨೦೦೫ ರಲ್ಲಿ ಕನ್ನಡ ವಿರೋಧಿ ಧೋರಣೆ ತೋರುತ್ತಿದ್ದ ಬೆಳಗಾವಿಯ ಮಹಾಪೌರರಾಗಿದ್ದ ವಿಜಯ ಮೋರೆ, ಕರ್ನಾಟಕ ಸರ್ಕಾರದಿಂದ ಅನುದಾನ ಪಡೆಯಲು ಬೆಂಗಳೂರಿಗೆ ಬಂದಿದ್ದರು. ಆಗ ಅವರ ವಿರುದ್ಧ ಹೋರಾಡುವ ಮೂಲಕ ಐತಿಹಾಸಿಕ ಹೋರಾಟಕ್ಕೆ ನಾಂದಿ ಹಾಡಿದೆವು.
೨೦೦೮ ರಲ್ಲಿ ಕನ್ನಡಿಗರ ತೆಕ್ಕೆಗೆ ಬೆಳಗಾವಿ ಪಾಲಿಕೆಯನ್ನು ದಕ್ಕಿಸುಕೊಡುವುದರಲ್ಲಿ ಕರವೇ ಯಶಸ್ಸು
೧೯೮೪ ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಬೆಳಗಾವಿ ನಗರ ಪಾಲಿಕೆಗೆ ಆಗಿನಿಂದಲೂ ಅಲ್ಲಿನ ಮೇಯರುಗಳು ಎಂ.ಇ.ಎಸ್ ಪಕ್ಷದವರೇ ಆಯ್ಕೆಯಾಗುತ್ತಿದ್ದು. ಒಂದು ಬಾರಿ ಮಾತ್ರ ೧೯೯೧ರಲ್ಲಿ ಹಿರಿಯರಾದ ಸಿದ್ಧನ ಗೌಡ ಪಾಟೀಲರು ಆರಿಸಿ ಬಂದಿದ್ದರು. ಅದಾದ ನಂತರ ಸುಮಾರು ಹದಿನೇಳು ವರ್ಷಗಳ ನಂತರ ೨೦೦೮ ರಲ್ಲಿ ಕನ್ನಡದ ಮೇಯರ್ ಆಯ್ಕೆಯಾಗುವಲ್ಲಿ, ವಿಧಾನಸಭಾ ಚುನಾವಣೆಯಲ್ಲಿ ಎಂಇಎಸ್ ಸಂಪೂರ್ಣವಾಗಿ ನೆಲಕಚ್ಚುವವರೆಗಿನ ನಾನಾ ಹಂತಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯು ವಹಿಸಿದ ಪಾತ್ರ ಗಣನೀಯವಾದುದಾಗಿದೆ. ಈ ಯಶಸ್ಸಿಗೆ ಮುಖ್ಯ ಕಾರಣಗಳು:
- ಬೆಳಗಾವಿ ಜಿಲ್ಲೆಯಾದ್ಯಂತ, ಹಳ್ಳಿಯಿಂದ ಹಿಡಿದು ಜಿಲ್ಲೆಯವರೆಗೂ ಸಾವಿರಾರು ಶಾಖೆಗಳನ್ನು ತೆರೆದು; ಕನ್ನಡಿಗರಲ್ಲಿ ಜಾಗೃತಿ ಮೂಡಿಸಿದೆವು.
- ಬೆಳಗಾವಿಯಲ್ಲಿ ಪ್ರಕ್ಯಾತ ಗಾಯಕ ಸಿ. ಅಶ್ವತ್ ರವರಿಂದ ಕನ್ನಡವೇ ಸತ್ಯ ಕಾರ್ಯಕ್ರಮ ನಡೆಸಿ ಕನ್ನಡಿಗರಲ್ಲಿ ಜಾಗೃತಿ ಮೂಡಿಸಿದೆವು.
- ಸಂಘಟನೆಯ ಮೂಲಕ, ಪಾಲಿಕೆ ಚುಣಾವಣೆಗಳಲ್ಲಿ ಕನ್ನಡದ ಅಭ್ಯರ್ತಿಗಳನ್ನೇ ಗೆಲ್ಲಿಸುವಂತೆ ಕನ್ನಡಿಗರಲ್ಲಿ ಕರೆ ನೀಡಿದೆವು.
- ಎರಡು ಭಾರಿ ಸಾವಿರಾರು ಸಂಖ್ಯೆಯಲ್ಲಿ ಬೆಳಗಾವಿಯಿಂದ ಬೆಂಗಳೂರಿಗೆ ಬಂದು, ಆಗಿನ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿಯವರಲ್ಲಿ, ಬೆಳಗಾವಿಗೆ ಅಭಿವೃದ್ದಿಗೆ ವಿಶೇಷ ಒತ್ತು ನೀಡುವಂತೆ ಮನವಿ ಮಾಡಿಕೊಂಡಿದ್ದೆವು.
- ಬೆಳಗಾವಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಶಾಧಿವೇಶಣ ಹಾಗು ವಿಧಾನ ಸೌಧ ಶಂಖು ಸ್ಥಾಪನೆಗೆ ಕಾರಣವಾಯಿತು.
ಇವೆಲ್ಲದರ ಪರಿಣಾಮವಾಗಿ ಪಾಲಿಕೆ ಚುಣಾವಣೆಯಲ್ಲಿ ಕನ್ನಡಿಗರು ಮೇಲುಗೈ ಸಾಧಿಸಿದರು. ಮಹಾನಗರ ಪಾಲಿಕೆಯ ೫೭ ಸ್ತಾನಗಳಲ್ಲಿ ೨೮ ಸ್ಥಾನಗಳನ್ನು ಕನ್ನಡದ ಅಭ್ಯರ್ತಿಗಳು ಗೆದ್ದುಕೊಂಡರು. ಮಾರ್ಚ್ ೪ ೨೦೦೮ ರಂದು ನಡೆದ ಮಹಾಪೌರರ ಆಯ್ಕೆಯಲ್ಲಿ ನಮ್ಮ ಬೆಂಬಲಿತ ಕನ್ನಡಿಗರೇ ಮಾಹಾಪೌರರಾದರು. ೧೭ ವರುಷಗಳಲ್ಲಿ ಇದೇ ಮೊದಲನೇ ಭಾರಿಗೆ ಕನ್ನಡದ ಅಭ್ಯರ್ಥಿ ಮಹಾಪೌರರಾದದ್ದು. ಇದು ಕರ್ನಾಟಕ ರಕ್ಷಣಾ ವೇದಿಕೆಯ, ಕನ್ನಡಿಗರ ಮತ್ತು ಕರ್ನಾಟಕದ ಐತಿಹಾಸಿಕ ಗೆಲುವಾಯಿತು.
೨೦೧೧ ರಲ್ಲಿ ಎಂ.ಇ.ಎಸ್. ಪರ ಇದ್ದು ಕನ್ನಡ ವಿರೋಧಿ ಧೋರಣೆ ಹೊಂದಿದ್ದ ಮೇಯರ್/ಉಪಮೇಯರ್ ಗಳಿದ್ದ ಬೆಳಗಾವಿ ನಗರ ಪಾಲಿಕೆ ವಿಸರ್ಜನೆಗೆ ಕಾರಣವಾದ ಹೋರಾಟ
ನಿರಂತರವಾಗಿ
ನಾಡವಿರೋಧಿ ಚಟುವಟಿಕೆಗಳನ್ನು ಮಾಡಿಕೊಂಡು ಬಂದಿದ್ದ ಎಂ.ಇ.ಎಸ್. ಮತ್ತು ಅದಕ್ಕೆ
ಕುಮ್ಮಕ್ಕು ನೀಡುತ್ತಿದ್ದ ಬೆಳಗಾವಿ ನಗರ ಪಾಲಿಕೆಯ ಮೇಯರ್-ಉಪಮೇಯರ್ ಗಳ ಬಂಧನಕ್ಕೆ
ಆಗ್ರಹಿಸಿ, ಮತ್ತು ಬೆಳಗಾವಿ ನಗರಪಾಲಿಕೆ ವಿಸರ್ಜಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ
ವೇದಿಕೆಯಿಂದ ನಿರಂತರ ಹೋರಾಟ ನಡೆಸಿದ್ದೆವು.
ಹೋರಾಟದ ಅಂಗವಾಗಿ ನವೆಂಬರ್ ೩, ೨೦೧೧ ರಂದು ರಾಜ್ಯವ್ಯಾಪಿ ಪ್ರತಿಭಟನೆ ಆರಂಭಿಸಿದ ನಾವು, ಇಡೀ ತಿಂಗಳು ರಾಜ್ಯಾದ್ಯಂತ ನಿರಂತರ ಪ್ರತಿಭಟನೆಗಳನ್ನು ನಡೆಸಿ, ಒಂದು ವಾರಕ್ಕೂ ಹೆಚ್ಚು ದಿನಗಳ ಕಾಲ ಉಪವಾಸ ಸತ್ಯಾಗ್ರಹವನ್ನೂ ನಡೆಸಿದೆವು. ಈ ಎಲ್ಲ ಹೋರಾಟಗಳು ಮತ್ತು ರಾಜ್ಯ ಸರ್ಕಾರದ ಮೇಲೆ ನಾವು ತಂದ ನಿರಂತರ ಒತ್ತಾಯದ ಫಲವಾಗಿ, ನಮ್ಮ ರಾಜ್ಯಸರ್ಕಾರ ಬೆಳಗಾವಿ ಮಹಾನಗರ ಪಾಲಿಕೆಯನ್ನು ವಿಸರ್ಜಿಸಿತು. ಇದಕ್ಕಾಗಿ ನಾವು ನಡೆಸಿದ ಎಲ್ಲ ಹೋರಾಟಗಳು ಇಂತಿವೆ:
- ನವೆಂಬರ್ ೩, ೨೦೧೧ ರಂದು ರಾಜ್ಯವ್ಯಾಪಿ ಪ್ರತಿಭಟನೆ ಆರಂಭ
- ನವೆಂಬರ್ ೮, ೨೦೧೧ ರಂದು ಬೆಂಗಳೂರಿನ ಬನ್ನಪ್ಪ ಪಾರ್ಕಿನಿಂದ ವಿಧಾನಸೌಧದವರೆಗೆ ಬೃಹತ್ ಪ್ರತಿಭಟನಾ ನಡಿಗೆ ಮತ್ತು ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸುವಿಕೆ
- ಬೆಳಗಾವಿ ಮೇಯರ್-ಉಪಮೇಯರ್ ಸದಸ್ಯತ್ವ ರದ್ದುಗೊಳಿಸದೇ, ನಗರ ಪಾಲಿಕೆಯನ್ನೂ ವಿಸರ್ಜಿಸದೇ ಇರುವ ಸರ್ಕಾರದ ಧೋರಣೆಯನ್ನು ಬದಲಿಸಬೇಕೆಂದು ಆಗ್ರಹಿಸಿ ನವೆಂಬರ್ ೧೯ ರಂದು ಬೆಳಗಾವಿಯಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹದ ಆರಂಭ ಮತ್ತು ಬೆಂಗಳೂರಿನಲ್ಲಿ ಅದಕ್ಕೆ ಪೂರಕವಾಗಿ ಪ್ರತಿಭಟನೆ
- ನಮ್ಮ ಹೋರಾಟವನ್ನು ಮುಂದುವರೆಸುತ್ತಾ ನವೆಂಬರ್ ೨೪, ೨೦೧೧ ರಂದು ಬೆಂಗಳೂರಿನಲ್ಲಿರುವ ಮುಖ್ಯಮಂತ್ರಿ ಅವರ ಗೃಹ ಕಚೇರಿ "ಕೃಷ್ಣಾ" ಮುಂದೆ ನೂರಾರು ಕಾರ್ಯಕರ್ತರೊಡನೆ ರಾಜ್ಯ ಸರ್ಕಾರದ ಧೋರಣೆಯನ್ನು ಪ್ರತಿಭಟಿಸುವ ಮೂಲಕ ಹೋರಾಟದ ತೀವ್ರತೆಯನ್ನು ಹೆಚ್ಚಿಸಿದೆವು.
ಒಟ್ಟಾರೆ, ಈ ವಿಷಯವಾಗಿ, ಬೆಳಗಾವಿಯಲ್ಲಿನ ವಿದ್ಯಮಾನಗಳ ಕುರಿತು ಟಿ.ಎ. ನಾರಾಯಣಗೌಡರು ಕನ್ನಡಪ್ರಭಕ್ಕೆ ನೀಡಿದ ಸಂದರ್ಶನದ ವಿವರ ಮತ್ತು ಈ ಮೇಲಿನ ಎಲ್ಲ ಹೋರಾಟಗಳ ಪತ್ರಿಕಾ ವರದಿಯನ್ನು ಕೆಳಗಿನ ಕೊಂಡಿಗಳಲ್ಲಿ ನೋಡಿ:
- http://karave.blogspot.com/2011/11/karaala-dina-aacharisida-mes-varthane.html
- http://karave.blogspot.com/2011/11/belagaavi-paalike-visarjanege-ottaayisi.html
- http://karave.blogspot.com/2011/11/belagavi-naadadrohigala-viruddha.html
- http://karave.blogspot.com/2011/11/belagavi-paalike-bagge-sarkaarada.html
- http://karave.blogspot.com/2011/11/belagavi-sarkaarada-dhorane-viruddha.html
- http://karave.blogspot.com/2011/11/belagavi-naadadrohi-meyor-upameyor.html
- http://karave.blogspot.com/2011/11/belagaviya-vidyamaanagalu.html
ಬೆಳಗಾವಿಯ ವಿಚಾರವಾಗಿ ನಾವು ನಡೆಸಿರುವ ಇತರ ಎಲ್ಲ ಹೋರಾಟಗಳ ಪತ್ರಿಕಾ ವರದಿಗಳು ಹೀಗಿವೆ: