Tuesday, December 4, 2012

ಬೆಳಗಾವಿಯಲ್ಲಿ ರಾಜ್ಯಮಟ್ಟದ ಗಡಿನಾಡ ಕನ್ನಡಿಗರ ಜಾಗೃತಿ ಸಮಾವೇಶ


ಕನ್ನಡ ಚಳವಳಿಗೆ 50 ವರ್ಷ ತುಂಬಿದ ಸಂದರ್ಭದಲ್ಲಿ ೩೦-೧೧-೨೦೧೨ ರಂದು ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿಯಲ್ಲಿ ರಾಜ್ಯಮಟ್ಟದ "ಗಡಿನಾಡ ಕನ್ನಡಿಗರ ಜಾಗೃತಿ ಸಮಾವೇಶ" ನಡೆಸುತ್ತಿದೆ. ಸಮಾವೇಶದಲ್ಲಿ ಬೃಹತ್ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಮೆರವಣಿಗೆ ಚೆನ್ನಮ್ಮ ವೃತ್ತದಿಂದ ಶುರುವಾಗಿ ಸಿಪಿ‌ಎಡ್ ಮೈದಾನ ತಲುಪಿತು. ೨೦,೦೦೦ ಹೆಚ್ಚು ರಕ್ಷಣಾ ವೇದಿಕೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಈ ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಈ ಬೃಹತ್ ಮೆರವಣಿಗೆಯ ಕೆಲವು ಚಿತ್ರಗಳು ಇಲ್ಲಿವೆ


Friday, November 30, 2012

೨೦೧೨ ರ ರಾಜ್ಯಮಟ್ಟದ ಗಡಿನಾಡ ಕನ್ನಡಿಗರ ಜಾಗೃತಿ ಸಮಾವೇಶ - ಪತ್ರಿಕಾವರದಿ

ಕನ್ನಡ ಚಳವಳಿಗೆ 50 ವರ್ಷ ತುಂಬಿದ ಸಂದರ್ಭದಲ್ಲಿ ೩೦-೧೧-೨೦೧೨ ರಂದು ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿಯಲ್ಲಿ ರಾಜ್ಯಮಟ್ಟದ "ಗಡಿನಾಡ ಕನ್ನಡಿಗರ ಜಾಗೃತಿ ಸಮಾವೇಶ" ನಡೆಸಿತು.

ಸಮಾವೇಶದಲ್ಲಿ ಬೃಹತ್ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಮೆರವಣಿಗೆಗೆ ನಾಗನೂರು ರುದ್ರಾಕ್ಷಿಮಠ ಸಿದ್ದರಾಮ ಸ್ವಾಮೀಜಿ ಹಾಗು ಕಾರಂಜಿ ಗುರುಸಿದ್ದ ಸ್ವಾಮಿಜಿ ಚಾಲನೆ ನೀಡಿದರು. ರಾಜ್ಯದ ನಾನ ಕಡೆಯಿಂದ ಸಹಸ್ರಾರು ಸಂಖ್ಯೆಯಲ್ಲಿ  ಆಗಮಿಸಿದ್ದ ವೇದಿಕೆ ಕಾರ್ಯಕರ್ತರು ಹಾಗು ಅಭಿಮಾನಿಗಳು ಈ ಮೆರವಣಿಗೆಯಲ್ಲಿ ಪಾಲ್ಗೊಂಡರು. ಅಶೋಕ ವೃತ್ತದಿಂದ ಆರಂಭವಾದ ಬೃಹತ್ ಮೆರವಣಿಗೆ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ವೃತ್ತ, ಜಿಲ್ಲಾಧಿಕಾರಿ ಕಚೇರಿ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಮಾರ್ಗವಾಗಿ ಸಿಪಿಎಡ್ ಮೈದಾನ ತಲುಪಿತು.

ಸಂಜೆ ಜಾನಪದ ರಸ ಸಂಜೆ ಕಾರ್ಯಕ್ರಮಕ್ಕೆ ಕರ್ನಾಟಕದ ಉಪಮುಖ್ಯಮಂತ್ರಿ ಹಾಗು ಗೃಹ ಸಚಿವರಾದ ಆರ್. ಅಶೋಕ್ ಚಾಲನೆ ನೀಡಿದರು. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಚಂಚಲಿ ಸಿದ್ದಸಂಸ್ಥಾನಮಠದ ಅಲ್ಲಮಪ್ರಭುಶ್ರೀ, ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯಮೃತ್ಯುಂಜಯಶ್ರೀ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರರಾದ ರಾಘವೇಂದ್ರ ಜೋಶಿ, ರಾಮಚಂದ್ರ ಢವಳಿ, ಕಲ್ಲಪ್ಪಣ್ಣ ಸಂಗೊಳ್ಳಿ, ಸಾವಿತ್ರಿ ಅಪ್ಪುಗೋಳರನ್ನು ಸನ್ಮಾನಿಸಲಾಯಿತು.

ಇದರ ಪತ್ರಿಕಾವರದಿಗಳನ್ನು ಇಲ್ಲಿ ನೋಡಿ-

ಕನ್ನಡ ಪ್ರಭ ವರದಿ -Thursday, November 29, 2012

ಗಡಿನಾಡ ಕನ್ನಡಿಗರ ಜಾಗೃತಿ ಸಮಾವೇಶ ಬೆಳಗಾವಿ ಸಜ್ಜು

ಇಂದು (೩೦-೧೧-೨೦೧೨) ನಮ್ಮ ವೇದಿಕೆ ನಡೆಸುತ್ತಿರುವ "ಗಡಿನಾಡ ಕನ್ನಡಿಗರ ಜಾಗೃತಿ ಸಮಾವೇಶ" ಕ್ಕೆ ಬೆಳಗಾವಿ ಸಜ್ಜಾಗಿ ನಿಂತಿದೆ.

ಇದರ ಬಗ್ಗೆ ಇಂದಿನ ಕನ್ನಡಪ್ರಭಾದಲ್ಲಿ ವರದಿ -


Wednesday, November 28, 2012

ಬೆಳಗಾವಿಯಲ್ಲಿ ಗಡಿನಾಡ ಕನ್ನಡಿಗರ ಜಾಗೃತಿ ಸಮಾವೇಶ


ಕರ್ನಾಟಕ ರಕ್ಷಣಾ ವೇದಿಕೆಯು ಇದೆ ತಿಂಗಳು ನವೆಂಬರ್ 30 (ಶುಕ್ರವಾರ) ರಂದು ಗಡಿನಾಡ ಕನ್ನಡಿಗರ ಜಾಗೃತಿ ಸಮಾವೇಶವನ್ನು ಬೆಳಗಾವಿಯಲ್ಲಿ ಆಯೋಜಿಸಿದೆ. ಕನ್ನಡ ಚಳವಳಿಗೆ 50 ವರ್ಷ ತುಂಬಿದ ಈ ಸಂದರ್ಭದಲ್ಲಿ ಗಡಿನಾಡ ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಲಾಗಿದೆ. ಅಂದು ಮಧ್ಯಾಹ್ನ 12 ಘಂಟೆಗೆ ಗಡಿನಾಡ ಕನ
್ನಡಿಗರ ಸಾಂಸ್ಕೃತಿಕ ಜಾಥಾವನ್ನು ಚೆನ್ನಮ್ಮ ವೃತ್ತದಿಂದ ಹಮ್ಮಿಕೊಳ್ಳಲಾಗಿದೆ. ಅಂದು ಗಡಿನಾಡ ಕನ್ನಡಿಗರ ಜಾಗೃತಿ ಸಮಾವೇಶ ಸಂಜೆ 5 ಘಂಟೆಗೆ ಸಿಪಿ‌ಎಡ್ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದೆ

ಇಂದಿನ ಕನ್ನಡಪ್ರಭದಲ್ಲಿ ಸಮಾವೇಶದ ಬಗ್ಗೆ ಸುದ್ದಿ:

Saturday, November 10, 2012

ಕನ್ನಡ ವಿರೋಧಿ ನೀತಿ ಖಂಡಿಸಿ ನಾರಾಯಣಗೌಡರ ನೇತೃತ್ವದಲ್ಲಿ ಕ್ರೈಸ್ತರ ಸಂಘ ಪ್ರತಿಭಟನೆ

ಕನ್ನಡ ವಿರೋಧಿ ನೀತಿ ಖಂಡಿಸಿ ಅಖಿಲ ಕರ್ನಾಟಕ ಕಥೋಲಿಕ್ ಕ್ರೈಸ್ತರ ಕನ್ನಡ ಸಂಘ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಅದರ ಪತ್ರಿಕಾ ವರದಿಗಳು ಇಲ್ಲಿವೆ:

ಕನ್ನಡಪ್ರಭ ವರದಿ:ಉದಯವಾಣಿ ವರದಿ:


ಈಸಂಜೆ ವರದಿ:


ಕನ್ನಡ ವಿರೋಧಿ ನಿಲುವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಕನ್ನಡ ಧರ್ಮಗುರುಗಳ ಅಧ್ಯಕ್ಷತೆಯಲ್ಲಿ ಬೃಹತ್ ಪ್ರತಿಭಟನಾ ಧರಣಿ ನಡೆಯಲಿದೆ

ದಿನಾಂಕ ಮತ್ತು ಸಮಯ: ೧೦ ನವಂಬರ್ ೨೦೧೨, ಬೆಳಿಗ್ಗೆ ೧೧ ಘಂಟೆಗೆ
ಸ್ಥಳ - ಆರ್ಚ್ ಬಿಷಪ್ ಹೌಸ್, ಬೆಂಗಳೂರು


Monday, October 22, 2012

ಪ್ರತ್ಯೇಕತೆ ವಿರುದ್ಧ ನಮ್ಮ ಅಧ್ಯಕ್ಷರ ಕಿಡಿನುಡಿ ಕನ್ನಡಪ್ರಭದಲ್ಲಿ

ಪ್ರತ್ಯೇಕ ರಾಜ್ಯ ರಚನೆಗೆ ನೇತೃತ್ವ ವಹಿಸುವುದಾಗಿ ಉಮೇಶ್ ಕತ್ತಿ ನೀಡಿರುವ ಹೇಳಿಕೆ ಕುರಿತು ನಮ್ಮ ರಾಜ್ಯಾಧ್ಯಕ್ಷರಾದ ನಾರಾಯಣಗೌಡರ ಕಿಡಿನುಡಿ ಮಾರುತ್ತರ ಕನ್ನಡಪ್ರಭ ಪತ್ರಿಕೆಯಲ್ಲಿ.

ಕರ್ನಾಟಕದ ವಿಭಜನೆ ಮಾತನಾಡಿದ ಉಮೇಶ್ ಕತ್ತಿ ವಿರುದ್ಧ ಪ್ರತಿಭಟನೆ

ಕರ್ನಾಟಕದ ವಿಭಜನೆಯ ಮಾತನ್ನು ಆಡುತ್ತಿರುವ ಉಮೇಶ ಕತ್ತಿ ವಿರುದ್ಧ ರಾಜ್ಯದ ಹಲವೆಡೆ ನಮ್ಮ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Friday, October 19, 2012

ಕರ್ನಾಟಕ ರಾಜ್ಯ ವಿಭಜನೆ ಆಗಬೇಕು ಎಂದು ಹೇಳಿಕೆ ನೀಡಿರುವ ಕೃಷಿ ಸಚಿವ ಉಮೇಶ್ ಕತ್ತಿ ವಿರುದ್ಧ ರಾಜ್ಯವ್ಯಾಪಿ ಪ್ರತಿಭಟನೆ

ಕರ್ನಾಟಕ ರಾಜ್ಯ ವಿಭಜನೆ ಆಗಬೇಕು ಎಂದು ಹೇಳಿಕೆ ನೀಡಿ ರಾಜ್ಯದ್ರೋಹವೆಸೆಗಿರುವ ಕೃಷಿ ಸಚಿವ ಉಮೇಶ್ ಕತ್ತಿ ವಿರುದ್ಧ ನಮ್ಮ ಕಾರ್ಯಕರ್ತರು ರಾಯಚೂರು, ಗದಗ, ಯಾದಗಿರಿ, ದಾವಣಗೆರೆ, ಮಂಡ್ಯ, ಬೆಂಗಳೂರು ಒಳಗೊಂಡಂತೆ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿದರು.

ಇದರ ವರದಿಯನ್ನು ಇಲ್ಲಿ ನೋಡಿ -

ಉದಯವಾಣಿ ವರದಿ -


Thursday, October 18, 2012

ಕರ್ನಾಟಕವನ್ನು ಒಡೆಯುವ ಮಾತನ್ನು ಆಡುವ ಉಮೇಶ್ ಕತ್ತಿಯ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಆಕ್ರೋಶ.

ಕರ್ನಾಟಕವನ್ನು ಒಡೆಯುವ ಮಾತನ್ನು ಆಡುವ ಉಮೇಶ್ ಕತ್ತಿಯ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಆಕ್ರೋಶ.

ಈಸಂಜೆ ವರದಿ:


Friday, October 5, 2012

ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಿ ಎಂದು ಆದೇಶ ಹೊರಡಿಸಿದ ಕೇಂದ್ರ ಸರಕಾರ ಹಾಗು ಆ ಆದೇಶವನ್ನು ಪಾಲಿಸಿ ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸಿದ ರಾಜ್ಯ ಸರಕಾರದ ಕ್ರಮವನ್ನು ವಿರೋಧಿಸಿ ೦೫-೧೦-೨೦೧೨ ರಂದು ನಮ್ಮ ವೇದಿಕೆಯಿಂದ ಬೃಹತ್ ಮೆರವಣಿಗೆ

ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಿ ಎಂದು ಆದೇಶ ಹೊರಡಿಸಿದ ಕೇಂದ್ರ ಸರಕಾರ ಹಾಗು ಆ ಆದೇಶವನ್ನು ಪಾಲಿಸಿ ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸಿದ ರಾಜ್ಯ ಸರಕಾರದ ವಿರುದ್ಧ ೦೫-೧೦-೨೦೧೨ ರಂದು ನಮ್ಮ ವೇದಿಕೆಯು ಬೃಹತ್ ಮೆರವಣಿಗೆಯನ್ನು ಬೆಂಗಳೂರಿನಲ್ಲಿ ಹಮ್ಮಿಕೊಂಡಿತ್ತು. ಮೆರವಣಿಗೆಯಲ್ಲಿ ೨೫,೦೦೦ ಹೆಚ್ಚು ಜನ ಪಾಲ್ಗೊಂಡು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಮೆರವಣಿಗೆಯು ನ್ಯಾಷನಲ್ ಕಾಲೇಜ್ ಮೈದಾನದಿಂದ ಶುರುವಾಗಿ, ಸಜ್ಜನ್ ರಾವ್ ವೃತ್ತ, ಜೆ.ಸಿ. ರಸ್ತೆ, ಪುರಭವನ, ಮೈಸೂರು ಬ್ಯಾಂಕ್ ವೃತ್ತ, ಸೆಂಟ್ರಲ್ ಕಾಲೇಜ್ ಮೂಲಕ ಸ್ವಾತಂತ್ರ್ಯಉದ್ಯಾನವನ ತಲುಪಿ ಅಲ್ಲಿಂದ ರಾಜಭವನದತ್ತ ಸಾಗಿತು.

ಮೆರವಣಿಗೆಯಲ್ಲಿ ಆದಿಚುಂಚನಗಿರಿ ಶ್ರೀಗಳಾದ ಬಾಲಗಂಗಾಧರ ಸ್ವಾಮಿಜಿ, ಪಂಚಮಸಾಲಿ ಮಠದ ಅಧ್ಯಕ್ಷರಾದ ಜಯಮೃತ್ಯುಂಜಯ ಸ್ವಾಮಿಜಿ, ಗೋಸಾಯಿಮಠದ ಶ್ರೀಸುರೇಶನಂದ ಸ್ವಾಮಿಜಿ, ಶ್ರೀ ನಂಜಾವಧೂತ ಸ್ವಾಮೀಜಿ, ಮಾಜಿ ಸಂಸದ ಅಂಬರೀಶ್, ಸಮತಾ ಸೈನಿಕ ದಳದ ಅಧ್ಯಕ್ಷರಾದ ಎಂ. ವೆಂಕಟಸ್ವಾಮಿ, ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್, ಕನ್ನಡ ಸಾಹಿತ್ಯ ಪರಿಷತ್ ನ ನಿಕಟಪೂರ್ವ ಅಧ್ಯಕ್ಷರಾದ ಡಾ|| ನಲ್ಲೂರು ಪ್ರಸಾದ್, ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ನಗರ ಅಧ್ಯಕ್ಷರಾದ ತಿಮ್ಮೇಶ್, ಚಲನಚಿತ್ರ ವಾಣೀಜ್ಯ ಮಂಡಳಿ ಅಧ್ಯಕ್ಷರಾದ ಬಿ. ವಿಜಯಕುಮಾರ್, ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಮುನಿರತ್ನ ನಾಯ್ಡು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಬಿ,ಎನ್.ವಿ. ಸುಬ್ರಹ್ಮಣ್ಯ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಟಿ.ಎ. ನಾರಾಯಣಗೌಡರು ಉಪಸ್ಥಿತರಿದ್ದರು.

ಮೆರವಣಿಗೆಯ ಪತ್ರಿಕಾ ವರದಿಗಳನ್ನು ಇಲ್ಲಿ ನೋಡಿ -

ಕನ್ನಡ ಪ್ರಭ ವರದಿ -ಪ್ರಜಾವಾಣಿ ವರದಿ -
ವಿಜಯ ಕರ್ನಾಟಕ ವರದಿ -

ಈಸಂಜೆ ವರದಿ -


ಸಂಜೆವಾಣಿ ವರದಿ -ಉದಯವಾಣಿ ವರದಿ - 

ಡಿ ಎನ್ ಎ ವರದಿ -

ಡೆಕ್ಕನ್ ಹೆರಾಲ್ಡ್ ವರದಿ -

Thursday, October 4, 2012

ನಮ್ಮ ಕಾರ್ಯಕರ್ತರಿಂದ ೦೫-೧೦-೨೦೧೨ ರಂದು ಬೆಳಿಗ್ಗೆ ೧೦:೩೦ ನ್ಯಾಷನಲ್ ಕಾಲೇಜ್ ಮೈದಾನದಿಂದ ಮೆರವಣಿಗೆ

ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಿ ಎಂದು ಆದೇಶ ಹೊರಡಿಸಿದ ಕೇಂದ್ರ ಸರಕಾರ ಹಾಗು ಆ ಆದೇಶವನ್ನು ಪಾಲಿಸಿ ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸಿದ ರಾಜ್ಯ ಸರಕಾರದ ವಿರುದ್ಧ ನಮ್ಮ ಕಾರ್ಯಕರ್ತರು ಇಂದು (೦೫-೧೦-೨೦೧೨) ದೊಡ್ಡ ಮೆರವಣಿಗೆಯನ್ನು ನಮ್ಮ ಅಧ್ಯಕ್ಷರಾದ ಟಿ.ಎ. ನಾರಾಯಣ ಗೌಡರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದಾರೆ.


ಬೆಳಿಗ್ಗೆ ೧೦:೩೦ ಕ್ಕೆ ನ್ಯಾಷನಲ್ ಕಾಲೇಜ್ ಮೈದಾನದಿಂದ ಶುರುವಾಗುವ ಮೆರವಣಿಗೆ ರಾಜಭವನದತ್ತ ಸಾಗಲಿದೆ.

ಇದರ ಪತ್ರಿಕಾ ವರದಿಗಳನ್ನು ಇಲ್ಲಿ ನೋಡಿ

ಕನ್ನಡಪ್ರಭ ವರದಿ -  


ವಿಜಯ ಕರ್ನಾಟಕ ವರದಿ -

ಕಾವೇರಿ ನದಿ ಪ್ರಾಧಿಕಾರ ನೀಡಿರುವ ಕರ್ನಾಟಕ ವಿರೋಧಿ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಒತ್ತಾಯಿಸಿ ಮೆರವಣಿಗೆ

ಕಾವೇರಿ ನದಿ ಪ್ರಾಧಿಕಾರ ನೀಡಿರುವ ಕರ್ನಾಟಕ ವಿರೋಧಿ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಒತ್ತಾಯಿಸಿ ರಾಜಭವನ ಮುತ್ತಿಗೆ ಹೋರಾಟವನ್ನು ಬೆಂಗಳೂರಿನಲ್ಲಿ ಅಕ್ಟೋಬರ್ 5, ಶುಕ್ರವಾರ ಹಮ್ಮಿಕೊಂಡಿದ್ದೇವೆ. ಸಾವಿರಾರು ಕಾರ್ಯಕರ್ತರು ಈ ಹೋರಾಟದಲ್ಲಿ ಭಾಗವಹಿಸಲಿದ್ದಾರೆ. ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಿಂದ ರಾಜಭವನದವರೆಗೆ ಬೃಹತ್ ಮೆರವಣಿಗೆ ನಡೆಯಲಿದೆ. ಈ ಬೃಹತ್ ಮೆರವಣಿಗೆ ಬೆಳಿಗ್ಗೆ 10:30 ಕ್ಕೆ ಶುರು ಆಗಲಿದೆ.

ದಿನಾಂಕ - ಅಕ್ಟೋಬರ್ 5, ಶುಕ್ರವಾರ

ಸಮಯ - ಬೆಳಿಗ್ಗೆ 10:30

ಮೆರವಣಿಗೆ ಹೊರಡುವ ಸ್ಥಳ - ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನ

ಕಾವೇರಿ ನೀರು ಕುಡಿಯುವ ಬೆಂಗಳೂರಿನ ನಾಗರಿಕರೇ ಬನ್ನಿ, ಹೋರಾಟದಲ್ಲಿ ಭಾಗವಹಿಸಿ.  

Wednesday, October 3, 2012

ಅಕ್ಟೋಬರ್ ೫ ರಂದು ಬೃಹತ್ ರಾಲಿ, ರಾಜಭವನ ಮುತ್ತಿಗೆ

ನಮ್ಮ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಕಾರ್ಯಕರ್ತರ ಸಭೆ ನಡೆಯಿತು. ಈ ಸಭೆಯಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದರ ವಿಷಯವಾಗಿ ಚರ್ಚೆ ನಡೆಯಿತು.

ಅಕ್ಟೋಬರ್ ೫, ೨೦೧೨, ಶುಕ್ರವಾರದ ದಿನ ಬೆಂಗಳೂರಿನ ನ್ಯಾಶನಲ್ ಕಾಲೇಜು ಕ್ರೀಡಾಂಗಣದಿಂದ ರಾಜಭವನದ ವರೆಗೆ ಬೃಹತ್ ಕಲ್ನಡಿಗೆ ಜಾಥವನ್ನು ಏರ್ಪಡಿಸಲಾಗುವುದು ಅಂತ ತೀರ್ಮಾನಿಸಲಾಯಿತು.


ಕಾವೇರಿ ನೀರು ಬಿಡುಗಡೆ ವಿರೋಧಿಸಿ ಹಾಸನ ಚಾಮರಾಜನಗರದಲ್ಲಿ ಹೋರಾಟ

ತಮಿಳುನಾಡಿಗೆ ಬಿಡುಗಡೆ ಮಾಡುತ್ತಿರುವ ಕಾವೇರಿ ನೀರನ್ನು ಈ ಕೂಡಲೇ ನಿಲ್ಲಿಸಬೇಕೆಂದು ನಮ್ಮ ಕಾರ್ಯಕರ್ಯತರು ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಹೋರಾಟ ಮಾಡಿದರು.


ಕನ್ನಡಪ್ರಭ ವರದಿ:


Tuesday, October 2, 2012

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಮುತ್ತಿಗೆ

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಿರುವುದನ್ನು ಖಂಡಿಸಿ ನಮ್ಮ ಕಾರ್ಯಕರ್ತರು ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಮುತ್ತಿಗೆ ಹಾಕಿದರು

ಈ ಸಂಜೆ ಚಿತ್ರ:ಕೋಲಾರದಲ್ಲಿ ಪ್ರತಿಭಟನೆ:


Monday, October 1, 2012

ಕಾವೇರಿ ನೀರು ಬಿಟ್ಟಿದ್ದನ್ನು ಪ್ರಶ್ನಿಸಿ ರಾಜ್ಯಾದ್ಯಂತ ಪ್ರತಿಭಟನೆ

ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಿ ಎಂದು ಆದೇಶ ಹೊರಡಿಸಿದ ಕೇಂದ್ರ ಸರಕಾರ ಹಾಗು ಆ ಆದೇಶವನ್ನು ಪಾಲಿಸಿ ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸಿದ ರಾಜ್ಯ ಸರಕಾರದ ವಿರುದ್ಧ ನಮ್ಮ ಕಾರ್ಯಕರ್ತರು ಮಂಡ್ಯ, ಮೈಸೂರು, ತುಮಕೂರು, ಮದ್ದೂರು, ಕೋಲಾರ, ಕೊಡಗು, ಹಾಸನ, ದಾವಣಗೆರೆ, ಚಿತ್ರದುರ್ಗ, ಚನ್ನಪಟ್ಟಣ, ಬೆಂಗಳೂರು ಹಾಗು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು.

ಇದರ ಪತ್ರಿಕಾ ವರದಿಯನ್ನು ಇಲ್ಲಿ ನೋಡಿ -
 
ಮಂಡ್ಯ -
 

ಮೈಸೂರು -ತುಮಕೂರು -ಮದ್ದೂರು -ಕೋಲಾರ -


 
ಕೊಡಗು -
 

ಹಾಸನ -ದಾವಣಗೆರೆ -ಚಿತ್ರದುರ್ಗ -ಚನ್ನಪಟ್ಟಣ -
ಬೆಂಗಳೂರು -