Friday, February 24, 2012

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ನಲ್ಲೂರು ಪ್ರಸಾದ್ ರವರಿಗೆ ಕರವೇ ವತಿಯಿಂದ ಅಭಿನಂದನೆ ಮತ್ತು ಪ್ರಶಸ್ತಿ ಪ್ರಧಾನ

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಾಹಿತ್ಯ ಪರಿಷತ್ ಮೂಲಕ ಕನ್ನಡ ನಾಡನ್ನು ಕಟ್ಟಿ ಬೆಳೆಸುವಲ್ಲಿ ಶ್ರಮಿಸಿ, ತಮ್ಮ ಅಧಿಕಾರವಧಿಯಲ್ಲಿ ನಾಲ್ಕು ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಡಾ. ಆರ್. ಕೆ. ನಲ್ಲೂರು ಪ್ರಸಾದ್ ಅವರನ್ನು ಅಭಿನಂದಿಸುತ್ತಾ, ಅವರಿಗೆ "ಕನ್ನಡ ಕಾಯಕಯೋಗಿ" ಪ್ರಶಸ್ತಿ ನೀಡುವ ಸಮಾರಂಭವನ್ನು ದಿನಾಂಕ ೨೪-೦೨-೨೦೧೨ ರಂದು ಕರವೇ ವತಿಯಿಂದ ನಡೆಸಲಾಯಿತು.

ಕರವೇ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡರು ಸಮಾರಂಭದಲ್ಲಿ ಡಾ. ನಲ್ಲೂರು ಪ್ರಸಾದ್ ಅವರನ್ನು ಸನ್ಮಾನಿಸಿ ಪ್ರಶಸ್ತಿ ಪ್ರಧಾನ ಮಾಡಿದರು. ಕಾರ್ಯಕ್ರಮದಲ್ಲಿ ಪ್ರೊ. ಜಿ. ವೆಂಕಟಸುಬ್ಬಯ್ಯನವರು, ಮನುಬಳಿಗಾರ್ ರವರು ಮುಂತಾದ ಗಣ್ಯರು ಕೂಡ ಭಾಗವಹಿಸಿದ್ದರು.

ಸಮಾರಂಭದ ಪತ್ರಿಕಾ ವರದಿಗಳನ್ನು ಇಲ್ಲಿ ನೋಡಿ -

ಕನ್ನಡಪ್ರಭ ವರದಿ:

ವಿಜಯಕರ್ನಾಟಕ ವರದಿ: