Friday, September 30, 2011

ಡಾ. ಚಂದ್ರಶೇಖರ ಕಂಬಾರರಿಗೆ ಅವಮಾನಿಸಿದ ಎಂ.ಇ.ಎಸ್. ವಿರುದ್ಧ ರಾಜ್ಯಾದಂತ ಪ್ರತಿಭಟನೆ

ಕನ್ನಡಕ್ಕೆ ೮ ನೇ ಜ್ಞಾನಪೀಠ ಪ್ರಶಸ್ಥಿ ತಂದುಕೊಟ್ಟ ಹೆಮ್ಮೆಯ ಡಾ. ಚಂದ್ರಶೇಖರ ಕಂಬಾರರಿಗೆ ಅಭಿನಂದನೆ ಸಲ್ಲಿಸುವ ಬೆಳಗಾವಿ ಮಹಾನಗರ ಪಾಲಿಕೆಯ ಗೊತ್ತುವಳಿಯನ್ನು ವಿರೋಧಿಸಿ, ಕಂಬಾರರಿಗೆ ಅವಮಾನಿಸಿದ ಎಂ.ಇ.ಎಸ್. ಪರ ಇದ್ದ ಪಾಲಿಕೆ ಸದಸ್ಯರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದೆವು.

ಪ್ರತಿಭಟನೆಯ ಕೆಲ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:

ಉದಯವಾಣಿ ವರದಿ:

ಪ್ರಜಾವಾಣಿ ವರದಿ:
ವಿಜಯಕರ್ನಾಟಕ ವರದಿ:

Monday, September 26, 2011

ಬೆಂಗಳೂರಿನ ವಿಧಾನಸಭಾ ಕ್ಷೇತ್ರಗಳ ವಾರ್ಡ್ ಮತ್ತು ಬೂತ್ ಮಟ್ಟದ ಕರವೇ ಕಾರ್ಯಕರ್ತರ ಸಭೆ

ಕರ್ನಾಟಕ ರಕ್ಷಣಾ ವೇದಿಕೆಯ ಲಕ್ಷಾಂತರ ಕಾರ್ಯಕರ್ತರು ನಾಡಿನ ಏಳಿಗೆಗಾಗಿ ಹಗಲಿರುಳು ದುಡಿಯುತ್ತಿದ್ದು, ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಯಾವುದೇ ರೀತಿಯ ಅನ್ಯಾಯವಾದರೂ ಅದರ ವಿರುದ್ದ ಪ್ರತಿಭಟಿಸುತ್ತಿರುವುದು ತಮಗೆಲ್ಲ ತಿಳಿದ ವಿಚಾರವೇ. ಬೆಂಗಳೂರನ್ನೂ ಒಳಗೊಂಡು ಕರ್ನಾಟಕದಾದ್ಯಂತ ಅನಿಯಂತ್ರಿತ ವಲಸೆ ದಿನೇ ದಿನೇ ಹೆಚ್ಚುತ್ತಿದ್ದು, ಕನ್ನಡೇತರರು ವಸತಿ, ಉದ್ಯೋಗ ಮುಂತಾದ ವಿಷಯಗಳಲ್ಲಿ ಸ್ಥಳೀಯರ ಮೇಲೆ ಸವಾರಿ ಮಾಡುವ ಪರಿಸ್ಥಿತಿ ಹೆಚ್ಚುತ್ತಿದೆ.

ಇಷ್ಟೇ ಅಲ್ಲದೆ, ಇಲ್ಲಿನ ರಾಜಕೀಯ ವ್ಯವಸ್ಥೆ, ಸಾರ್ಜಜನಿಕ ಆಡಳಿತ ವ್ಯವಸ್ಥೆ, ಗ್ರಾಹಕ ಸೇವೆ ಮುಂತಾದುವು ಈ ನಾಡಿ ಕನ್ನಡಿಗರಿಗಿಂತ ಪರಭಾಷಿಕರಿಗೇ ಅನುಕೂಲವಾಗುವ ರೀತಿಯಲ್ಲಿ ಕಟ್ಟಲಾಗುತ್ತಿದೆ. ಕನ್ನಡಿಗರು ತಮ್ಮ ನಾಡಿನಲ್ಲಿಯೇ ಪರಕೀಯರಾಗಿ ಬಾಳುವಂತ, ಉಸಿರುಗಟ್ಟಿಸುವ ಸ್ಥಿತಿ ನಿರ್ಮಾಣ ಮಾಡಲಾಗುತ್ತಿದ್ದು, ಇದನ್ನೆಲ್ಲಾ ಕಂಡರೂ ಕಾಣದ ಹಾಗೆ ಜಾಣ ಕುರುಡು, ಜಾಣ ಕಿವುಡನ್ನು ಸರ್ಕಾರ ಮತ್ತು ಸರ್ಕಾರಿ ಪ್ರತಿನಿಧಿಗಳು ಪ್ರದರ್ಶಿಸುತ್ತಿದ್ದಾರೆ.

ಕನ್ನಡಿಗರ ರಕ್ಷಣೆ ಮತ್ತು ಏಳಿಗೆಗೆ ಬೇಕಾದ ವ್ಯವಸ್ಥೆಗಳನ್ನು ಕಟ್ಟಲು ಬೇಕಾದ ರಾಜಕೀಯ ಇಚ್ಛಾಶಕ್ತಿಯನ್ನು ಇಂದಿನ ಯಾವ ರಾಜಕೀಯ ಪಕ್ಷಗಳು ತೋರುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಇದೆಲ್ಲದರ ಬಗ್ಗೆ ಜಾಗೃತಿ ಮೂಡಿಸಿ, ಕನ್ನಡೇತರರನ್ನು ಮುಖ್ಯವಾಹಿನಿಗೆ ಕರೆತರಲು, ಮತ್ತು ಕನ್ನಡಿಗರ ಒಗ್ಗಟ್ಟು ಮತ್ತು ರಾಜಕೀಯ ಇಚ್ಛಾಶಕ್ತಿ ಹೆಚ್ಚಿಸಲು ಕರ್ನಾಟಕ ರಕ್ಷಣಾ ವೇದಿಕೆಯು ಬೆಂಗಳೂರಿನ ವಿಧಾನ ಸಭಾ ಕ್ಷೇತ್ರಗಳಲ್ಲಿ ಸಭೆಗಳನ್ನು ನಡೆಸುತ್ತಿದ್ದು, ವಿವಿಧ ಕ್ಷೇತ್ರ, ವಾರ್ಡ್ ಹಾಗೂ ಬೂತ್ ಮಟ್ಟದ ಪದಾಧಿಕಾರಿಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ.

ಬೆಂಗಳೂರಿನಲ್ಲಿ ಈ ಕೆಳಗಿನ ವಿಧಾನಸಭಾ ಕ್ಷೇತ್ರಗಳಲ್ಲಿ ಸಭೆಗಳು ನಡೆದವು.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ
ಬಿ.ಟಿ.ಎಂ. ವಿಧಾನಸಭಾ ಕ್ಷೇತ್ರ
ಗಾಂಧಿನಗರ ವಿಧಾನಸಭಾ ಕ್ಷೇತ್ರ
ಕೆ.ಆರ್. ಪುರ ವಿಧಾನಸಭಾ ಕ್ಷೇತ್ರ
ಮಹಾಲಕ್ಷ್ಮಿಪುರ ವಿಧಾನಸಭಾ ಕ್ಷೇತ್ರ
ಶಿವಾಜಿನಗರ ವಿಧಾನಸಭಾ ಕ್ಷೇತ್ರ
ಯಶವಂತಪುರ ವಿಧಾನಸಭಾ ಕ್ಷೇತ್ರ
ಆನೇಕಲ್ ವಿಧಾನಸಭಾ ಕ್ಷೇತ್ರ
ಪುಲಕೇಶಿನಗರ ವಿಧಾನಸಭಾ ಕ್ಷೇತ್ರ

ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಕೆಲವು ಸಭೆಗಳ ಚಿತ್ರಗಳನ್ನು ಕೆಳಗೆ ನೋಡಿ:

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಸಭೆ
ಬಿ.ಟಿ.ಎಂ. ವಿಧಾನಸಭಾ ಕ್ಷೇತ್ರದ ಸಭೆ

ಗಾಂಧಿನಗರ ವಿಧಾನಸಭಾ ಕ್ಷೇತ್ರದ ಸಭೆಕೆ.ಆರ್. ಪುರ ವಿಧಾನಸಭಾ ಕ್ಷೇತ್ರದ ಸಭೆ

ಮಹಾಲಕ್ಷ್ಮಿಪುರ ವಿಧಾನಸಭಾ ಕ್ಷೇತ್ರದ ಸಭೆಶಿವಾಜಿನಗರ ವಿಧಾನಸಭಾ ಕ್ಷೇತ್ರದ ಸಭೆ


ಯಶವಂತಪುರ ವಿಧಾನಸಭಾ ಕ್ಷೇತ್ರದ ಸಭೆ

Wednesday, September 14, 2011

ಕೇಂದ್ರ ಸರ್ಕಾರದ ಭಾಷಾನೀತಿ ಬದಲಾಗಬೇಕು ಎಂದು ಒತ್ತಾಯಿಸಿ ನಮ್ಮ ಪ್ರತಿಭಟನೆ : ಪತ್ರಿಕಾ ವರದಿ

ಕೇಂದ್ರ ಸರ್ಕಾರದ ಭಾಷಾನೀತಿ ಬದಲಾಗಬೇಕು ಹಾಗೂ ಒಕ್ಕೂಟ ವ್ಯವಸ್ಥೆಯ ವಿರೋಧಿಯಾಗಿರುವ ಸೆಪ್ಟಂಬರ್ ೧೪ ರಂದು ನಡೆಸುವ "ಹಿಂದಿ ದಿವಸ"ದ ಆಚರಣೆಯನ್ನು ರದ್ದುಮಾಡಬೇಕು, ಹಾಗೂ ರಾಜ್ಯದಲ್ಲಿರುವ ಕೇಂದ್ರದ ವ್ಯಾಪ್ತಿಯ ಎಲ್ಲಾ ಇಲಾಖೆಗಳು, ಇನ್ನಿತರ ಸಂಸ್ಥೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಆಡಳಿತ ಭಾಷೆಯನ್ನಾಗಿ ಬಳಸಬೇಕೆಂದು ಕೇಂದ್ರವನ್ನು ಒತ್ತಾಯಿಸಿ ನಮ್ಮ ವೇದಿಕೆಯು ಸೆಪ್ಟಂಬರ್ 14 ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತು. ಇದರ ಪತ್ರಿಕಾ ವರದಿಗಳನ್ನ ಇಲ್ಲಿ ನೋಡಿ-

ಈ ಸಂಜೆ-

ಕನ್ನಡ ಪ್ರಭ-

ಸಂಜೆವಾಣಿ-

ಸಂಯುಕ್ತ ಕರ್ನಾಟಕ

ಕೇಂದ್ರ ಸರ್ಕಾರದ ಭಾಷಾನೀತಿ ಬದಲಾಗಬೇಕೆಂದು ಒತ್ತಾಯಿಸಿ ಹಕ್ಕೊತ್ತಾಯ ಪತ್ರ ಸಲ್ಲಿಕೆ

೨೦೦೬ ರಿಂದ ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯ ವಿರುದ್ಧ ಹಾಗೂ ಕೇಂದ್ರ ಸರ್ಕಾರದ ಭಾಷಾ ತಾರತಮ್ಯದಿಂದಾಗಿ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ನಮ್ಮ ವೇದಿಕೆಯು ನಿರಂತರವಾಗಿ ಹೋರಾಟಗಳನ್ನು ನಡೆಸುತ್ತಾ ಬಂದಿದ್ದೇವೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಹಿಂದಿ ಹೇರಿಕೆಯ ವಿರುದ್ಧ ಹೋರಾಟವನ್ನು ನಡೆಸಿದ್ದೇವೆ.

ಇದರ ಅಂಗವಾಗಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಹೋರಾಟವನ್ನು ನಡೆಸಿದ ನಂತರ ರಾಜ್ಯಪಾಲರಾದ ಶ್ರೀ ಹಂಸರಾಜ್ ಭಾರಧ್ವಜ್ ಅವರಿಗೆ  ಕೇಂದ್ರ ಸರ್ಕಾರದ ಭಾಷಾನೀತಿಯನ್ನು ಬದಲಾಯಿಸಬೇಕೆಂದು ಒತ್ತಾಯಿಸಿ ನಮ್ಮ ಹಕ್ಕೂತ್ತಾಯ ಪತ್ರವನ್ನು ನೀಡಲಾಯಿತು. ಅದರ ಪ್ರತಿಯನ್ನು ಇಲ್ಲಿವೆ:
ಕೇಂದ್ರ ಸರ್ಕಾರದ ಭಾಷಾನೀತಿ ಬದಲಾಗಬೇಕು ಎಂದು ಒತ್ತಾಯಿಸಿ ನಮ್ಮ ಪ್ರತಿಭಟನೆ

ಕೇಂದ್ರ ಸರ್ಕಾರದ ಭಾಷಾ ನೀತಿಯ ಪ್ರಕಾರ ಹಿಂದಿ ಭಾಷೆಗೆ ಒಂದು ಮಾನದಂಡ ಮತ್ತುಳಿದ ಭಾಷೆಗಳಿಗೆ ಬೇರೆಯ ಮಾನದಂಡಗಳಿರುವುದು ಹಿಂದಿಯೇತರ ಸಮುದಾಯಗಳಿಗೆ ನೋವಿನ ಸಂಗತಿ. ದೇಶದ ಎಲ್ಲ ಭಾಷಿಕರು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಕೋಟ್ಯಂತರ ರುಪಾಯಿ ತೆರಿಗೆ ಹಣದಲ್ಲಿಯೇ ಸೆಪ್ಟಂಬರ್ ೧೪ರಂದು "ಹಿಂದಿ ದಿವಸ್" ಅನ್ನುವ ಆಚರಣೆಯನ್ನು ಕೇಂದ್ರ ಸರ್ಕಾರ ಮಾಡಿಕೊಂಡು ಬರುತ್ತಿರುವುದು ಖಂಡನೀಯ. ಇದರ ವಿರುದ್ಧ ನಾವು ಹೋರಾಟ ಮಾಡುಕೊಂಡು ಬಂದಿದ್ದೇವೆ.
ರಾಜ್ಯದಲ್ಲಿರುವ ಕೇಂದ್ರದ ವ್ಯಾಪ್ತಿಯ ಎಲ್ಲಾ ಇಲಾಖೆಗಳು, ಇನ್ನಿತರ ಸಂಸ್ಥೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಆಡಳಿತ ಭಾಷೆಯನ್ನಾಗಿ ಬಳಸಬೇಕೆಂದು ಕೇಂದ್ರವನ್ನು ಒತ್ತಾಯಿಸಿ ನಮ್ಮ ವೇದಿಕೆಯು ಇಂದು (ಸೆಪ್ಟಂಬರ್ 14) ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದೆವು.


ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿ ನಂತರ ಕರ್ನಾಟಕದ ರಾಜ್ಯಪಾಲರಾದ ಶ್ರೀ ಹೆಚ್. ಆರ್. ಭಾರಧ್ವಾಜ್ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದೆವು.Monday, September 12, 2011

ಹಿಂದೀ ಹೇರಿಕೆ ವಿರುದ್ಧದ ಹೋರಾಟಗಳ ವಿವರಗಳು

ಕರ್ನಾಟಕ ರಕ್ಷಣಾ ವೇದಿಕೆಯು ಕನ್ನಡಿಗರ ಮೇಲೆ ನಡೆಯುತ್ತಿರುವ ಹಿಂದೀ ಹೇರಿಕೆಯನ್ನ ಖಂಡಿಸುತ್ತದೆ ಮತ್ತು ಹಿಂದೀ ಹೇರಿಕೆಯ ವಿರುದ್ದ ನಮ್ಮ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡರ ನಾಯಕತ್ವದಲ್ಲಿ ಹಿಂದೀ ಹೇರಿಕೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ.


ನಮ್ಮ ವೇದಿಕೆಯಿಂದ ಹಿಂದಿ ಹೇರಿಕೆ ವಿರುದ್ಧ ನಡೆಸಿರುವ ಹೋರಾಟಗಳು-

2006:
ಕರ್ನಾಟಕ ರಕ್ಷಣಾ ವೇದಿಕೆಯು ಸೆಪ್ಟಂಬರ್ ೧೪ ಹಿಂದಿ ಹೇರಿಕೆ ವಿರೋಧಿ ದಿನವನ್ನಾಗಿ ಆಚರಿಸಲು ಶುರುಮಾಡಿತು. ಸೆಪ್ಟಂಬರ್ ೧೦ರಂದು ಬೆಂಗಳೂರಿನ ಯವನಿಕ ಸಭಾಂಗಣದಲ್ಲಿ ಹಿಂದಿ ಹೇರಿಕೆಯ ಬಗ್ಗೆ ವಿಚಾರ ಸಂಕಿರಣವೊಂದನ್ನು ಏರ್ಪಡಿಸಲಾಗಿತ್ತು. ನಾಡಿನ ಹಿರಿಯ ಚಿಂತಕರಾದ ಶ್ರೀ ರಾಜ್ ಕುಮಾರ್ ಹಾಗೂ ಡಾ. ಆಶೋಕ್ ದೊಡ್ಡಮೇಟಿ ಅವರಿಂದ ಭಾರತದ ಒಕ್ಕೂಟ ವ್ಯವಸ್ಥೆ, ಭಾಷಾವಾರು ಪ್ರಾಂತ್ಯಗಳ ಅನಿವಾರ್ಯತೆ, ಸಂವಿಧಾನದ ದೃಷ್ಠಿಯಲ್ಲಿ ಭಾರತೀಯ ಭಾಷೆಗಳು, ಹಿಂದಿಯ ಸಾರ್ವಭೌಮತ್ವ ಸ್ಥಾಪನೆಯ ಪ್ರಯತ್ನಗಳು, ಹಿಂದಿ ಹೇರಿಕೆಯ ನಾನಾ ರೂಪಗಳು, ಹಿಂದಿ ಹೇರಿಕೆಯಿಂದ ಆಗಬಹುದಾದ ಅನಾಹುತಗಳ ಬಗ್ಗೆ ಅನೇಕ ವಿಚಾರಗಳು ಮಂಡಿಸಲ್ಪಟ್ಟವು.
ಸೆಪ್ಟಂಬರ್ ೧೪ ರಂದು ರಾಜ್ಯದ ಎಲ್ಲಾ ಪ್ರಮುಖ ನಗರಗಳಲ್ಲಿ ಕರವೇಯ ಕಾರ್ಯಕರ್ತರು ಕೇಂದ್ರ ಸರ್ಕಾರದ ಕಛೇರಿಗಳ ಮುಂದೆ ಪ್ರತಿಭಟನೆ ನಡೆಸಿದರು. ಬೆಂಗಳೂರಿನ ಕೇಂದ್ರಿಯ ಸದನದ ಮುಂದೆ ರಾಜ್ಯಾಧ್ಯಕ್ಷರಾದ ಶ್ರೀ ಟಿ. ಎ. ನಾರಾಯಣಗೌಡರ ನೇತ್ರತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು. ಆಕಾಶವಾಣಿಯ ಮುಂದು ಪ್ರತಿಭಟಿಸುತ್ತಿದ್ದ ಕಾರ್ಯಕರ್ತರನ್ನು ೧೫ ದಿನಗಳ ಸೆರೆವಾಸದಲ್ಲಿ ಇಡಲಾಗಿತ್ತು.
2007:
ಹಿಂದಿ ಸಪ್ತಾಹದ ಕಾರ್ಯಕ್ರಮವನ್ನು ನಿಲ್ಲಿಸುವಂತೆ ಒತ್ತಾಯಿಸಿ ಕರವೇ ಕಾರ್ಯಕರ್ತರು ಬೆಂಗಳೂರಿನ ಕೇಂದ್ರ ವಾರ್ತಾ ಇಲಾಖೆ ಕೋರಮಂಗಲದಲ್ಲಿ ನಡೆಸಿದ ಹಿಂದಿ ಸಾಪ್ತಾಹ ದಿನಾಚರಣೆಯಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಕೇಂದ್ರ ಸರ್ಕಾರ ಹಿಂದಿ ಹೇರಿಕೆಯನ್ನು ವಿರೋಧಿಸಲಾಯಿತು.
ಇದಲ್ಲದೇ ಎಂ. ಜಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ನಲ್ಲಿ ನಡೆಯುತ್ತಿದ್ದ ಹಿಂದಿ ಭಾಷಾ ಸಪ್ತಾಹ ಆಚರಣೆಗೆ ಕರವೇ ಕಾರ್ಯಕರ್ತರು ತಡೆಯೊಡ್ಡಿದರು. ಕೇಂದ್ರ ಸರ್ಕಾರ ಹಿಂಬಾಗಿಲಿನಿಂದ ಕನ್ನಡಿಗರ ಮೇಲೆ ಹಿಂದಿ ಹೇರುವುದನ್ನು ವಿರೋಧಿಸಲಾಯಿತು.
2008:
ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡ ಭಾಷೆಗೆ ಹಿಂದಿಯಷ್ಟೇ ಅರ್ಹತೆ ಇದ್ದರೂ ಕೇಂದ್ರ ಸರ್ಕಾರ ಕನ್ನಡದ ಅಭಿವೃದ್ಧಿಗೆ ಕಿಂಚಿತ್ತೂ ಆದ್ಯತೆ ನೀಡದಿರುವುದು ರಾಜ್ಯಕ್ಕೆ ಎಸಗಿರುವ ದ್ರೋಹವಾಗಿದೆ ಹಾಗೂ ಹಿಂದಿ ಭಾಷೆಯನ್ನು ಬೆಳೆಸಲು ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಿ ರಾಜ್ಯದಲ್ಲಿನ ಅಧೀನ ಕಛೇರಿಗಳಲ್ಲಿ ಹಿಂದಿ ಭಾಷೆಯನ್ನು ಆಡಳಿತ ಭಾಷೆಯನ್ನಾಗಿಸುವ ಹುನ್ನಾರ ನಡೆಸಿದೆ. ಹಿಂದಿ ಜನರ ಕಪಿ ಮುಷ್ಠಿಯಲ್ಲಿರುವ ಕೇಂದ್ರ ಸರ್ಕಾರ ಕನ್ನಡ ಭಾಷೆಗೆ ಗೋರಿ ಕಟ್ಟಲು ಹೊರಟಿರುವುದನ್ನು ಸಹಿಸಲು ಸಾಧ್ಯವಿಲ್ಲ, ಇದೇ ರೀತಿ ಮಲತಾಯಿ ಧೋರಣೆ ಮುಂದುವರೆದರೆ ರಾಜ್ಯದ ಎಲ್ಲಾ ಕೇಂದ್ರ ಸರ್ಕಾರಿ ಕಛೇರಿಗಳಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿತ್ತು. ರಾಜ್ಯದ ಎಲ್ಲಾ ಕೇಂದ್ರ ಸರ್ಕಾರ ಕಛೇರಿಗಳು ಹಾಗೂ ಉದ್ದಿಮೆಗಳಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿ ನಾಮಫಲಕ ಹಾಕಬೇಕೆಂದು ಒತ್ತಾಯಿಸಲಾಗಿತ್ತು. ಕನ್ನಡಿಗರ ಮೇಲೆ ಕೇಂದ್ರ ಸರಕಾರ ಹಿಂದಿ ಹೇರಿಕೆಯನ್ನು ಮಾಡುತ್ತಿರುವುದನ್ನು ವಿರೋಧಿಸಿ ಬೆಂಗಳೂರು, ಮೈಸೂರು, ಕೊಪ್ಪಳ, ಗದಗ. ಬೆಳಗಾವಿ, ಚಿತ್ರದುರ್ಗ ಮತ್ತು ರಾಜ್ಯಾದ್ಯಂತ ಇನ್ನಿತರ ಕಡೆಗಳಲ್ಲಿ ಪ್ರತಿಭಟನೆ ನಡೆಸಲಾಯಿತು.
2009:
ಕೇಂದ್ರ ಸರಕಾರ, ಕೇಂದ್ರ ಸರಕಾರದ ಕಚೇರಿಗಳಲ್ಲಿ "ಹಿಂದಿ ಸಪ್ತಾಹ" ಕಾರ್ಯಕ್ರಮವನ್ನು ನಡೆಸಿ ಕನ್ನಡಿಗರ ಮೇಲೆ ಹಿಂದಿಯನ್ನು ಹೇರುವ ಮೂಲಕ, ಕನ್ನಡವನ್ನು ಮುಗಿಸುವ ಹುನ್ನಾರ ನಡೆಸುತ್ತಿದೆ. "ಹಿಂದಿ ಸಪ್ತಾಹ" ಕಾರ್ಯಕ್ರಮವನ್ನು ರದ್ದುಪಡಿಸಿಲು ನಾಡಿನ ಜನತೆ ಹಾಗು ಎಲ್ಲ ರಾಜಕೀಯ ಪಕ್ಷಗಳು ಸಂಘಟಿತ ಹೋರಾಟ ನಡೆಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು ಹಾಗೂ ಸಾಂಕೇತಿಕವಾಗಿ ಪ್ರತಿಭಟನೆಯನ್ನು ನಡೆಸಲಾಗಿತ್ತು.
2010:
ಕರ್ನಾಟಕ ರಕ್ಷಣಾ ವೇದಿಕೆಯು, ಕೇಂದ್ರಸರ್ಕಾರದ ದೋಷಪೂರಿತವಾದ ಭಾಷಾನೀತಿಯನ್ನೂ, ಅದರಿಂದಾಗುತ್ತಿರುವ ಹಿಂದೀ ಹೇರಿಕೆಯನ್ನೂ ತೀವ್ರವಾಗಿ ಖಂಡಿಸುತ್ತಾ ಬಂದಿದೆ. ನಿಟ್ಟಿನಲ್ಲಿ ಕರ್ನಾಟಕದಾದ್ಯಂತ ಸೆಪ್ಟೆಂಬರ್ ೧೪ನ್ನು ಹಿಂದೀ ಹೇರಿಕೆ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತಿದೆ. ರಾಜ್ಯದ ನಾನಾ ಜಿಲ್ಲಾ ಕೇಂದ್ರಗಳಲ್ಲಿ ಕೇಂದ್ರಸರ್ಕಾರದ ಹಿಂದೀಭಾಷೆಯ ಪರವಾದ ನಿಲುವುಗಳ ವಿರುದ್ಧ ಪ್ರತಿಭಟನೆ ಡೆಸಲಾಯಿತು. ಬೆಂಗಳೂರಿನಲ್ಲಿ ಮೈಸೂರು ಬ್ಯಾಂಕ್ ವೃತ್ತದ ಬಳಿ ಕೇಂದ್ರ ಸರ್ಕಾರದ ಪ್ರತಿಕೃತಿ ದಹಿಸಿ ಪ್ರತಿಭಟಿಸಲಾಯಿತು. ನಂತರ ಮಾನ್ಯ ರಾಜ್ಯಪಾಲರನ್ನು ಕಂಡು ಹಿಂದೀ ಹೇರಿಕೆಯ ದುಷ್ಪರಿಣಾಮಗಳನ್ನು ವಿವರಿಸಿ ಕನ್ನಡಿಗರ ಪ್ರತಿರೋಧ ವ್ಯಕ್ತಪಡಿಸುವ ಆಗ್ರಹಪೂರ್ವಕವಾದ ಮನವಿಯನ್ನು ಸಲ್ಲಿಸಲಾಯಿತು.

Monday, September 5, 2011

ಕಳಂಕಿತರ ಸೆರೆಯಾಗಲಿ

ಲೋಕಾಯುಕ್ತ ವರದಿಯ ಕುರಿತು ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಸಿಬಿಐ ತನಿಖೆಗೆ ಶಿಫಾರಸು ಮಾಡಬೇಕೆಂದು ನಮ್ಮ ರಾಜ್ಯಾಧ್ಯಕ್ಷರು ಒತ್ತಾಯಿಸಿದ್ದಾರೆ