Thursday, December 29, 2011

ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ "ನೇರನುಡಿ" ಪುಸ್ತಕ ಬಿಡುಗಡೆ ಕಾರ್ಯಕ್ರಮ

ಕರವೇ ನಲ್ನುಡಿಯಲ್ಲಿ ಪ್ರಕಟಗೊಳ್ಳುತ್ತಿದ್ದ "ನೇರನುಡಿ" ಅಂಕಣಗಳ ಸಂಕಲವನ್ನು ೨೬-೧೨-೨೦೧೧ ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪುಸ್ತಕರೂಪದಲ್ಲಿ ಹೊರತರಲಾಯಿತು. ೭೮ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಸಿ.ಪಿ.ಕೆ. ಹಾಗು ಗಣ್ಯರಾದ ಸಚಿವ ಆರ್. ಅಶೋಕ್, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಡಾ. ನಲ್ಲೂರು ಪ್ರಸಾದ್, ರಂಜಾನ್ ದರ್ಗ, ಡಾ. ನಟರಾಜ್ ಹುಳಿಯಾರ್ ಹಾಜರಿದ್ದರು.

ಇದರ ವರದಿಯನ್ನು ಇಲ್ಲಿ ನೋಡಿ.



Sunday, December 18, 2011

ಗುಲ್ಬರ್ಗಾ ಪಾಲಿಕೆಯಲ್ಲಿ ಉರ್ದು ಎರಡನೆ ಆಡಳಿತ ಭಾಷೆ ಎಂಬ ನಿರ್ಧಾರವನ್ನು ಸರ್ಕಾರ ಪರಿಗಣಿಸಬಾರದೆಂದು ಹೋರಾಟ

ಗುಲ್ಬರ್ಗಾ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಉರ್ದು ಭಾಷೆಗೆ ಎರಡನೆ ಆಡಳಿತ ಭಾಷೆಯ ಸ್ಥಾನ ನೀಡುವ ನಿರ್ಣಯವನ್ನು ಕೈಗೊಂಡಿದ್ದಾರೆ. ಆದರೆ, ಗುಲ್ಬರ್ಗಾ ಮಹಾನಗರದ ವ್ಯಾಪ್ತಿಯಲ್ಲಿ ವಾಸಿಸುವ ಮುಸಲ್ಮಾನ ಬಂಧುಗಳು ಕನ್ನಡಿಗರೇ ಆಗಿದ್ದು, ಎಲ್ಲರ ಜೊತೆ ಬೆರೆತು ಬಾಳುತಿದ್ದಾರೆ. ಕೇವಲ ರಾಜಕೀಯ ಕಾರಣಗಳಿಗಾಗಿ ಮಾಡಿರುವ ಇಂತಹ ನಿರ್ಧಾರ ಜನರನ್ನು ದಿಕ್ಕುತಪ್ಪಿಸುವ ಕೆಲಸವಾಗಿದ್ದು, ಸರ್ಕಾರ ಇದನ್ನು ಪರಿಗಣಿಸಬಾರದು ಎಂದು ಒತ್ತಾಯಿಸಿ ನಾವು ಬೆಂಗಳೂರಿನಲ್ಲಿ ದಿನಾಂಕ ೧೭ ಡಿಸೆಂಬರ್ ೨೦೧೧ ರಂದು ಪ್ರತಿಭಟನೆ ನಡೆಸಿದೆವು.

ನಾವು ನಡೆಸಿದ ಪ್ರತಿಭಟನೆಯ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:

ಕನ್ನಡಪ್ರಭ ವರದಿ:
ವಿಜಯಕರ್ನಾಟಕ ವರದಿ:

ಉದಯವಾಣಿ ವರದಿ:
ಈಸಂಜೆ ವರದಿ:

Wednesday, December 14, 2011

ಮೆಟ್ರೋದಲ್ಲಿ ಕನ್ನಡಿಗರಿಗೆ ಆದ್ಯತೆ ಬಗ್ಗೆ ಕರವೇ ನಡೆಸಿದ ಹೋರಾಟಕ್ಕೆ ಬಿ.ಎಂ.ಆರ್.ಸಿ.ಎಲ್. ಪ್ರತಿಕ್ರಿಯೆ

ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಕನ್ನಡಿಗರಿಗೆ ಕಡ್ಡಾಯ ಉದ್ಯೋಗ ನೀಡಬೇಕು, ಎಲ್ಲಾ ಹಂತಗಳಲ್ಲಿಯೂ ಕನ್ನಡವನ್ನು ಬಳಸಬೇಕು ಮತ್ತು ಅನಗತ್ಯವಾದ ಹಿಂದಿ ಬಳಕೆಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ಬೆಂಗಳೂರಿನಲ್ಲಿರುವ ಬಿ.ಎಂ.ಅರ್.ಸಿ.ಎಲ್ ಮುಖ್ಯ ಕಛೇರಿಯ ಮುಂದೆ ನಾವು ಡಿಸೆಂಬರ್ ೨, ೨೦೧೧ ರಂದು ಪ್ರತಿಭಟನೆ ನಡೆಸಿದ್ದೆವು. ಕನ್ನಡಿಗರ ಪರವಾಗಿ ನಾವು ಮಾಡಿದ್ದ ಈ ಹಕ್ಕೊತ್ತಾಯ ಪರಿಣಾಮ ಬೀರಿದ್ದು, ಪ್ರತಿಭಟನೆ ವೇಳೆ ನಾವು ಮನವಿಪತ್ರದಲ್ಲಿ ಪ್ರಸ್ತಾಪಿಸಿದ್ದ ಕೆಲವೊಂದು ವಿಷಯಗಳಿಗೆ ಬಿ.ಎಂ.ಆರ್.ಸಿ.ಎಲ್. ಕಂಪನಿ ಪ್ರತಿಕ್ರಿಯೆ ನೀಡಿದೆ.

ಬಿ.ಎಂ.ಆರ್.ಸಿ.ಎಲ್ ಕಂಪನಿಯ ಕಾರ್ಯದರ್ಶಿ ಮತ್ತು ಪ್ರಧಾನ ವ್ಯವಸ್ಥಾಪಕರು ಪ್ರತಿಕ್ರಿಯೆ ನೀಡಿ ಕಳಿಸಿರುವ ಪತ್ರದ ಪ್ರತಿಯನ್ನು ಕೆಳಗೆ ಲಗತ್ತಿಸಲಾಗಿದೆ:








Friday, December 2, 2011

ನಮ್ಮ ಮೆಟ್ರೋದ ಕನ್ನಡ-ಕನ್ನಡಿಗ ವಿರೋಧಿ ನೀತಿ ವಿರುದ್ಧ ನಡೆಸಿದ ಪ್ರತಿಭಟನೆಯ ಪತ್ರಿಕಾ ವರದಿಗಳು

ಬೆಂಗಳೂರು ಮೆಟ್ರೋದಲ್ಲಿ ಕನ್ನಡಿಗರಿಗೆ ಕಡ್ಡಾಯ ಉದ್ಯೋಗ ನೀಡಬೇಕು, ಎಲ್ಲಾ ಹಂತಗಳಲ್ಲಿಯೂ ಕನ್ನಡವನ್ನು ಬಳಸಬೇಕು, ಅನಗತ್ಯವಾದ ಹಿಂದಿ ಬಳಕೆಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ಶಾಂತಿನಗರದಲ್ಲಿರುವ ಬಿ.ಎಂ.ಅರ್.ಸಿ.ಎಲ್ ಮುಖ್ಯ ಕಛೇರಿಯ ಮುಂದೆ ನಾವು ನೆನ್ನೆ (ಡಿಸೆಂಬರ್ ೨, ೨೦೧೧ ರಂದು) ನಡೆಸಿದ ಪ್ರತಿಭಟನೆಯ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:

ಕನ್ನಡಪ್ರಭ ವರದಿ:
ಡಿ.ಎನ್.ಎ. ವರದಿ:
ಪ್ರಜಾವಾಣಿ ವರದಿ:
ಈಸಂಜೆ ವರದಿ:
ಸಂಜೆವಾಣಿ ವರದಿ:

ನಮ್ಮ ಮೆಟ್ರೋದ ಕನ್ನಡ-ಕನ್ನಡಿಗ ವಿರೋಧಿ ನೀತಿಯನ್ನು ಖಂಡಿಸಿ ಸಲ್ಲಿಸಲಾದ ಮನವಿ ಪತ್ರ

ಬೆಂಗಳೂರು ಮೆಟ್ರೋದಲ್ಲಿ ಕನ್ನಡಿಗರಿಗೆ ಕಡ್ಡಾಯ ಉದ್ಯೋಗ ನೀಡಬೇಕು, ಎಲ್ಲಾ ಹಂತಗಳಲ್ಲಿಯೂ ಕನ್ನಡವನ್ನು ಬಳಸಬೇಕು, ಅನಗತ್ಯವಾದ ಹಿಂದಿ ಬಳಕೆಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ನಮ್ಮ ವೇದಿಕೆಯಿಂದ ಶಾಂತಿನಗರದಲ್ಲಿರುವ ಬಿ.ಎಂ.ಅರ್.ಸಿ.ಎಲ್ ಮುಖ್ಯ ಕಛೇರಿಯ ಮುಂದೆ ಪ್ರತಿಭಟನೆ ನಡೆಸಿದೆವು ನಂತರ ಬಿ.ಎಂ.ಅರ್.ಸಿ.ಎಲ್ ನ ಸಂಪರ್ಕಾಧಿಕಾರಿ ಶ್ರೀ ಚೌಹಾಣ್ ಅವರಿಗೆ ನಮ್ಮ ಬೇಡಿಕೆಗಳಿರುವ ಮನವಿ ಪತ್ರವನ್ನು ಸಲ್ಲಿಸಿದೆವು.

ಮನವಿ ಪತ್ರದ ಪ್ರತಿಯನ್ನು ಕೆಳಗಡೆ ನೋಡಿ:

ನಮ್ಮ ಮೆಟ್ರೋದ ಕನ್ನಡ-ಕನ್ನಡಿಗ ವಿರೋಧಿ ನೀತಿ ವಿರುದ್ಧ ಕರವೇ ಹೋರಾಟ

ಬೆಂಗಳೂರು ಮೆಟ್ರೋದಲ್ಲಿ ಕನ್ನಡಿಗರಿಗೆ ಕಡ್ಡಾಯ ಉದ್ಯೋಗ ನೀಡಬೇಕು, ಎಲ್ಲಾ ಹಂತಗಳಲ್ಲಿಯೂ ಕನ್ನಡವನ್ನು ಬಳಸಬೇಕು, ಅನಗತ್ಯವಾದ ಹಿಂದಿ ಬಳಕೆಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ನಮ್ಮ ವೇದಿಕೆಯಿಂದ ಶಾಂತಿನಗರದಲ್ಲಿರುವ ಬಿ.ಎಂ.ಅರ್.ಸಿ.ಎಲ್ ಮುಖ್ಯ ಕಛೇರಿಯ ಮುಂದೆ ಪ್ರತಿಭಟನೆ ನಡೆಸಿದೆವು.

ನಮ್ಮ ಪ್ರತಿಭಟನೆಯ ಕೆಲವು ಚಿತ್ರಗಳನ್ನು ಕೆಳಗಡೆ ನೋಡಿ: