Monday, October 24, 2011

ಸರ್ಕಾರಿ ಶಾಲೆ ಮುಚ್ಚುವ ನಿರ್ಧಾರದ ವಿರುದ್ಧ ನಡೆಸಿದ ಹೋರಾಟದ ಪತ್ರಿಕಾ ವರದಿಗಳು

ಸರ್ಕಾರಿ ಶಾಲೆಗಳನ್ನು ಮುಚ್ಚುವ ಸರ್ಕಾರದ ನಿರ್ಧಾರದ ವಿರುದ್ಧ ನೆನ್ನೆ, ೨೪-೧೦-೨೦೧೧ ರಂದು ನಾವು ರಾಜ್ಯಾದ್ಯಂತ ನಡೆಸಿದ ಹೋರಾಟದ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:

ವಿಜಯಕರ್ನಾಟಕ ವರದಿ:ಕನ್ನಡಪ್ರಭ ವರದಿ:
ಉದಯವಾಣಿ ವರದಿ:
ಪ್ರಜಾವಾಣಿ ವರದಿ:
ಈ ಸಂಜೆ ವರದಿ:
ಸಂಜೆವಾಣಿ ವರದಿ:

ಸರ್ಕಾರಿ ಶಾಲೆ ಮುಚ್ಚುವ ನಿರ್ಧಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ

ಮಕ್ಕಳ ಸಂಖ್ಯೆ ಕಮ್ಮಿ ಎಂಬ ಕುಂಟು ನೆಪವೊಡ್ಡಿ ಸುಮಾರು ೩೦೦೦ ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ರಾಜ್ಯಸರ್ಕಾರ ನಿರ್ಧರಿಸಿದ್ದು, ಈ ಮೂಲಕ ೨೦೦೯ರ "ಶಿಕ್ಷಣ ಹಕ್ಕು ಕಾಯ್ದೆ" ಅನ್ವಯ ಪ್ರತಿ ಮಗುವಿಗೂ ಮೂಲಭೂತ ಶಿಕ್ಷಣ ಒದಗಿಸಬೇಕಿದ್ದ ಸರ್ಕಾರವೇ ತನ್ನ ಹೊಣೆಗಾರಿಕೆಯಿಂದ ಜಾರಿಕೊಂಡಂತಾಗಿದೆ. ಸರ್ಕಾರ ಕೂಡಲೇ ತನ್ನ ನಿರ್ಧಾರವನ್ನು ಬದಲಿಸಿ, ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಿಸಲು ಕ್ರಮ ಕೈಕೊಳ್ಳಬೇಕೆಂದು ಆಗ್ರಹಿಸಿ ೨೪-೧೦-೨೦೧೧ರ ಸೋಮವಾರದಂದು ರಾಜ್ಯಾದ್ಯಂತ ನಮ್ಮ ಎಲ್ಲಾ ಜಿಲ್ಲಾ ಕೆಂದ್ರಗಳಲ್ಲಿ ಪ್ರತಿಭಟನೆ ನಡೆಸಿದೆವು.

ಇದರ ಅಂಗವಾಗಿ, ಬೆಂಗಳೂರಿನಲ್ಲೂ ಕೂಡ ಬೃಹತ್ ಕಾಲ್ನಡಿಗೆ ಜಾಥಾ ನಡೆಸಿ, ರಾಜ್ಯಸರ್ಕಾರಕ್ಕೆ ನಮ್ಮ ಮನವಿ ಪತ್ರವನ್ನು ಸಲ್ಲಿಸಿದೆವು. ಸರ್ಕಾರಕ್ಕೆ ಸಲ್ಲಿಸಿದ ಮನವಿ ಪತ್ರವನ್ನು ಕೆಳಗೆ ನೋಡಿ:


Wednesday, October 5, 2011

ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ

ಕರ್ನಾಟಕದಲ್ಲಿದ್ದುಕೊಂಡು ಕನ್ನಡಿಗರ ವಿರುದ್ಧ, ಕರ್ನಾಟಕದ ವಿರುದ್ಧ ಸದಾ ದನಿ ಎತ್ತಿ ಶಾಂತಿ ಕದಡುತ್ತಿರುವ ಎಂ.ಈ.ಎಸ್ ಸಂಘಟನೆಯನ್ನು ನಿಷೇಧಿಸಬೇಕೆಂದು ನಾವು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದೆವು.

ಪ್ರತಿಭಟನೆಯ ಕೆಲ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:

ವಿಜಯಕರ್ನಾಟಕ ವರದಿ:

ಕನ್ನಡಪ್ರಭ ವರದಿ:


ಈ ಸಂಜೆ ವರದಿ: