Thursday, August 20, 2009

ತಮಿಳುನಾಡಿಗೆ ನೀರು ಬಿಡುವುದರ ವಿರುದ್ಧ ಕರವೇ ಪ್ರತಿಭಟನೆ

ಕೆಆರಎಸ್ ನಿಂದ ತಮಿಳುನಾಡಿಗೆ ನೀರು ಬಿಟ್ಟಿರುವ ಕ್ರಮವನ್ನು ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರಾಜ್ಯದ ವಿವಿಧೆಡೆಗಳಲ್ಲಿ ಪ್ರತಿಭಟನೆ ನಡೆಸಿದರು.


Tuesday, August 18, 2009

ವಿದ್ಯುತ್ ಯೋಜನೆಗಳಿಗೆ ತಮಿಳುನಾಡಿನ ಅಡ್ಡಿ - ಕ.ರ.ವೇ. ಇಂದ ಖಂಡನೆ

೧೭-೦೮-೦೯ ರಂದು ಚೆನ್ನೈನಲ್ಲಿ; ಕಾವೇರಿ ಕಣಿವೆಯಲ್ಲಿ ವಿದ್ಯುತ್ ಯೋಜನೆಗಳನ್ನು ಜಾರಿಗೆ ತರುವ ಸಲುವಾಗಿ ನಡೆದ ಸಭೆಯಲ್ಲಿ, ತಮಿಳುನಾಡು ಕರ್ನಾಟಕದ ವಿದ್ಯುತ್ ಯೋಜನೆಗಳಿಗೆ ಅಡ್ಡಿಪಡಿಸಿದ್ದನ್ನು ಕ.ರ.ವೇ. ಖಂಡಿಸಿತು.

ಇದರ ಪತ್ರಿಕಾ ವರದಿಯನ್ನು ಇಲ್ಲಿ ನೋಡಿ.

Tuesday, August 11, 2009

ತಿರುವಳ್ಳುವರ್ ಪ್ರತಿಮೆ ಸ್ಥಾಪನೆ : ಕರ್ನಾಟಕ ರಕ್ಷಣಾ ವೇದಿಕೆಯ ನಿಲುವುಗಳು

ಜಾತಿ ಭಾಷೆ ಪಂಥಗಳನ್ನು ಮೀರಿದ ಹಲವಾರು ದಾರ್ಶನಿಕರು ಹಿಂದೆ ಆಗಿಹೋಗಿದ್ದಾರೆ. ಇವರುಗಳಲ್ಲೊಬ್ಬರು ತಿರುಕ್ಕುರುಳ್ ಬರೆದ ತಮಿಳು ಕವಿ ತಿರುವಳ್ಳುವರ್. ಇವರ ಬಗ್ಗೆ ನಾಡಿನ ಯಾವುದೇ ದಾರ್ಶನಿಕರ ಬಗ್ಗೆ ಇರುವಂತಹುದೇ ಗೌರವ ನಮಗಿದೆ. ಬೆಂಗಳೂರಿನ ಹಲಸೂರಿನಲ್ಲಿ ತಮಿಳಿನ ಸಂತ ಕವಿ ತಿರುವಳ್ಳುವರ್ ಅವರ ಪ್ರತಿಮೆಯನ್ನು ಅನಾವರಣ ಮಾಡುತ್ತಿರುವ ವಿಧಾನ ಮತ್ತು ಸಂದರ್ಭಗಳ ಬಗ್ಗೆ ನಮ್ಮ ವಿರೋಧವಿದೆ.

ಈ ಹಿಂದೆ ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಮಾಡಿ ಎಂದವರು ಇವರು. ಅಂದು ರಾತ್ರೋರಾತ್ರಿ ಈ ಪ್ರತಿಮೆಯನ್ನು ಅನುಮತಿಯಿಲ್ಲದೆ ನಿಲ್ಲಿಸಿ ಅದನ್ನು ಬೆಂಗಳೂರಿನ ಮೇಲೆ ಹಕ್ಕು ಸ್ಥಾಪಿಸುವ ಪ್ರತೀಕವಾಗಿ ಬಳಸಲು ಮುಂದಾಗಿದ್ದವರು ಇವರು. ಡಾ.ರಾಜ್‍ಕುಮಾರ್ ಅವರ ಅಪಹರಣದ ಸಮಯದಲ್ಲಿ ಈ ಪ್ರತಿಮೆಯ ಅನಾವರಣದ ಬೇಡಿಕೆಯ ಜೊತೆಗೆ ತಮಿಳನ್ನು ಕರ್ನಾಟಕದ ಎರಡನೇ ಆಡಳಿತ ಭಾಷೆಯನ್ನಾಗಿ ಮಾಡಿ ಎಂದಿದ್ದದ್ದನ್ನು ಮರೆಯಲಾದೀತೆ? ಈ ಪ್ರತಿಮೆ ಸಂತ ತಿರುವಳ್ಳುವರ್ ಅವರ ಮಹಾನತೆಗೆ ಪ್ರತೀಕವಾಗದೆ, ಕರ್ನಾಟಕದಲ್ಲಿ ಕನ್ನಡಿಗರ ಸಾರ್ವಭೌಮತ್ವಕ್ಕೆ ಕೊಳ್ಳಿ ಇಡಲು ಮುಂದಾಗಿರುವ ತಮಿಳರ ಆಕ್ರಮಣಕಾರಿ ಮನಸ್ಥಿತಿಯ ಪ್ರತೀಕವಾಗಿದೆ. ಹಾಗಾಗಿ ಇದನ್ನು ನಾಡಿನ ಕನ್ನಡಿಗರು ಸೌಹಾರ್ದತೆಯ ಕ್ರಮವೆಂದು ಪರಿಗಣಿಸಿಲ್ಲ ಮತ್ತು ಈ ಕಾರಣಕ್ಕಾಗಿ ತಿರುವಳ್ಳುವರ್ ಪ್ರತಿಮೆಯ ಸ್ಥಾಪನೆಯನ್ನು ವಿರೋಧಿಸುತ್ತೇವೆ.

ಈ ಪ್ರತಿಮೆಯ ಸ್ಥಾಪನೆ ಸಾಂಸ್ಕೃತಿಕ ವಿನಿಮಯವೂ ಅಲ್ಲ, ಸೌಹಾರ್ದತೆಗೆ ಪೂರಕವೂ ಅಲ್ಲ. ಏಕೆಂದರೆ ಪ್ರತಿಮೆಗಳನ್ನು ಕನ್ನಡಿಗರು ತಾವಾಗಿಯೇ ಇಲ್ಲಿ ಸ್ಥಾಪಿಸಲು ಮುಂದಾಗಿಲ್ಲ, ಅಥವಾ ತಮಿಳುನಾಡು ಸರ್ವಜ್ಞ ಮೂರ್ತಿಯನ್ನು ಸರ್ವಜ್ಞನ ಅಥವಾ ಕನ್ನಡಿಗರ ಬಗ್ಗೆ ಇರುವ ಪ್ರೀತಿಯಿಂದ ಪ್ರತಿಷ್ಠಾಪನೆ ಮಾಡುತ್ತಿರುವರೇನು? ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆಯನ್ನು "ಕನ್ನಡನಾಡಿನ ಮುಖ್ಯವಾಹಿನಿಯಿಂದ ಇಲ್ಲಿ ವಾಸಿಸುವ ತಮಿಳರು ಹೊರಗೇ" ಎಂಬುದಾಗಿ ಸಾರಲು ಪ್ರತಿಷ್ಠಾಪಿಸಲಾಗುತ್ತಿದೆ ಎಂಬುದರ ಬಗ್ಗೆ ನಾಡ ಜನಕ್ಕೆ ಅನುಮಾನವಿಲ್ಲ. ಆ ಕಾರಣದಿಂದಾಗಿ ಪ್ರತಿಮೆಯ ಸ್ಥಾಪನೆಗೆ ನಮ್ಮ ವಿರೋಧವಿದೆ.

ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯ ಹೊಸ್ತಿಲಲ್ಲಿ ಇಲ್ಲಿರುವ ತಮಿಳರ ಮತಗಳನ್ನು ಗಳಿಸುವ ದುರುದ್ದೇಶದಿಂದ ನಾಡಿನಲ್ಲಿ ಭಾಷಾ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿರುವ ರಾಜ್ಯ ಸರ್ಕಾರದ ಈ ಕ್ರಮದಿಂದ ಕನ್ನಡಿಗರ ಸ್ವಾಭಿಮಾನವನ್ನು ತಮಿಳರ ಕಾಲಡಿಯಲ್ಲಿಡಲು ಮುಂದಾಗಿರುವುದರ ಬಗ್ಗೆ ವಿರೋಧ. ಯಾವ ರಾಜ್ಯದವರು ನಮ್ಮ ನೆಲವಾದ ಹೊಗೇನಕಲ್‍ನಲ್ಲಿ ಅಕ್ರಮ ಕಾಮಗಾರಿಗೆ ಮುಂದಾಗಿದ್ದು, ಕನ್ನಡಿಗರ ಸೌಹಾರ್ದಯುತವೂ ನ್ಯಾಯಯುತವೂ ಆದ ಜಂಟಿ ಸಮೀಕ್ಷೆಯ ಬೇಡಿಕೆಗೆ ಕಿಂಚಿತ್ತೂ ಬೆಲೆಕೊಡದೇ ಇರುವರೋ, ಯಾವ ರಾಜ್ಯದವರು ಕಾರಣವಿಲ್ಲದೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡುವ ಕೇಂದ್ರದ ಘೋಷಣೆಗೆ ಕಂಟಕವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂಬ ಕತ್ತಿ ಛಳಪಿಸುತ್ತಿರುವರೋ, ಯಾವ ರಾಜ್ಯದ ಜೊತೆಗೆ ನಮಗಿನ್ನೂ ಬಗೆಹರಿಯದ ಹತ್ತಾರು ಸಮಸ್ಯೆಗಳಿವೆಯೋ ಆ ರಾಜ್ಯದ ಜೊತೆಗೆ ಪ್ರತಿಮೆಗಳ ಅನಾವರಣದಿಂದ ಸೌಹಾರ್ದತೆ ಹೆಚ್ಚುವುದು ಎಂಬುದನ್ನು ನಂಬಲಾದೀತೆ? ಒಕ್ಕೂಟ ವ್ಯವಸ್ಥೆಯಲ್ಲಿ ನಮಗಿನ್ನೂ ಸಿಗಬೇಕಾದ ಸಮಾನ ಗೌರವ ಸಿಗುತ್ತಿಲ್ಲ ಎಂಬುದಕ್ಕೆ ಪುರಾವೆಯಾಗಿ ಈ ಪ್ರತಿಮೆಗಳು ಅನಾವರಣಗೊಳ್ಳುತ್ತಿರುವ ಸ್ಥಳಗಳು, ಕಾರ್ಯಕ್ರಮದ ಅದ್ದೂರಿತನದಲ್ಲಿರೋ ತಾರತಮ್ಯ, ಅನಾವರಣದ ದಿನಾಂಕಗಳಲ್ಲಿರೋ ತಾರತಮ್ಯ... ಇವೆಲ್ಲವುಗಳೂ ಈ ಪ್ರತಿಮೆಯ ಅನಾವರಣವೆನ್ನುವುದು ಕನ್ನಡಿಗರ ಸ್ವಾಭಿಮಾನವನ್ನು ಬಲಿಕೊಡುತ್ತಿರುವ ಕ್ರಮವೆಂದು ನೋವಿನಿಂದ ನುಡಿಯಬೇಕಾಗಿದೆ. ಈ ಕಾರಣದಿಂದ ನಾವು ತಿರುವಳ್ಳುವರ್ ಪ್ರತಿಮೆಯ ಸ್ಥಾಪನೆಯನ್ನು ವಿರೋಧಿಸುತ್ತೇವೆ.

ಈ ನಮ್ಮ ಸ್ವಾಭಿಮಾನದ ಕೂಗನ್ನು ಹತ್ತಿಕ್ಕಲು ರಾಜ್ಯಸರ್ಕಾರವು ಎಲ್ಲಾ ರೀತಿಯಲ್ಲೂ ಬಲಪ್ರಯೋಗಕ್ಕೆ ಮುಂದಾಗಿದೆ. ನಮ್ಮ ಪ್ರತಿಭಟನೆಯ ಹಕ್ಕನ್ನು ಮೊಟಕು ಮಾಡಲು ಇಡೀ ಪೊಲೀಸ್ ಬಲವನ್ನು ನಿರ್ದಾಕ್ಷಿಣ್ಯವಾಗಿ ಬಳಸಲಾಗುತ್ತಿದೆ. ಇದ್ಯಾವುದೂ ನಮ್ಮ ನಾಡಪರವಾದ ನಿಲುವನ್ನು ಕದಲಿಸಲಾರವು. ಕನ್ನಡಿಗರೆಲ್ಲಾ ನಮ್ಮ ಈ ಹೋರಾಟಕ್ಕೆ ಬೆಂಬಲವಾಗಿ ನಿಲ್ಲಬೇಕೆಂದೂ, ರಾಜ್ಯಸರ್ಕಾರದ ದಬ್ಬಾಳಿಕೆಯ ದೌರ್ಜನ್ಯದ ಕ್ರಮಗಳನ್ನು ಖಂಡೀಸಬೇಕೆಂದೂ ಈ ಮೂಲಕ ಕೋರುತ್ತೇವೆ.

Wednesday, August 5, 2009

ತಿರುವಳ್ಳುವರ್ ಪ್ರತಿಮೆ ಅನಾವರಣದ ವಿರುದ್ಧ ಬೆಂಗಳೂರಿನಲ್ಲಿ ಕ.ರ.ವೇ. ಇಂದ ಪ್ರತಿಭಟನೆ

ತಿರುವಳ್ಳುವರ್ ಪ್ರತಿಮೆ ಅನಾವರಣದ ವಿರುದ್ಧ ನಮ್ಮ ವೇದಿಕೆ ಕಾರ್ಯಕರ್ತರು ಆ. 5 ರಂದು ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಇದರ ವರದಿಯನ್ನು ಇಲ್ಲಿ ನೋಡಿ.




Tuesday, August 4, 2009

ತಮಿಳುನಾಡಿನಿಂದ ಮತ್ತೆ ಅನ್ಯಾಯ - ಕ.ರ.ವೇ. ಇಂದ ಖಂಡನೆ

ತಮಿಳುನಾಡಿನ ಅನ್ಯಾಯದ ಸರಣಿಗೆ ಹೊಸದೆಂಬಂತೆ ತಮಿಳುನಾಡು ಈ ಸಾರಿ ತಕರಾರು ತಗೆದಿರುವುದು ಕಾವೇರಿಯ ಉಪನದಿಗಳಾದ ಕಬಿನಿ, ಹೇಮಾವತಿ ಮತ್ತು ಸ್ವರ್ಣಾವತಿಯಲ್ಲಿ ಕರ್ನಾಟಕ ಸರಕಾರ ಕೈಗೊಂಡಿದ್ದ ನೀರಾವರಿ ಯೋಜನೆಗಳ ಬಗ್ಗೆ. ತಮಿಳುನಾಡಿನ ಪ್ರಕಾರ ಕರ್ನಾಟಕ ಕಾವೇರಿ ಮತ್ತು ಅದರ ಉಪನದಿಗಳಲ್ಲಿ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕಾದರೆ, ಕರ್ನಾಟಕ ಮೊದಲು ತಮಿಳುನಾಡಿನ ಒಪ್ಪಿಗೆಯನ್ನು ಪಡೆಯಬೇಕಂತೆ. ಇದು ತಮಿಳುನಾಡಿನ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ.

ಈ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ರಾಜ್ಯಾಧ್ಯಕ್ಷರಾದ ಶ್ರೀ ಟಿ.ಎ. ನಾರಾಯಣ ಗೌಡರು ಆ. 04 ರಂದು ನೀಡಿದ ಪತ್ರಿಕಾ ಹೇಳಿಕೆಯನ್ನು ಇಲ್ಲಿ ನೋಡಿ.



ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕಾಗಿ ಮುಖ್ಯಮಂತ್ರಿಗಳ ಜೊತೆ ನಡೆದ ಸಭೆಯ ನಂತರದ ಪತ್ರಿಕಾ ಹೇಳಿಕೆ

ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕಾಗಿ ಮುಖ್ಯಮಂತ್ರಿಗಳ ಜೊತೆ ನಡೆದ ಸಭೆಯ ನಂತರದ ಪತ್ರಿಕಾ ಹೇಳಿಕೆ



Monday, August 3, 2009

ತಿರುವಳ್ಳುವರ್ ಪ್ರತಿಮೆ ಅನಾವರಣದ ಬಗ್ಗೆ ಕ.ರ.ವೇ. ನಿಲುವು

ಹಿಂದಿನಿಂದಲೂ ಕನ್ನಡಿಗರಿಗೆ ತಮಿಳುನಾಡಿನಿಂದ ಅನ್ಯಾಯವಾಗುತ್ತ ಬಂದಿದೆ ಅನ್ನುವುದಕ್ಕೆ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಕೇಂದ್ರ ಸರಕಾರವನ್ನ ತನ್ನ ತಾಳಕ್ಕೆ ತಕ್ಕಂತೆ ಕುಣಿಸುವ ಮತ್ತು ತನ್ನ ಮೂಗಿನ ನೇರಕ್ಕೆ ನಿರ್ಣಯಗಳನ್ನು ತಗೆದುಕೊಳ್ಳುವ ತಮಿಳುನಾಡು, ಸೌಹಾರ್ದತೆ ಅನ್ನೋ ಪದಕ್ಕೆ ಅರ್ಥ ಗೊತ್ತಿಲ್ಲ ಅನ್ನುವಂತೆ ನಡೆದುಕೊಂಡಿದೆ ಮತ್ತು ಇಂದಿಗೂ ನಡೆದುಕೊಳ್ಳುತ್ತಿದೆ.

ಆದರೆ ಇದನೆಲ್ಲ ನಮ್ಮ ಸರಕಾರ ಗಣನೆಗೆ ತಗೆದುಕೊಳ್ಳುತ್ತಿಲ್ಲ. ಕೇವಲ ತಿರುವಳ್ಳುವರ್ ಪ್ರತಿಮೆ ಸ್ಥಾಪನೆಯಿಂದ ಕರ್ನಾಟಕ ಮತ್ತು ತಮಿಳುನಾಡಿನಮಧ್ಯೆ ಇರುವ ಎಲ್ಲ ಸಂಕಷ್ಟಗಳಿಗೆ ಪರಿಹಾರ ಸಿಗುವುದೆಂದು ಭಾವಿಸಿದಂತೆ ಕಾಣುತ್ತಿದೆ. ಆದರೆ ವಾಸ್ತವದಲ್ಲಿ ತಮಿಳುನಾಡಿನಿಂದ ಕರ್ನಾಟಕಕ್ಕೇ ಆಗಿರುವ ಅನ್ಯಾಯಗಳ ಪಟ್ಟಿ ನೋಡುತ್ತಾ ಹೋದರೆ ಸರಕಾರ ಎಲ್ಲ ಕನ್ನಡಿಗರ
ಸ್ವಾಭಿಮಾನವನ್ನ ತಮಿಳುನಾಡು ಸರಕಾರಕ್ಕೆ ಒತ್ತೆ ಇಟ್ಟಂತೆ ಅನಿಸುತ್ತಿದೆ.

ತಮಿಳುನಾಡಿನಿಂದ ಕರ್ನಾಟಕಕ್ಕೆ ಆಗಿರುವ ಕೆಲವು ಅನ್ಯಾಯಗಳು ಹೀಗಿವೆ:


೧. ಕಾವೇರಿ ನದಿ ನೀರು ಹಂಚಿಕೆಯಲ್ಲಿ ತಮಿಳುನಾಡಿನಿಂದ ಆಗುತ್ತಿರುವ ಅನ್ಯಾಯ.

೨. ಹೊಗೇನಕಲ್ ಪ್ರದೇಶವು ಕರ್ನಾಟಕಕ್ಕೆ ಸೇರಿದ್ದರಾದರೂ ಸಹ, ತಮಿಳುನಾಡ ತನ್ನದೆಂದು ಮೊಂಡುವಾದ ಮಾಡುತ್ತಿದೆ. ಕೇಂದ್ರ ಸರಕಾರವು ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಗಡಿ ಸಮೀಕ್ಷೆ ಮಾಡಬೇಕೆಂದು ಕರ್ನಾಟಕ ಒತ್ತಾಯಿಸುತ್ತಿದ್ದರು, ತಮಿಳುನಾಡು ಇದಕ್ಕೆ ಸೊಪ್ಪು ಹಾಕುತ್ತಿಲ್ಲ.

೩. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಗುವ ಎಲ್ಲಾ ಅರ್ಹತೆ ಇದ್ದರು ಸಹ ತಮಿಳುನಾಡಿನ ಆರ್. ಗಾಂಧಿ ಎನ್ನುವ ವ್ಯಕ್ತಿ ಮದ್ರಾಸ್ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಾಕಿ ಕನ್ನಡಕ್ಕೆ ನ್ಯಾಯವಾಗಿ ಸಿಗಬೇಕಾಗಿದ್ದ ಸವಲತ್ತುಗಳು ಸಿಗದಂತೆ ಮಾಡಿದ್ದಾರೆ. ಸೌಹಾರ್ದತೆಯ ಬಗ್ಗೆ ಮಾತನಾಡುವ ತಮಿಳುನಾಡು ಎರೆಡು ರಾಜ್ಯಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಈ ಅರ್ಜಿಯನ್ನು ವಾಪಸ್ ಪಡೆಯುವಂತೆ ಆಗ್ರಹಿಸಬಹುದಾಗಿತ್ತು. ಆದರೆ ತಮಿಳುನಾಡು ಇದರೆ ಬಗ್ಗೆ ಯಾಕೋ ಮೂಕ ಪ್ರೇಕ್ಷಕನಂತೆ ವರ್ತಿಸುತ್ತಿದೆ.

೪. ಆಲೋಚನೆ ಇಲ್ಲದ ಕನ್ನಡಿಗ ಸಂಸದರ ಬಲಹೀನತೆಯನ್ನ ಉಪಯೋಗಿಸಿಕೊಂಡ ತಮಿಳುನಾಡು, ಕರ್ನಾಟಕಕ್ಕೆ ಬರಬೇಕಾಗಿದ್ದ ಅನೇಕ ಯೋಜನೆಗಳನ್ನು ಕೇಂದ್ರದ ಮೇಲೆ ಒತ್ತಡ ತಂದು ತನ್ನ ಮಡಿಲಿಗೆ ಹಾಕಿಕೊಂಡಿದೆ.

ತಮಿಳುನಾಡಿನ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ, ಇಷ್ಟೆಲ್ಲ ಅನ್ಯಾಯ ಮಾಡಿದ್ದರು ತಿರುವಳ್ಳುವರ್ ಪ್ರತಿಮೆಯನ್ನು ಯಾವುದೇ ಕಾರಣಕ್ಕು ಅನಾವರಣ ಮಾಡಿಯೇ ತೀರುತ್ತೇವೆ ಎಂದು ಹೇಳುತ್ತಿರುವ ಕರ್ನಾಟಕ ಸರಕಾರದ ನಿರ್ಧಾರಕ್ಕೆ ಕನ್ನಡಿಗರ
ಧಿಕ್ಕಾರವಿದೆ.

ಇದರ ಸಂಪೂರ್ಣ ವಿವರವನ್ನು ಇಲ್ಲಿ ಓದಿ.--