Tuesday, August 28, 2012

೨೦೧೨ ರ ಬೆಂಗಳೂರು ಮಹಾನಗರ ಕಾರ್ಯಕರ್ತರ ಬೃಹತ್ ಸಮಾವೇಶ - ನಾರಾಯಣ ಗೌಡರ ಭಾಷಣ

ಕರವೇ ಬೆಂಗಳೂರು ನಗರ ಜಿಲ್ಲಾ ಕಾರ್ಯಕರ್ತರ ಸಮಾವೇಶ ೧೮-೦೮-೨೦೧೨ ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿತ್ತು. ನೆರೆದಿದ್ದ ಜನರನ್ನು ಉದ್ದೇಶಿಸಿ ನಮ್ಮ ವೇದಿಕೆಯ ಅಧ್ಯಕ್ಷರಾದ ನಾರಾಯಣ ಗೌಡರು ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ಸಮಸ್ಯೆಗಳ ಬಗ್ಗೆ ಮಾತನಾಡಿದರು. ಹಾಗೆ ವಿವಿಧ ರಾಜಕೀಯ ಪಕ್ಷಗಳಿಂದ ಕನ್ನಡಿಗರಿಗೆ ಇರುವ ನಿರೀಕ್ಷೆ ಬಗ್ಗೆ ಕೂಡ ಮಾತನಾಡಿದರು. 

ಅವರ ಮಾತುಗಳನ್ನು ಇಲ್ಲಿ ಕೇಳಿ...2012 NG bhashana

Saturday, August 18, 2012

ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ ಬೆಂಗಳೂರು ಮಹಾನಗರ ಕಾರ್ಯಕರ್ತರ ಬೃಹತ್ ಸಮಾವೇಶದ ಪತ್ರಿಕಾ ವರದಿಗಳು

೧೮-೦೮-೨೦೧೨ ರಂದು ನಡೆದ ಬೆಂಗಳೂರು ಮಹಾನಗರ ಕಾರ್ಯಕರ್ತರ ಬೃಹತ್ ಸಮಾವೇಶ ಮೆರವಣಿಗೆಯೊಂದಿಗೆ ಸ್ವಾತಂತ್ರ್ಯ ಯೋಧರ ಉದ್ಯಾನವನದಿಂದ ಶುರುವಾಯಿತು. ಮೆರವಣಿಗೆಯಲ್ಲಿ ಸಾವಿರಾರು ಜನ ಭಾಗವಹಿಸಿದರು. ಮೆರವಣಿಗೆ ಅರಮನೆ ಮೈದಾನ ಮುಟ್ಟಿದ್ದು ಮಧ್ಯಾಹ್ನ ೧:೩೦ ಗಂಟೆಗೆ.

ಮಧ್ಯಾಹ್ನ ೨ ಕ್ಕೆ ಕರವೇ ಬೆಂಗಳೂರು ನಗರ ಜಿಲ್ಲಾ ಕಾರ್ಯಕರ್ತರ ಸಮವೇಶವನ್ನು ಶ್ರೀ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಗಳು ಹಾಗೂ ಶ್ರೀ ಶ್ರೀ ಸುರೇಶ್ವರಾನಂದ ಭಾರತಿ ಮಹಾಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ನಡೆಸಲಾಯಿತು. ಸಮಾವೇಶವನ್ನು ಕೇಂದ್ರ ಸಚಿವರಾಗಿರುವ ಶ್ರೀ ಮುನಿಯಪ್ಪನವರು ಉದ್ಘಾಟಿಸಿದರು. ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರು, ರಾಜ್ಯ ರೈತ ಮುಖಂಡರಾದ ಶ್ರೀ ಕೋಡಿಹಳ್ಳಿ ಚಂದ್ರಶೇಖರ್, ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಡಾ. ನಲ್ಲೂರ್ ಪ್ರಸಾದ್, ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ನಗರದ ಅಧ್ಯಕ್ಷರಾದ ಶ್ರೀ ಟಿ. ತಿಮ್ಮೇಶ್, ಸಮತಾ ಸೈನಿಕ ದಳದ ಅಧ್ಯಕ್ಷರಾದ ಎಂ. ವೆಂಕಟಸ್ವಾಮಿ, ಮಾಜಿ ಸಚಿವರು, ಶಿವಾಜಿನಗರದ ಶಾಸಕರಾಗಿರುವ ಶ್ರೀ ರೋಷನ್ ಬೇಗ್ ಸೇರಿದಂತೆ ವೇದಿಕೆಯಲ್ಲಿ ನಾಡಿನ ಹಲವು ಪ್ರಮುಖರು ಭಾಗವಹಿಸಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದರು.

ಸಂಜೆ ೫ ಗಂಟೆಗೆ ಶುರುವಾದ ಸಮಾರೋಪ ಸಮಾರಂಭ ಡಾ| ಬಾಲಗಂಗಾಧರ ನಾಥ ಸ್ವಾಮೀಜಿ ಮತ್ತು ಜಯಮೃತ್ಯುಂಜಯ ಸ್ವಾಮೀಜಿ ಯವರ ಸಮ್ಮುಖದಲ್ಲಿ ನಡೆಯಿತು. ನಿಕಟಪೂರ್ವ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದ ಗೌಡರು, ಸಚಿವರಾದ ಅರವಿಂದ ಲಿಂಬಾವಳಿ, ಗೃಹ ಮತ್ತು ಸಾರಿಗೆ ಸಚಿವರಾದ ಆರ್. ಆಶೋಕ್ , ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುಂಡಲೀಕ ಹಾಲಂಬಿ, ಶಾಸಕರು ಹಾಗು ಮಾಜಿ ಮಂತ್ರಿಗಳಾದ ಡಿ.ಕೆ. ಶಿವಕುಮಾರ್, ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದರು. ಸಮಾರಂಭದಲ್ಲಿ ಚಿತ್ರನಟಿ ತಾರ ಮತ್ತು ಶ್ರೀಮತಿ ನಾಗಲಕ್ಷ್ಮಿ ಪುಟ್ಟಣ್ಣ ಕಣಗಾಲ್ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.

ಸಮಾವೇಶದ ವರದಿಗಳನ್ನು ಇಲ್ಲಿ ನೋಡಿ -

ಸಂಜೆವಾಣಿ ವರದಿ -ಕನ್ನಡ ಪ್ರಭ ವರದಿ -

ಉದಯವಾಣಿ ವರದಿ -

ವಿಜಯ ಕರ್ನಾಟಕ ವರದಿ -ಪ್ರಜಾವಾಣಿ ವರದಿ -


 ಈಸಂಜೆ ವರದಿ -Wednesday, August 15, 2012

ಕರ್ನಾಟಕ ರಕ್ಷಣಾ ವೇದಿಕೆಯ ೧೨ ವರುಷದ ಹಾದಿಯ ಚಿತ್ರಣ

ಕರ್ನಾಟಕ ರಕ್ಷಣಾ ವೇದಿಕೆಯ ೧೨ ವರುಷದ ಹೋರಾಟಗಳ ಸಂಕ್ಷಿಪ್ತ ವರದಿ ಇಲ್ಲಿದೆ.


೨೦೧೨ ರ ಬೆಂಗಳೂರು ಮಹಾನಗರ ಕಾರ್ಯಕರ್ತರ ಬೃಹತ್ ಸಮಾವೇಶದ ಆಮಂತ್ರಣ

ಆಗಸ್ಟ್ ೧೮ ರಂದು ಬೆಂಗಳೂರು ಮಹಾನಗರ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಅರಮನೆ ಮೈದಾನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ ೧೧ ಕ್ಕೆ ಸ್ವಾತಂತ್ರ್ಯ ಯೋಧರ ಉದ್ಯಾನವನದಿಂದ ಅರಮನೆ ಮೈದಾನದ ವರೆಗು ದೊಡ್ಡ ಮೆರವಣಿಗೆಯನ್ನು ಕೂಡ ಹಮ್ಮಿಕೊಳ್ಳಲಾಗಿದೆ. ನಂತರ ಕಾರ್ಯಕ್ರಮ ಅರಮನೆ ಮೈದಾನದಲ್ಲಿ ಮುಂದುವರಿಯಲಿದೆ.

ತಾವೆಲ್ಲರೂ ಈ ಮೆರವಣಿಗೆ ಹಾಗು ಸಮಾವೇಶದಲ್ಲಿ ಪಾಲ್ಗೊಂಡು ಈ ಸಮಾವೇಶವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.