Thursday, December 24, 2009

ಗಾರ್ಮೆಂಟ್ಸ್ ನೌಕರರಿಗೆ ಬಿ.ಪಿ.ಎಲ್. ಕಾರ್ಡ್ ನೀಡಬೇಕು - ಕ.ರ.ವೇ.

ಬಡತನ ಸೇರಿದಂತೆ ಹಲವಾರು ಸಮಸ್ಯೆಗಳಿಂದ ಬಳಲುತ್ತಿರುವ ಗಾರ್ಮೆಂಟ್ಸ್ ನೌಕರರಿಗೆ ಬಿ.ಪಿ.ಎಲ್. ಕಾರ್ಡ್ ನೀಡಬೇಕೆಂದು ಒತ್ತಾಯಿಸಿ ಡಿಸೆಂಬರ್. 23 ನೇ ತಾರೀಕಿನಂದು ಟಿ.ಏ. ನಾರಾಯಣ ಗೌಡರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ದೊಡ್ಡ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.

ಗಾರ್ಮೆಂಟ್ಸ್ ನೌಕರರ ಬಿ.ಪಿ.ಎಲ್. ಕಾರ್ಡ್ಗಾಗಿ ಕ.ರ.ವೇ . ನಡೆಸಿದ ಮೆರವಣಿಗೆ ವರದಿಯನ್ನು ಇಲ್ಲಿ ನೋಡಿ.




Monday, December 14, 2009

ಮಹದಾಯಿ ಯೋಜನೆಯನ್ನು ನ್ಯಾಯಾಧಿಕರಣ ಪ್ರಾಧಿಕಾರಕ್ಕೆ ವಹಿಸಿರುವುದನ್ನು ಖಂಡಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ

ಮಹದಾಯಿ ಯೋಜನೆಯನ್ನು ನ್ಯಾಯಾಧಿಕರಣ ಪ್ರಾಧಿಕಾರಕ್ಕೆ ವಹಿಸಿರುವುದನ್ನು ಖಂಡಿಸಿ ಮತ್ತು ರಾಜ್ಯಪಾಲರು ಕರ್ನಾಟಕದ ನಾಡ ಗೀತೆಗೆ ಅವಮಾನವೆಸಗಿರುವುದನ್ನು ಖಂಡಿಸಿ ಕ.ರ.ವೇ. ಕಾರ್ಯಕರ್ತರು ಬೆಂಗಳೂರಿನಲ್ಲಿ ದೊಡ್ಡ ಪ್ರತಿಭಟನೆಯನ್ನು ನಡೆಸಿದರು.

ಪ್ರತಿಭಟನೆಯ ವರದಿಯನ್ನು ಇಲ್ಲಿ ನೋಡಿ.






Friday, December 11, 2009

ರೈತರ ಮೇಲೆ ಲಾಠಿ ಪ್ರಹಾರ : ಕರವೇ ಖಂಡನೆ

ಚಾಮರಾಜನಗರ ಮತ್ತು ದಾವಣಗೆರೆಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಪೊಲೀಸರು ನಡೆಸಿದ ಲಾಠಿ ಪ್ರಹಾರವನ್ನು ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸುತ್ತದೆ.


Friday, November 20, 2009

ಗಣಿ ರೆಡ್ಡಿಗಳ ವಿರುದ್ಧ ಗುಡುಗಿದ ಟಿ.ಏ. ನಾರಾಯಣ ಗೌಡರು

ಸಂವಹನವು ನವಂಬರ್ ೧೨ರಂದು ನಡೆಸಿದ ವಿಚಾರ ಸಂಕೀರ್ಣದಲ್ಲಿ ಪಾಲ್ಗೊಂಡಿದ್ದ ನಮ್ಮ ಅಧ್ಯಕ್ಷರಾದ ಟಿ.ಏ. ನಾರಯಣ ಗೌಡರು ಗಣಿ ರೆಡ್ಡಿ ಸಹೋದರರನ್ನು ಮಣಿಸಲು ಕ.ರ.ವೇ. ಗೆ ಮಾತ್ರ ಸಾದ್ಯ ಎಂದು ಹೇಳಿದರು.

ಸಂವಹನ ನಡೆಸಿದ ವಿಚಾರ ಸಂಕೀರ್ಣದ ವರದಿಯನ್ನು ಇಲ್ಲಿ ನೋಡಿ.


Thursday, November 19, 2009

ರೈಲ್ವೇ - ಕ.ರ.ವೇ. ಹೋರಾಟಕ್ಕೆ ಸಿಕ್ಕ ಜಯ

ರೈಲ್ವೇ ಇಲಾಖೆಯ ಪರೀಕ್ಷೆಯನ್ನು ಇನ್ನು ಕನ್ನಡದಲ್ಲೆ ತೆಗೆದುಕೊಳ್ಳ ಬೊಹುದು ಎಂದು ಭಾರತ ಸರ್ಕಾರ ಹೇಳಿದೆ. ಕರ್ನಾಟಕ ರಕ್ಷಣಾ ವೇದಿಕೆ ೨ ವರುಷಗಳಿಂದ ಸತತವಾಗಿ ನಡೆಸಿಕೊಂದು ಬಂದ ಹೋರಾಟಕ್ಕೆ ಸಿಕ್ಕಿರುವ ಜಯ ಇದಾಗಿದೆ.

ಕನ್ನಡದಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳಬೊಹುದು ಎಂದು ಬಂದಿರುವ ವರದಿಯನ್ನು ಇಲ್ಲಿ ನೋಡಿ.




Tuesday, November 17, 2009

ಕರ್ನಾಟಕ ರಕ್ಷಣಾ ವೇದಿಕೆ ರಾಜಕೀಯ ಹೋರಾಟಕ್ಕೆ - ಅಧ್ಯಕ್ಷರ ಲೇಖನಿ

ಅಕ್ಕರೆಯ ಕನ್ನಡಿಗಾ,


ಕರ್ನಾಟಕ ರಕ್ಷಣಾ ವೇದಿಕೆಯು ಶುರುವಾಗಿ ಹತ್ತು ವರ್ಷಗಳಾದವು. ಈ ಹೋರಾಟದ ಹಾದಿಯಲ್ಲಿ ಎದುರಿಸಿದ ಸವಾಲುಗಳು ಅನೇಕ. ಸಾಧಿಸಿದ ಗೆಲುವುಗಳು ಅನೇಕ. ಈ ಸಂದರ್ಭದಲ್ಲಿ ರಾಜಕೀಯ ಹೋರಾಟಕ್ಕೆ ಧುಮುಕುವ ಸನ್ನಿವೇಶ ಸೃಷ್ಟಿಯಾಗಿರುವ ಬಗ್ಗೆ ಈ ಬಾರಿಯ ಅಧ್ಯಕ್ಷರ ಲೇಖನಿಯಲ್ಲಿ ಓದಿರಿ.


http://karnatakarakshanavedike.org/modes/view/25/adhyakshara-nudi.html

- ಕರ್ನಾಟಕ ರಕ್ಷಣಾ ವೇದಿಕೆ

Wednesday, November 4, 2009

ಕನ್ನಡ ಪ್ರಭದಲ್ಲಿ ಟಿ. ಏ. ನಾರಾಯಣ ಗೌಡರ ಸಂದರ್ಶನ

ಕನ್ನಡ ಪ್ರಭದೊಂದಿಗೆ ನಮ್ಮ ರಾಜ್ಯಾಧ್ಯಕ್ಷರಾದ ಟಿ.ಏ. ನಾರಾಯಣ ಗೌಡರು ಪ್ರಾದೇಶಿಕ ಪಕ್ಷದ ಚಿಂತನೆಯ ಬಗ್ಗೆ ಮಾತನಾಡಿದರು.

ಪ್ರಾದೇಶಿಕ ಪಕ್ಷದ ಚಿಂತನೆಯ ಬಗ್ಗೆ ಇಲ್ಲಿ ಓದಿ

Monday, November 2, 2009

ಬಲಿಷ್ಠ ಪ್ರಾದೇಶಿಕ ಪಕ್ಷ ಕಟ್ಟಲು ಚಿಂತನೆ - ಕ.ರ.ವೇ.

ನವೆಂಬರ್ ೧ ರಂದು ಗಾಂಧಿ ನಗರದಲ್ಲಿರುವ ಕನ್ನಡ ದ್ವಜಾರೋಹಣ ಮಾಡಿದ ನಂತರ ದ್ವಿಚಕ್ರ ವಾಹನ ಜಾಥಕ್ಕೆ ಚಾಲನೆ ನೀಡಿ, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಏ. ನಾರಾಯಣ ಗೌಡರು ಕರ್ನಾಟಕಕ್ಕೆ ಒಂದು ಪ್ರಾದೇಶಿಕ ಪಕ್ಷದ ಅಗತ್ಯವಿದೆ ಮತ್ತು ಮುಂದಿನ ದಿನಗಳಲ್ಲಿ ಅದನ್ನು ಕಟ್ಟಲು ಕ.ರ.ವೇ. ಮುಂದಾಗುವುದು ಎಂದು ಹೇಳಿದರು.

ಇದರ ವರದಿಗಳನ್ನು ಇಲ್ಲಿ ನೋಡಿ.



Tuesday, October 27, 2009

ಬೆಳಗಾವಿಯಲ್ಲಿ ಎಂ.ಇ.ಎಸ್. ನಿಂದ ಕರ್ನಾಟಕ ವಿರೋಧಿ ನಿರ್ಣಯಗಳು - ಕ.ರ.ವೇ. ಇಂದ ಖಂಡನೆ

ಬೆಳಗಾವಿಯಲ್ಲಿ ಮಹಾಮೇಳಾವ ನಡೆಸಲು ಸರ್ಕಾರ ನೀಡಿದ್ದ ಷರತ್ತುಬದ್ಧ ಅನುಮತಿಯನ್ನು ತಿರಸ್ಕರಿಸಿ, ಕರ್ನಾಟಕದ ವಿರುದ್ಧ; ಕರ್ನಾಟಕ ಬೆಳಗಾವಿಯಲ್ಲಿ ವಿಶೇಷ ಅಧಿವೇಶನ ನಡೆಸಬಾರದು,ಬೆಳಾಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕು, ಬೆಳಗಾವಿಯನ್ನು ಬೆಳಗಾಂ ಎಂದು ಕರೆಯಬೇಕು, ಬೆಳಗಾವಿಯಲ್ಲಿ ಕನ್ನಡ ನಾಮಫಲಕಗಳನ್ನು ಕಡ್ಡಾಯಗೊಳಿಸಬಾರದು ಇದೇ ಮೊದಲಾದ ನಿರ್ಣಯಗಳನ್ನು ಎಂ.ಇ.ಎಸ್. ಮಹಾಮೇಳಾವದಲ್ಲಿ ಕೈಗೊಂಡಿದೆ.

ಕಾರ್ಯಕ್ರಮಕ್ಕೆ ಅನುಮತಿ ನೀಡುವಾಗ ಹಾಕಿದ್ದ ಷರತ್ತುಗಳನ್ನು ಗಾಳಿಗೆ ತೂರಿ ಕರ್ನಾಟಕದ ವಿರುದ್ಧವೇ ನಿರ್ಣಯಗಳನ್ನು ತೆಗೆದು ಕೊಂಡಿರುವ ಎಂ.ಇ.ಎಸ್. ನ ಧೋರಣೆಯನ್ನು ನಮ್ಮ ವೇದಿಕೆ ತೀವ್ರವಾಗಿ ಖಂಡಿಸುತ್ತದೆ.

ಇದರ ವರದಿಯನ್ನು ಇಲ್ಲಿ ನೋಡಿ.


Sunday, October 25, 2009

ಬೆಳಗಾವಿಯಲ್ಲಿ ಮಹಾಮೇಳಾವಕ್ಕೆ ಎಂ.ಇ.ಎಸ್. ನಿಂದ ಸಿದ್ದತೆ - ಕ.ರ.ವೇ. ಇಂದ ಪ್ರತಿಭಟನೆ

ಬೆಳಗಾವಿಯಲ್ಲಿ ಎಂ.ಇ.ಎಸ್. ತನ್ನ ಎಂದಿನ ಕ್ಯಾತೆ ಮತ್ತೆ ತೆಗೆದಿದೆ, ಮಹಾಮೇಳಾವ ನಡೆಸಿ ಸೌಹಾರ್ದತೆಯಿಂದ ಬಾಳ್ವೆ ನಡೆಸುತ್ತಿರುವ ಕನ್ನಡಿಗರು ಮತ್ತು ಮರಾಠಿಗರ ನಡುವೆ ಕಲಹದ ಬೀಜ ಬಿತ್ತಲು ಪ್ರಯತ್ನಿಸುತ್ತಿದೆ.

ಬೆಳಗಾವಿಯಲ್ಲಿ ಮಹಾಮೇಳಾವ ನಡೆಸಲು ಮುಂದಾಗಿರುವ ಎಂ.ಇ.ಎಸ್. ಕ್ರಮವನ್ನು ಖಂಡಿಸಿ ನಮ್ಮ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಂತರ ಬೆಂಗಳೂರಿನಲ್ಲಿ ನಮ್ಮ ರಾಜ್ಯಾಧ್ಯಕ್ಷರಾದ ನಾರಾಯಣ ಗೌಡರು ಮಹಾಮೇಳಾವಕ್ಕೆ ಅವಕಾಶ ಕೊಡಬಾರದು ಎಂದು ಆಗ್ರಹಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಪತ್ರ ನೀಡಿದರು.

ಇದರ ವರದಿಯನ್ನು ಇಲ್ಲಿ ನೋಡಿ.


Tuesday, October 20, 2009

ಬೆಳಗಾವಿಯಲ್ಲಿ ಎಂ.ಇ.ಎಸ್ ನಿಂದ ಮಹಾಮೇಳಾವ - ಕರವೇ ವಿರೋಧ

ಕೆಲವು ವಾರಗಳ ಹಿಂದೆ ಸುರಿದ ಭಾರಿ ಮಳೆಯ ಪರಿಣಾಮ ಉತ್ತರ ಕರ್ನಾಟಕ ಪ್ರವಾಹದಿಂದ ತತ್ತರಿಸಿಹೋಗಿದೆ. ಈ ಕಾರಣಕ್ಕಾಗಿಯೇ ಕರ್ನಾಟಕ ಜನತೆ ನಾಡಹಬ್ಬವಾದ ಕರ್ನಾಟಕ ರಾಜ್ಯೋತ್ಸವವನ್ನು ಸಹ ಸರಳವಾಗಿ ಆಚರಿಸಲು ನಿರ್ಧರಿಸಿಕೊಂಡಿದ್ದಾರೆ. ಆದರೆ ಪ್ರವಾಹದಿಂದ ತತ್ತರಿಸಿರುವ ಜಿಲ್ಲೆಗಳಲ್ಲಿ ಒಂದಾದ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತೆ ಗಡಿ ಹಾಗೂ ಭಾಷೆ ವಿವಾದವನ್ನು ಕೆದಕುತ್ತಿದೆ.

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವೆಂದು ಗೊತ್ತಿದ್ದರೂ ಸಹ ಎಂ.ಇ.ಎಸ್ ಪದೇ ಪದೇ ಮರಾಠಿ ಮತ್ತು ಕನ್ನಡ ಭಾಷಿಕರ ನಡುವೆ ಭಾಷೆಯ ನೆವದಲ್ಲಿ ವೈಮನಸ್ಯವನ್ನು ಉಂಟುಮಾಡಲು ಪ್ರಯತ್ನಿಸುತ್ತಿದೆ. ನಾಡಿನ ಏಕತೆಗೆ ಮಾರಕವಾಗು ಕೆಲಸದಲ್ಲಿ ಭಾಗಿಯಾಗಿರುವ ಇಂತಹ ಸಂಘಟನೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ವಿರೋಧಿಸುತ್ತದೆ.








Tuesday, October 13, 2009

ಕರವೇ ಇಂದ ಐವರು ಅನಾಥ ಮಕ್ಕಳ ದತ್ತು ಸ್ವೀಕಾರ

ಉತ್ತರ ಕರ್ನಾಟಕದಲ್ಲಿ ಉಂಟಾದ ಭೀಕರ ಪ್ರವಾಹದಲ್ಲಿ ತಂದೆತಾಯಿಯರನ್ನು ಕಳೆದುಕೊಂಡು ಅನಾಥರಾಗಿರುವ ೫ ಮಕ್ಕಳನ್ನು ನಮ್ಮ ವೇದಿಕೆ ದತ್ತು ಪಡೆದುಕೊಳ್ಳಲಿದೆ. ಗದಗ ಜಿಲ್ಲೆಯ ೩ ಮಕ್ಕಳು, ರಾಯಚೂರು ಹಾಗು ಕಲ್ಬುರ್ಗಿ ಜಿಲ್ಲೆಯ ತಲಾ ಒಂದು ಮಗುವನ್ನು ದತ್ತು ಪಡೆಯಲಾಗುವುದು.



Monday, October 12, 2009

ಬಾಗಲಕೋಟೆ, ಕೊಪ್ಪಳ, ವಿಜಾಪುರ, ಗದಗ, ಕಲ್ಬುರ್ಗಿ, ರಾಯಚೂರಿನಲ್ಲಿ ಕ.ರ.ವೇ. ಸಹಾಯ ಹಸ್ತ - ಚಿತ್ರಗಳು

ಬಾಗಲಕೋಟೆ, ಕೊಪ್ಪಳ, ವಿಜಾಪುರ, ಗದಗ್, ಕಲ್ಬುರ್ಗಿ, ರಾಯಚೂರಿನಲ್ಲಿ ಕ.ರ.ವೇ.ಇಂದ ನೆರೆಯಲ್ಲಿ ಸತ್ತವರ ಕುಟುಂಬದ ಸದಸ್ಯರಿಗೆ ೫೦೦೦ ರು. ನಗದನ್ನು ವಿತರಿಸಲಾಯಿತು.

ಇದರ ಚಿತ್ರಗಳನ್ನು ಇಲ್ಲಿ ನೋಡಿ


ಬಾಗಲಕೋಟೆ









ಕೊಪ್ಪಳ




ವಿಜಾಪುರ







ಗದಗ







ಕಲ್ಬುರ್ಗಿ






ರಾಯಚೂರು


ಕಲ್ಬುರ್ಗಿಯಲ್ಲಿ ನೆರೆ ಸಂತ್ರಸ್ತರಿಗೆ ಕ.ರ.ವೇ. ಇಂದ ಪರಿಹಾರ ವಿತರಣೆ

ಕಲ್ಬುರ್ಗಿಯಲ್ಲಿ ನೆರೆ ಹಾವಳಿಗೆ ತುತ್ತಾದ ಸಂತ್ರಸ್ತರಿಗೆ ನಮ್ಮ ವೇದಿಕೆಯ ವತಿ ಇಂದ ಪರಿಹಾರ ವಿತರಣೆ ಮಾಡಲಾಯಿತು.

ಇದರ ವರದಿಯನ್ನು ಇಲ್ಲಿ ನೋಡಿ

ಬಾಗಲಕೋಟೆಯಲ್ಲಿ ನೆರೆ ಸಂತ್ರಸ್ತರಿಗೆ ಕ.ರ.ವೇ. ಇಂದ ಪರಿಹಾರ ವಿತರಣೆ

ಬಾಗಲಕೋಟೆಯಲ್ಲಿ, ನೆರೆ ಹಾವಳಿಗೆ ತುತ್ತಾದ ಸಂತ್ರಸ್ತರಿಗೆ ನಮ್ಮ ವೇದಿಕೆಯ ವತಿ ಇಂದ ಪರಿಹಾರ ವಿತರಣೆ ಮಾಡಲಾಯಿತು.

ಇದರ ವರದಿಯನ್ನು ಇಲ್ಲಿ ನೋಡಿ

Saturday, October 10, 2009

ಗದಗ ಮತ್ತು ಕೊಪ್ಪಳ ಜಿಲ್ಲೆ ನೆರೆ ಸಂತ್ರಸ್ತರಿಗೆ ಕರವೇ ನೆರವು

ರಾಜ್ಯದಲ್ಲಿ ಸುರಿದ ಭಾರಿ ಮಳೆಗೆ ನಲುಗಿ ಹೋಗಿದ್ದ ಕೊಪ್ಪಳ ಮತ್ತು ಗದಗ ಜಿಲ್ಲೆಗಳಿಗೆ ಭೇಟಿನೀಡಿದ ನಮ್ಮ ವೇದಿಕೆ ಕಾರ್ಯಕರ್ತರು ನೆರೆ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.


Friday, October 9, 2009

ಉತ್ತರ ಕರ್ನಾಟಕದ ನೆರೆ ಪೀಡಿತರ ಸಂಕಷ್ಟಗಳಿಗೆ ಕ.ರ.ವೇ. ಇಂದ ಸ್ಪಂದನೆ

ಕರ್ನಾಟಕದ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯವನ್ನು ತೆರೆದ ಮಳೆಯಿಂದಾಗಿ ಅಕ್ಷರಶಃ ಕರ್ನಾಟಕದ ಅರ್ಧಭಾಗ ನೀರಿನಲ್ಲಿ ಮುಳುಗಡೆಯಾಗಿ ಕರ್ನಾಟಕದ ಜನತೆ ತಮ್ಮ ಮನೆಗಳನ್ನು ಕಳೆದುಕೊಂಡು ಬೀದಿ ಪಾಲಾಗಿದ್ದಾರೆ, ಇದರ ಜೊತೆಗೆ ಜಾನುವಾರುಗಳು, ಲಕ್ಷಾಂತರ ಎಕರೆಯ ಬೆಳೆ ನಾಶವಾಗಿಹೋಗಿವೆ ಹಾಗು ಕೋಟ್ಯಾಂತರ ರೂಪಾಯಿಗಳ ಆಸ್ತಿ ಪಾಸ್ತಿ ಹಾನಿಯಾಗಿ ಕರ್ನಾಟಕದ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ.
ಇಂತಹ ಸಂಕಷ್ಟದ ಸಮಯದಲ್ಲಿ ಉತ್ತರ ಕರ್ನಾಟಕದ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿರುವ ನಮ್ಮ ರಾಜ್ಯಾಧ್ಯಕ್ಷರು ನೆರೆ ಪೀಡಿತರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ.
ಇದರ ಪತ್ರಿಕಾ ಹೇಳಿಕೆಯನ್ನು ಇಲ್ಲಿ ನೋಡಿ.





Thursday, October 8, 2009

ಉತ್ತರ ಕರ್ನಾಟಕದಲ್ಲಿ ನೆರೆ - ನೆರವಾಗಲು ಅದ್ಯಕ್ಷರ ಕರೆ

ಕರ್ನಾಟಕ ಇದೀಗ ನೆರೆಹಾವಳಿಯಿಂದ ತತ್ತರಿಸುತ್ತಿದೆ. ಲಕ್ಷಾಂತರ ಕುಟುಂಬಗಳು
ಬೀದಿಪಾಲಾಗಿವೆ. ಇಂತಹ ಸಂಕಷ್ಟದ ಸಮಯದಲ್ಲಿ ನಮ್ಮ ಸೋದರರ ನೆರವಿಗೆ
ಧಾವಿಸಬೇಕಾಗಿ ರಾಜ್ಯಾಧ್ಯಕ್ಷರು ನೀಡಿರುವ ಕರೆ...

http://www.karnatakarakshanavedike.org/modes/view/25/adhyakshara-nudi.html

Tuesday, October 6, 2009

ನೆರೆ ಸಂತ್ರಸ್ತರಿಗೆ ಕ.ರ.ವೇ. ಇಂದ ನೆರವು

ನೆರೆ ಹಾವಳಿಯಿಂದ ತತ್ತರಿಸಿ ಹೋಗಿರುವ ಜನತೆಗೆ ನಮ್ಮ ವೇದಿಕೆಯ ಕಾರ್ಯಕರ್ತರು ಸಹಾಯ ಹಸ್ತ ನೀಡಿದರು.

ಅದರ ಚಿತ್ರಗಳನ್ನು ಇಲ್ಲಿ ನೋಡಿ