Saturday, June 30, 2012

ಕರ್ನಾಟಕ ರಕ್ಷಣಾ ವೇದಿಕೆ ೧೧ ನೇ ವರುಷದ ಸಮಾರಂಭದಲ್ಲಿ ಸುದೀಪ್ ಗೆ "ಅಭಿನಯ ಚಕ್ರವರ್ತಿ" ಪ್ರಶಸ್ತಿ

ನಮ್ಮ ವೇದಿಕೆ ೧೧ ವರುಷ ಪೂರೈಸಿದ ಸಂದರ್ಭದಲ್ಲಿ "ಸಾಂಸ್ಕೃತಿಕ ಸಂಭ್ರಮ" ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಅಲ್ಲಿ ನೆರೆದಿದ್ದ ಜನರೆದುರು, ಕ.ರ.ವೇ. ಸಾಂಸ್ಕೃತಿಕ ಘಟಕದಿಂದ ಸುದೀಪ್ ಗೆ "ಅಭಿನಯ ಚಕ್ರವರ್ತಿ" ಪ್ರಶಸ್ತಿಯನ್ನು ಇತ್ತು ಗೌರವಿಸಿತು.

ಸಮಾರಂಭದಲ್ಲಿ, ಚಿತ್ರನಟ ಅಂಬರೀಶ್, ಪಂಚಮಸಾಲಿ ಪೀಠದ ಅಧ್ಯಕ್ಷರಾದ ಜಯಮೃತ್ಯುಂಜಯ ಸ್ವಾಮೀಜಿ, ನಿರ್ಮಾಪಕರಾದ ಎನ್. ಕುಮಾರ್, ಸೂರಪ್ಪ ಬಾಬು, ನಿರ್ದೇಶಕರಾದ ಶಶಾಂಕ್, ಅಯ್ಯಪ್ಪ ಉಪಸ್ತಿತರಿದ್ದರು.

ಇದರ ವರದಿಗಳನ್ನು ಇಲ್ಲಿ ನೋಡಿ -

ಕನ್ನಡ ಪ್ರಭ ವರದಿ -


ವಿಜಯವಾಣಿ ವರದಿ -

ಸಂಯುಕ್ತ ಕರ್ನಾಟಕ ವರದಿ -

ಉದಯವಾಣಿ ವರದಿ -
ಪ್ರಜಾವಾಣಿ ವರದಿ -

Thursday, June 28, 2012

ಲೋಕಾಯುಕ್ತರನ್ನು ಶೀಘ್ರವೇ ನೇಮಕ ಮಾಡಬೇಕೆಂದು ಒತ್ತಾಯಿಸಿ ಕ.ರ.ವೇ. ಇಂದ ಪ್ರತಿಭಟನೆ

ಕರ್ನಾಟಕ ರಾಜ್ಯಕ್ಕೆ ನೂತನ ಲೋಕಾಯುಕ್ತರನ್ನು ಶೀಘ್ರವೇ ನೇಮಕ ಮಾಡಬೇಕೆಂದು ಒತ್ತಾಯಿಸಿ ನಮ್ಮ ವೇದಿಕೆಯ ವತಿಯಿಂದ ೨೯-೦೬-೨೦೧೨ ರಂದು ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಯಿತು.

ಇದರ ವರದಿಯನ್ನು ಇಲ್ಲಿ ನೋಡಿ -
 

ಕ.ರ.ವೇ. ೧೧ ವರುಷ ಪೂರೈಸಿದ ಸಂದರ್ಭದಲ್ಲಿ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ- ಸುದೀಪ್ ಗೆ ಪ್ರಶಸ್ತಿ ಪ್ರದಾನ

ಕ.ರ.ವೇ. ೧೧ ವರುಷ ಪೂರೈಸಿದ ಸಂದರ್ಭದಲ್ಲಿ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ೨೯-೦೬-೨೦೧೨ ರಂದು ಹಮ್ಮಿಕೊಳ್ಳಲಾಗಿದೆ. ನಾಡು ನುಡಿ ಸಂಸ್ಕೃತಿ ಗಡಿ ಜಲ ರಕ್ಷಣೆಯಲ್ಲಿ ಹನ್ನೊಂದು ವರುಷಗಳ ಅವಿರತ ಚಳುವಳಿಯಲ್ಲಿ ತೊಡಗಿರುವ ಕರ್ನಾಟಕ ರಕ್ಷಣಾ ವೇದಿಕೆ ತನ್ನ ಸಾಂಸ್ಕೃತಿಕ ಘಟಕದ ಮೂಲಕ ಕನ್ನಡದ ಕಲೆ ಸಾಹಿತ್ಯ ಸಂಸ್ಕೃತಿಯ ಕ್ಷೇತ್ರದಲ್ಲೂ ನಿರಂತರ ಕ್ರಿಯಾಶೀಲ ಚಟುವಕೆಗಳನ್ನು ನಡೆಸುತ್ತಾ ಬಂದಿದೆ. ತನ್ನ ಹನ್ನೊಂದನೇ ವರ್ಷದ ಸಾಂಸ್ಕೃತಿಕ ಸಂಭ್ರಮದ ಸಂದರ್ಭದಲ್ಲಿ ಸುದೀಪ್ ಅವರಿಗೆ ಅಭಿನಯ ಚಕ್ರವರ್ತಿ ಎಂಬ ಬಿರುದನ್ನು ಇತ್ತು ಗೌರವಿಸುತ್ತಿದೆ.

ಕಾರ್ಯಕ್ರಮದ ವಿವರಗಳು ಕೆಳಕಂಡಂತೆ ಇದೆ -

ಸ್ಥಳ: ಬೆಂಗಳೂರಿನ ಪುಟ್ಟಣ್ಣ ಚೆಟ್ಟಿ ಪುರಭವನ
ದಿನಾಂಕ: ೨೯-೦೬-೨೦೧೨ (ಶುಕ್ರವಾರ)
ಹೊತ್ತು: ಸಂಜೆ ೫:೦೦ ಗಂಟೆ

ತಾವೆಲ್ಲರು ಬಂದು ಈ ಸಂಭ್ರಮದಲ್ಲಿ ಭಾಗಿಯಾಗಿ.
 


ಕರ್ನಾಟಕ ಲೋಕಾಯುಕ್ತ ಸಂಸ್ಥೆಗೆ ನೂತನ ಮುಖ್ಯಸ್ಥರನ್ನು ಕೂಡಲೇ ನೇಮಿಸಿ - ಕ.ರ.ವೇ. ಇಂದ ರಾಜ್ಯವ್ಯಾಪಿ ಪ್ರತಿಭಟನೆ ಮತ್ತು ಮುಖ್ಯಮಂತಿಗಳಿಗೆ ಸಲ್ಲಿಸಿದ ಮನವಿ ಪತ್ರ

ಕರ್ನಾಟಕ ಲೋಕಾಯುಕ್ತ ಸಂಸ್ಥೆಗೆ ನೂತನ ಮುಖ್ಯಸ್ಥರನ್ನು ಕೂಡಲೇ ನೇಮಕ ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ನಮ್ಮ ವೇದಿಕೆಯು ಇಂದು ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಸಲ್ಲಿಸಿದ ಮನವಿ ಪತ್ರ.Friday, June 15, 2012

ಜೂನ್ ೧೦ ರ ಬೃಹತ್ ರಕ್ತದಾನ ಶಿಬಿರದಲ್ಲಿ ಕ.ರ.ವೇ. ಕಾರ್ಯಕರ್ತರು ರಕ್ತದಾನ ಮಾಡಿದರು

ಜೂನ್ ೧೦, ನಮ್ಮ ರಾಜ್ಯಾಧ್ಯಕ್ಷರಾದ ನಾರಾಯಣ ಗೌಡರ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಆ ದಿನ ವಿಶೇಷವಾಗಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.

ನಮ್ಮ ಕ.ರ.ವೇ. ಕಾರ್ಯಕರ್ತರು ಕಿದ್ವಾಯಿ, ವಿಕ್ಟೋರಿಯ ಮತ್ತು ನಿಮಾನ್ಸ್ ಆಸ್ಪತ್ರೆಗಳಿಗೆ ರಕ್ತದಾನ ಮಾಡಿದರು.

ಇದರ ವರದಿಯನ್ನು ಇಲ್ಲಿ ನೋಡಿ -
 

Friday, June 8, 2012

"ಬಂಡವಾಳ ಹೂಡಿಕೆದಾರರ ಜಾಗತಿಕ ಸಮಾವೇಶ" ದ ಮೂಲಕ ಕನ್ನಡಿಗರಿಗೆ ಉದ್ಯೋಗ ಕಡ್ಡಾಯವಾಗಲಿ - ಕ.ರ.ವೇ.

"ಬಂಡವಾಳ ಹೂಡಿಕೆದಾರರ ಜಾಗತಿಕ ಸಮಾವೇಶ" ದ ಮೂಲಕ ಕರ್ನಾಟಕದಲ್ಲಿ ಉದ್ಯಮ ಆರಂಭಿಸುವ ಕಂಪನಿಗಳು ಕನ್ನಡಿಗರಿಗೆ ಕಡ್ಡಾಯವಾಗಿ ಉದ್ಯೊಗಾವಕಾಶ ನೀಡಬೇಕು ಎಂದು ನಮ್ಮ ವೇದಿಕೆ ಆಗ್ರಹಿಸಿದೆ.

ಇದರ ವರದಿಯನ್ನು ಇಲ್ಲಿ ನೋಡಿ -


Thursday, June 7, 2012

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಕರ್ನಾಟಕಕ್ಕೆ ಬರುವ ಕಂಪನಿಗಳಿಗೆ ಅವಕಾಶ ನೀಡುವಾಗ ರಾಜ್ಯ ಸರ್ಕಾರ ಕನ್ನಡಿಗರಿಗೆ ಕಡ್ಡಾಯವಾಗಿ ಉದ್ಯೋಗ ನೀಡಬೇಕೆಂದು ಆಗ್ರಹಿಸಿ ಕ.ರ.ವೇ. ನೀಡಿರುವ ಪತ್ರಿಕಾ ಹೇಳಿಕೆ


ಬೆಂಗಳೂರಿನಲ್ಲಿ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಕರ್ನಾಟಕಕ್ಕೆ ಬರುವ ಕಂಪನಿಗಳಿಗೆ ಅವಕಾಶ ನೀಡುವಾಗ ರಾಜ್ಯ ಸರ್ಕಾರ ಕನ್ನಡಿಗರಿಗೆ ಕಡ್ಡಾಯ ಉದ್ಯೋಗ ವಂತೆ ಕಂಪನಿಗಳಿಗೆ ಅದೇಶ ನೀಡಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುವ ಪತ್ರಿಕಾ ಹೇಳಿಕೆ -