Friday, June 26, 2009

ಏಕರೂಪ ಶಿಕ್ಷಣ - ಕ.ರ.ವೇ. ವಿರೋಧ

ಪ್ರೌಢ ಶಿಕ್ಷಣ ವ್ಯವಸ್ಥೆಗೆ ಏಕರೂಪ ಶಿಕ್ಷಣ ನೀತಿಯನ್ನು ರೂಪಿಸಿ, ತೆರೆಮರೆಯಲ್ಲಿ ಹಿಂದಿಯನ್ನು ಹೇರುವ ಹಾಗು ಎಲ್ಲ ರಾಜ್ಯಗಳ ಶಿಕ್ಷಣ ವ್ಯವಸ್ಥೆಯನ್ನು ತನ್ನ ಕಪಿಮುಷ್ಠಿಯಲ್ಲಿಟ್ಟುಕೊಳ್ಳುವ ಹುನ್ನಾರ ಕೇಂದ್ರ ಸರಕಾರ ನಡೆಸುತ್ತಿದೆ. ಇದನ್ನು ಕ.ರ.ವೇ. ತೀವ್ರವಾಗಿ ವಿರೋಧಿಸುತ್ತದೆ.

ಇದರ ವರದಿಯನ್ನು ಇಲ್ಲಿ ನೋಡಿ.



Monday, June 15, 2009

ನದಿಪಾತ್ರ ರಕ್ಷಣೆಗೆ ಜಾಗೃತಿ - ಕ.ರ.ವೇ.

ಕರ್ನಾಟಕದಲ್ಲಿನ ಅರ್ಕಾವತಿ ನದಿಮೂಲ ನಾಶವಾಗುತ್ತಿದೆ. ರಾಜಕಾಲುವೆಗಳು ಉಳಿಯುತ್ತಿಲ್ಲ. ನೀರು ಹರಿಯುವ ಪ್ರದೇಶಗಳು ಹೇಗಿರಬೇಕು? ಅವುಗಳ ಸಂರಕ್ಷಣೆ ಹೇಗೆ ಮಾಡಬೇಕು ಎಂಬುದರ ಬಗ್ಗೆ ನಾವು ಹಳ್ಳಿಗಳ ಮಟ್ಟದಲ್ಲಿ ಜನಜಾಗೃತಿ ಸಭೆ ನಡೆಸುತ್ತಿದ್ದೇವೆ. ಚಿತ್ರಾವತಿ ನದಿ ಉಳಿಸುವ ನಿಟ್ಟಿನಲ್ಲಿ ನಾವು ಬೀದಿಗಿಳಿದು ಹೋರಾಟ ಮಾಡಿ, ಕೃಷಿಗೆ ಮತ್ತು ಕುಡಿಯುವ ನೀರನ್ನು ಒದಗಿಸುವಂತೆ ಮಾಡಿದ್ದೆವು, ಅಂತೆಯೆ, ಅರ್ಕಾವತಿ ನೀರು ಉಳಿಸುವ ಸಲುವಾಗಿ ಹೋರಾಟ ನಡೆಸುವುದಾಗಿ ನಮ್ಮ ಅಧ್ಯಕ್ಷರು ಹೇಳಿದರು.

ಇದರ ಬಗ್ಗೆ ಇಲ್ಲಿ ಓದಿ.



Saturday, June 13, 2009

ಕನ್ನಡ ಶಾಲೆಗಳ ದತ್ತು ಪಡೆವ ಕ.ರ.ವೇ. ಯೋಜನೆ

ಬೆಂಗಳೂರು ನಗರ, ಬೆಳಗಾವಿ, ರಾಯಚೂರು, ಕಲ್ಬುರ್ಗಿ, ಬೀದರ್, ಚಾಮರಾಜನಗರ ಹಾಗು ಬಳ್ಳಾರಿಯಲ್ಲಿ ಸರಕಾರಿ ಕನ್ನಡ ಶಾಲೆಗಳನ್ನು ದತ್ತು ಪಡೆಯುವ ಯೋಜನೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಹಾಕಿಕೊಂಡಿದೆ.

ಇದರ ವರದಿಯನ್ನು ಇಲ್ಲಿ ಓದಿ.



Thursday, June 11, 2009

ಕನ್ನಡಬಾವುಟಕ್ಕೆ ನಿಷೇಧ ಆದೇಶ ವಾಪಸ್ - ಕ.ರ.ವೇ. ಸ್ವಾಗತ

ಸರ್ಕಾರಿ ಮತ್ತು ಅರೆ ಸರ್ಕಾರಿ ಕಟ್ಟಡಗಳ ಮೇಲೆ ಕನ್ನಡ ಬಾವುಟವನ್ನು ಹಾರಿಸಬಾರದು ಎಂದು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಹಿಂತೆಗೆದುಕೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾದ್ಯಂತ ಹೋರಾಟ ನಡೆಸಿದ್ದರ ಫಲವಾಗಿ ಕರ್ನಾಟಕ ಸರ್ಕಾರ ಈ ಆದೇಶವನ್ನು ಹಿಂತೆಗೆದುಕೊಂಡಿದೆ.

ಅದರ ವರದಿಯನ್ನು ಇಲ್ಲಿ ನೋಡಿ.







Saturday, June 6, 2009

ಕನ್ನಡ ಬಾವುಟ ಹಾರಾಟಕ್ಕೆ ನಿರ್ಬಂಧ - ಕ.ರ.ವೇ. ಇಂದ ರಾಜ್ಯವ್ಯಾಪಿ ಪ್ರತಿಭಟನೆ

ಕನ್ನಡ ಬಾವುಟವನ್ನು ಸರ್ಕಾರಿ ಮತ್ತು ಅರೆ ಸರ್ಕಾರಿ ಕಟ್ಟಡಗಳ ಮೇಲೆ ಹಾರಿಸ ಬಾರದು ಎಂದು ಸರ್ಕಾರ ಅದೇಶ ಹೊರಡಿಸಿರುವುದರ ವಿರುದ್ಧ ನಮ್ಮ ಕಾರ್ಯಕರ್ತರು ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿದರು. ಅದರ ವರದಿಗಳನ್ನು ಇಲ್ಲಿ ನೋಡಿ.