Monday, February 21, 2011

ನೈರುತ್ಯ ರೈಲ್ವೆ ಉದ್ಯೋಗ ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯ - ಕರವೇ ಪ್ರತಿಭಟನೆ

ನೈರುತ್ಯ ರೈಲ್ವೆ ಉದ್ಯೋಗ ನೇಮಕಾತಿಯಲ್ಲಿ ಹೊಸದಾಗಿ 3700 ಹುದ್ದೆಗಳಿಗೆ ಅರ್ಜಿ ಕರೆದು ಪರೀಕ್ಷೆ ನಡೆಸಲಾಗುತ್ತಿದೆ. ಆದರೆ 4701 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2008 ರಲ್ಲಿ ಹೊರ ರಾಜ್ಯದ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ಬರೆಯಲು ಅರ್ಚಿ ಸಲ್ಲಿಸಿದ್ದರು. ಈಗ ಮತ್ತೊಮ್ಮೆ ಹಿಂದೆ ಅರ್ಚಿ ಸಲ್ಲಿಸಿದ್ದ ಕನ್ನಡೇತರ ಅಭ್ಯರ್ಥಿಗಳಿಗೆ ಮರು ಅರ್ಚಿ ಸಲ್ಲಿಸಲು ಅವಕಾಶ ಮಾಡಿಕೊಡುತ್ತಿರುವುದರಿಂದ ಮತ್ತೆ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ.

3700 ಹುದ್ದೆಗಳಿಗೆ ಹೊಸದಾಗಿ ಅರ್ಜಿ ಕರೆದು ಪರೀಕ್ಷೆ ನಡೆಸುತ್ತಿರುವಂತೆಯೇ ಹಿಂದಿನ 4701 ಹುದ್ದೆಗಳಿಗೂ ಹೊಸದಾಗಿಯೇ ಅರ್ಜಿಗಳನ್ನು ಕರೆದು ಪರೀಕ್ಷೆ ನಡೆಸಬೇಕೆಂದು ಒತ್ತಾಯಿಸಿ 21 ಫೆಬ್ರವರಿ 2011 ರಂದು ಪ್ರತಿಭಟನೆ ನಡೆಸಿದೆವು. ಇದರ ಪತ್ರಿಕಾ ವರದಿಯನ್ನು ನೋಡಿ-Sunday, February 20, 2011

ರಾಜ್ಯಸಭೆಗೆ ಕನ್ನಡಿಗರನ್ನೇ ಆಯ್ಕೆ ಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನೆ

ನಾಡಿನ ಎಲ್ಲಾ ಪಕ್ಷಗಳು ನಾಡಿನ ಹಿತವನ್ನು ಮರೆತು ತಮ್ಮ ಸ್ವಾರ್ಥಕ್ಕಾಗಿ ಹೊರರಾಜ್ಯದವರನ್ನು ಆಯ್ಕೆ ಮಾಡಿವೆ ಮತ್ತು ಮಾಡುತ್ತಿವೆ. ರಾಜ್ಯ ಸಭೆಗೆ ಹೊರರಾಜ್ಯದವರನ್ನು ಆಯ್ಕೆ ಮಾಡುವುದನ್ನು ನಾವು ಸದಾ ಖಂಡಿಸುತ್ತಲೇ ಬಂದಿದ್ದೇವೆ.

ಈಗ ಮತ್ತೊಮ್ಮೆ ನಾಡಿನಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನಾಡಿನ ಹಿತವನ್ನು ಬದಿಗೊತ್ತಿ, ಕರ್ನಾಟಕದಿಂದ ಖಾಲಿಯಿರುವ ರಾಜ್ಯಸಭೆ ಸ್ಥಾನಕ್ಕೆ ಹೇಮಾಮಾಲಿನಿಯವರನ್ನು ಆಯ್ಕೆ ಮಾಡಲು ಹೊರಟಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿ, ನಾವು ಫೆಬ್ರವರಿ 20, 2011 ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದೆವು.
Saturday, February 19, 2011

ನೈರುತ್ಯ ರೈಲ್ವೆಯಲ್ಲಿ ಕರ್ನಾಟಕದವರಿಗೆ ಉದ್ಯೋಗಕ್ಕಾಗಿ ಪ್ರತಿಭಟನೆ

ನೈರುತ್ಯ ರೈಲ್ವೆ ಇಲಾಖೆಯು, 2008 ರಲ್ಲಿ 4701 ಡಿ ದರ್ಜೆ ಉದ್ಯೋಗಗಳಿಗೆ ಪರೀಕ್ಷೆ ನಡೆಸಿಲು ಮುಂದಾಗಿದ್ದ ಸಮಯದಲ್ಲಿ ಕರವೇ ಐತಿಹಾಸಿಕ ಹೋರಾಟ ನಡೆಸಿ ಕನ್ನಡಿಗರಿಗೆ ಆಗುತ್ತಿದ್ದ ಅನ್ಯಾಯವನ್ನು ತಪ್ಪಿಸಿತ್ತು. ಕರವೇ ನಡೆಸಿದ ಹೋರಾಟದ ಫಲವಾಗಿ ಪರೀಕ್ಷೆಯನ್ನು ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಬರೆಯಬೇಕೆಂಬ ನಿಯಮವು ಬದಲಾಗಿ, ಪ್ರತಿಯೊಂದು ರಾಜ್ಯದಲ್ಲೂ ಆಯಾ ರಾಜ್ಯದ ಭಾಷೆಯಲ್ಲಿ ಪರೀಕ್ಷೆ ಬರೆಯಬಹುದೆಂಬ ನಿಯಮ ಜಾರಿಯಾಯಿತು.

ಹಿಂದೆ ಕರೆದಿದ್ದ 4701 ಹುದ್ದೆಗಳನ್ನು ಹೊರೆತುಪಡಿಸಿ, ಹೊಸದಾಗಿ 3700 ಹುದ್ದೆಗಳಿಗೆ ಅರ್ಜಿ ಕರೆದು ಪರೀಕ್ಷೆ ನಡೆಸಲಾಗುತ್ತಿದೆ. ಆದರೆ 4701 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2008 ರಲ್ಲಿ ಹೊರ ರಾಜ್ಯದ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ಬರೆಯಲು ಆಯ್ಕೆಯಾಗಿದ್ದರು. ಈಗಲೂ ಸಹ ಹಿಂದೆ ಆಯ್ಕೆಯಾಗಿದ್ದ ಕನ್ನಡೇತರ ಅಭ್ಯರ್ಥಿಗಳಿಗೆ ಅವಕಾಶ ಮಾಡಿಕೊಡುತ್ತಿರುವುದರಿಂದ ಮತ್ತೆ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ.

3700 ಹುದ್ದೆಗಳಿಗೆ ಹೊಸದಾಗಿ ಅರ್ಜಿ ಕರೆದು ಪರೀಕ್ಷೆ ನಡೆಸುತ್ತಿರುವಂತೆಯೇ ಹಿಂದಿನ 4701 ಹುದ್ದೆಗಳಿಗೂ ಹೊಸದಾಗಿಯೇ ಅರ್ಜಿಗಳನ್ನು ಕರೆದು ಪರೀಕ್ಷೆ ನಡೆಸಬೇಕೆಂದು ಒತ್ತಾಯಿಸಿ 19 ಫೆಬ್ರವರಿ 2011 ರಂದು ಪ್ರತಿಭಟನೆ ನಡೆಸಿದೆವು.
ಇದರ ಪತ್ರಿಕಾ ವರದಿಯನ್ನು ನೋಡಿ-