Wednesday, April 28, 2010

ಹೊಗೇನಕಲ್ ನಲ್ಲಿ ಅಕ್ರಮ ಯೋಜನೆಯ ವಿರುದ್ಧ ಖಂಡನಾ ಸಭೆ

ತಮಿಳುನಾಡು ಹೊಗೇನಕಲ್ ನಲ್ಲಿ ಅಕ್ರಮವಾಗಿ ನಡೆಸಲು ಉದ್ದೇಶಿಸಿರುವ ಯೋಜನೆಗೆ ಖಂಡನಾ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಭಾಗವಹಿಸಿದ್ದ ಹಲವಾರು ಕನ್ನಡದ ಗಣ್ಯರು ಮತ್ತು ರೈತ ಮುಖಂಡರು ತಮಿಳುನಾಡಿನ ಯೋಜನೆಯ ವಿರುದ್ಧ ದನಿಯೆತ್ತಿದರು.

ಈ ಸಭೆಯ ಪತ್ರಿಕಾ ವರದಿಯನ್ನು ನೋಡಿ-


Tuesday, April 27, 2010

ಹೊಗೇನಕಲ್ ಅಕ್ರಮ ಯೋಜನೆ ವಿರುದ್ಧ ರಾಜ್ಯವ್ಯಾಪಿ ಪ್ರತಿಭಟನೆ

ಹೊಗೇನಕಲ್ ಪ್ರದೇಶದಲ್ಲಿ ಅಕ್ರಮವಾಗಿ ಯೋಜನೆ ಶುರು ಮಾಡಿರುವ ತಮಿಳುನಾಡು ಸರ್ಕಾರದ ವಿರುದ್ಧ ನಮ್ಮ ಕಾರ್ಯಕರ್ತರು ಚಾಮರಾಜನಗರ, ಕಲ್ಬುರ್ಗಿ, ಗದಗ, ಧಾರವಾಡ, ಕೊಪ್ಪಳ, ಹಾವೇರಿ, ಕೋಲಾರ, ಚಿತ್ರದುರ್ಗ, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ 27-04-2010 ರಂದು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ಪತ್ರಿಕಾ ವರದಿಗಳನ್ನು ಇಲ್ಲಿ ನೋಡಿ.






ಜಗ್ಗಲ್ಲ, ಹೋರಾಟ ಬಿಡಲ್ಲ - ಟಿ. ಎ. ನಾರಾಯಣ ಗೌಡ

೧೦ ವರ್ಷದಿಂದ ಹೋರಾಟಗಳನ್ನು ಮಾಡಿಕೊಂಡು ಬಂದಿರುವ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರ ಮೇಲೆ ಎಲ್ಲಾ ಸರಕಾರಗಳು ಮೊಕದ್ದಮೆಗಳನ್ನು ಹಾಕುತ್ತಾ ಬಂದಿವೆ. ಇದುವರೆಗು ಕರವೇ ಕಾರ್ಯಕರ್ತರ ಮೇಲಿರುವ ಮೊಕ್ಕದ್ದಮೆಗಳು ೧೦೦೦ಕ್ಕೂ ಹೆಚ್ಚು. ಕನ್ನಡ ಪರವಾದ ಹೋರಾಟಗಳನ್ನು ಮಾಡಿಕೊಂಡು ಬಂದಿರುವ ಕನ್ನಡ ಸಂಘಟನೆಗಳ ಮೇಲಿರುವ ಮೊಕದ್ದಮೆಗಳನ್ನು ಸರಕಾರ ಹಿಂತೆಗೆದುಕೊಳ್ಳಬೇಕು ಎಂಬ ಕೂಗು ಕೇಳಿಬರುತ್ತಿರುವ ಈ ಸಂಧರ್ಭದಲ್ಲಿ ನಮ್ಮ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ಟಿ. ಎ. ನಾರಾಯಣಗೌಡರು ಪತ್ರಿಕೊಯೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಪತ್ರಿಕಾ ಸಂದರ್ಶನವನ್ನು ನೋಡಿ: