Sunday, November 15, 2009

ಕರ್ನಾಟಕ ರಕ್ಷಣಾ ವೇದಿಕೆ - ಒಂದು ಪರಿಚಯ

ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು ಎನ್ನುವ ಘೋಷವಾಕ್ಯದೊಂದಿಗೆ ೧೯೯೯ರಲ್ಲಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ರಕ್ಷಣಾ ವೇದಿಕೆ ಇಂದು ನಾಡಿನ ಅತಿದೊಡ್ಡ ಬಲಿಷ್ಟ ಕನ್ನಡಪರ ಸಂಘಟನೆಯಾಗಿ, ಹೆಮ್ಮರವಾಗಿ ಬೆಳೆದು ನಿಂತಿದೆ. ರಾಜ್ಯಾಧ್ಯಕ್ಷರಾದ ಶ್ರೀ ಟಿ.ಎ.ನಾರಾಯಣಗೌಡರ ದಕ್ಷ ನಾಯಕತ್ವದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕನ್ನಡ ತಾಯಿಯ ಮಕ್ಕಳನ್ನು ಹಳದಿ ಕೆಂಪು ಬಾವುಟದ ಅಡಿಯಲ್ಲಿ ಸಂಘಟಿಸಲಾಗುತ್ತದೆ. ಇದೀಗ ರಾಜ್ಯಾದ್ಯಂತ ಸಾವಿರಾರು ಶಾಖೆಗಳನ್ನು ಹೊಂದಿರುವ ಕರ್ನಾಟಕ ರಕ್ಷಣಾ ವೇದಿಕೆಯ ನೋಂದಾಯಿತ ಸದಸ್ಯರ ಸಂಖ್ಯೆಯೇ ಐವತ್ತು ಲಕ್ಷಕ್ಕೂ ಹೆಚ್ಚು. ದಿನೇದಿನೇ ಸಂಘಟನೆಯು ನಾಡಿನ ಎಲ್ಲಾ ಜನತೆಯ ಪ್ರೀತಿ, ಅಭಿಮಾನ, ನಂಬಿಕೆಗಳನ್ನು ಹೆಚ್ಚು ಹೆಚ್ಚು ಗಳಿಸುತ್ತಿದ್ದು ಕನ್ನಡಿಗರೆದೆಯಲ್ಲಿ ’ ಸಮೃಧ್ಧವಾದ ನಾಳೆಗಳು ಕನ್ನಡಿಗರದ್ದಾಗಲಿವೆ ’ ಎನ್ನುವ ಭರವಸೆಗೆ ಕಾರಣವಾಗಿದೆ. ಕನ್ನಡ ಪರವಾದ ಹೋರಾಟಗಳನ್ನು ರಾಜಿ ರಹಿತವಾಗಿ, ರಾಜಕೀಯ ರಹಿತವಾಗಿ ನಡೆಸಿಕೊಂಡು ಬಂದಿರುವ ಕರ್ನಾಟಕ ರಕ್ಷಣಾ ವೇದಿಕೆಯ ನಿರ್ಭೀಡ ನಿಲುವು ಮತ್ತು ಪ್ರಾಮಾಣಿಕವಾದ ನಡೆಗಳಿಂದಾಗಿ ನಾಡಿನ ಮೂಲೆಮೂಲೆಗಳ ಕನ್ನಡಿಗರಿಂದ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ಈ ಬ್ಲಾಗಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮಾಡಿಕೊಂಡು ಬಂದಿರುವ ಹೋರಾಟಗಳ ಪತ್ರಿಕಾ ವರದಿಗಳು, ಸುದ್ದಿವಾಹಿನಿಗಳಲ್ಲಿ ಪ್ರಸಾರವಾದ ಚಿತ್ರದ ತುಣುಕುಗಳು ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಶ್ರೀ ಟಿ.ಎ.ನಾರಾಯಣ ಗೌಡರು ನಾಡನ್ನು ಉದ್ದೇಶಿಸಿ ಮಾತನಾಡಿರುವ ಚಿತ್ರದ ತುಣುಕುಗಳು ನೋಡಬಹುದು.

Wednesday, November 4, 2009

ಕನ್ನಡ ಪ್ರಭದಲ್ಲಿ ಟಿ. ಏ. ನಾರಾಯಣ ಗೌಡರ ಸಂದರ್ಶನ

ಕನ್ನಡ ಪ್ರಭದೊಂದಿಗೆ ನಮ್ಮ ರಾಜ್ಯಾಧ್ಯಕ್ಷರಾದ ಟಿ.ಏ. ನಾರಾಯಣ ಗೌಡರು ಪ್ರಾದೇಶಿಕ ಪಕ್ಷದ ಚಿಂತನೆಯ ಬಗ್ಗೆ ಮಾತನಾಡಿದರು.

ಪ್ರಾದೇಶಿಕ ಪಕ್ಷದ ಚಿಂತನೆಯ ಬಗ್ಗೆ ಇಲ್ಲಿ ಓದಿ

Monday, November 2, 2009

ಬಲಿಷ್ಠ ಪ್ರಾದೇಶಿಕ ಪಕ್ಷ ಕಟ್ಟಲು ಚಿಂತನೆ - ಕ.ರ.ವೇ.

ನವೆಂಬರ್ ೧ ರಂದು ಗಾಂಧಿ ನಗರದಲ್ಲಿರುವ ಕನ್ನಡ ದ್ವಜಾರೋಹಣ ಮಾಡಿದ ನಂತರ ದ್ವಿಚಕ್ರ ವಾಹನ ಜಾಥಕ್ಕೆ ಚಾಲನೆ ನೀಡಿ, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಏ. ನಾರಾಯಣ ಗೌಡರು ಕರ್ನಾಟಕಕ್ಕೆ ಒಂದು ಪ್ರಾದೇಶಿಕ ಪಕ್ಷದ ಅಗತ್ಯವಿದೆ ಮತ್ತು ಮುಂದಿನ ದಿನಗಳಲ್ಲಿ ಅದನ್ನು ಕಟ್ಟಲು ಕ.ರ.ವೇ. ಮುಂದಾಗುವುದು ಎಂದು ಹೇಳಿದರು.

ಇದರ ವರದಿಗಳನ್ನು ಇಲ್ಲಿ ನೋಡಿ.



Tuesday, October 27, 2009

ಬೆಳಗಾವಿಯಲ್ಲಿ ಎಂ.ಇ.ಎಸ್. ನಿಂದ ಕರ್ನಾಟಕ ವಿರೋಧಿ ನಿರ್ಣಯಗಳು - ಕ.ರ.ವೇ. ಇಂದ ಖಂಡನೆ

ಬೆಳಗಾವಿಯಲ್ಲಿ ಮಹಾಮೇಳಾವ ನಡೆಸಲು ಸರ್ಕಾರ ನೀಡಿದ್ದ ಷರತ್ತುಬದ್ಧ ಅನುಮತಿಯನ್ನು ತಿರಸ್ಕರಿಸಿ, ಕರ್ನಾಟಕದ ವಿರುದ್ಧ; ಕರ್ನಾಟಕ ಬೆಳಗಾವಿಯಲ್ಲಿ ವಿಶೇಷ ಅಧಿವೇಶನ ನಡೆಸಬಾರದು,ಬೆಳಾಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕು, ಬೆಳಗಾವಿಯನ್ನು ಬೆಳಗಾಂ ಎಂದು ಕರೆಯಬೇಕು, ಬೆಳಗಾವಿಯಲ್ಲಿ ಕನ್ನಡ ನಾಮಫಲಕಗಳನ್ನು ಕಡ್ಡಾಯಗೊಳಿಸಬಾರದು ಇದೇ ಮೊದಲಾದ ನಿರ್ಣಯಗಳನ್ನು ಎಂ.ಇ.ಎಸ್. ಮಹಾಮೇಳಾವದಲ್ಲಿ ಕೈಗೊಂಡಿದೆ.

ಕಾರ್ಯಕ್ರಮಕ್ಕೆ ಅನುಮತಿ ನೀಡುವಾಗ ಹಾಕಿದ್ದ ಷರತ್ತುಗಳನ್ನು ಗಾಳಿಗೆ ತೂರಿ ಕರ್ನಾಟಕದ ವಿರುದ್ಧವೇ ನಿರ್ಣಯಗಳನ್ನು ತೆಗೆದು ಕೊಂಡಿರುವ ಎಂ.ಇ.ಎಸ್. ನ ಧೋರಣೆಯನ್ನು ನಮ್ಮ ವೇದಿಕೆ ತೀವ್ರವಾಗಿ ಖಂಡಿಸುತ್ತದೆ.

ಇದರ ವರದಿಯನ್ನು ಇಲ್ಲಿ ನೋಡಿ.


Sunday, October 25, 2009

ಬೆಳಗಾವಿಯಲ್ಲಿ ಮಹಾಮೇಳಾವಕ್ಕೆ ಎಂ.ಇ.ಎಸ್. ನಿಂದ ಸಿದ್ದತೆ - ಕ.ರ.ವೇ. ಇಂದ ಪ್ರತಿಭಟನೆ

ಬೆಳಗಾವಿಯಲ್ಲಿ ಎಂ.ಇ.ಎಸ್. ತನ್ನ ಎಂದಿನ ಕ್ಯಾತೆ ಮತ್ತೆ ತೆಗೆದಿದೆ, ಮಹಾಮೇಳಾವ ನಡೆಸಿ ಸೌಹಾರ್ದತೆಯಿಂದ ಬಾಳ್ವೆ ನಡೆಸುತ್ತಿರುವ ಕನ್ನಡಿಗರು ಮತ್ತು ಮರಾಠಿಗರ ನಡುವೆ ಕಲಹದ ಬೀಜ ಬಿತ್ತಲು ಪ್ರಯತ್ನಿಸುತ್ತಿದೆ.

ಬೆಳಗಾವಿಯಲ್ಲಿ ಮಹಾಮೇಳಾವ ನಡೆಸಲು ಮುಂದಾಗಿರುವ ಎಂ.ಇ.ಎಸ್. ಕ್ರಮವನ್ನು ಖಂಡಿಸಿ ನಮ್ಮ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಂತರ ಬೆಂಗಳೂರಿನಲ್ಲಿ ನಮ್ಮ ರಾಜ್ಯಾಧ್ಯಕ್ಷರಾದ ನಾರಾಯಣ ಗೌಡರು ಮಹಾಮೇಳಾವಕ್ಕೆ ಅವಕಾಶ ಕೊಡಬಾರದು ಎಂದು ಆಗ್ರಹಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಪತ್ರ ನೀಡಿದರು.

ಇದರ ವರದಿಯನ್ನು ಇಲ್ಲಿ ನೋಡಿ.