Monday, January 11, 2010

ಕಳಸಾ ಭಂಡೂರ ಕುಡಿಯುವ ನೀರಿನ ಯೋಜನೆ ಜಾರಿಯಾಗಲಿ - ಅಧ್ಯಕ್ಷರ ಲೇಖನಿ

ಅಕ್ಕರೆಯ ಕನ್ನಡಿಗಾ,

ಹೊಸವರ್ಷದ ಈ ಸಂದರ್ಭದಲ್ಲಿ ನಮ್ಮ ನಾಡಿನ ಮುಂದಿರುವ ಪ್ರಮುಖ ಸವಾಲು ಮಹದಾಯಿ ನ್ಯಾಯಾಧಿಕರಣ. ಹುಬ್ಬಳ್ಳಿ ಧಾರವಾಡದ ಜನತೆಗೆ ಕುಡಿಯುವ ನೀರು ಪೂರೈಕೆಯ ಕಳಸಾ ಭಂಡೂರ ಯೋಜನೆಯ ಬಗ್ಗೆ ನಮ್ಮ ರಾಜ್ಯಾಧ್ಯಕ್ಷರು ನೀಡುತ್ತಿರುವ ಸಂದೇಶವನ್ನು ಕೆಳಗಿನ ಕೊಂಡಿಯಲ್ಲಿ ಓದಿ.

http://karnatakarakshanavedike.org/modes/view/25/adhyakshara-nudi.html

Thursday, January 7, 2010

ಮಹದಾಯಿ ಕುಡಿಯುವ ನೀರಿನ ಯೋಜನೆಗೆ ಕೇಂದ್ರದಿಂದ ನ್ಯಾಯಾಧಿಕರಣ ರಚನೆ

ಮಹದಾಯಿ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಚಿಸಿರುವ ನ್ಯಾಯಾಧಿಕರಣವನ್ನು ರದ್ಧುಗೊಳಿಸುವಂತೆ ಒತ್ತಾಯಿಸಿ ನಮ್ಮ ರಕ್ಷಣಾ ವೇದಿಕೆಯ ಕಾರ್ಯಕರ್ತರು ಟಿ.ಏ. ನಾರಾಯಣ ಗೌಡರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ರೈಲು ತಡೆ ನಡೆಸಿ ಪ್ರತಿಭಟಿಸಿದರು.
ಪ್ರತಿಭಟನೆಯ ವರದಿಯನ್ನು ಇಲ್ಲಿ ನೋಡಿ


೧೨-೧-೨೦೧೦ ರಂದು ಹುಬ್ಬಳ್ಳಿಯಲ್ಲಿ ನಮ್ಮ ವೇದಿಕೆಯ ಕಾರ್ಯಕರ್ತರು ರೈಲು ತಡೆ ನಡೆಸಿ ಪ್ರತಿಭಟನೆ ನಡೆಸಿದರು

Wednesday, January 6, 2010

ರೈತರಿಗೆ ಕೋಳ : ಕರವೇ ವಿರೋಧ

ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ಹೋರಾಟ ನಡೆಸುತ್ತಿದ್ದ ರೈತರನ್ನು ಪೊಲೀಸರು ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವುದನ್ನು ವಿರೋಧಿಸಿ ನಮ್ಮ ರಕ್ಷಣಾ ವೇದಿಕೆಯ ಕಾರ್ಯಕರ್ತರು, ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡರ ನೇತ್ರತ್ವದಲ್ಲಿ ಇಂದು ಬೆಂಗಳೂರಿನ ಗಾಂಧಿ ಪ್ರತಿಮೆಯ ಬಳಿ ಪ್ರತಿಭಟನೆ ನಡೆಸಿದರು. ಇದರ ಬಗ್ಗೆ ಪತ್ರಿಕಾ ವರದಿಯನ್ನು ಕೆಳಗೆ ನೋಡಿ.

Tuesday, January 5, 2010

ಶಾಸ್ತ್ರೀಯ ಭಾಷೆ ವಿಚಾರವಾಗಿ ಸಲ್ಲಿಸಿದ ಅರ್ಜಿ ಸುಪ್ರೀಂ ಕೋರ್ಟ್ ನಿಂದ ವಜಾ- ಕ.ರ.ವೇ. ಅಸಮಾಧಾನ

ಕನ್ನಡಕ್ಕೆ ಶಾಸ್ತ್ರೀಯ ಭಾಷೆ ನೀಡುವುದರ ವಿರುದ್ಧವಾಗಿ ಮದ್ರಾಸ್ ಹೈಕೋರ್ಟ್ ನಲ್ಲಿ ಗಾಂಧಿ ಎಂಬುವವರು ಸಲ್ಲಿಸಿರುವ ಅರ್ಜಿಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿದ ಅರ್ಜಿಯನ್ನು, ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.


ಇದಕ್ಕೆ ತೀವ್ರವಾಗಿ ಅಸಮಾಧಾನ ವ್ಯಕ್ತ ಪಡಿಸುತ್ತ, ನಮ್ಮ ಕ.ರ.ವೇ. ಅಧ್ಯಕ್ಷರಾದ ಟಿ.ಏ. ನಾರಾಯಣ ಗೌಡರು ಸುಪ್ರೀಂ ಕೋರ್ಟ್ ಮತ್ತು ಮದ್ರಾಸ್ ಹೈ ಕೋರ್ಟ್ ನಲ್ಲಿ ಕಾನೂನು ಸಮರ ಮುಂದುವರಿಸಬೇಕಾಗಿ ಹೇಳಿದ್ದಾರೆ.

ಇದರ ವರದಿಯನ್ನು ಇಲ್ಲಿ ನೋಡಿ.

Saturday, January 2, 2010

ಚಾಮರಾಜನಗರದ ಜಿಲ್ಲಾ ಆಸ್ಪತ್ರೆ ವ್ಯವಸ್ಥೆ ಸರಿಪಡಿಸಿ - ಕ.ರ.ವೇ.

ಚಾಮರಾಜನಗರದ ಜಿಲ್ಲಾ ಆಸ್ಪತ್ರೆ ವ್ಯವಸ್ಥೆ ಹದಗೆಟ್ಟಿದ್ದು, ಆಸ್ಪತ್ರೆಗೆ ಬರುವ ಜನರು ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಇದನ್ನು ಸರಿಪಡಿಸುವಂತೆ ಚಾಮರಾಜನಗರದ ಜಿಲ್ಲಾ ಆಸ್ಪತ್ರೆ ಎದುರು ನಮ್ಮ ಜಿಲ್ಲಾ ಘಟಕದ ಕಾರ್ಯಕರ್ತರು ಡಿಸೆಂಬರ್ 23 ರಿಂದ ನಾಲ್ಕು ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ ಪ್ರತಿಭಟಿಸಿದರು. ಉಪವಾಸ ಸತ್ಯಾಗ್ರಹದಲ್ಲಿ ಡಿಸೆಂಬರ್ 26 ರಂದು ಟಿ.ಏ. ನಾರಾಯಣ ಗೌಡರು ಪಾಲ್ಗೊಂಡಿದ್ದರು.

ಸತ್ಯಾಗ್ರಹದ ವರದಿಯನ್ನು ಇಲ್ಲಿ ನೋಡಿ.

Courtesy : The Hindu

‘Take steps to improve condition of hospital’
Correspondent
CHAMARAJANAGAR: President of Karnataka Rakshana Vedike T.A. Narayana Gowda has warned that a Statewide agitation will be launched if the district in-charge Minister and the Health Minister fail to take steps to improve the condition of the district hospital here within 24 hours.
Addressing presspersons after participating in an indefinite dharna being staged by members of the district unit of the vedike here on Saturday, he said that the Chief Minister would be appraised of the pathetic condition of the district hospital.
Taluk secretary of the vedike D. Nagendra said the vedike would give a call for Chamarajanagar bandh on Tuesday if the Health Minister failed to visit the hospital by then.
The fast by vedike members entered fourth day on Saturday. The condition of three members of the vedike, who were on fast, worsened and they were admitted to hospital.
Courtesy : Times of India

Karnataka Rakshana Vedike withdraws hunger strikeCHAMARAJNAGAR: The activists of Karnataka Rakshana Vedike withdrew their hunger strike on Sunday following welfare top brass. They were demanding better facilities at the district government hospital.

Senior officials from the department held discussion with the protestors. The mediation helped as the protesters withdrew the strike following directions from the organization president Narayana Gowda.

Senior officials from the department Sumuda Desai met the four protesters who were taken ill on Saturday. She later held discussion with the leaders of the organisation and persuaded them to withdraw the strike assuring that she will do what is needed. But the protestors insisted a written assurance. When it was made available, they contacted Gowda and withdrew the strike late on Saturday night.

However, the farmers protest that led to transfer of DC Manojkumar Meena and SP T D Pawar entered the 22nd day on Sunday. Though chief minister B S Yeddyurappa intervened and asked them to withdraw the protest, they did not heed his request. The CM has conveyed to the farmer leaders that he will send water resources minister Basavaraj Bommai, energy minister K S Eshwarappa and urban development and parliamentary affairs minister S Suresh Kumar to hold discussion with them on December 30.