Monday, February 21, 2011

ನೈರುತ್ಯ ರೈಲ್ವೆ ಉದ್ಯೋಗ ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯ - ಕರವೇ ಪ್ರತಿಭಟನೆ

ನೈರುತ್ಯ ರೈಲ್ವೆ ಉದ್ಯೋಗ ನೇಮಕಾತಿಯಲ್ಲಿ ಹೊಸದಾಗಿ 3700 ಹುದ್ದೆಗಳಿಗೆ ಅರ್ಜಿ ಕರೆದು ಪರೀಕ್ಷೆ ನಡೆಸಲಾಗುತ್ತಿದೆ. ಆದರೆ 4701 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2008 ರಲ್ಲಿ ಹೊರ ರಾಜ್ಯದ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ಬರೆಯಲು ಅರ್ಚಿ ಸಲ್ಲಿಸಿದ್ದರು. ಈಗ ಮತ್ತೊಮ್ಮೆ ಹಿಂದೆ ಅರ್ಚಿ ಸಲ್ಲಿಸಿದ್ದ ಕನ್ನಡೇತರ ಅಭ್ಯರ್ಥಿಗಳಿಗೆ ಮರು ಅರ್ಚಿ ಸಲ್ಲಿಸಲು ಅವಕಾಶ ಮಾಡಿಕೊಡುತ್ತಿರುವುದರಿಂದ ಮತ್ತೆ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ.

3700 ಹುದ್ದೆಗಳಿಗೆ ಹೊಸದಾಗಿ ಅರ್ಜಿ ಕರೆದು ಪರೀಕ್ಷೆ ನಡೆಸುತ್ತಿರುವಂತೆಯೇ ಹಿಂದಿನ 4701 ಹುದ್ದೆಗಳಿಗೂ ಹೊಸದಾಗಿಯೇ ಅರ್ಜಿಗಳನ್ನು ಕರೆದು ಪರೀಕ್ಷೆ ನಡೆಸಬೇಕೆಂದು ಒತ್ತಾಯಿಸಿ 21 ಫೆಬ್ರವರಿ 2011 ರಂದು ಪ್ರತಿಭಟನೆ ನಡೆಸಿದೆವು. ಇದರ ಪತ್ರಿಕಾ ವರದಿಯನ್ನು ನೋಡಿ-