Monday, October 24, 2011

ಸರ್ಕಾರಿ ಶಾಲೆ ಮುಚ್ಚುವ ನಿರ್ಧಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ

ಮಕ್ಕಳ ಸಂಖ್ಯೆ ಕಮ್ಮಿ ಎಂಬ ಕುಂಟು ನೆಪವೊಡ್ಡಿ ಸುಮಾರು ೩೦೦೦ ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ರಾಜ್ಯಸರ್ಕಾರ ನಿರ್ಧರಿಸಿದ್ದು, ಈ ಮೂಲಕ ೨೦೦೯ರ "ಶಿಕ್ಷಣ ಹಕ್ಕು ಕಾಯ್ದೆ" ಅನ್ವಯ ಪ್ರತಿ ಮಗುವಿಗೂ ಮೂಲಭೂತ ಶಿಕ್ಷಣ ಒದಗಿಸಬೇಕಿದ್ದ ಸರ್ಕಾರವೇ ತನ್ನ ಹೊಣೆಗಾರಿಕೆಯಿಂದ ಜಾರಿಕೊಂಡಂತಾಗಿದೆ. ಸರ್ಕಾರ ಕೂಡಲೇ ತನ್ನ ನಿರ್ಧಾರವನ್ನು ಬದಲಿಸಿ, ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಿಸಲು ಕ್ರಮ ಕೈಕೊಳ್ಳಬೇಕೆಂದು ಆಗ್ರಹಿಸಿ ೨೪-೧೦-೨೦೧೧ರ ಸೋಮವಾರದಂದು ರಾಜ್ಯಾದ್ಯಂತ ನಮ್ಮ ಎಲ್ಲಾ ಜಿಲ್ಲಾ ಕೆಂದ್ರಗಳಲ್ಲಿ ಪ್ರತಿಭಟನೆ ನಡೆಸಿದೆವು.

ಇದರ ಅಂಗವಾಗಿ, ಬೆಂಗಳೂರಿನಲ್ಲೂ ಕೂಡ ಬೃಹತ್ ಕಾಲ್ನಡಿಗೆ ಜಾಥಾ ನಡೆಸಿ, ರಾಜ್ಯಸರ್ಕಾರಕ್ಕೆ ನಮ್ಮ ಮನವಿ ಪತ್ರವನ್ನು ಸಲ್ಲಿಸಿದೆವು. ಸರ್ಕಾರಕ್ಕೆ ಸಲ್ಲಿಸಿದ ಮನವಿ ಪತ್ರವನ್ನು ಕೆಳಗೆ ನೋಡಿ: