Wednesday, September 14, 2011

ಕೇಂದ್ರ ಸರ್ಕಾರದ ಭಾಷಾನೀತಿ ಬದಲಾಗಬೇಕು ಎಂದು ಒತ್ತಾಯಿಸಿ ನಮ್ಮ ಪ್ರತಿಭಟನೆ

ಕೇಂದ್ರ ಸರ್ಕಾರದ ಭಾಷಾ ನೀತಿಯ ಪ್ರಕಾರ ಹಿಂದಿ ಭಾಷೆಗೆ ಒಂದು ಮಾನದಂಡ ಮತ್ತುಳಿದ ಭಾಷೆಗಳಿಗೆ ಬೇರೆಯ ಮಾನದಂಡಗಳಿರುವುದು ಹಿಂದಿಯೇತರ ಸಮುದಾಯಗಳಿಗೆ ನೋವಿನ ಸಂಗತಿ. ದೇಶದ ಎಲ್ಲ ಭಾಷಿಕರು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಕೋಟ್ಯಂತರ ರುಪಾಯಿ ತೆರಿಗೆ ಹಣದಲ್ಲಿಯೇ ಸೆಪ್ಟಂಬರ್ ೧೪ರಂದು "ಹಿಂದಿ ದಿವಸ್" ಅನ್ನುವ ಆಚರಣೆಯನ್ನು ಕೇಂದ್ರ ಸರ್ಕಾರ ಮಾಡಿಕೊಂಡು ಬರುತ್ತಿರುವುದು ಖಂಡನೀಯ. ಇದರ ವಿರುದ್ಧ ನಾವು ಹೋರಾಟ ಮಾಡುಕೊಂಡು ಬಂದಿದ್ದೇವೆ.
ರಾಜ್ಯದಲ್ಲಿರುವ ಕೇಂದ್ರದ ವ್ಯಾಪ್ತಿಯ ಎಲ್ಲಾ ಇಲಾಖೆಗಳು, ಇನ್ನಿತರ ಸಂಸ್ಥೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಆಡಳಿತ ಭಾಷೆಯನ್ನಾಗಿ ಬಳಸಬೇಕೆಂದು ಕೇಂದ್ರವನ್ನು ಒತ್ತಾಯಿಸಿ ನಮ್ಮ ವೇದಿಕೆಯು ಇಂದು (ಸೆಪ್ಟಂಬರ್ 14) ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದೆವು.


ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿ ನಂತರ ಕರ್ನಾಟಕದ ರಾಜ್ಯಪಾಲರಾದ ಶ್ರೀ ಹೆಚ್. ಆರ್. ಭಾರಧ್ವಾಜ್ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದೆವು.