ಎಂ.ಇ.ಎಸ್. ಬೆಳಗಾವಿಯಲ್ಲಿ ಮಹಾಮೇಳಾವ ನಡೆಸಲು ಮುಂದಾಗಿದೆ ಹಾಗು ಬೆಳಗಾವಿಯನ್ನು
ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕೆಂದು ಹುನ್ನಾರ ನಡೆಸುತ್ತಿದೆ. ಇದನ್ನು ತಡೆಯಲು
ಕ.ರ.ವೇ. ಕಾರ್ಯಕರ್ತರು ಸಹಸ್ರಾರು ಸಂಖ್ಯೆಯಲ್ಲಿ ಬೆಳಗಾವಿಗೆ ತೆರಳಲಿದ್ದಾರೆ ಎಂದು
ನಮ್ಮ ರಾಜ್ಯಧ್ಯಕ್ಷರಾದ ಟಿ.ಎ. ನಾರಾಯಣ ಗೌಡರು ಹೇಳಿದರು.
ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು ಎನ್ನುವ ಘೋಷವಾಕ್ಯದೊಂದಿಗೆ ೧೯೯೯ರಲ್ಲಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ರಕ್ಷಣಾ ವೇದಿಕೆ ಇಂದು ನಾಡಿನ ಅತಿದೊಡ್ಡ ಬಲಿಷ್ಟ ಕನ್ನಡಪರ ಸಂಘಟನೆಯಾಗಿ, ಹೆಮ್ಮರವಾಗಿ ಬೆಳೆದು ನಿಂತಿದೆ. ರಾಜ್ಯಾಧ್ಯಕ್ಷರಾದ ಶ್ರೀ ಟಿ.ಎ.ನಾರಾಯಣಗೌಡರ ದಕ್ಷ ನಾಯಕತ್ವದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕನ್ನಡ ತಾಯಿಯ ಮಕ್ಕಳನ್ನು ಹಳದಿ ಕೆಂಪು ಬಾವುಟದ ಅಡಿಯಲ್ಲಿ ಸಂಘಟಿಸಲಾಗುತ್ತದೆ. ಇದೀಗ ರಾಜ್ಯಾದ್ಯಂತ ಸಾವಿರಾರು ಶಾಖೆಗಳನ್ನು ಹೊಂದಿರುವ ಕರ್ನಾಟಕ ರಕ್ಷಣಾ ವೇದಿಕೆಯ ನೋಂದಾಯಿತ ಸದಸ್ಯರ ಸಂಖ್ಯೆಯೇ ಐವತ್ತು ಲಕ್ಷಕ್ಕೂ ಹೆಚ್ಚು. ದಿನೇದಿನೇ ಸಂಘಟನೆಯು ನಾಡಿನ ಎಲ್ಲಾ ಜನತೆಯ ಪ್ರೀತಿ, ಅಭಿಮಾನ, ನಂಬಿಕೆಗಳನ್ನು ಹೆಚ್ಚು ಹೆಚ್ಚು ಗಳಿಸುತ್ತಿದ್ದು ಕನ್ನಡಿಗರೆದೆಯಲ್ಲಿ ’ ಸಮೃಧ್ಧವಾದ ನಾಳೆಗಳು ಕನ್ನಡಿಗರದ್ದಾಗಲಿವೆ ’ ಎನ್ನುವ ಭರವಸೆಗೆ ಕಾರಣವಾಗಿದೆ. ಕನ್ನಡ ಪರವಾದ ಹೋರಾಟಗಳನ್ನು ರಾಜಿ ರಹಿತವಾಗಿ, ರಾಜಕೀಯ ರಹಿತವಾಗಿ ನಡೆಸಿಕೊಂಡು ಬಂದಿರುವ ಕರ್ನಾಟಕ ರಕ್ಷಣಾ ವೇದಿಕೆಯ ನಿರ್ಭೀಡ ನಿಲುವು ಮತ್ತು ಪ್ರಾಮಾಣಿಕವಾದ ನಡೆಗಳಿಂದಾಗಿ ನಾಡಿನ ಮೂಲೆಮೂಲೆಗಳ ಕನ್ನಡಿಗರಿಂದ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
www.karnatakarakshanavedike.org