Monday, May 21, 2012
Sunday, May 20, 2012
ಕರ್ನಾಟಕ ರಕ್ಷಣಾ ವೇದಿಕೆ ನಡೆಸಿರುವ ಬೆಳಗಾವಿ ಗಡಿ ಹೋರಾಟಗಳ ಸಮಗ್ರ ಚಿತ್ರಣ
ಮೈಸೂರು-ಮಹಾರಾಷ್ಟ್ರ-ಕೇರಳ ರಾಜ್ಯಗಳಲ್ಲಿ ಭಾಷಾವಾರು ಪ್ರಾಂತ್ಯ ರಚನೆಯ ಪ್ರಕ್ರಿಯೆ ಸರಿಯಾಗಿ ನಡಿಯದೇ ಗಡಿ ವಿವಾದ ಭುಗಿಲೆದ್ದಾಗ 1966ರ ಕೊನೆಯಲ್ಲಿ ಕೇಂದ್ರ ಸರ್ಕಾರದಿಂದ ಮೆಹರ್ಚಂದ್ ಮಹಾಜನ್ ಆಯೋಗ ರಚನೆಯಾಗಿ, ಆಯೋಗ ನೀಡುವ ತೀರ್ಪಿಗೆ ನಾವು ತಲೆಬಾಗುತ್ತೀವಿ ಎಂಬ ಹುಸಿ ಮಾತನ್ನು ಕೊಟ್ಟ ಮಹಾರಾಷ್ಟ್ರ ಕೊಟ್ಟ ಮಾತಿಗೆ ತಪ್ಪಿದ್ದಲ್ಲದೆ, ಇವತ್ತಿನವರೆಗೂ ಗಡಿ ಸಮಸ್ಯೆ ಬಗೆಹರಿಯುವುದಕ್ಕೆ ಬಿಡದೆ ರಾಜಕೀಯ ದುರುದ್ದೇಶಗಳಿಂದ ಇಂದಿಗೂ ನಾಡದ್ರೋಹಿ ಸಂಘಟನೆಯಾದ ಎಂ.ಇ.ಎಸ್. ಗೆ ತನ್ನ ಕ್ಕುಮ್ಮಕ್ಕು ನೀಡುತ್ತಾ ಬಂದಿದೆ. ಜೊತೆಗೆ, ಬೆಳಗಾವಿಯ ಮಹಾನಗರ ಪಾಲಿಕೆಗೆ ಕನ್ನಡಿಗರು ಆಯ್ಕೆಯಾಗದಂತೆ ತಡೆಯುವ ದುಸ್ಸಾಹಸಕ್ಕೆ ಹಲವುಬಾರಿ ಕೈಹಾಕಿದೆ ಮತ್ತು ಪಾಲಿಕೆಯಲ್ಲಿನ ಮಾಹಾರಾಷ್ಟ ಮೂಲದ ಅಧಿಕಾರಿಗಳು ಎಂ.ಇ.ಎಸ್. ಕುತಂತ್ರಗಳಿಗೆ ಇಂಬು ನೀಡುವ ಕೆಲಸವನ್ನು ಹಲವುಬಾರಿ ಮಾಡಿದ್ದಾರೆ. ಇಷ್ಟೇ ಅಲ್ಲದೆ ಪ್ರತಿವರ್ಷ ಬೆಳಬಾವಿಯಲ್ಲಿ ಕನ್ನಡ ರಾಜ್ಯೋತ್ಸವದಂದು ಕರಾಳ ದಿನ ಆಚರಿಸುವುದು, ಮೇ ತಿಂಗಳಿನಲ್ಲಿ ಮರಾಠಿ ಮಹಾಮೇಳಾವ ನಡೆಸುವುದು, ಅಂತ ಮೇಳಗಳಲ್ಲಿ ಕನ್ನಡಿಗರ ಭಾವನೆ ಕೆರಳಿಸುವಂತ ಪ್ರಚೋದನಕಾರಿ ಭಾಷಣಗಳನ್ನು ಮಹಾರಾಷ್ಟ್ರದ ರಾಜಕಾರಣಿಗಳಿಂದ ಮಾಡಿಸುವುದು, ಇತ್ಯಾದಿ ಕೆಲಸಗಳಿಗೆ ಕೈಹಾಕಿದ್ದು, ಈ ಬಾರಿಯೂ ಮೇ ೨೦ ರಂದು ಬೆಳಗಾವಿಯಲ್ಲಿ ಇಂತಹದ್ದೇ ಒಂದು ಮೇಳವನ್ನು ನಡೆಸಲು ಮುಂದಾಗಿದೆ.
ಕನ್ನಡ ವಿರೋಧಿ ಧೋರಣೆಯಿದ್ದ ಬೆಳಗಾವಿಯ ಮಹಾಪೌರ ವಿಜಯ ಮೋರೆ ವಿರುದ್ಧ ೨೦೦೫ ರಲ್ಲಿ ಹೋರಾಟಕ್ಕೆ ನಾಂದಿ
೨೦೦೮ ರಲ್ಲಿ ಕನ್ನಡಿಗರ ತೆಕ್ಕೆಗೆ ಬೆಳಗಾವಿ ಪಾಲಿಕೆಯನ್ನು ದಕ್ಕಿಸುಕೊಡುವುದರಲ್ಲಿ ಕರವೇ ಯಶಸ್ಸು
- ಬೆಳಗಾವಿ ಜಿಲ್ಲೆಯಾದ್ಯಂತ, ಹಳ್ಳಿಯಿಂದ ಹಿಡಿದು ಜಿಲ್ಲೆಯವರೆಗೂ ಸಾವಿರಾರು ಶಾಖೆಗಳನ್ನು ತೆರೆದು; ಕನ್ನಡಿಗರಲ್ಲಿ ಜಾಗೃತಿ ಮೂಡಿಸಿದೆವು.
- ಬೆಳಗಾವಿಯಲ್ಲಿ ಪ್ರಕ್ಯಾತ ಗಾಯಕ ಸಿ. ಅಶ್ವತ್ ರವರಿಂದ ಕನ್ನಡವೇ ಸತ್ಯ ಕಾರ್ಯಕ್ರಮ ನಡೆಸಿ ಕನ್ನಡಿಗರಲ್ಲಿ ಜಾಗೃತಿ ಮೂಡಿಸಿದೆವು.
- ಸಂಘಟನೆಯ ಮೂಲಕ, ಪಾಲಿಕೆ ಚುಣಾವಣೆಗಳಲ್ಲಿ ಕನ್ನಡದ ಅಭ್ಯರ್ತಿಗಳನ್ನೇ ಗೆಲ್ಲಿಸುವಂತೆ ಕನ್ನಡಿಗರಲ್ಲಿ ಕರೆ ನೀಡಿದೆವು.
- ಎರಡು ಭಾರಿ ಸಾವಿರಾರು ಸಂಖ್ಯೆಯಲ್ಲಿ ಬೆಳಗಾವಿಯಿಂದ ಬೆಂಗಳೂರಿಗೆ ಬಂದು, ಆಗಿನ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿಯವರಲ್ಲಿ, ಬೆಳಗಾವಿಗೆ ಅಭಿವೃದ್ದಿಗೆ ವಿಶೇಷ ಒತ್ತು ನೀಡುವಂತೆ ಮನವಿ ಮಾಡಿಕೊಂಡಿದ್ದೆವು.
- ಬೆಳಗಾವಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಶಾಧಿವೇಶಣ ಹಾಗು ವಿಧಾನ ಸೌಧ ಶಂಖು ಸ್ಥಾಪನೆಗೆ ಕಾರಣವಾಯಿತು.
೨೦೧೧ ರಲ್ಲಿ ಎಂ.ಇ.ಎಸ್. ಪರ ಇದ್ದು ಕನ್ನಡ ವಿರೋಧಿ ಧೋರಣೆ ಹೊಂದಿದ್ದ ಮೇಯರ್/ಉಪಮೇಯರ್ ಗಳಿದ್ದ ಬೆಳಗಾವಿ ನಗರ ಪಾಲಿಕೆ ವಿಸರ್ಜನೆಗೆ ಕಾರಣವಾದ ಹೋರಾಟ
- ನವೆಂಬರ್ ೩, ೨೦೧೧ ರಂದು ರಾಜ್ಯವ್ಯಾಪಿ ಪ್ರತಿಭಟನೆ ಆರಂಭ
- ನವೆಂಬರ್ ೮, ೨೦೧೧ ರಂದು ಬೆಂಗಳೂರಿನ ಬನ್ನಪ್ಪ ಪಾರ್ಕಿನಿಂದ ವಿಧಾನಸೌಧದವರೆಗೆ ಬೃಹತ್ ಪ್ರತಿಭಟನಾ ನಡಿಗೆ ಮತ್ತು ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸುವಿಕೆ
- ಬೆಳಗಾವಿ ಮೇಯರ್-ಉಪಮೇಯರ್ ಸದಸ್ಯತ್ವ ರದ್ದುಗೊಳಿಸದೇ, ನಗರ ಪಾಲಿಕೆಯನ್ನೂ ವಿಸರ್ಜಿಸದೇ ಇರುವ ಸರ್ಕಾರದ ಧೋರಣೆಯನ್ನು ಬದಲಿಸಬೇಕೆಂದು ಆಗ್ರಹಿಸಿ ನವೆಂಬರ್ ೧೯ ರಂದು ಬೆಳಗಾವಿಯಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹದ ಆರಂಭ ಮತ್ತು ಬೆಂಗಳೂರಿನಲ್ಲಿ ಅದಕ್ಕೆ ಪೂರಕವಾಗಿ ಪ್ರತಿಭಟನೆ
- ನಮ್ಮ ಹೋರಾಟವನ್ನು ಮುಂದುವರೆಸುತ್ತಾ ನವೆಂಬರ್ ೨೪, ೨೦೧೧ ರಂದು ಬೆಂಗಳೂರಿನಲ್ಲಿರುವ ಮುಖ್ಯಮಂತ್ರಿ ಅವರ ಗೃಹ ಕಚೇರಿ "ಕೃಷ್ಣಾ" ಮುಂದೆ ನೂರಾರು ಕಾರ್ಯಕರ್ತರೊಡನೆ ರಾಜ್ಯ ಸರ್ಕಾರದ ಧೋರಣೆಯನ್ನು ಪ್ರತಿಭಟಿಸುವ ಮೂಲಕ ಹೋರಾಟದ ತೀವ್ರತೆಯನ್ನು ಹೆಚ್ಚಿಸಿದೆವು.
- http://karave.blogspot.com/2011/11/karaala-dina-aacharisida-mes-varthane.html
- http://karave.blogspot.com/2011/11/belagaavi-paalike-visarjanege-ottaayisi.html
- http://karave.blogspot.com/2011/11/belagavi-naadadrohigala-viruddha.html
- http://karave.blogspot.com/2011/11/belagavi-paalike-bagge-sarkaarada.html
- http://karave.blogspot.com/2011/11/belagavi-sarkaarada-dhorane-viruddha.html
- http://karave.blogspot.com/2011/11/belagavi-naadadrohi-meyor-upameyor.html
- http://karave.blogspot.com/2011/11/belagaviya-vidyamaanagalu.html
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Sunday, May 20, 2012
Saturday, May 19, 2012
ಬೆಳಗಾವಿಯಲ್ಲಿ ಮಹಾಮೇಳಾವ ನಡೆಸಲು ಹೊರಟಿರುವ ಎಂ.ಇ.ಎಸ್. ನಡೆಯನ್ನು ತಡೆಯಲು ಸಹಸ್ರಾರು ಕ.ರ.ವೇ. ಕಾರ್ಯಕರ್ತರು ಬೆಳಗಾವಿಗೆ - ಟಿ.ಎ. ನಾರಾಯಣ ಗೌಡರು
ಇದರ ಪತ್ರಿಕಾ ವರದಿಯನ್ನು ಇಲ್ಲಿ ನೋಡಿ -
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Saturday, May 19, 2012
ಗುಂಪುಗಳು: ಎಂ.ಇ.ಎಸ್ / MES, ಗಡಿ / Border, ಬೆಳಗಾವಿ / BeLagavi
Thursday, May 10, 2012
ಬೆಳಗಾವಿಯಲ್ಲಿ ಕನ್ನಡ ಬಾವುಟ ಸಟ್ಟುಹಾಕಿದ್ದನ್ನು ಖಂಡಿಸಿ ಬೀದರ್ ನಲ್ಲಿ ಪ್ರತಿಭಟನೆ
ಬೆಳಗಾವಿ ಜಿಲ್ಲೆಯಲ್ಲಿ ಕನ್ನಡ ಬಾವುಟವನ್ನು ಕೆಲವು ಕಿಡಿಗೇಡಿಗಳು ಸುಟ್ಟು ಹಾಕಿದ್ದನ್ನು ಖಂಡಿಸುತ್ತ, ಬೀದರ್ ಜಿಲ್ಲೆಯಲ್ಲಿ ನಮ್ಮ ಕಾರ್ಯಕರ್ತರು ೦೫-೦೫-೨೦೧೨ ರಂದು ಪ್ರತಿಭಟನೆ ನಡೆಸಿದರು.
ಇದರ ವರದಿಗಳನ್ನು ಇಲ್ಲಿ ನೋಡಿ.
ಕನ್ನಡಪ್ರಭ ವರದಿ:
ವಿಜಯ ಕರ್ನಾಟಕ ವರದಿ:
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Thursday, May 10, 2012
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಗಡಿ / Border, ಬೆಳಗಾವಿ / BeLagavi
Friday, May 4, 2012
ಬೆಳಗಾವಿಯಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ - ಕರವೇಯಿಂದ ಪ್ರತಿಭಟನೆ
ಬೆಳಗಾವಿಯಲ್ಲಿ ಕಿಡಿಗೇಡಿಗಳು ಕನ್ನಡದ ಬಾವುಟಕ್ಕೆ ಬೆಂಕಿ ಹಾಕಿದ್ದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಕಾರ್ಯಕರ್ತರೊಡನೆ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದೆವು.
ಪ್ರತಿಭಟನೆಯ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:
ವಿಜಯಕರ್ನಾಟಕ ವರದಿ:
ಕನ್ನಡಪ್ರಭ ವರದಿ:
ವಿಜಯವಾಣಿ ವರದಿ:
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Friday, May 04, 2012
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಗಡಿ / Border, ಬೆಳಗಾವಿ / BeLagavi