Thursday, July 28, 2011

ಗಣಿ ಹಗರಣದಲ್ಲಿ ಸಿಲುಕಿರೊ ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯ

ಲೋಕಾಯುಕ್ತರಾದ ಸಂತೋಷ್ ಹೆಗಡೆಯವರು ಸಲ್ಲಿಸಿರುವ ಅಕ್ರಮ ಗಣಿಗಾರಿಕೆ ಕುರಿತ ವರದಿಯಲ್ಲಿ ಮುಖ್ಯಮಂತ್ರಿಗಳ ಹೆಸರು ಪ್ರಸ್ತಾಪವಾಗಿದೆ. ಆದ್ದರಿಂದ ಮುಖ್ಯಮಂತ್ರಿಗಳು ರಾಜೀನಾಮೆ ನೀಡಿ ಮುಂದಿನ ತನಿಖೆಗೆ ಸಹಕರಿಸಬೇಕೆಂದು ಆಗ್ರಹಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದೆವು.

Saturday, July 23, 2011

ಸಿಂಗಮ್ ಹಿಂದಿ ಚಿತ್ರದಲ್ಲಿ ಕನ್ನಡಿಗರಿಗೆ ಅವಮಾನ - ಕರವೇ ಪ್ರತಿಭಟನೆ

ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಅವಮಾನ ನಡೆದಂತ ಸಮಯದಲ್ಲಿ, ಕರವೇ ಅಂತಹ ಅವಮಾನದ ವಿರುದ್ಧ ಸದಾ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸುತ್ತಾ ಬಂದಿರುವುದು ತಮಗೆಲ್ಲರಿಗೂ ತಿಳಿದ ವಿಚಾರವೇ.

ಇದೀಗ ಸಿಂಗಮ್ ಎಂಬ ಹಿಂದಿ ಚಿತ್ರದಲ್ಲಿಯೂ ಸಹ ಕನ್ನಡಿಗರನ್ನ ಅವಮಾನಿಸುವ ಸಂಭಾಷಣೆಗಳಿದ್ದವು. ಇದರ ವಿರುದ್ದ 22 ಜುಲೈ 2011 ರಂದು ಪ್ರತಿಭಟನೆ ನಡೆಸಿದೆವು. ನಮ್ಮ ಪ್ರತಿಭಟನೆಗೆ ಮಣಿದ ಸಿಂಗಮ್ ಚಿತ್ರದ ನಿರ್ಮಾಪಕರಾದ ರಿಲಯನ್ಸ್ ಸಂಸ್ಥೆ ಕನ್ನಡಿಗರಲ್ಲಿ ಕ್ಷಮೆ ಕೇಳಿದ್ದಾರೆ, ಜೊತೆಗೆ ತಕ್ಷಣವೇ ಕನ್ನಡಿಗರನ್ನ ಅವಮಾನಿಸುವ ಸಂಭಾಷಣೆಗಳನ್ನ ಚಿತ್ರದಿಂದ ತೆಗೆದುಹಾಕುವುದಾಗಿ ಹೇಳಿದ್ದಾರೆ. ಇದು ಕರವೇ ನಡೆಸಿದ ಹೋರಾಟಕ್ಕೆ ಸಿಕ್ಕ ಜಯ.

Friday, July 22, 2011

ಸಂತೋಷ್ ಹೆಗಡೆ ರವರ ದೂರವಾಣಿ ಕದ್ದಾಲಿಕೆಯ ಬಗ್ಗೆ ತನಿಖೆ ನಡೆಯಲಿ

ಗಣಿ ಹಗರಣದ ಲೋಕಾಯುಕ್ತ ತನಿಖೆಯ ವರದಿಯು ಸರಕಾರಕ್ಕೆ ಸಲ್ಲಿಸುವ ಮೊದಲೇ ಬಿಡುಗಡೆಗೊಂಡಿದೆ. ಇದರ ಬಗ್ಗೆ ಪ್ರತಿಕ್ರಿಯಿಸಿರುವ ಮಾನ್ಯ ಲೋಕಾಯುಕ್ತರಾದ ಸಂತೋಷ್ ಹೆಗಡೆಯವರು ತಮ್ಮ ದೂರವಾಣಿ ಕದ್ದಾಲಿಕೆ ನಡೆದಿರಬಹುದೆಂಬ ಸಂಶಯ ವ್ಯಕ್ತಪಡಿಸಿದ್ದಾರೆ. ಇದರ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿ 22 ಜುಲೈ ೨೦೧೧ ರಂದು ಪ್ರತಿಭಟನೆ ನಡೆಸಿದೆವು.



Thursday, July 14, 2011

ಪೋಸ್ಕೊ ಕಂಪನಿಯ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಗದಗದಲ್ಲಿ ಕರವೇಯ ಪ್ರತಿಭಟನೆ ಜಾಥಾ

ಪೋಸ್ಕೊ ಕಂಪನಿಗಾಗಿ ರಾಜ್ಯ ಸರ್ಕಾರವೇ ಮುಂದೆ ನಿಂತು ಗದಗ ಜಿಲ್ಲೆಯ ರೈತರ ಫಲವತ್ತಾದ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ತಡೆಯಲು ನಮ್ಮ ವೇದಿಕೆ ವತಿಯಿಂದ ಜುಲೈ ೧೩ ರಂದು ಸಾವಿರಾರು ಜನ ಕರವೇ ಕಾರ್ಯಕರ್ತರು ಗದಗದಲ್ಲಿ ಪ್ರತಿಭಟನೆ ಜಾಥಾವನ್ನು ನಡೆಸಿದೆವು. ನಮ್ಮ ಜಾಥಾಕ್ಕೆ ಸ್ಥಳೀಯ ಮುಖಂಡರು ಮತ್ತು ಮಠಾಧೀಶರೂ ಕೂಡ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಇದೇ ವಿಷಯವಾಗಿ, ಕಳೆದ ಸೋಮವಾರ (ಜುಲೈ ೧೧ ರಂದು) ಬೆಂಗಳೂರಿನಲ್ಲಿ ರಾಜಭವನಕ್ಕೆ ಕಾಲ್ನಡಿಗೆ ಜಾಥಾ ಮಾಡುವ ಮೂಲಕ ನಮ್ಮ ಪ್ರತಿಭಟನೆಯನ್ನು ಆರಂಭಿಸಿದ್ದೆವು.

ಪ್ರತಿಭಟನೆ ಜಾಥಾ ಕುರಿತು ಪ್ರತ್ರಿಕಾ ವರದಿಗಳನ್ನು ಕೆಳಗೆ ನೋಡಿ:


Monday, July 11, 2011

ಹೆಚ್.ಎ.ಎಲ್. ನಲ್ಲಿ ಕನ್ನಡಿಗರಿಗೆ ಉದ್ಯೋಗ ಮತ್ತು ಗದಗ ಜಿಲ್ಲೆಯ ರೈತರ ಭೂ-ಕಬಳಿಕೆ ನಿಲ್ಲಿಸಬೇಕೆಂದು ಒತ್ತಾಯಿಸಿ ಕರವೇಯಿಂದ ಕಾಲ್ನಡಿಗೆ ಜಾಥಾ

ಕಳೆದ ವಾರ ಹೆಚ್.ಎ.ಎಲ್. ಬೆಂಗಳೂರಿನ ಘಟಕದಲ್ಲಿನ ಹೊಸ ಹುದ್ದೆಗಳಿಗೆ ಕನ್ನಡಿಗರನ್ನೇ ನೇಮಿಸಿಕೊಳ್ಳಬೇಕೆಂದು ಹೆಚ್.ಎ.ಎಲ್. ಪ್ರಧಾನ ಕಚೇರಿ ಎದುರು ನಡೆಸಿದ ಪ್ರತಿಭಟನೆಯನ್ನು ಇಂದೂ ಕೂಡ ಮುಂದುವರಿಸಲಾಯಿತು. ಆದರೆ ಈ ಬಾರಿ ನಮ್ಮ ಬೇಡಿಕೆಗಳನ್ನು ರಾಜ್ಯಪಾಲರಿಗೆ ಮನವಿಯಾಗಿ ಸಲ್ಲಿಸುವ ಮೂಲಕ ನಮ್ಮ ಹೋರಾಟವನ್ನು ಮುಂದುವರಿಸಿದೆವು.

ಹಾಗೆಯೇ, ರಾಜ್ಯದ ಗದಗ ಜಿಲ್ಲೆಯ ರೈತರ ಫಲವತ್ತಾದ ಕೃಷಿ ಭೂಮಿಯನ್ನು ಖಾಸಗಿ ಕಂಪನಿಗಳಿಗಾಗಿ ವಶಪಡಿಸಿಕೊಳ್ಳುತ್ತಿರುವ ಸರ್ಕಾರದ ಕ್ರಮವು ನಿಲ್ಲಬೇಕು ಎಂದು ಒತ್ತಾಯಿಸಿ ನಮ್ಮ ವೇದಿಕೆಯ ವತಿಯಿಂದ ಇಂದು (ಜುಲೈ ೧೧, ೨೦೧೧ ರಂದು) ರಾಜಭವನಕ್ಕೆ ಕಾಲ್ನಡಿಗೆ ಜಾಥಾ ನಡೆಸುವ ಮೂಲಕ ಪ್ರತಿಭಟನೆ ನಡೆಸಿದೆವು.

ಈ ಕುರಿತು ಪತ್ರಿಕಾ ವರದಿಗಳು ಮತ್ತು ನಮ್ಮ ಮನವಿ ಪತ್ರಗಳನ್ನು ನೋಡಿ:



ಮನವಿ ಪತ್ರಗಳು




Friday, July 8, 2011

ಹೆಚ್.ಎ.ಎಲ್. ನೇಮಕಾತಿಯಲ್ಲಿ ಕನ್ನಡಿಗರಿಗೇ ಆದ್ಯತೆ ಕೊಡಬೇಕೆಂದು ಪ್ರತಿಭಟನೆ

ಹೆಚ್.ಎ.ಎಲ್ . ಬೆಂಗಳೂರು ವಿಭಾಗದ ಹಲವಾರು ಘಟಕಗಳಿಗೆ ಹೊಸದಾಗಿ ನೇಮಕಾತಿ ನಡೆಸಲು ಹೆಚ್.ಎ.ಎಲ್. ಮುಂದಾಗಿದ್ದು, ಸುಮಾರು 677 ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕರೆ ನೀಡಿದೆ. ಕರೆದಿರುವ ಬಹುತೇಕ ಎಲ್ಲ ಹುದ್ದೆಗಳಿಗೂ ಡಿಪ್ಲಮೋ ಅಥವಾ ಐ.ಟಿ.ಐ. ಪಾಸಾಗಿರುವ ಅಭ್ಯರ್ಥಿಗಳೇ ಬೇಕಾಗಿದ್ದು, ಆ ಎಲ್ಲ ತರಹದ ಹುದ್ದೆಗಳಿಗೂ ಸರೋಜಿನಿ ಮಹಿಷಿ ವರದಿಯ ಆಧಾರದ ಮೇಲೆ ಸ್ಥಳೀಯರಿಗೇ ಆದ್ಯತೆ ನೀಡಬೇಕಿತ್ತು ಮತ್ತು ಅದಕ್ಕೆ ಪೂರಕವಾಗಿ ಕರ್ನಾಟಕದ "ಉದ್ಯೋಗ ವಿನಿಮಯ ಕೇಂದ್ರದಲ್ಲಿ" ನೊಂದಾಯಿಸಿರುವ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಲಾಗುವುದೆಂದು ನಿಯಮ ಮಾಡಬೇಕಿತ್ತು. ಆದರೆ ಇದಾವುದನ್ನೂ ಮಾಡಲಾಗಿಲ್ಲ.

ಇಂತಹದೇ ನೇಮಕಾತಿ ಆಂಧ್ರಪ್ರದೇಶದ ಹೆಚ್.ಎ.ಎಲ್. ಘಟಕದಲ್ಲಿ ನಡೆದಾಗ, ಆಂಧ್ರಪ್ರದೇಶದ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೊಂದಾಯಿಸಿದ್ದವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು ಎಂಬ ನಿಯಮ ಮಾಡಲಾಗಿತ್ತು. ಅದೇ ಕ್ರಮ ಇಲ್ಲಿನ ನೇಮಕಾತಿಯಲ್ಲಿ ಕೈಗೊಂಡಿಲ್ಲ. ಇವೆಲ್ಲದುರ ವಿರುದ್ಧ ಧ್ವನಿ ಎತ್ತುತ್ತಾ, ಎಲ್ಲಾ 677 ಹುದ್ದೆಗಳನ್ನು ಕನ್ನಡಿಗರಿಗೇ ಕೊಡಬೇಕೆಂದು ಒತ್ತಾಯಿಸಿ ನಮ್ಮ ವೇದಿಕೆಯ ವತಿಯಿಂದ ಬೆಂಗಳೂರಿನಲ್ಲಿರುವ ಹೆಚ್.ಎ.ಎಲ್ ಪ್ರಾಧಾನ ಕಛೇರಿ ಎದುರು ಜುಲೈ 8, 2011 ರಂದು ಪ್ರತಿಭಟನೆ ನಡೆಸಿದೆವು.

ಪ್ರತಿಭಟನೆಯ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:









ಹೆಚ್.ಎ.ಎಲ್ ಗೆ ನೀಡಿದ ಮನವಿ ಪತ್ರ-