Monday, November 7, 2011

ಬೆಳಗಾವಿ: ನಾಡವಿರೋಧಿ ಮೇಯರ್, ಉಪಮೇಯರ್ ಅವರನ್ನು ಬಂಧಿಸಲು ಮತ್ತು ನಗರಪಾಲಿಕೆ ವಿಸರ್ಜಿಸಲು ಒತ್ತಾಯಿಸಿ ನಾಳೆ ಬೃಹತ್ ಜಾಥಾ

ನಾಡವಿರೋಧಿ ಎಂ.ಇ.ಎಸ್. ಪರವಹಿಸಿ, ಕನ್ನಡಿಗರು ಹಾಗೂ ಕರ್ನಾಟಕ ಸರ್ಕಾರಕ್ಕೆ ಸವಾಲಾಕಿರುವ ಬೆಳಗಾವಿ ಪಾಲಿಕೆಯ ಮೇಯರ್ ಮಂದಾ ಬಾಳೇಕುಂದ್ರಿ, ಉಪಮೇಯರ್ ರೇಣುಕಿಲ್ಲೇಕರ, ಹಾಗೂ ಸಂಭಾಜಿ ಪಾಟೀಲ್ ನಂತಹ ನಾಡದ್ರೋಹಿಗಳನ್ನು ಕೂಡಲೆ ಬಂಧಿಸಿ, ಬೆಳಗಾವಿ ಮಹಾನಗರ ಪಾಲಿಕೆ ವಿಸರ್ಜನೆ ಮಾಡಬೇಕೆಂದು ರಾಜ್ಯಸರ್ಕಾರವನ್ನು ಒತ್ತಾಯಿಸಿ, ನಾಳೆ (ನವೆಂಬರ್ ೮, ೨೦೧ ರಂದು) ಬೆಳಿಗ್ಗೆ ೧೧.೩೦ ಕ್ಕೆ ಬೆಂಗಳೂರಿನ ಬನ್ನಪ್ಪ ಪಾರ್ಕನಿಂದ ವಿಧಾನಸೌಧದವರೆಗೆ ಬೃಹತ್ ಜಾಥಾ ನಡೆಸುತ್ತಿದ್ದೇವೆ.

ಕನ್ನಡದ ಮನೆಗಳಿಗೆ ಬೆಂಕಿ ಬಿದ್ದಿರುವಂತ ಈ ಸಂದರ್ಭದಲ್ಲಿ, ಈ ಜಾಥಾದಲ್ಲಿ ತಾವೆಲ್ಲಾ ಭಾಗವಹಿಸಿ, ರಾಜ್ಯಸರ್ಕಾರದ ಮೇಲೆ ಒತ್ತಡ ಹೇರಿ, ನಾಡದ್ರೋಹಿಗಳಿಗೆ ತಕ್ಕ ಪಾಠ ಕಲಿಸಲು ಮುಂದಾಗಿ ಎಂದು ಈ ಮೂಲಕ ಎಲ್ಲ ಕನ್ನಡಿಗರಿಗೆ ಕರೆ ನೀಡುತಿದ್ದೇವೆ. ಪ್ರತಿಭಟನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಕೆಳಗಿನ ಚಿತ್ರದಲ್ಲಿ ನೋಡಿ:

Thursday, November 3, 2011

ಕರಾಳ ದಿನ ಆಚರಿಸಿದ ಎಂ.ಇ.ಎಸ್. ವರ್ತನೆ ಮತ್ತು ಬೆಳಗಾವಿ ಮೇಯರ್ ಮತ್ತು ಉಪಮೇಯರ್ ರವರ ನಾಡದ್ರೋಹಿ ಧೋರಣೆ ಖಂಡಿಸಿ ರಾಜ್ಯವ್ಯಾಪಿ ಪ್ರತಿಭಟನೆ

ನಿರಂತರವಾಗಿ ನಾಡವಿರೋಧಿ ಚಟುವಟಿಕೆಗಳನ್ನು ಮಾಡಿಕೊಂಡು ಬರುತ್ತಿರುವ ಎಂ.ಇ.ಎಸ್. ಅನ್ನು ನಿಗ್ರಹಿಸದೆ, ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಅವರೇ ರಾಜ್ಯೋತ್ಸವದಂದು ಕರಾಳ ದಿನಾಚಾರಣೆ ಆಚರಿಸಿ, ನಾಡ ವಿರೋಧಿ ನಿಲುವನ್ನು ತಳೆದಿರುವುದನ್ನು ಖಂಡಿಸಿ ರಾಜ್ಯಾದ್ಯಂತ ನವೆಂಬರ್ ೩, ೨೦೧೧ ರಂದು ಪ್ರತಿಭಟನೆ ನಡೆಸಿದೆವು.

ಪ್ರತಿಭಟನೆಯ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:

ಪ್ರಜಾವಾಣಿ ವರದಿ:

ಕನ್ನಡ ಪ್ರಭ ವರದಿ:



ವಿಜಯ ಕರ್ನಾಟಕ ವರದಿ:

ಉದಯವಾಣಿ ವರದಿ:

ಈ ಸಂಜೆ ವರದಿ:
ಸಂಜೆವಾಣಿ ವರದಿ:

Tuesday, November 1, 2011

ಸರ್ಕಾರಿ ಶಾಲೆ ಮುಚ್ಚುವ ನಿರ್ಧಾರವನ್ನು ಕೈಬಿಡಲು ಒತ್ತಾಯಿಸಿ ರಾಜ್ಯಾದ್ಯಂತ ಹೋರಾಟ

ಸರ್ಕಾರಿ ಶಾಲೆಗಳನ್ನು ಮುಚ್ಚುವ ನಿರ್ಧಾರ ವಿರೋಧಿಸಿ ನಾವು ಕಳೆದ ವಾರವಷ್ಟೇ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದೆವು. ಇದಲ್ಲದೆ, ನಾಡಿನ ವಿವಿಧೆಡೆಯಿಂದ ಹಲವು ಚಿಂತಕರೂ ಇದನ್ನು ವಿರೋಧಿಸಿದ್ದರು. ಹಾಗಿದ್ದೂ, ಸರ್ಕಾರ ತನ್ನ ನಿರ್ಧಾರ ಕೈಬಿಡುವ ಕಡೆ ಯಾವ ಕ್ರಮವನ್ನೂ ಕೈಗೊಳ್ಳದೆ, ರಾಜ್ಯೋತ್ಸವದ ದಿನದಂದು, ಅದಕ್ಕೇ "ಶಾಲೆಗಳ ವಿಲೀನ" ಎಂಬ ಹೊಸ ಬಣ್ಣ ಕೊಟ್ಟು ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದನ್ನು ಮುಂದುವರೆಸಿತು.

ರಾಜ್ಯ ಸರ್ಕಾರದ ಈ ಧೋರಣೆಯ ವಿರುದ್ಧ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ನಮ್ಮ ಜಿಲ್ಲಾ ಘಟಕಗಳಿಂದ ನವೆಂಬರ್ ೧ ರಂದು ಪ್ರತಿಭಟನೆ ನಡೆಸಿದೆವು. ಪ್ರತಿಭಟನೆಯ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:

ಕನ್ನಡ ಪ್ರಭ ವರದಿ:

ಉದಯವಾಣಿ ವರದಿ:

ಸಂಯುಕ್ತ ಕರ್ನಾಟಕ ವರದಿ:

ವಿಜಯ ಕರ್ನಾಟಕ ವರದಿ:

ಈ ಸಂಜೆ ವರದಿ: