Sunday, November 27, 2011

ಬೆಳಗಾವಿ ಪ್ರಸಕ್ತ ವಿದ್ಯಮಾನಗಳ ಕುರಿತು ಟಿ.ಎ. ನಾರಾಯಣಗೌಡರು ಕನ್ನಡಪ್ರಭಕ್ಕೆ ನೀಡಿದ ಸಂದರ್ಶನ

ಬೆಳಗಾವಿಯಲ್ಲಿ ಎಂ.ಇ.ಎಸ್. ಕಿಡಿಗೇಡಿಗಳು, ಕನ್ನಡಿಗರು ಮತ್ತು ಕನ್ನಡ ಭಾಷೆಯ ಮೇಲೆ ದೌರ್ಜನ್ಯ ನಡೆಸಿದಾಗಲೆಲ್ಲಾ ಹೋರಾಟಕ್ಕಿಳಿದು ಕನ್ನಡ ಮತ್ತು ಕನ್ನಡಿಗರ ಹಿತ ಕಾಯುವಲ್ಲಿ ಮುಂಚೂಣಿ ವಹಿಸುತ್ತಿರುವುದು ಕರ್ನಾಟಕ ರಕ್ಷಣಾ ವೇದಿಕೆ. ಬೆಳಗಾವಿಯಲ್ಲಿ ಇಂದು ಎಂ.ಇ.ಎಸ್. ರಾಜಕೀಯ ಶಕ್ತಿ ಕುಂದಲು ಪ್ರಮುಖ ಕಾರಣವೂ ಕರ್ನಾಟಕ ರಕ್ಷಣಾ ವೇದಿಕೆ. ಕರವೇ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡರು, ಬೆಳಗಾವಿಯಲ್ಲಿನ ಇಂದಿನ ಪ್ರಸಕ್ತ ವಿದ್ಯಮಾನಗಳ ಕುರಿತು ಎಂ.ಇ.ಎಸ್. ಮತ್ತು ಬಾಳಾ ಠಾಕ್ರೆ ವಿರುದ್ಧ ತಮ್ಮ ಆಕ್ರೋಶವನ್ನು ಹೊರಗೆಡಹುತ್ತಾ ಕನ್ನಡಪ್ರಭಕ್ಕೆ ನೀಡಿದ ಸಂದರ್ಶನದ ವರದಿ ನೆನ್ನೆಯ ಕನ್ನಡಪ್ರಭದಲ್ಲಿ ಪ್ರಕಟವಾಗಿದೆ.

ಸಂದರ್ಶನದ ಹೆಚ್ಚಿನ ವಿವರಗಳನ್ನು ಕೆಳಗೆ ನೋಡಿ:

Thursday, November 24, 2011

ಬೆಳಗಾವಿ: ನಾಡದ್ರೋಹಿ ಮೇಯರ್-ಉಪಮೇಯರ್ ಬಂಧನಕ್ಕೆ ಆಗ್ರಹಿಸಿ, ಮುಖ್ಯಮಂತ್ರಿ ಗೃಹ ಕಚೇರಿ ಮುಂದೆ ತೀವ್ರ ಹೋರಾಟ

ಬೆಳಗಾವಿ ಪಾಲಿಕೆಯ ಮೇಯರ್-ಉಪಮೇಯರ್ ಬಂಧನಕ್ಕೆ ಆಗ್ರಹಿಸಿ ನಿರಂತರ ಹೋರಾಟ ಮಾಡುತ್ತಿರುವ ನಾವು, ಇಂದೂ (೨೪ ನವೆಂಬರ್ ೨೦೧೧ ರಂದು) ಕೂಡ ಹೋರಾಟ ಮುಂದುವರೆಸಿದೆವು. ಬೆಂಗಳೂರಿನಲ್ಲಿರುವ ಮುಖ್ಯಮಂತ್ರಿ ಅವರ ಗೃಹ ಕಚೇರಿ "ಕೃಷ್ಣಾ" ಮುಂದೆ ನೂರಾರು ಕಾರ್ಯಕರ್ತರೊಡನೆ ರಾಜ್ಯ ಸರ್ಕಾರದ ಧೋರಣೆಯನ್ನು ಪ್ರತಿಭಟಿಸುವ ಮೂಲಕ ಹೋರಾಟದ ತೀವ್ರತೆಯನ್ನು ಹೆಚ್ಚಿಸಿದೆವು.

ಇಂದಿನ ಪ್ರತಿಭಟನೆಯ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:

ಕನ್ನಡಪ್ರಭ ವರದಿ:
ವಿಜಯಕರ್ನಾಟಕ ವರದಿ:
ಉದಯವಾಣಿ ವರದಿ:
ಪ್ರಜಾವಾಣಿ ವರದಿ:
ಈ ಸಂಜೆ ವರದಿ:
ಸಂಜೆವಾಣಿ ವರದಿ:

Wednesday, November 23, 2011

ಬೆಳಗಾವಿ: ನಾಡದ್ರೋಹಿಗಳ ಬಂಧನ ಮತ್ತು ಪಾಲಿಕೆ ವಿಸರ್ಜನೆಗೆ ಆಗ್ರಹಿಸಿ, ಸರ್ಕಾರದ ಧೋರಣೆ ಖಂಡಿಸಿ ತೀವ್ರಗೊಂಡ ಹೋರಾಟ

ನಾಡದ್ರೋಹಿಗಳಾದ ಬೆಳಗಾವಿ ಪಾಲಿಕೆಯ ಮೇಯರ್-ಉಪಮೇಯರ್ ಸದಸ್ಯತ್ವವನ್ನು ರದ್ದುಗೊಳಿಸದೇ, ನಗರ ಪಾಲಿಕೆಯನ್ನೂ ವಿಸರ್ಜಿಸದೇ ರಾಜ್ಯ ಸರ್ಕಾರವು ಮತ್ತೊಮ್ಮೆ ನೋಟೀಸ್ ಕಳಿಸುವ ಕಣ್ಣೊರೆಸುವ ತಂತ್ರವನ್ನೇ ಮುಂದುವರೆಸಿದ್ದು, ನಾಡದ್ರೋಹಿಗಳ ವಿರುದ್ಧ ಯಾವುದೇ ಕಠಿಣ ಕ್ರಮವನ್ನು ಕೈಗೊಳ್ಳುತ್ತಿಲ್ಲ. ಸರ್ಕಾರದ ಈ ಬೇಜವಾಬ್ದಾರಿ ಧೋರಣೆಯನ್ನು ಖಂಡಿಸಿ ನಮ್ಮ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದೇವೆ.

ಕಳೆದ ೫ ದಿನಗಳಿಂದ ಬೆಳಗಾವಿಯಲ್ಲಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸಿದ್ದು, ನೆನ್ನೆ (ನವೆಂಬರ್ ೨೪, ೨೦೧೧ ರಂದು) ಸಂಜೆ ಬೆಳಗಾವಿಯಲ್ಲಿ ರಾಜ್ಯ ಸರ್ಕಾರದ ಪ್ರತಿಕೃತಿಯನ್ನು ದಹಿಸುವ ಮೂಲಕ ನಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದೆವು.

ನೆನ್ನೆಯ ಹೋರಾಟ ಮತ್ತು ಉಪವಾಸ ಸತ್ಯಾಗ್ರಹದ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:

ಪ್ರಜಾವಾಣಿ ವರದಿ:

ಕನ್ನಡಪ್ರಭ ವರದಿ:
ಸಂಯುಕ್ತ ಕರ್ನಾಟಕ ವರದಿ:

Tuesday, November 22, 2011

ಬೆಳಗಾವಿ: ನಾಡದ್ರೋಹಿಗಳ ಬಂಧಿಸುವ ಮತ್ತು ಪಾಲಿಕೆ ವಿಸರ್ಜಿಸುವ ಬಗ್ಗೆ ಸರ್ಕಾರದ ಧೋರಣೆ ಖಂಡಿಸಿ ಉಪವಾಸ ಸತ್ಯಾಗ್ರಹ ಮತ್ತು ರಾಜ್ಯವ್ಯಾಪಿ ಪ್ರತಿಭಟನೆ

ಬೆಳಗಾವಿ ಮೇಯರ್-ಉಪಮೇಯರ್ ಸದಸ್ಯತ್ವ ರದ್ದುಗೊಳಿಸದೇ, ನಗರ ಪಾಲಿಕೆಯನ್ನು ವಿಸರ್ಜಿಸದೇ ಇರುವ ಸರ್ಕಾರದ ನಡೆಯನ್ನು ಖಂಡಿಸಿ, ಸರ್ಕಾರ ಕೂಡಲೆ ಈ ಕುರಿತು ಕ್ರಮ ಕೈಗೊಂಡು, ನಾಡದ್ರೋಹಿಗಳಿಗೆ ಕುಮ್ಮಕ್ಕು ನೀಡುವಂತ ಧೋರಣೆಯನ್ನು ನಿಲ್ಲಿಸಬೇಕೆಂದು ಆಗ್ರಹಿಸಿ ನಾವು ರಾಜ್ಯವ್ಯಾಪಿ ಪ್ರತಿಭಟನೆ ನಡೆಸುತ್ತಿದ್ದೇವೆ.

ಪ್ರತಿಭಟನೆಯ ಅಂಗವಾಗಿ, ಬೆಳಗಾವಿಯಲ್ಲಿ ಕಳೆದ ಮೂರು ದಿನಗಳಿಂದ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದು, ಬೆಂಗಳೂರಿನಲ್ಲೂ ರಾಜ್ಯಸರ್ಕಾರದ ಕ್ರಮ ಖಂಡಿಸಿ ಇಂದು ಪ್ರತಿಭಟನೆ ನಡೆಸಿದೆವು.

ಪ್ರತಿಭಟನೆ ಮತ್ತು ಉಪವಾಸ ಸತ್ಯಾಗ್ರಹದ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:

ಉದಯವಾಣಿ ವರದಿ:ವಿಜಯಕರ್ನಾಟಕ ವರದಿ:
ಪ್ರಜಾವಾಣಿ ವರದಿ:
ಕನ್ನಡಪ್ರಭ ವರದಿ:

ಈಸಂಜೆ ವರದಿ:

Tuesday, November 8, 2011

ಬೆಳಗಾವಿ: ನಾಡದ್ರೋಹಿಗಳ ಬಂಧನ ಮತ್ತು ಪಾಲಿಕೆ ವಿಸರ್ಜನೆಗೆ ಆಗ್ರಹಿಸಿ ನಡೆದ ಪ್ರತಿಭಟನೆ - ಪತ್ರಿಕಾ ವರದಿಗಳು

ಕನ್ನಡಿಗರಿಗೆ ಅವಮಾನಿಸಿ, ಕರ್ನಾಟಕ ಸರ್ಕಾರಕ್ಕೆ ಸವಾಲು ಹಾಕಿದ್ದ ಬೆಳಗಾವಿಯ ನಗರಪಾಲಿಕೆಯಲ್ಲಿರುವ ಮತ್ತು ಎಂ.ಇ.ಎಸ್. ನಲ್ಲಿರುವ ನಾಡದ್ರೋಹಿಗಳನ್ನು ಬಂಧಿಸಲು ಮತ್ತು ನಗರಪಾಲಿಕೆ ವಿಸರ್ಜಿಸಲು ಆಗ್ರಹಿಸಿ ನಾವು ನೆನ್ನೆ (ನವೆಂಬರ್ ೮, ೨೦೧೧ ರಂದು) ಬೆಂಗಳೂರಲ್ಲಿ ನಡೆಸಿದ ಬೃಹತ್ ಪ್ರತಿಭಟನಾ ನಡಿಗೆಯ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:

ಕನ್ನಡಪ್ರಭ ವರದಿ:
ವಿಜಯಕರ್ನಾಟಕ ವರದಿ:

ಪ್ರಜಾವಾಣಿ ವರದಿ:

ಈಸಂಜೆ ವರದಿ:
ಸಂಜೆವಾಣಿ ವರದಿ:

ಬೆಳಗಾವಿ: ನಾಡದ್ರೋಹಿಗಳ ಬಂಧನ ಮತ್ತು ಪಾಲಿಕೆ ವಿಸರ್ಜನೆಗೆ ಆಗ್ರಹಿಸಿ ಬೃಹತ್ ಪ್ರತಿಭಟನಾ ನಡಿಗೆ

ರಾಜ್ಯೋತ್ಸವದ ದಿನ ಕರಾಳದಿನ ಆಚರಿಸಿ, ಕನ್ನಡಿಗರಿಗೆ ಅವಮಾನಿಸಿದ, ಮತ್ತು ಕರ್ನಾಟಕ ಸರ್ಕಾರಕ್ಕೇ ಸವಾಲು ಹಾಕಿರುವ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮಂದಾ ಬಾಳೇಕುಂದ್ರಿ, ಉಪಮೇಯರ್ ರೇಣುಕಿಲ್ಲೇಕರ ಹಾಗೂ ಎಂ.ಇ.ಎಸ್. ಮುಖಂಡ ಸಂಭಾಜಿ ಪಾಟೀಲ - ಈ ಎಲ್ಲಾ ನಾಡದ್ರೋಹಿಗಳನ್ನು ಕೂಡಲೆ ಬಂಧಿಸಿ, ಬೆಳಗಾವಿ ನಗರಪಾಲಿಕೆ ವಿಸರ್ಜಿಸುವಂತೆ ಆಗ್ರಹಿಸಿ ಇಂದು (ನವೆಂಬರ್ ೮, ೨೦೧೧ ರಂದು) ಬೆಂಗಳೂರಿನ ಬನ್ನಪ್ಪ ಪಾರ್ಕಿನಿಂದ ವಿಧಾನಸೌಧದವರೆಗೆ ಬೃಹತ್ ಪ್ರತಿಭಟನಾ ನಡಿಗೆ ಮಾಡಿದೆವು.

ಪ್ರತಿಭಟನೆಯಲ್ಲಿ ನಮ್ಮ ನೂರಾರು ಕಾರ್ಯಕರ್ತರು, ನಾಡಿನ ಸಾಹಿತಿಗಳು, ರೈತ, ದಲಿತ ಸಂಘಟನೆಗಳ ನಾಯಕರು, ಅನೇಕ ಕನ್ನಡಪರ ಚಿಂತಕರು, ಕನ್ನಡ ಚಲನಚಿತ್ರರಂಗದವರು, ಮುಂತಾದ ಗಣ್ಯರು ಪಾಲ್ಗೊಂಡಿದ್ದರು. ಇವರೆಲ್ಲರ ತಂಡದೊಂದಿಗೆ ನಮ್ಮ ಮನವಿಪತ್ರವನ್ನು ರಾಜ್ಯಸರ್ಕಾರಕ್ಕೆ ಸಲ್ಲಿಸಿ, ಸರ್ಕಾರ ಕೂಡಲೆ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆವು.

ಸರ್ಕಾರಕ್ಕೆ ನಾವು ಸಲ್ಲಿಸಿದ ಮನವಿ ಪತ್ರವನ್ನು ಕೆಳಗೆ ನೋಡಿ:


Monday, November 7, 2011

ಬೆಳಗಾವಿ: ನಾಡವಿರೋಧಿ ಮೇಯರ್, ಉಪಮೇಯರ್ ಅವರನ್ನು ಬಂಧಿಸಲು ಮತ್ತು ನಗರಪಾಲಿಕೆ ವಿಸರ್ಜಿಸಲು ಒತ್ತಾಯಿಸಿ ನಾಳೆ ಬೃಹತ್ ಜಾಥಾ

ನಾಡವಿರೋಧಿ ಎಂ.ಇ.ಎಸ್. ಪರವಹಿಸಿ, ಕನ್ನಡಿಗರು ಹಾಗೂ ಕರ್ನಾಟಕ ಸರ್ಕಾರಕ್ಕೆ ಸವಾಲಾಕಿರುವ ಬೆಳಗಾವಿ ಪಾಲಿಕೆಯ ಮೇಯರ್ ಮಂದಾ ಬಾಳೇಕುಂದ್ರಿ, ಉಪಮೇಯರ್ ರೇಣುಕಿಲ್ಲೇಕರ, ಹಾಗೂ ಸಂಭಾಜಿ ಪಾಟೀಲ್ ನಂತಹ ನಾಡದ್ರೋಹಿಗಳನ್ನು ಕೂಡಲೆ ಬಂಧಿಸಿ, ಬೆಳಗಾವಿ ಮಹಾನಗರ ಪಾಲಿಕೆ ವಿಸರ್ಜನೆ ಮಾಡಬೇಕೆಂದು ರಾಜ್ಯಸರ್ಕಾರವನ್ನು ಒತ್ತಾಯಿಸಿ, ನಾಳೆ (ನವೆಂಬರ್ ೮, ೨೦೧ ರಂದು) ಬೆಳಿಗ್ಗೆ ೧೧.೩೦ ಕ್ಕೆ ಬೆಂಗಳೂರಿನ ಬನ್ನಪ್ಪ ಪಾರ್ಕನಿಂದ ವಿಧಾನಸೌಧದವರೆಗೆ ಬೃಹತ್ ಜಾಥಾ ನಡೆಸುತ್ತಿದ್ದೇವೆ.

ಕನ್ನಡದ ಮನೆಗಳಿಗೆ ಬೆಂಕಿ ಬಿದ್ದಿರುವಂತ ಈ ಸಂದರ್ಭದಲ್ಲಿ, ಈ ಜಾಥಾದಲ್ಲಿ ತಾವೆಲ್ಲಾ ಭಾಗವಹಿಸಿ, ರಾಜ್ಯಸರ್ಕಾರದ ಮೇಲೆ ಒತ್ತಡ ಹೇರಿ, ನಾಡದ್ರೋಹಿಗಳಿಗೆ ತಕ್ಕ ಪಾಠ ಕಲಿಸಲು ಮುಂದಾಗಿ ಎಂದು ಈ ಮೂಲಕ ಎಲ್ಲ ಕನ್ನಡಿಗರಿಗೆ ಕರೆ ನೀಡುತಿದ್ದೇವೆ. ಪ್ರತಿಭಟನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಕೆಳಗಿನ ಚಿತ್ರದಲ್ಲಿ ನೋಡಿ:

Thursday, November 3, 2011

ಕರಾಳ ದಿನ ಆಚರಿಸಿದ ಎಂ.ಇ.ಎಸ್. ವರ್ತನೆ ಮತ್ತು ಬೆಳಗಾವಿ ಮೇಯರ್ ಮತ್ತು ಉಪಮೇಯರ್ ರವರ ನಾಡದ್ರೋಹಿ ಧೋರಣೆ ಖಂಡಿಸಿ ರಾಜ್ಯವ್ಯಾಪಿ ಪ್ರತಿಭಟನೆ

ನಿರಂತರವಾಗಿ ನಾಡವಿರೋಧಿ ಚಟುವಟಿಕೆಗಳನ್ನು ಮಾಡಿಕೊಂಡು ಬರುತ್ತಿರುವ ಎಂ.ಇ.ಎಸ್. ಅನ್ನು ನಿಗ್ರಹಿಸದೆ, ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಅವರೇ ರಾಜ್ಯೋತ್ಸವದಂದು ಕರಾಳ ದಿನಾಚಾರಣೆ ಆಚರಿಸಿ, ನಾಡ ವಿರೋಧಿ ನಿಲುವನ್ನು ತಳೆದಿರುವುದನ್ನು ಖಂಡಿಸಿ ರಾಜ್ಯಾದ್ಯಂತ ನವೆಂಬರ್ ೩, ೨೦೧೧ ರಂದು ಪ್ರತಿಭಟನೆ ನಡೆಸಿದೆವು.

ಪ್ರತಿಭಟನೆಯ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:

ಪ್ರಜಾವಾಣಿ ವರದಿ:

ಕನ್ನಡ ಪ್ರಭ ವರದಿ:



ವಿಜಯ ಕರ್ನಾಟಕ ವರದಿ:

ಉದಯವಾಣಿ ವರದಿ:

ಈ ಸಂಜೆ ವರದಿ:
ಸಂಜೆವಾಣಿ ವರದಿ:

Tuesday, November 1, 2011

ಸರ್ಕಾರಿ ಶಾಲೆ ಮುಚ್ಚುವ ನಿರ್ಧಾರವನ್ನು ಕೈಬಿಡಲು ಒತ್ತಾಯಿಸಿ ರಾಜ್ಯಾದ್ಯಂತ ಹೋರಾಟ

ಸರ್ಕಾರಿ ಶಾಲೆಗಳನ್ನು ಮುಚ್ಚುವ ನಿರ್ಧಾರ ವಿರೋಧಿಸಿ ನಾವು ಕಳೆದ ವಾರವಷ್ಟೇ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದೆವು. ಇದಲ್ಲದೆ, ನಾಡಿನ ವಿವಿಧೆಡೆಯಿಂದ ಹಲವು ಚಿಂತಕರೂ ಇದನ್ನು ವಿರೋಧಿಸಿದ್ದರು. ಹಾಗಿದ್ದೂ, ಸರ್ಕಾರ ತನ್ನ ನಿರ್ಧಾರ ಕೈಬಿಡುವ ಕಡೆ ಯಾವ ಕ್ರಮವನ್ನೂ ಕೈಗೊಳ್ಳದೆ, ರಾಜ್ಯೋತ್ಸವದ ದಿನದಂದು, ಅದಕ್ಕೇ "ಶಾಲೆಗಳ ವಿಲೀನ" ಎಂಬ ಹೊಸ ಬಣ್ಣ ಕೊಟ್ಟು ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದನ್ನು ಮುಂದುವರೆಸಿತು.

ರಾಜ್ಯ ಸರ್ಕಾರದ ಈ ಧೋರಣೆಯ ವಿರುದ್ಧ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ನಮ್ಮ ಜಿಲ್ಲಾ ಘಟಕಗಳಿಂದ ನವೆಂಬರ್ ೧ ರಂದು ಪ್ರತಿಭಟನೆ ನಡೆಸಿದೆವು. ಪ್ರತಿಭಟನೆಯ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:

ಕನ್ನಡ ಪ್ರಭ ವರದಿ:

ಉದಯವಾಣಿ ವರದಿ:

ಸಂಯುಕ್ತ ಕರ್ನಾಟಕ ವರದಿ:

ವಿಜಯ ಕರ್ನಾಟಕ ವರದಿ:

ಈ ಸಂಜೆ ವರದಿ: