Wednesday, May 30, 2007
Tuesday, May 29, 2007
ಕನ್ನಡ ದ್ರೋಹಿ ಕಿಣೇಕರಗೆ ಮಸಿ ಕಾದಿದೆ ..
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Tuesday, May 29, 2007
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಬೆಳಗಾವಿ / BeLagavi
ಜೂನ್ ೧೧, ಕೇಂದ್ರಿಯ ಸದನ ಮುತ್ತಿಗೆ.
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Tuesday, May 29, 2007
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಕಾವೇರಿ / Cauvery, ತಮಿಳುನಾಡು / Tamilunadu, ನದಿ / River
Wednesday, May 16, 2007
ಶಿವಾಜಿ ಚಿತ್ರ ಮಂಡಳಿಯ ನಿಯಮ ಗಾಳಿಗೆ ತೂರಿದೆ-Shivaji film violates KFI rules.
ರಜನಿಕಾಂತ ನಟಿಸಿರುವ "ಶಿವಾಜಿ" ಚಿತ್ರವು ಕರ್ನಾಟಕ ಚಲನಚಿತ್ರ ಮಂಡಳಿ ಮಾಡಿಕೊಂಡ ನಿಯಮಗಳನ್ನು ಗಾಳಿಗೆ ತೂರುತ್ತಿದೆ. ಇದಕ್ಕೆ ಕರ್ನಾಟಕ ಚಲನಚಿತ್ರ ಮಂಡಳಿಯಲ್ಲಿ ಆಡಳಿತ ನಡೆಸುತ್ತ ಇರುವರೇ ಶಾಮಿಲು ಆಗಿರುವುದು ಕನ್ನಡಿಗರ ದೌರ್ಭಾಗ್ಯ. ಕಾವೇರಿ ವಿವಾದ ಬಿಸಿಯಾಗಿ ಕರ್ನಾಟಕದ ರಾಜಧಾನಿಯಲ್ಲಿ ನೀರಿನ ಬರ ತಲೆದೊರಿದೆ. ಇಂತಹ ಸಮಯದಲ್ಲಿ
ಚಿತ್ರವನ್ನು ಬಿಡುಗಡೆ ಮಾಡುವುದು ಸರಿ ಅಲ್ಲ.
ಹೆಚ್ಚಿನ ಸುದ್ದಿಗೆ ...
thatskannada ಸುದ್ದಿ
rediff.com ಸುದ್ದಿ
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Wednesday, May 16, 2007
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಚಿತ್ರರಂಗ / Cinema
ಶಿವಾಜಿ ಚಿತ್ರ ಮಂಡಳಿಯ ನಿಯಮ ಗಾಳಿಗೆ ತೂರಿದೆ-Shivaji film violates KFI rules.
ರಜನಿಕಾಂತ ನಟಿಸಿರುವ "ಶಿವಾಜಿ" ಚಿತ್ರವು ಕರ್ನಾಟಕ ಚಲನಚಿತ್ರ ಮಂಡಳಿ ಮಾಡಿಕೊಂಡ ನಿಯಮಗಳನ್ನು ಗಾಳಿಗೆ ತೂರುತ್ತಿದೆ. ಇದಕ್ಕೆ ಕರ್ನಾಟಕ ಚಲನಚಿತ್ರ ಮಂಡಳಿಯಲ್ಲಿ ಆಡಳಿತ ನಡೆಸುತ್ತ ಇರುವರೇ ಶಾಮಿಲು ಆಗಿರುವುದು ಕನ್ನಡಿಗರ ದೌರ್ಭಾಗ್ಯ. ಕಾವೇರಿ ವಿವಾದ ಬಿಸಿಯಾಗಿ ಕರ್ನಾಟಕದ ರಾಜಧಾನಿಯಲ್ಲಿ ನೀರಿನ ಬರ ತಲೆದೊರಿದೆ. ಇಂತಹ ಸಮಯದಲ್ಲಿ
ಚಿತ್ರವನ್ನು ಬಿಡುಗಡೆ ಮಾಡುವುದು ಸರಿ ಅಲ್ಲ.
ಹೆಚ್ಚಿನ ಸುದ್ದಿಗೆ ...
thatskannada ಸುದ್ದಿ
rediff.com ಸುದ್ದಿ
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Wednesday, May 16, 2007
ಗುಂಪುಗಳು: ಚಿತ್ರರಂಗ / Cinema
Tuesday, May 15, 2007
ಶಿವಾಜಿ ಚಿತ್ರ ಬಿಡುಗಡೆಗ ಕ.ರ.ವೇ ವಿರೋಧ-KRV demands ban on SHIVAJI movie
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Tuesday, May 15, 2007
ಗುಂಪುಗಳು: ಚಿತ್ರರಂಗ / Cinema
Wednesday, May 9, 2007
ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಕೆ
ಕ.ರ.ವೇ ಮತ್ತು ರೈತ ಸಂಘ ಒಟ್ಟಿಗೆ ಸೇರಿ ರಚಿಸಿದ ಕಾವೇರಿ-ಕೃಷ್ಣ ಹೋರಾಟ ಸಮಿತಿಯ ಅಡಿಯಲ್ಲಿ ಭಾರತದ ಪ್ರಧಾನ ಮಂತ್ರಿಗಳನ್ನು ಬೇಟಿ ಮಾಡಿ, ಕಾವೇರಿ ಆದೇಶವನ್ನು ಗ್ಯಾಜೆಟನಲ್ಲಿ ಪ್ರಕಟಿಸಬಾರದು ಮತ್ತು ಮಾತುಕತೆಯ ಮೂಲಕವೇ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳಬೇಕು, ಇದಕ್ಕೆ ಪ್ರಧಾನ ಮಂತ್ರಿಗಳು ಮದ್ಯೆವಹಿಸಿಬೇಕು ಎಂದು ಮನವಿ ಸಲ್ಲಿಸಿದರು.
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Wednesday, May 09, 2007
ಗುಂಪುಗಳು: ಕಾವೇರಿ / Cauvery, ಕೇಂದ್ರ ಸರ್ಕಾರದ ತಾರತಮ್ಯ / Central Government Discrimination, ತಮಿಳುನಾಡು / Tamilunadu
Tuesday, May 8, 2007
ಕರವೇ ಮೇಲೆ ಮರಾಠಿಗರ ದೌರ್ಜನ್ಯ - ೮ನೇ ಮೇ ವಿ.ಕ ವರದಿ
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Tuesday, May 08, 2007
ಗುಂಪುಗಳು: ಬೆಳಗಾವಿ / BeLagavi
Saturday, May 5, 2007
ದೆಹಲಿಯಲಿ ಕನ್ನಡ ಕಲರವ - ಉದಯ ಟಿ.ವಿ
ಉದಯ ವಾರ್ತೆಯಲ್ಲಿ ಪ್ರಸಾರವಾದ ದೃಶ್ಯ ತುಣುಕು..
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Saturday, May 05, 2007
ಗುಂಪುಗಳು: ಕಾವೇರಿ / Cauvery, ತಮಿಳುನಾಡು / Tamilunadu, ನದಿ / River
Friday, May 4, 2007
ದೆಹಲಿಯಲ್ಲಿ ಮೊಳಗಿದ ರಣಕಹಳೆ
ದೆಹಲಿ ಮುತ್ತಿಗೆಯ ವೀರ ಘೋಷಣೆಯೊಂದಿಗೆ ನಾಡಿನ ಸಾವಿರಾರು ಕನ್ನಡಿಗರು ದೆಹಲಿಯ ಬೀದಿ ಬೀದಿಗಳಲ್ಲಿ ಇಂದು ನಡೆಸಿದ ಜಾಥ ಕನ್ನಡಿಗನ ಸಹನೆ ಮುಗಿದು ಹೋಗಿರುವುದನ್ನು ದೆಹಲಿಯ ದೊರೆಗಳಿಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಯಿತು. ಕೃಷ್ಣಾ-ಕಾವೇರಿ ಹೋರಾಟ ಸಮನ್ವಯ ಸಮಿತಿಯ ಅಡಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಮುಂದಾಳತ್ವದಲ್ಲಿ ನಡೆದ ಈ ಜಾಥ ದೆಹಲಿಯ ಬಿರ್ಲಾ ಮಂದಿರದಿಂದ ಆರಂಭವಾಗಿ ಜಂತರ್ ಮಂತರ್ ತಲುಪಿತು.
ಮರೆವಣಿಗೆ ಮೈಲಿಗಿಂತಲೂ ದೊಡ್ಡದಾಗಿತ್ತು. ನಂತರ ಆರಂಭವಾದ ಧರಣಿಯಲಿ ಹಲವಾರು ಸಂಘಟಣೆಗಳ ನಾಯಕರುಗಳು ಮಾತನಾಡಿದರು. ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಕ್ಷರಾದ ಶ್ರೀ ಟಿ.ಎ.ನಾರಾಯಣ ಗೌಡರು " ಪ್ರಧಾನಮಂತ್ರಿಗಳಾಗಲೀ ಅಥವಾ ಅವರ ಪ್ರತಿನಿಧಿಗಳಾಗಲೀ ಬಂದು ಕನ್ನಡಿಗರ ಅಹವಾಲನ್ನು ಆಲಿಸಬೇಕೆಂದು ಒತ್ತಾಯಿಸಿ ಕರೆ ಇತ್ತರು. ಇದಕ್ಕೆ ಸರಿಯಾದ ಸ್ಪಂದನೆ ದೊರಯದೇ ಹೋದಾಗ ಅಲ್ಲಿ ನೆರೆದಿದ್ದ ೨೦,೦೦೦ಕ್ಕೂ ಹೆಚ್ಚಿನ
ಕನ್ನಡಿಗರು ಸಂಸತ್ ಭವನಕ್ಕೆ ಮುತ್ತಿಗೆ ಹಾಕಲು ಮುಂದಾದರು. ಈ ಪ್ರಯತ್ನದಲ್ಲಿ ಅಷ್ಟೂ ಜನರನ್ನು ಬಂಧಿಸಲಾಯಿತು. ನರೆದಿದ್ದ ಕನ್ನಡಿಗರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಟಿ.ಎ.ನಾರಾಯಣ ಗೌಡರು
"ನಾವು ಇಲ್ಲಿಗೆ ಪ್ರಚಾರಕ್ಕೆ ಬಂದಿಲ್ಲ, ಇಲ್ಲಿ ಬಂದಿರುವವರೆಲ್ಲಾ ಕಾವೇರಿಗಾಗಿ ಪ್ರಾಣ ತ್ಯಾಗಕ್ಕೂ ಸಿದ್ಧವಾಗಿರುವ
ಹೋರಾಟಗಾರರು. ಜೈಲುವಾಸ, ಲಾಠೀ ಎಟು, ಬೂಟಿನೇಟು ಹೊಸದಲ್ಲ ಮತ್ತು ಅವಕ್ಕೆ ನಮ್ಮನ್ನು ಬಗ್ಗಿಸುವ , ಸದೆ ಬಡಿಯುವ ಶಕ್ತಿಯೂ ಇಲ್ಲ. ನಮ್ಮ ಹೋರಾಟ ಇವತ್ತು ಒಂದು ದಿನದ್ದು ಅಂತ ದೆಹಲಿಯ ಪೋಲಿಸರು ಭಾವಿಸಿರಬಹುದು. ಆದರೆ ನಾವು ನಮಗೆ ನ್ಯಾಯದ ಭರವಸೆ ಸಿಗುವ ತನಕ ಮರಳುವರಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡಿಗರ ಮೇಲೆ ಹೀಗೆ ಅನ್ಯಾಯವನ್ನು ನಿರಂತರವಾಗಿ ನಡೆಸುತ್ತಲೆ ಬಂದದ್ದಾದರೆ, ಈ ಒಕ್ಕೂಟ ವ್ಯವಸ್ಥೆಯ ಆಗತ್ಯ ಕನ್ನಡಿಗರಿಗಿಲ್ಲ.
ನಮ್ಮದೆಲ್ಲವನ್ನು ಬಲಿಕೋಡುತ್ತ ಈ ಒಕ್ಕೂಟ ನಮ್ಮ ಮೇಲೆ ಎಸುಗುವ ಎಲ್ಲಾ ಅನ್ಯಾಯಗಳನ್ನು, ಮಲತಾಯಿ ದೋರಣೆಗಳನ್ನು ಸಹಿಸುತ್ತ ನಮ್ಮ ಜನರ ಬದುಕನ್ನು ಬಲಿಕೊಟ್ಟಾದರೂ ಇದರೊಳಗೆ ಇರಬೇಕೆನ್ನುವ ಹಠ ನಮಗಿಲ್ಲ , ಈಗಲೂ ಈ ಅನ್ಯಾಯಗಳನ್ನು ಸರಿಪಡಿಸದಿದ್ದಲ್ಲಿ ಕರ್ನಾಟಕ ಈ ರಾಷ್ಟ್ರೀಯತೆಯ ಸುಳ್ಳು ಒಕ್ಕೂಟ ವ್ಯವಸ್ಥೆಯಿಂದ ಹೊರಬರಬೇಕಾದಿತು. ನಮ್ಮ ಶಾಂತಿಯುತ ಪ್ರತಿಭಟನೆಗಳಿಗೆ ಸೂಕ್ತವಾಗಿ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಅಂಚೆ,ರೈಲು,ಆದಾಯ ತೆರಿಗೆ ಸೇರಿಂದತೆ ಕೇಂದ್ರ ಸರಕಾರದ ಯಾವ ಕಚೇರಿಗಳೂ ಕೆಲಸ ಮಾಡದಂತೆ ಚಳುವಳಿ ನಡೆಸಲಾಗುವುದು, ಕೇಂದ್ರದ ವಿರುದ್ಧ ಕನ್ನಡಿಗರ ಕ್ರಾಂತಿಯ ಹೋರಾಟ ಆರಂಭವಾಗುವ ಮುನ್ನ ಸಂಬಂಧ ಪಟ್ಟವರು ಎಚ್ಚೆತ್ತುಕೊಂಡು
ನಮಗೆ ನ್ಯಾಯ ದೊರಕಿಸಿಕೊಡಬೇಕು" ಎಂದು ನುಡಿದರು.
ಸಭೆಯಲ್ಲಿ ಭಾಗವಹಿಸಿದ್ದ ಕನ್ನಡ ಚಿತ್ರರಂಗದ ಪ್ರಖ್ಯಾತ ಸಂಗೀತ ನಿರ್ದೇಶಕರಾದ ಶ್ರೀ ಹಂಸಲೇಖ ಅವರು ಚಲನ ಚಿತ್ರರಂಗದ ನಟ-ನಟಿಯರು
ಇನ್ನೂ ಹೋರಾಟಕ್ಕೆ ಧುಮಕದಿರುವುದನ್ನು ಪ್ರಸ್ತಾಪಿಸಿಸುತ್ತ ಇದುವರೆಗೂ ಈ ಅಯೊಗ್ಯರಿಗೆ ಹತ್ತಾರೂ ಕನ್ನಡ ನಾಡು ನುಡಿಗಳ ಗೀತೆಗಳನ್ನು ಬರೆದುಕೊಟ್ಟೆ, ಇನ್ನೂ ಮುಂದೆ
ಆ ತಪ್ಪು ಮಾಡುವದಿಲ್ಲ ಎಂದು ನುಡಿದರು.
ಅಖಿಲ ಭಾರತ ಕಿಸಾನ್ ಸಭಾದ ರಾಷ್ಟ್ರೀಯ ಅಧ್ಯಕ್ಷರು ಈ ಸಭೆಯಲ್ಲಿ ಪಾಲ್ಗೊಂಡು ಕನ್ನಡಿಗರ ಈ ಹೋರಾಟ ನ್ಯಾಯುಯುತವಾಗಿದ್ದು ಇದನ್ನು ದೇಶದ ಎಲ್ಲಾ ರೈತ ಬಾಂಧವರು
ಬೆಂಬಲಿಸುವದಾಗಿ ಘೋಷಿಸಿದರು. ಸಂಸದರಾದ ಶ್ರೀ ಶಿವಣ್ಣ, ಶಾಸಕರಾದ ರಘು ಮತ್ತು ರೈತ ಸಂಘ-ಹಸಿರು ಸೇನೆಯ ಕೊಡಿಹಳ್ಳಿ ಚಂದ್ರಶೇಖರ್ ಪಾಲ್ಗೋಂಡಿದ್ದರು.
ಪ್ರತಿಭಟನೆಗಳೂ ನಾಳೆಯೂ ಮುಂದುವರೆಯಲಿದ್ದು, ದೆಹಲಿಯಲ್ಲಿ ಬೀಡು ಬಿಟ್ಟಿರುವ ಹೋರಾಟಗಾರರು ಕೇಂದ್ರ ಸರಕಾರದ ಕಣ್ಣು-ಬಾಯಿ ತೆಗಿಸಿಯೇ ಬರಬೇಕೆಂದು ತೀರ್ಮಾನಿಸಿದ್ದಾರೆ
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Friday, May 04, 2007
ಗುಂಪುಗಳು: ಕಾವೇರಿ / Cauvery, ತಮಿಳುನಾಡು / Tamilunadu, ನದಿ / River
ಸಂಸತ್ ಮುತ್ತಿಗೆ ...ದಟ್ಸ ಕನ್ನಡ ವಾರ್ತೆ.
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Friday, May 04, 2007
ಗುಂಪುಗಳು: ಕಾವೇರಿ / Cauvery, ನದಿ / River
ದೆಹಲಿಯಲ್ಲಿ ಕಾವೇರಿದ ಕ ರ ವೇ ಹೋರಾಟ....
ದೆಹಲಿಯಲ್ಲಿ ಕ.ರ.ವೇ ಮತ್ತು ರೈತ ಸಂಘ ಜಂಟಿಯಾಗಿ ನಡೆಸಿದ ಕಾವೇರಿ ತೀರ್ಪಿನ ವಿರುದ್ದ ಬೃಹತ್ ಜಾಥದಲ್ಲಿ ಸುಮಾರು ೨೦ ಸಾವಿರಕ್ಕೂ ಹೆಚ್ಚು ಜನ ಕನ್ನಡ ಕಟ್ಟಾಳುಗಳು ಭಾಗವಹಿಸಿದ್ದರು. ರೈಲ್ವೇ ಅಧಿಕಾರಗಳ ಬೆದರಿಕೆಗೆ ಜಗ್ಗದೆ-ಬೆದರದೆ ದೆಹಲಿಗೆ ತಲುಪಿ ತಮ್ಮ ಅಭಿಮಾನವನ್ನು ತೋರಿಸಿದರು. ಇಷ್ಟು ಜನ ಸಾಗರವನ್ನು ಕಂಡ ದೆಹಲಿಯ ಜನ ಬಾಯಿಬೆರಗಾದರು.
ಇದು ಕನ್ನಡಗಿರ ಶಕ್ತಿ ಪ್ರದರ್ಶನ ... ಕೆಲ ಭಾವಚಿತ್ರಗಳನ್ನು ಇಲ್ಲಿ ಹಾಕಲಾಗಿದೆ. ಹೆಚ್ಚಿನ ಭಾವಚಿತ್ರಗಳು ಇಲ್ಲಿವೆ
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Friday, May 04, 2007
ಗುಂಪುಗಳು: ಕಾವೇರಿ / Cauvery, ತಮಿಳುನಾಡು / Tamilunadu, ನದಿ / River
Mega Delhi jaataha-ಬೆರಗಾದರು ದೆಲ್ಲಿ ಜನ ...
ಬಿಸಿಲಿನ ಬೇಗೆ ಲೆಕ್ಕಿಸದೆ
೨೦ ಸಾವಿರಕ್ಕೂ ಹೆಚ್ಚು ಜನ
ಇದರಲ್ಲಿ ಪಾಲ್ಗೊಂಡರು.
ಮಹಿಳೆಯರು,ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದದ್ದು ವಿಶೇಷ,
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Friday, May 04, 2007
ಗುಂಪುಗಳು: ಕಾವೇರಿ / Cauvery, ನದಿ / River
ದೆಹಲಿ ಈಗ ಕನ್ನಡ ಮಯ ..ಸುದ್ದಿ ಚಿತ್ರಗಳು
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Friday, May 04, 2007
ಗುಂಪುಗಳು: ಕಾವೇರಿ / Cauvery, ನದಿ / River
Thursday, May 3, 2007
ದೆಹಲಿಯಲ್ಲಿ ಕನ್ನಡ ಡಿಂಡಿಮ
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Thursday, May 03, 2007
ಗುಂಪುಗಳು: ಕಾವೇರಿ / Cauvery, ನದಿ / River