ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ನಿಲ್ಲಿಸುವಂತೆ ಅಧಿಕಾರಿಗಳಿಗೆ ಮನವಿ
ಕರ್ನಾಟಕ ಸರಕಾರದ ಬೆಂಗಳೂರು ಮೆಟ್ರೋ ಸಂಸ್ಥೆಯಲ್ಲಿ ಕರ್ನಾಟಕ ಸರಕಾರದ ಭಾಷಾ ನೀತಿಯನ್ನು ಉಲ್ಲಂಘಿಸಿ ಹಿಂದಿಯನ್ನು ಮೆರೆಸುತ್ತಿರುವುದರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಸತತವಾಗಿ ಪ್ರತಿಭಟಿಸುತ್ತ ಬಂದಿದೆ.
ಬೆಂಗಳೂರು ಮೆಟ್ರೋ ಸಂಸ್ಥೆಯ ಅನವಶ್ಯಕ ಹಿಂದಿ ಬಳಕೆಯನ್ನು ವಿರೋಧಿಸಿ ಹಾಗು ಕನ್ನಡಿಗರಿಗೆ ಉದ್ಯೋಗದಲ್ಲಿ ಸಿಂಹಪಾಲು ಸಿಗಬೇಕೆಂದು ಆಗ್ರಹಿಸಿ ಈಗ ಬೆಂಗಳೂರು ಮೆಟ್ರೋ ಕಚೇರಿಯ ಮುಂದೆ ನಾರಾಯಣಗೌಡರ ನಾಯಕತ್ವದಲ್ಲಿ ನೂರಾರು ಕಾರ್ಯಕರ್ತರು ಪ್ರತಿಭಟಿಸುತ್ತಿದ್ದಾರೆ.
ಹೋರಾಟದ ಸಂದರ್ಭದಲ್ಲಿ ಬೆಂಗಳೂರು ಮೆಟ್ರೋದ ಹಿರಿಯ ಅಧಿಕಾರಿಗಳಿಗೆ ನಾವು ನೀಡಿದ ಮನವಿ ಪತ್ರ.
