ಪ್ರಸ್ತುತ 2013 ನೇ ಸಾಲಿನ ಸಾರ್ವಜನಿಕ ಜೆನರಲ್
ಇನ್ಶೂರೆನ್ಸ್ ಕಂಪನಿಗಳ ಸಹಾಯಕರ ಸ್ಥಾನದ ಖಾಲಿ ಹುದ್ದೆ ನೇಮಕಾತಿಯಲ್ಲಿ ಕರ್ನಾಟಕದಲ್ಲಿನ
ಸುಮಾರು 181 ಖಾಲಿ ಹುದ್ದೆಗಳ ನೇಮಕಾತಿ
ಪ್ರಕ್ರಿಯೆಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗಿರುತ್ತದೆ. ನೇಮಕಾತಿಯ ವಿವರಗಳಲ್ಲಿ
ಅಭ್ಯರ್ಥಿಯು ತಾನು ನೇಮಕಾತಿಯಾಗಲು ಬಯಸುವ ಆಯಾ ರಾಜ್ಯದ ಸ್ಥಳೀಯ ಭಾಷೆ ಜ್ಞಾನವನ್ನು
ಕಡ್ಡಾಯವಾಗಿ ಹೊಂದಿರಬೇಕು ಎಂಬ ನಿಯಮವಿದ್ದರೂ, ಪ್ರಸ್ತುತ ಕರ್ನಾಟಕ ಭಾಗದ ನೇಮಕಾತಿಯ
ಲಿಖಿತ ಪರೀಕ್ಷೆಯಲ್ಲಿ ಆಯ್ಕಯಾಗಿರುವ ಅಭ್ಯರ್ಥಿಗಳಲ್ಲಿ ಹೊರರಾಜ್ಯದ ಮತ್ತು ಸ್ಥಳೀಯ
ಕನ್ನಡ ಭಾಷೆ ತಿಳಿಯದ ಹಲವು ಅಭ್ಯರ್ಥಿಗಳು ಆಯ್ಕೆಯಾಗಿರುವ ಗುಮಾನಿಯು ವ್ಯಕ್ತವಾಗಿದ್ದು,
ಈ ಬಗ್ಗೆ ನಮಗೆ ಕನ್ನಡಿಗ ಅಭ್ಯರ್ಥಿಗಳಿಂದ ಮಾಹಿತಿ ದೊರೆತಿರುತ್ತದೆ. ಈ ಅನ್ಯಾಯವನ್ನು
ಕರ್ನಾಟಕ ರಕ್ಷಣಾ ವೇದಿಕೆಯು ತೀವ್ರವಾಗಿ ವಿರೋಧಿಸುತ್ತದೆ.
ಅಷ್ಟೇ ಅಲ್ಲದೆ,
ಆಯ್ಕೆ ಪ್ರಕ್ರಿಯೆಯ ಅರ್ಜಿ ಸಲ್ಲಿಸುವಿಕೆ, ಲಿಖಿತ ಪರೀಕ್ಷೆ ಇತ್ಯಾದಿ ಗಳನ್ನು ಕೇವಲ
ಇಂಗ್ಲಿಷ್ ಮತ್ತಿ ಹಿಂದಿ ಭಾಷೆಯಲ್ಲಿ ನಡೆಸುತ್ತಿರುವುದರಿಂದ, ಹಿಂದಿ ಬಲ್ಲ
ಪರಭಾಷಿಕರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಿ, ಕನ್ನಡಿಗರಿಗೆ ಅನ್ಯಾಯವಾಗಿರುತ್ತದೆ.
ಇದನ್ನೂ ಕೂಡ ಕರ್ನಾಟಕ ರಕ್ಷಣಾ ವೇದಿಕೆಯು ವಿರೋಧಿಸುತ್ತದೆ. ಈ ಮೇಲಿನ ಅನ್ಯಾಯಗಳನ್ನು
ಖಂಡಿಸಿ ನಾವು ಇದರ ವಿರುದ್ಧ ಇಂದು (ಸೆಪ್ಟೆಂಬರ್ 17, 2013) ಪ್ರತಿಭಟನೆ ನಡೆಸಿದೆವು.
ಈ ಪ್ರತಿಭಟನೆಯ ಬಗ್ಗೆ ನಾವು ನೀಡಿರುವ ಪತ್ರಿಕಾ ಹೇಳಿಕೆಯನ್ನು ಕೆಳಗೆ ನೋಡಿ: