Friday, September 14, 2012

ಹಿಂದೀ ಪಕ್ಷಪಾತಿಯಾಗಿರುವ ಪ್ರಸಕ್ತ ಭಾರತದ ಭಾಷಾನೀತಿ ವಿರೋಧಿಸಿ ಹೋರಾಟ


ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ೧೪-೦೯-೨೦೧೨ ರಂದು ಟಿ.ಎ. ನಾರಾಯಣ ಗೌಡರ ನೇತೃತ್ವದಲ್ಲಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಿಂದೀ ಪಕ್ಷಪಾತಿಯಾಗಿರುವ ಪ್ರಸಕ್ತ ಭಾರತದ ಭಾಷಾನೀತಿ ವಿರೋಧಿಸಿ ಹೋರಾಟ ನಡೆಸಿದೆವು. ಕೇಂದ್ರಸರಕಾರದ ವ್ಯವಸ್ಥಿತ ಹಿಂದಿ ಹೇರಿಕೆಯನ್ನು ಪ್ರಬಲವಾಗಿ ವಿರೋಧಿಸಿದೆವು. 

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುಂಡಲೀಕ ಹಾಲಂಬಿ, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಡಾ|| ನಲ್ಲೂರ್ ಪ್ರಸಾದ್, ಹಿರಿಯ ಸಾಹಿತಿಗಳಾದ ಡಾ|| ಪಿ.ವಿ. ನಾರಾಯಣ, ಕನ್ನಡಪರ ಚಿಂತಕರಾದ ಕೆ. ರಾಜ್ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ನಗರದ ಅಧ್ಯಕ್ಷರಾದ ತಿಮ್ಮೇಶ್, ಅಖಿಲ ಕರ್ನಾಟಕ ಮಹಮದೀಯರ ಕನ್ನಡ ವೇದಿಕೆಯ ಅಧ್ಯಕ್ಷರಾದ ಸಮೀ ಉಲ್ಲಾ ಖಾನ್, ಕನ್ನಡ ಪರ ಹೋರಾಟಗಾರರಾದ ಪ್ರಕಾಶ್ ಮೂರ್ತಿ ಈ ಹೋರಾಟದಲ್ಲಿ ಭಾಗವಹಿಸಿದ್ದರು.

 ಪತ್ರಿಕಾ ವರದಿಗಳನ್ನು ಇಲ್ಲಿ ಓದಿರಿ -

ಸಂಜೆವಾಣಿ ವರದಿ


ಕನ್ನಡಪ್ರಭ ವರದಿ


ಉದಯವಾಣಿ ವರದಿ