Tuesday, June 28, 2011

ಕರವೇ ದಶಮಾನೋತ್ಸವ ಸಮಾರಂಭದ ಚಿತ್ರಗಳು

ಕರ್ನಾಟಕ ರಕ್ಷಣಾ ವೇದಿಕೆಯ ಹತ್ತು ವರ್ಷಗಳ ಪಯಣದ ಅನುಭವ, ಹೋರಾಟಗಳು, ಯಶಸ್ಸುಗಳು - ಈ ಎಲ್ಲವನ್ನೂ ಲಕ್ಷಾಂತರ ಕನ್ನಡಿಗರೊಡನೆ ಹಂಚಿಕೊಳ್ಳಲು, ೨೦೧೧ ರ ಜೂನ್ ೨೨ ಮತ್ತು೨೩ ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ದಶಮಾನೋತ್ಸವವನ್ನು ಆಚರಿಸಿತು. ಈ ಸಂದರ್ಭದಲ್ಲಿ ತೆಗೆದ ಕೆಲ ಚಿತ್ರಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇವೆ.

ಚಿತ್ರಮಾಲೆಯನ್ನು ನೋಡಲು ಈ ಕೆಳಗಿನ ಕೊಂಡಿ ಅಥವಾ ಚಿತ್ರವನ್ನು ಕ್ಲಿಕ್ಕಿಸಿ:


Thursday, June 23, 2011

ಕರವೇ ದಶಮಾನೋತ್ಸವದಲ್ಲಿ ತೆಗೆದುಕೊಂಡ ನಿರ್ಣಯಗಳು

ಕರವೇ ದಶಮಾನೋತ್ಸವದಲ್ಲಿ ಕೊನೆಯಲ್ಲಿ, ನೆರೆದಿದ್ದ ಸಾವಿರಾರು ಕನ್ನಡಿಗರು, ಮಾಧ್ಯಮ ಪ್ರತಿನಿಧಿಗಳು ಮತ್ತು ರಾಜಕೀಯ ಮುಖಂಡರ ಸಮ್ಮುಖದಲ್ಲಿ ಬಲು ಮುಖ್ಯವಾದ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಸಮಾವೇಶದಲ್ಲಿ ತೆಗೆದುಕೊಂಡ ನಿರ್ಣಯಗಳ ವಿವರಗಳು ಹೀಗಿವೆ:

ದಶಮಾನೋತ್ಸವ : ವಿಚಾರ ಗೋಷ್ಠಿ ಮತ್ತು ನಿರ್ಣಯಗಳೊಂದಿಗೆ ಮುಕ್ತಾಯ

ಕರ್ನಾಟಕಾ ರಕ್ಷಣಾ ವೇದಿಕೆಯ ದಶಮಾನೋತ್ಸವದ ಎರಡನೆಯ ಮತ್ತು ಕೊನೆಯ ದಿನವಾದ ಜೂನ್ 23 ರಂದು ರಾಷ್ಟ್ರೀಯ ವಿಚಾರಗೋಷ್ಠಿ ನಡೆಸಲಾಯಿತು. ಗೋಷ್ಠಿಯಲ್ಲಿ ಕರ್ನಾಟಕದ ನೆಲ-ಜಲ ಸಮಸ್ಯೆಗಳು, ರಾಜಕೀಯ ಸಮಸ್ಯೆಗಳು, ರೈತ ಮತ್ತು ದಲಿತ ಚಳುವಳಿಗಳು.. ಇತ್ಯಾದಿ ಗಂಭೀರ ವಿಚಾರಗಳ ಬಗ್ಗೆ ಹಲವು ವಿದ್ವಾಂಸರು ಮತ್ತು ರಾಜಕೀಯ ಧುರೀಣರು ಮಾತನಾಡಿದರು.

ಸಮಾವೇಶದ ಹೆಚ್ಚಿನ ವಿವರಗಳನ್ನೊಳಗೊಂಡ ವಿವಿಧ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:

ಕನ್ನಡಪ್ರಭ ವರದಿ -



ವಿಜಯಕರ್ನಾಟಕ ವರದಿ -

ಉದಯವಾಣಿ ವರದಿ -

ಪ್ರಜಾವಾಣಿ ವರದಿ -

Wednesday, June 22, 2011

ದಶಮಾನೋತ್ಸವ : ಜಾನಪದ ಸಂಭ್ರಮದೊಂದಿಗೆ ಅದ್ದೂರಿ ಆರಂಭ

ಕರ್ನಾಟಕ ರಕ್ಷಣಾ ವೇದಿಕೆಯ ದಶಮಾನೋತ್ಸವವು ಜೂನ್ 22 ರಂದು ಜಾನಪದ ಸಂಭ್ರಮದೊಂದಿಗೆ ಅದ್ದೂರಿಯಾಗಿ ಆರಂಭವಾಯಿತು. ಈ ಕುರಿತು ವಿವಿಧ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:

ಕನ್ನಡ ಪ್ರಭ ವರದಿ -


ಉದಯವಾಣಿ ವರದಿ -

ವಿಜಯ ಕರ್ನಾಟಕ ವರದಿ -

Tuesday, June 21, 2011

ಕರವೇ ದಶಮಾನೋತ್ಸವ ಕುರಿತು ಪತ್ರಿಕಾಗೋಷ್ಟಿ ವರದಿ

ದಶಮಾನೋತ್ಸವದ ಹಿನ್ನೆಲೆಯಲ್ಲಿ, ರಾಜ್ಯಾಧ್ಯಕ್ಷರಾದ ಶ್ರೀ ನಾರಾಯಣಗೌಡರು ಪತ್ರಿಕಾಗೋಷ್ಠಿ ನಡೆಸಿದರು. ಆ ಸಂದರ್ಭದಲ್ಲಿ ನೀಡಿದ ಸಂದರ್ಶನದ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:

ಕನ್ನಡ ಪ್ರಭ ವರದಿ -



ವಿಜಯಕರ್ನಾಟಕ ವರದಿ -


ಸಂಜೆವಾಣಿ ವರದಿ-

Wednesday, June 15, 2011

ಕರವೇ ದಶಮಾನೋತ್ಸವಕ್ಕೆ ಆತ್ಮೀಯ ಆಹ್ವಾನ

ಕರ್ನಾಟಕ ರಕ್ಷಣಾ ವೇದಿಕೆಯ ಹತ್ತು ವರ್ಷಗಳ ಪಯಣದ ಅನುಭವ, ಹೋರಾಟಗಳು, ಯಶಸ್ಸುಗಳು - ಈ ಎಲ್ಲವನ್ನೂ ದಶಮಾನೋತ್ಸವದ ಒಂದು ಸಂಭ್ರಮ ಜಾತ್ರೆಯಲ್ಲಿ ನಿಮ್ಮೊಡನೆ ಹಂಚಿಕೊಳ್ಳುವ ಸಮಯ ಇನ್ನೇನು ಹತ್ತಿರವಾಗಿದೆ.

ಜೂನ್ 22 ಮತ್ತು 23 ರಂದು ಬೆಂಗಳೂರಿನಲ್ಲಿ ನಡೆಯುವ ನಮ್ಮ ನಿಮ್ಮೆಲ್ಲರ ಈ ಉತ್ಸವದಲ್ಲಿ ಪಾಲ್ಗೊಂಡು, ಕರ್ನಾಟಕದ ಜಾನಪದ ಸೊಗಡನ್ನು ಸವಿಯುವ ಮೂಲಕ, ಕಾರ್ಯಕ್ರಮದ ಸಾರ್ಥಕತೆಗೆ ಕಾರಣರಾಗಿ ಎಂದು ಕೇಳಿಕೊಳ್ಳುತ್ತಾ, ಈ ಮೂಲಕ ಎಲ್ಲ ಕನ್ನಡಿಗರನ್ನು ಆತ್ಮೀಯವಾಗಿ ಆಹ್ವಾನಿಸುತ್ತಿದ್ದೇವೆ. ಬನ್ನಿ, ಜೊತೆಗೂಡಿ...

ಕಾರ್ಯಕ್ರಮದ ವಿವರವಾದ ಮಾಹಿತಿ ಕೆಳಗಿನ ಚಿತ್ರಗಳಲ್ಲಿದೆ: