Friday, November 20, 2009

ಗಣಿ ರೆಡ್ಡಿಗಳ ವಿರುದ್ಧ ಗುಡುಗಿದ ಟಿ.ಏ. ನಾರಾಯಣ ಗೌಡರು

ಸಂವಹನವು ನವಂಬರ್ ೧೨ರಂದು ನಡೆಸಿದ ವಿಚಾರ ಸಂಕೀರ್ಣದಲ್ಲಿ ಪಾಲ್ಗೊಂಡಿದ್ದ ನಮ್ಮ ಅಧ್ಯಕ್ಷರಾದ ಟಿ.ಏ. ನಾರಯಣ ಗೌಡರು ಗಣಿ ರೆಡ್ಡಿ ಸಹೋದರರನ್ನು ಮಣಿಸಲು ಕ.ರ.ವೇ. ಗೆ ಮಾತ್ರ ಸಾದ್ಯ ಎಂದು ಹೇಳಿದರು.

ಸಂವಹನ ನಡೆಸಿದ ವಿಚಾರ ಸಂಕೀರ್ಣದ ವರದಿಯನ್ನು ಇಲ್ಲಿ ನೋಡಿ.


Thursday, November 19, 2009

ರೈಲ್ವೇ - ಕ.ರ.ವೇ. ಹೋರಾಟಕ್ಕೆ ಸಿಕ್ಕ ಜಯ

ರೈಲ್ವೇ ಇಲಾಖೆಯ ಪರೀಕ್ಷೆಯನ್ನು ಇನ್ನು ಕನ್ನಡದಲ್ಲೆ ತೆಗೆದುಕೊಳ್ಳ ಬೊಹುದು ಎಂದು ಭಾರತ ಸರ್ಕಾರ ಹೇಳಿದೆ. ಕರ್ನಾಟಕ ರಕ್ಷಣಾ ವೇದಿಕೆ ೨ ವರುಷಗಳಿಂದ ಸತತವಾಗಿ ನಡೆಸಿಕೊಂದು ಬಂದ ಹೋರಾಟಕ್ಕೆ ಸಿಕ್ಕಿರುವ ಜಯ ಇದಾಗಿದೆ.

ಕನ್ನಡದಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳಬೊಹುದು ಎಂದು ಬಂದಿರುವ ವರದಿಯನ್ನು ಇಲ್ಲಿ ನೋಡಿ.




Tuesday, November 17, 2009

ಕರ್ನಾಟಕ ರಕ್ಷಣಾ ವೇದಿಕೆ ರಾಜಕೀಯ ಹೋರಾಟಕ್ಕೆ - ಅಧ್ಯಕ್ಷರ ಲೇಖನಿ

ಅಕ್ಕರೆಯ ಕನ್ನಡಿಗಾ,


ಕರ್ನಾಟಕ ರಕ್ಷಣಾ ವೇದಿಕೆಯು ಶುರುವಾಗಿ ಹತ್ತು ವರ್ಷಗಳಾದವು. ಈ ಹೋರಾಟದ ಹಾದಿಯಲ್ಲಿ ಎದುರಿಸಿದ ಸವಾಲುಗಳು ಅನೇಕ. ಸಾಧಿಸಿದ ಗೆಲುವುಗಳು ಅನೇಕ. ಈ ಸಂದರ್ಭದಲ್ಲಿ ರಾಜಕೀಯ ಹೋರಾಟಕ್ಕೆ ಧುಮುಕುವ ಸನ್ನಿವೇಶ ಸೃಷ್ಟಿಯಾಗಿರುವ ಬಗ್ಗೆ ಈ ಬಾರಿಯ ಅಧ್ಯಕ್ಷರ ಲೇಖನಿಯಲ್ಲಿ ಓದಿರಿ.


http://karnatakarakshanavedike.org/modes/view/25/adhyakshara-nudi.html

- ಕರ್ನಾಟಕ ರಕ್ಷಣಾ ವೇದಿಕೆ

Wednesday, November 4, 2009

ಕನ್ನಡ ಪ್ರಭದಲ್ಲಿ ಟಿ. ಏ. ನಾರಾಯಣ ಗೌಡರ ಸಂದರ್ಶನ

ಕನ್ನಡ ಪ್ರಭದೊಂದಿಗೆ ನಮ್ಮ ರಾಜ್ಯಾಧ್ಯಕ್ಷರಾದ ಟಿ.ಏ. ನಾರಾಯಣ ಗೌಡರು ಪ್ರಾದೇಶಿಕ ಪಕ್ಷದ ಚಿಂತನೆಯ ಬಗ್ಗೆ ಮಾತನಾಡಿದರು.

ಪ್ರಾದೇಶಿಕ ಪಕ್ಷದ ಚಿಂತನೆಯ ಬಗ್ಗೆ ಇಲ್ಲಿ ಓದಿ

Monday, November 2, 2009

ಬಲಿಷ್ಠ ಪ್ರಾದೇಶಿಕ ಪಕ್ಷ ಕಟ್ಟಲು ಚಿಂತನೆ - ಕ.ರ.ವೇ.

ನವೆಂಬರ್ ೧ ರಂದು ಗಾಂಧಿ ನಗರದಲ್ಲಿರುವ ಕನ್ನಡ ದ್ವಜಾರೋಹಣ ಮಾಡಿದ ನಂತರ ದ್ವಿಚಕ್ರ ವಾಹನ ಜಾಥಕ್ಕೆ ಚಾಲನೆ ನೀಡಿ, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಏ. ನಾರಾಯಣ ಗೌಡರು ಕರ್ನಾಟಕಕ್ಕೆ ಒಂದು ಪ್ರಾದೇಶಿಕ ಪಕ್ಷದ ಅಗತ್ಯವಿದೆ ಮತ್ತು ಮುಂದಿನ ದಿನಗಳಲ್ಲಿ ಅದನ್ನು ಕಟ್ಟಲು ಕ.ರ.ವೇ. ಮುಂದಾಗುವುದು ಎಂದು ಹೇಳಿದರು.

ಇದರ ವರದಿಗಳನ್ನು ಇಲ್ಲಿ ನೋಡಿ.