Sunday, July 27, 2014

ಬೆಳಗಾವಿಯಲ್ಲಿ ಎಂ.ಈ.ಎಸ್ ಮತ್ತು ಶಿವಸೇನೆಯು ನಡೆಸುತ್ತಿರುವ ಪುಂಡಾಟಿಕೆ ಖಂಡಿಸಿ ರಾಜ್ಯವ್ಯಾಪಿ ಪ್ರತಿಭಟನೆ

ಬೆಳಗಾವಿಯಲ್ಲಿ ಎಂ.ಈ.ಎಸ್ ಮತ್ತು ಶಿವಸೇನೆಯು ನಡೆಸುತ್ತಿರುವ ಪುಂಡಾಟಿಕೆಯನ್ನು ವಿರೋಧಿಸಿ ರಾಜ್ಯವ್ಯಾಪಿ ಪ್ರತಿಭಟನೆಯನ್ನು ನಡೆಸಿದೆವು. ವಿವಿಧ ಜಿಲ್ಲೆಗಳಲ್ಲಿ ನಡೆದ ಪ್ರತಿಭಟನೆಯ ಕೆಲ ಚಿತ್ರಗಳನ್ನು ಇಲ್ಲಿ ನೋಡಿ:

ಗದಗ ಜಿಲ್ಲೆ:
ಶಿವಸೇನೆ ಮತ್ತು ಎಂ.ಈ.ಎಸ್ ಪುಂಡಾಟಿಕೆಯನ್ನು ವಿರೋಧಿಸಿ ನಮ್ಮ ಗದಗ ಜಿಲ್ಲೆಯ ಕಾರ್ಯಕರ್ತರು ಜಿಲ್ಲಾಧ್ಯಕ್ಷರಾದ ಹನುಮಂತಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಕುಮಾರ್ ಬ್ಯಾಲಿ ಅವರ ನೇತೃತ್ವದಲ್ಲಿ ಗದಗಿನ ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟಿಸಿದರು. ಅದರ ಚಿತ್ರಗಳು ಇಲ್ಲಿವೆ:
ಗದಗ ಜಿಲ್ಲೆ, ಶಿರಹಟ್ಟಿ ತಾಲೂಕು:
ಶಿವಸೇನೆ ಮತ್ತು ಎಂ.ಈ.ಎಸ್ ಪುಂಡಾಟಿಕೆಯನ್ನು ವಿರೋಧಿಸಿ ನಮ್ಮ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಾರ್ಯಕರ್ತರು ತಾಲೂಕು ಅಧ್ಯಕ್ಷ ಶರಣು ಅವರ ನೇತೃತ್ವದಲ್ಲಿ ಪ್ರತಿಭಟಿಸಿದರು. ಅದರ ಚಿತ್ರಗಳು ಇಲ್ಲಿವೆ.ಮಂಡ್ಯ ಜಿಲ್ಲೆ: 
ಎಂ.ಈ.ಎಸ್ ಮತ್ತು ಶಿವಸೇನೆಯ ಪುಂಡಾಟಿಕೆಯನ್ನು ವಿರೋಧಿಸಿ ನಮ್ಮ ಮಂಡ್ಯ ಜಿಲ್ಲೆ ಕಾರ್ಯಕರ್ತರು ಜಿಲ್ಲಾಧ್ಯಕ್ಷ ಉಮಾಶಂಕರ್, ಮದ್ದೂರು ತಾಲೂಕು ಅಧ್ಯಕ್ಷ ಅಶೋಕ್ ಅವರ ನೇತೃತ್ವದಲ್ಲಿ ಶಿವಸೇನೆ ಮುಖ್ಯಸ್ತ ಉದ್ಧವ ಠಾಕ್ರೆ ಪ್ರತಿಕೃತಿ ದಹಿಸಿ ಪ್ರತಿಭಟಿಸಿದರು.


ಯಾದಗಿರಿ ಜಿಲ್ಲೆ: 
ಎಂ.ಈ.ಎಸ್ ಮತ್ತು ಶಿವಸೇನೆಯ ಪುಂಡಾಟಿಕೆಯನ್ನು ವಿರೋಧಿಸಿ ನಮ್ಮ ಕಾರ್ಯಕರ್ತರು ಜಿಲ್ಲಾಧ್ಯಕ್ಷರಾದ ಭೀಮೂ ನಾಯಕ್ ಅವರ ನೇತೃತ್ವದಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಶಿವಸೇನೆ ಮುಖ್ಯಸ್ತ ಉದ್ಧವ ಠಾಕ್ರೆ ಪ್ರತಿಕೃತಿ ದಹಿಸಿ ಪ್ರತಿಭಟಿಸಿದರು.
ಬಿಜಾಪುರ ಜಿಲ್ಲೆ:
ಎಂ.ಈ.ಎಸ್ ಮತ್ತು ಶಿವಸೇನೆಯ ಪುಂಡಾಟಿಕೆಯನ್ನು ವಿರೋಧಿಸಿ ನಮ್ಮ ಕಾರ್ಯಕರ್ತರು ಉತ್ತರ ಕರ್ನಾಟಕ ಅಧ್ಯಕ್ಷರಾದ ಸಂತೋಷ ಪಟೀಲ ಅವರ ನೇತೃತ್ವದಲ್ಲಿ ಬಿಜಾಪುರ ಜಿಲ್ಲೆಯ ಸಿಂಧಗಿ ತಾಲೂಕಿನಲ್ಲಿ ಪ್ರತಿಭಟಿಸಿದರು.