Wednesday, July 30, 2014
Monday, July 28, 2014
ಬೆಳಗಾವಿಯಲ್ಲಿನ ಎಂ.ಈ.ಎಸ್ ಪುಂಡಾಟಿಕೆಯ ವಿರುದ್ಧ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ವಿಧಾನಸೌಧ ಮುತ್ತಿಗೆ
ಬೆಳಗಾವಿಯಲ್ಲಿ
ಎಂ.ಈ.ಎಸ್ ಅವರ ಪುಂಡಾಟಿಕೆಯ ವಿರುದ್ಧ ಪ್ರತಿಭಟನೆ : ೨೮-೦೭-೨೦೧೪ ಸೋಮವಾರ ಬೆಳಿಗ್ಗೆ
೧೦:೩೦ ಕ್ಕೆ ಬೆಂಗಳೂರಿನ ಟೌನ್ ಹಾಲ್ ಬಳಿಯಿಂದ ಪ್ರತಿಭಟನಾ ಮೆರವಣಿಗೆಯನ್ನು
ನಡೆಸಿದೆವು.
ಕರ್ನಾಟಕ ಸರಕಾರ ಎಂ.ಈ.ಎಸ್ ಹಾಗು ಶಿವಸೇನೆಯ ಪುಂಡರ
ವಿರುದ್ಧ ಗಟ್ಟಿಯಾದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ಬೆಂಗಳೂರಿನ ಟೌನ್ ಹಾಲ್ ನಿಂದ ಹೊರಟ
ಪ್ರತಿಭಟನಾ ಮೆರವಣಿಗೆಯ ಕೆಲವು ಚಿತ್ರಗಳು ಇಲ್ಲಿವೆ:
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Monday, July 28, 2014
ಗುಂಪುಗಳು: ಎಂ.ಇ.ಎಸ್ / MES, ಗಡಿ / Border, ಬೆಳಗಾವಿ / BeLagavi, ಸ್ವಾಭಿಮಾನ / Self Respect
Sunday, July 27, 2014
ಬೆಳಗಾವಿಯಲ್ಲಿ ಎಂ.ಈ.ಎಸ್ ಮತ್ತು ಶಿವಸೇನೆಯು ನಡೆಸುತ್ತಿರುವ ಪುಂಡಾಟಿಕೆ ಖಂಡಿಸಿ ರಾಜ್ಯವ್ಯಾಪಿ ಪ್ರತಿಭಟನೆ
ಬೆಳಗಾವಿಯಲ್ಲಿ ಎಂ.ಈ.ಎಸ್ ಮತ್ತು ಶಿವಸೇನೆಯು ನಡೆಸುತ್ತಿರುವ ಪುಂಡಾಟಿಕೆಯನ್ನು ವಿರೋಧಿಸಿ ರಾಜ್ಯವ್ಯಾಪಿ ಪ್ರತಿಭಟನೆಯನ್ನು ನಡೆಸಿದೆವು. ವಿವಿಧ ಜಿಲ್ಲೆಗಳಲ್ಲಿ ನಡೆದ ಪ್ರತಿಭಟನೆಯ ಕೆಲ ಚಿತ್ರಗಳನ್ನು ಇಲ್ಲಿ ನೋಡಿ:
ಗದಗ ಜಿಲ್ಲೆ:
ಶಿವಸೇನೆ ಮತ್ತು ಎಂ.ಈ.ಎಸ್
ಪುಂಡಾಟಿಕೆಯನ್ನು ವಿರೋಧಿಸಿ ನಮ್ಮ ಗದಗ ಜಿಲ್ಲೆಯ ಕಾರ್ಯಕರ್ತರು ಜಿಲ್ಲಾಧ್ಯಕ್ಷರಾದ
ಹನುಮಂತಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಕುಮಾರ್ ಬ್ಯಾಲಿ ಅವರ ನೇತೃತ್ವದಲ್ಲಿ
ಗದಗಿನ ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟಿಸಿದರು. ಅದರ ಚಿತ್ರಗಳು ಇಲ್ಲಿವೆ:
ಗದಗ ಜಿಲ್ಲೆ, ಶಿರಹಟ್ಟಿ ತಾಲೂಕು:
ಶಿವಸೇನೆ ಮತ್ತು ಎಂ.ಈ.ಎಸ್ ಪುಂಡಾಟಿಕೆಯನ್ನು ವಿರೋಧಿಸಿ ನಮ್ಮ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಾರ್ಯಕರ್ತರು ತಾಲೂಕು ಅಧ್ಯಕ್ಷ ಶರಣು ಅವರ ನೇತೃತ್ವದಲ್ಲಿ ಪ್ರತಿಭಟಿಸಿದರು. ಅದರ ಚಿತ್ರಗಳು ಇಲ್ಲಿವೆ.
ಮಂಡ್ಯ ಜಿಲ್ಲೆ:
ಎಂ.ಈ.ಎಸ್ ಮತ್ತು ಶಿವಸೇನೆಯ ಪುಂಡಾಟಿಕೆಯನ್ನು ವಿರೋಧಿಸಿ ನಮ್ಮ ಮಂಡ್ಯ ಜಿಲ್ಲೆ ಕಾರ್ಯಕರ್ತರು ಜಿಲ್ಲಾಧ್ಯಕ್ಷ ಉಮಾಶಂಕರ್, ಮದ್ದೂರು ತಾಲೂಕು ಅಧ್ಯಕ್ಷ ಅಶೋಕ್ ಅವರ ನೇತೃತ್ವದಲ್ಲಿ ಶಿವಸೇನೆ ಮುಖ್ಯಸ್ತ ಉದ್ಧವ ಠಾಕ್ರೆ ಪ್ರತಿಕೃತಿ ದಹಿಸಿ ಪ್ರತಿಭಟಿಸಿದರು.
ಯಾದಗಿರಿ ಜಿಲ್ಲೆ:
ಎಂ.ಈ.ಎಸ್ ಮತ್ತು ಶಿವಸೇನೆಯ ಪುಂಡಾಟಿಕೆಯನ್ನು ವಿರೋಧಿಸಿ ನಮ್ಮ ಕಾರ್ಯಕರ್ತರು ಜಿಲ್ಲಾಧ್ಯಕ್ಷರಾದ ಭೀಮೂ ನಾಯಕ್ ಅವರ ನೇತೃತ್ವದಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಶಿವಸೇನೆ ಮುಖ್ಯಸ್ತ ಉದ್ಧವ ಠಾಕ್ರೆ ಪ್ರತಿಕೃತಿ ದಹಿಸಿ ಪ್ರತಿಭಟಿಸಿದರು.
ಬಿಜಾಪುರ ಜಿಲ್ಲೆ:
ಎಂ.ಈ.ಎಸ್ ಮತ್ತು ಶಿವಸೇನೆಯ ಪುಂಡಾಟಿಕೆಯನ್ನು ವಿರೋಧಿಸಿ ನಮ್ಮ ಕಾರ್ಯಕರ್ತರು ಉತ್ತರ ಕರ್ನಾಟಕ ಅಧ್ಯಕ್ಷರಾದ ಸಂತೋಷ ಪಟೀಲ ಅವರ ನೇತೃತ್ವದಲ್ಲಿ ಬಿಜಾಪುರ ಜಿಲ್ಲೆಯ ಸಿಂಧಗಿ ತಾಲೂಕಿನಲ್ಲಿ ಪ್ರತಿಭಟಿಸಿದರು.
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Sunday, July 27, 2014
ಗುಂಪುಗಳು: ಎಂ.ಇ.ಎಸ್ / MES, ಗಡಿ / Border, ಬೆಳಗಾವಿ / BeLagavi, ಸ್ವಾಭಿಮಾನ / Self Respect
Saturday, July 26, 2014
ಮಹಾರಾಷ್ಟ್ರದ ಕನ್ನಡಿಗರ ಮೇಲಿನ ದೌರ್ಜನ್ಯ ಮತ್ತು ಬೆಳಗಾವಿಯಲ್ಲಿ ಎಂ.ಇ.ಎಸ್. ನಡೆಸುತ್ತಿರುವ ಪುಂಡಾಟಿಕೆ ಖಂಡಿಸಿ ಪ್ರತಿಭಟನೆ
ಮಹಾರಾಷ್ಟ್ರದಲ್ಲಿ ಕರ್ನಾಟಕದವರ ಮೇಲೆ ಶಿವಸೇನೆ ನಡೆಸಿದ ದೌರ್ಜನ್ಯವನ್ನು ಖಂಡಿಸಿ ಬೆಂಗಳೂರಿನಲ್ಲಿ ಇಂದು ನಾವು ಪ್ರತಿಭಟನೆ ನಡೆಸಿದವು. ಪ್ರತಿಭಟನೆಯ ಕೆಲ ಚಿತ್ರಗಳನ್ನು ಇಲ್ಲಿ ನೋಡಿ:
ಹಾಗೆಯೇ, ಕರ್ನಾಟಕ ರಾಜ್ಯದಲ್ಲಿರುವ ಯಳ್ಳೂರು ಗ್ರಾಮದಲ್ಲಿದ್ದ ಮಹಾರಾಷ್ಟ್ರ ನಾಮಫಲಕವನ್ನ ಡಿಸೆಂಬರ್ ೨೦೧೨ ರಲ್ಲಿ ಕಿತ್ತೆಸೆದು ನಮ್ಮ ಬೆಳಗಾವಿ ಜಿಲ್ಲೆಯ ಕಾರ್ಯಕರ್ತರು ಪ್ರತಿಭಟಿಸಿದ್ದರು. ಇಂದು ಮತ್ತಿ ಅಲ್ಲಿ ಮಹಾರಾಷ್ಟ್ರ ರಾಜ್ಯ ಎಂಬ ನಾಮಫಲಕವನ್ನು ಹಾಕುವ ಮೂಲಕ ಎಂ.ಇ.ಎಸ್. ತನ್ನ ಪುಂಡಾಟಿಕೆಯನ್ನು ಮುಂದುವರೆಸಿದೆ. ಎಂ.ಇ.ಎಸ್. ಈ ನಾಡದ್ರೋಹಿ ಕೆಲಸವನ್ನು ವಿರೋಧಿಸಿ ನಾವು ನಡೆಸಿದ ಪ್ರತಿಭಟನೆಯ ಪತ್ರಿಕಾ ಹೇಳಿಕೆಯನ್ನು ಕೆಳಗೆ ನೋಡಿ:
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Saturday, July 26, 2014
ಗುಂಪುಗಳು: ಎಂ.ಇ.ಎಸ್ / MES, ಗಡಿ / Border, ಬೆಳಗಾವಿ / BeLagavi, ಸ್ವಾಭಿಮಾನ / Self Respect
Friday, July 25, 2014
ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯವ್ಯಾಪಿ ಸದಸ್ಯತ್ವ ಅಭಿಯಾನ
ಕರ್ನಾಟಕ ರಕ್ಷಣಾ ವೇದಿಕೆಯು ಸದಸ್ಯತ್ವ ಅಭಿಯಾನವನ್ನು
ರಾಜ್ಯವ್ಯಾಪಿ ನಡೆಸುತ್ತಿದೆ. ಸದಸ್ಯತ್ವ ಅಭಿಯಾನ ಭರದಿಂದ ಸಾಗಿದೆ. ರಾಜ್ಯದ ವಿವಿದೆಡೆ ನಡೆಯುತ್ತಿರುವ ಸದಸ್ಯತ್ವ ಅಭಿಯಾನದ ಕೆಲ ಚಿತ್ರಗಳು ಇಂತಿವೆ:
ಬೆಂಗಳೂರಿನ ಯಲಹಂಕ ವಿಧಾನ ಸಭಾ ಕ್ಷೇತ್ರದಲ್ಲಿ ನಡೆದ ಸದಸ್ಯತ್ವ ಅಭಿಯಾನ:
ಬೆಂಗಳೂರಿನ ಬ್ಯಾಟರಾಯನಪುರ ವಿಧಾನ ಸಭಾ ಕ್ಷೇತ್ರದಲ್ಲಿ ನಡೆದ ಸದಸ್ಯತ್ವ ಅಭಿಯಾನ:
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Friday, July 25, 2014
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಸಂಘಟನೆ / Organisation
Wednesday, July 23, 2014
ಕಡ್ಡಾಯ ಕನ್ನಡ ನಾಮಫಲಕ್ಕಾಗಿ ಆಗ್ರಹಿಸಿ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ
ಕನ್ನಡವನ್ನು ಕಡೆಗಾಣಿಸಿ ಅನ್ಯ ಭಾಷೆಯ ನಾಮಫಲಕಗಳನ್ನು
ಅಂಗಡಿ ಮುಂಗಟ್ಟುಗಳು ಹಾಕಿಕೊಂಡಿವೆ. ಆ ಅನ್ಯ ಭಾಷೆಯ ನಾಮಫಲಕಗಳನ್ನು ತೆರವುಗೊಳಿಸುವ
ನಿಟ್ಟಿನಲ್ಲಿ ಗದಗ ಜಿಲ್ಲೆ ಮತ್ತು ಗುಲ್ಬರ್ಗಾ ಜಿಲ್ಲೆಯ ಘಟಕದ ವತಿಯಿಂದ ಅನ್ಯ ಭಾಷೆಯ ನಾಮಫಲಕಗಳಿಗೆ ಮಸಿ ಬಳಿಯುವ ಮೂಲಕ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ಕೆಲ ಚಿತ್ರಗಳನ್ನು ಕೆಳಗೆ ನೋಡಿ:
ಗದಗ ಜಿಲ್ಲೆ:
ಜಿಲ್ಲಾಧ್ಯಕ್ಷರಾದ ಶಿವಕುಮಾರ ನಾಟೀಕರ್ ಅವರ ನೇತೃತ್ವದಲ್ಲಿ ನಮ್ಮ ಗದಗ ಜಿಲ್ಲೆಯ ಕಾರ್ಯಕರ್ತರು ಅನ್ಯ ಭಾಷೆಯ ನಾಮಫಲಕಗಳಿಗೆ ಮಸಿ ಬಳಿದು ಪ್ರತಿಭಟಿಸಿದರು.
ಗುಲ್ಬರ್ಗಾ ಜಿಲ್ಲೆ:
ಜಿಲ್ಲಾಧ್ಯಕ್ಷರಾದ ಹನುಮಂತಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಡಾ.ಜಯಕುಮಾರ್ ಅವರ ನೇತೃತ್ವದಲ್ಲಿ ನಮ್ಮ ಗುಲ್ಬರ್ಗಾ ಜಿಲ್ಲೆಯ ಕಾರ್ಯಕರ್ತರು ಪ್ರತಿಭಟಿಸಿದರು.
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Wednesday, July 23, 2014
ಗುಂಪುಗಳು: ನಾಮಫಲಕ / Hoardings, ಸ್ವಾಭಿಮಾನ / Self Respect