Saturday, January 15, 2011

ಭಾಷಾ ಅಲ್ಪಸಂಖ್ಯಾತರ ಓಟ್ ಬ್ಯಾಂಕ್ ರಾಜಕಾರಣಕ್ಕೆ ನಮ್ಮ ವಿರೋಧ.

ಭಾಷಾ ಅಲ್ಪಸಂಖ್ಯಾತರ ಓಟ್ ಬ್ಯಾಂಕ್ ಮೇಲೆ ಕಣ್ಣಿಟ್ಟಿರುವ ರಾಷ್ಟ್ರೀಯ ಪಕ್ಷಗಳ ರಾಜಕಾರಣಿಗಳು, ಭಾಷಾ ಅಲ್ಪಸಂಖ್ಯಾತರರ ಓಲೈಕೆಗೆ ಮುಂದಾಗಿದ್ದು, ಹಲವಾರು ರೀತಿಗಳಿಂದ ಪರಭಾಷಿಕರನ್ನು ಮುಖ್ಯವಾಹಿನಿಯಿಂದ ದೂರವಿಡಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಉದಾಹರಣೆಯೆಂಬಂತೆ ತಿರುವಳ್ಳವರ್ ಜಯಂತಿ ಆಚರಣೆಗೆ ಮುಂದಾಗಿದ್ದು , ಇದು ಕನ್ನಡ ಮತ್ತು ತಮಿಳು ಭಾಷೆಯ ಜನರ ನಡುವೆ ಕಂದಕವನ್ನು ಉಂಟುಮಾಡುವುದಲ್ಲದೆ. ತಮಿಳರನ್ನು ಕರ್ನಾಟಕದ ಮುಖ್ಯವಾಹಿನಿಯಿಂದ ದೂರವಿಡುವಂತೆ ಮಾಡುತ್ತದೆ. ಈ ರೀತಿಯ ಭಾಷಾ ಅಲ್ಪಸಂಖ್ಯಾತರ ಓಟ್ ಬ್ಯಾಂಕ್ ರಾಜಕಾರಣವನ್ನು ನಮ್ಮ ವೇದಿಕೆ ಖಂಡಿಸುತ್ತದೆ. ಇದರ ಪತ್ರಿಕಾ ಹೇಳಿಕೆಯನ್ನು ಇಲ್ಲಿ ನೋಡಿ-