Tuesday, February 9, 2010

ಬೆಳಗಾವಿ ಜಿಲ್ಲಾ ಪಂಚಾಯತಿ ಸಭೆಯಲ್ಲಿ ದಾಂಧಲೆ ಎಬ್ಬಿಸಿದ ಎಂಇಎಸ್ ಸದಸ್ಯರನ್ನು ಅನರ್ಹಗೊಳಿಸಿ - ಕ.ರ.ವೇ.

ಬೆಳಗಾವಿ ಜಿಲ್ಲಾ ಪಂಚಾಯತಿ ಸಭೆಯಲ್ಲಿ ಮರಾಠಿ ನುಡಿ ಬಳಸುವಂತೆ ಗದ್ದಲ ಎಬ್ಬಿಸಿರುವ ಎಂ.ಇ.ಎಸ್. ಸದಸ್ಯರ ಸದಸ್ಯತ್ವವನ್ನು ಅನೂರ್ಜಿತಗೊಳಿಸಬೇಕೆಂದು ನಮ್ಮ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣ ಗೌಡರು ಆಗ್ರಹಿಸಿದ್ದಾರೆ.

ಬೆಳಗಾವಿ ಜಿಲ್ಲಾ ಪಂಚಾಯತಿ ಸಭೆಯ ನಡವಳಿಯನ್ನು ಮರಾಠಿ ನುಡಿಯಲ್ಲಿ ನೀಡುವಂತೆ ನಡೆಸಿದ ದಾಂಧಲೆಯನ್ನು ಖಂಡಿಸಿರುವುದರ ವರದಿಯನ್ನು ಇಲ್ಲಿ ನೋಡಿ



Saturday, February 6, 2010

ಎಂ. ಇ. ಎಸ್ ಗೆ ಮುಖಭಂಗ : ಕರವೇ ಹೋರಾಟ ಯಶಸ್ವಿ

ಭಾಷೆಯ ನೆಪದಲ್ಲಿ ತನ್ನ ಪುಂಡಾಟಿಕೆಯನ್ನು ಮೆರೆಸುತ್ತಾ ಬಂದಿದ್ದ ಎಂ. ಇ. ಎಸ್ ಗೆ ತೀವ್ರ ಮುಖಭಂಗವಾಗಿದೆ. ತನ್ನ ರಾಜಕೀಯ ಬೇಳೆಕಾಳನ್ನು ಬೇಯಿಸಿಕೊಳ್ಳಲು ಬೆಳಗಾವಿಯಲ್ಲಿ ಆಗಾಗ ಸಮ್ಮೇಳನದ ನೆಪದಲ್ಲಿ ಜನರ ಮಧ್ಯ ಒಡಕು ಮೂಡಿಸಲು ಪ್ರಯತ್ನಿಸುತ್ತಿದ್ದ ಎಂ. ಇ. ಎಸ್ "ಮರಾಠಿ ಸೀಮಾ ಪರಿಷತ್" ನಡೆಸಲು ಹೋಗಿ ತೀವ್ರ ಮುಖಭಂಗ ಅನುಭವಿಸಿದೆ. ನಮ್ಮ ವೇದಿಕೆಯ ದಿಟ್ಟ ಹೋರಾಟದ ಫಲವಾಗಿ "ಮರಾಠಿ ಸೀಮಾ ಪರಿಷತ್" ನೆಪ ಮಾತ್ರಕ್ಕೆ ನಡೆಸಲಾಯಿತು.

"ಮರಾಠಿ ಸೀಮಾ ಪರಿಷತ್" ಗೆ ಅವಕಾಶ ನೀಡಿದ್ದನ್ನು ವಿರೋಧಿಸಿ ೦೫-೦೨-೨೦೧೦ ರಂದು ರಾಜ್ಯಾದ್ಯಂತ ನಮ್ಮ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.









Thursday, February 4, 2010

ಮರಾಠಿ ಸಮ್ಮೇಳನ ನಿರ್ಬಂಧಕ್ಕೆ ಆಗ್ರಹಿಸಿ ಕರವೇಯಿಂದ ಬೃಹತ್ ಪ್ರತಿಭಟನೆ

ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಳಗಾವಿಯಲ್ಲಿ ನಡೆಸಲು ಉದ್ದೇಶಿಸಿರುವ "ಮರಾಠಿ ಸೀಮಾ ಪರಿಷತ್" ಸಮ್ಮೇಳನಕ್ಕೆ ಅನುಮತಿ ನೀಡಬಾರದೆಂದು ನಮ್ಮ ವೇದಿಕೆ ೦೪-೦೨-೨೦೧೦ ರಂದು ಬೆಂಗಳೂರಿನ ಗಾಂಧಿ ಪ್ರತಿಮೆಯ ಬಳಿ ಪ್ರತಿಭಟನೆ ನಡೆಸಿ ಸರಕಾರವನ್ನು ಆಗ್ರಹಿಸಿದೆ. ಬೆಳಗಾವಿಯಲ್ಲಿ ಸಾಮರಸ್ಯದಿಂದ ಬದುಕುತ್ತಿರುವ ಜನರ ಮಧ್ಯೆ ಎಂ. ಇ. ಎಸ್ ಭಾಷೆಯ ಹೆಸರಿನಲ್ಲಿ ಸಾಮರಸ್ಯ ಕದಡಲು ಪ್ರಯತ್ನಿಸುತ್ತಿದೆ, ಇದಕ್ಕೆ ಸರಕಾರ ಅವಕಾಶ ಮಾಡಿಕೊಡಬಾರದೆಂದು ನಮ್ಮ ವೇದಿಕೆ ಇಂದು ಆಗ್ರಹಿಸಿತು.





Wednesday, February 3, 2010

"ಮರಾಠಿ ಸೀಮಾ ಪರಿಷತ್" ಗೆ ವಿರೋಧ : ಕರವೇ ಮುಂದಿನ ಹೋರಾಟ

ನಾಡದ್ರೋಹಿ ಎಂ. ಇ. ಎಸ್ ನವರು ಫೆಬ್ರವರಿ ೫ರಂದು ಬೆಳಗಾವಿಯಲ್ಲಿ ನಡೆಸುವ "ಮರಾಠಿ ಸೀಮಾ ಪರಿಷತ್" ಗೆ ರಾಜ್ಯ ಸರಕಾರ ಅನುಮತಿ ನೀಡದಂತೆ ಒತ್ತಾಯಿಸಿ, ರಾಜ್ಯಾದ್ಯಂತ ಇರುವ ನಮ್ಮ ಕಾರ್ಯಕರ್ತರಿಗೆ 04-02-2010 ರಂದು ರೈಲು ಮೂಲಕ ಬೆಳಗಾವಿಗೆ ಪ್ರಯಾಣಿಸುವಂತೆ ಕರೆ ನೀಡಲಾಗಿದೆ. ನೀವು ಬನ್ನಿ ಭಾಗವಹಿಸಿ, ಹೋರಾಟವನ್ನು ಯಶಸ್ವಿಗೊಳಿಸಿ.


Tuesday, February 2, 2010

ಮರಾಠಿ ಸೀಮಾ ಪರಿಷತ್ ಮೇಳಕ್ಕೆ ಕರವೇ ವಿರೋಧ

ಬೆಳಗಾವಿ ಮಹಾರಾಷ್ಟ್ರದಲ್ಲಿದೆ ಎಂದು ಉಪರಾಷ್ಟ್ರಪತಿಗಳ ಕಾರ್ಯಾಲಯದಿಂದ ರಾಜ್ಯದ ಬೆಳಗಾವಿ ಜಿಲ್ಲೆಯ ಕ್ರೀಡಾಧಿಕಾರಿಗಳ ಕಛೇರಿಗೆ ಬಂದಿರುವ ಪತ್ರಕ್ಕೆ ಉತ್ತರಿಸದೆ ಮೌನವಹಿಸಿರುವ ರಾಜ್ಯ ಸರಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ರಾಜ್ಯಾದ್ಯಂತ ನಮ್ಮ ವೇದಿಕೆ ಇಂದು ಪ್ರತಿಭಟನೆ ನಡೆಸಿತು. ಇದರ ಜೊತೆಗೆ ಕನ್ನಡ ನಾಡಿನ ಏಕತೆಗೆ ಮಾರಕವಾಗಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯು ನಡೆಸಲು ಉದ್ದೇಶಿಸಿರುವ ಮರಾಠಿ ಸೀಮಾ ಪರಿಷತ್ ಮೇಳಕ್ಕೆ ಅವಕಾಶ ನೀಡಬಾರದೆಂದು ಆಗ್ರಹಿಸಿ ಇಂದು ಬೆಂಗಳೂರಿನಲ್ಲಿ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಇದರ ಪತ್ರಿಕಾ ವರದಿಯನ್ನು ನೋಡಿ.