Tuesday, April 1, 2008

ಹೊಗೇನಕಲ್ ನೆಲವನ್ನು ಅತಿಕ್ರಮಿಸಿರುವ ತಮಿಳುನಾಡಿನ ವಿರುದ್ಧ ಕ.ರ.ವೇ. ತೆಗೆದುಕೊಂಡ ನಿರ್ಣಾಯಗಳು

೧. ಕರ್ನಾಟಕದ ನೆಲವನ್ನು ಅತಿಕ್ರಮಿಸಿರುವ ತಮಿಳುನಾಡು ಸರ್ಕಾರದ ವಿರುದ್ಧ ರಾಜ್ಯಪಾಲರು ಹಾಗು ರಾಜ್ಯದ ಅಡ್ವಕೇಟ್ ಜನರಲ್ ರವರು ಸುಪ್ರೀಂ ಕೋರ್ಟ್ ಹಾಗು ಕೇಂದ್ರಕ್ಕೆ ತಕ್ಷಣ ವರದಿ ಸಲ್ಲಿಸಿ ತಮಿಳುನಾಡು ಯೋಜನೆಗೆ ಅನುಮತಿ ನೀಡದಂತೆ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕು.

೨. ಕೇಂದ್ರದ ಯು.ಪಿ.ಏ. ಸರ್ಕಾರದ ಪಾಲುದಾರ ಪಕ್ಷವಾದ ಡಿ.ಎಂ.ಕೆ. ಅವರು ರಾಜ್ಯದ ನೆಲವನ್ನು ಕಬಳಿಸುಲು ವ್ಯವಸ್ತಿತ ಸಂಚನ್ನು ರೂಪಿಸುತ್ತಿದ್ದರೂ, ಮೌನವಾಗಿರುವ ರಾಜ್ಯದ ಸಚಿವರುಗಳು ಹಾಗು ಕೆಲವು ಸಂಸದರು ಬಾಯಿ ಬಿಟ್ಟು ಮಾತನಾಡುವಂತೆ ಒತ್ತಡ ತರುವುದು ಹಾಗು ರಾಜ್ಯದ ಹಿತಾಸಕ್ತಿ ಕಾಪಾಡಲು ವಿಫಲರಾಗಿರುವ ಸಚಿವರು ಹಾಗು ಸಂಸದರ ವಿರುದ್ಧ ಹೋರಾಟ ನಡೆಸುವುದು.

೩. ತಮಿಳುನಾಡು ಸರ್ಕಾರದ ಹೊಗೇನಕಲ್ ಯೋಜನೆಯನ್ನು ಕೈಬಿಡುವವರೆಗು ರಾಜ್ಯದಲ್ಲಿ ತಮಿಳು ಚಲನಚಿತ್ರ ಪ್ರದರ್ಶನ ಹಾಗು ತಮಿಳು ಕೇಬಲ್ ಚ್ಯಾನಲ್ ಗಳನ್ನು ನಿಷೇದಿಸುವುದು.

೪. ಕಾವೇರಿ ಕಣಿವೆ ಪ್ರದೇಶಗಳಾದ ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ತಮಿಳುನಾಡಿನ ವಿರುದ್ಧ ರೈತರೊಡಗೂಡಿ ನಿರಂತರ ಹೋರಾಟ ನಡೆಸುವುದು.

೫. ತಮಿಳುನಾಡಿನ ವಿರುದ್ಧದ ಹೋರಾಟವನ್ನು ಉತ್ತರ ಕರ್ನಾಟಕ ಜಿಲ್ಲೆಗಳಿಗೂ ವಿಸ್ತರಿಸುವುದರ ಜೊತೆಗೆ ಕರ್ನಾಟಕ ಬಂದ್ ನಡೆಸುವುದರ ಮೂಲಕ ಕೇಂದ್ರ ಸರ್ಕಾರಕ್ಕೆ ಕರ್ನಾಟಕದ ವಿರೋಧವನ್ನು ತೋರಿಸುವುದು.

೬. ಹೊಗೇನಕಲ್ ಹೋರಾಟಕ್ಕೆ ನಾಡಿನ ಚಿತ್ರರಂಗದ ಗಣ್ಯರು, ಸಾಹಿತಿಗಳು, ಮಠಾಧೀಶರು, ರೈತ ಸಂಘಟನೆ ಹಾಗು ದಲಿತ ಸಂಘಟನೆಯನ್ನು ಕೂಡಿಸಿಕೊಂಡು ಜನಾಂದೋಲನ ರೂಪಿಸುವುದು.

೭. ರಾಜ್ಯದ ಎಲ್ಲ ರಾಜಕೀಯ ಪಕ್ಷಗಳು ತಮಿಳುನಾಡು ಸರ್ಕಾರದ ವಿರುದ್ಧ ಹೋರಾಟ ನಡೆಸಿ ಕೇಂದ್ರದ ಮೇಲೆ ಒತ್ತಡ ತಂದು ಯೋಜನೆಗೆ ಅನುಮತಿ ದೊರೆಯದಂತೆ ನೋಡಿಕೊಳ್ಳುವುದು.

೮. ಚಾಮರಾಜ ನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ ಕನ್ನಡಿಗರ ಬೃಹತ್ ಜಾಥ ಹಾಗು ಬಹಿರಂಗ ಸಭೆಯನ್ನು ನಡೆಸಿ ತಮಿಳುನಾಡು ಸರ್ಕಾರಕ್ಕೆ ಸೂಕ್ತ ಎಚ್ಚರಿಕೆ ನೀಡುವುದು.