Sunday, October 24, 2010
Thursday, October 21, 2010
ಕಳಸಾ ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ
ಕಳಸಾ ಬಂಡೂರ ಯೋಜನೆಯು ಜಾರಿಗೆ ಬಂದಲ್ಲಿ ಹುಬ್ಬಳ್ಳಿ ಧಾರವಾಡ, ಗದಗ ಮತ್ತು ಇನ್ನು ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕೊನೆಗಾಣುವುದು, ಇದಕ್ಕಾಗಿ ಈ ಯೋಜನೆಯು ಜಾರಿಗೆ ಬರಬೇಕೆಂದು ಹಲವಾರು ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದ್ದೇವೆ.
ಇದೇ ನಿಟ್ಟಿನಲ್ಲಿ 21-10-2010 ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ, ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ಒತ್ತಾಯಿಸಿದೆವು.
ಪ್ರತಿಭಟನೆಯ ಪತ್ರಿಕಾ ವರದಿಗಳು-
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Thursday, October 21, 2010
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಮಹದಾಯಿ / Mahadaayi
Sunday, October 3, 2010
ಟ್ವಿಟ್ಟರ್ ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ
ಕನ್ನಡದ ಬಂಧುಗಳೇ,
ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟಗಳಿಗೆ ನಿರಂತರ ಬೆಂಬಲ ನೀಡುತ್ತಾ ಬಂದಿರುವ ನೀವುಗಳು ಈಗ ಅಂತರ್ಜಾಲದಲ್ಲಿ ನಮ್ಮ ಸಂಪರ್ಕದಲ್ಲಿರುವುದು ತುಂಬಾ ಸಂತೋಷದ ವಿಷಯ. ಇದರ ಜೊತೆಗೆ ಕರ್ನಾಟಕ ರಕ್ಷಣಾ ವೇದಿಕೆ "ಟ್ವಿಟ್ಟರ್"ನಲ್ಲೂ ಸಹ ತನ್ನ ಖಾತೆಯನ್ನ ಹೊಂದಿದೆ, ಇಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟದ ಚುಟುಕು ಸುದ್ದಿಗಳು, ನಾಡಿನ ಪ್ರಮುಖ ವಿಷಯಗಳ ಬಗ್ಗೆ ನಮ್ಮ ನಿಲುವು ಹಾಗೂ ನಿಮ್ಮ ಧ್ವನಿಯನ್ನು ನಮಗೆ ಮುಟ್ಟಿಸಲು ಇರುವ ಒಂದು ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ. ನಮ್ಮನ್ನು ಟ್ವಿಟ್ಟರ್ ನಲ್ಲಿ ಹಿಂಬಾಲಿಸಲು ಈ ಕೊಂಡಿಗೆ ಭೇಟಿ ನೀಡಿ..
http://twitter.com/karave_krv
ಪೋಸ್ಟ್ ಬರೆದವರು: ಕರ್ನಾಟಕ ರಕ್ಷಣಾ ವೇದಿಕೆ , ಸಮಯ: Sunday, October 03, 2010
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಸಂಘಟನೆ / Organisation