Tuesday, September 23, 2008

ಪೋಲೀಸರನ್ನ ತಳಿಸಿದವರ ವಿರುದ್ಧ ಆಕ್ರೋಶ


ಪೋಲೀಸರನ್ನ ತಳಿಸಿದ ಬಿಹಾರ ಮತ್ತು ಪಶ್ಚಿಮ ಬಂಗಾಳದ ಕಾರ್ಮಿಕರ ವಿರುದ್ಧ ಕರವೇ ಕಾರ್ಯಾಚರಣೆ ನಡೆಸಿತು.

Monday, September 22, 2008

ಪೊಲೀಸರ ಮೇಲೆ ಹಲ್ಲೆ ನಡೆಸಿದ ಬಿಹಾರಿಗಳು ಮತ್ತು ಪ.ಬಂಗಾಳದವರ ವಿರುದ್ಧ ಪ್ರತಿಭಟನೆ..

ಕಳೆದ ವಾರ ಬೆಂಗಳೂರಿನಲ್ಲಿ ಪುಂಡಾಟಿಕೆ ಮಾಡುತ್ತಿದ್ದ ಬಿಹಾರಿ ಮತ್ತು ಪಶ್ಚಿಮ ಬಂಗಾಳದವರನ್ನು ಪೋಲೀಸರು ಪ್ರಶ್ನಿಸಿದಾಗ ಪೋಲೀಸರ ಮೇಲೆ ಹಲ್ಲೆ ನಡೆಸಿದ್ದರು. ಇದರ ವಿರುದ್ಧ ಕರವೇ ಪ್ರತಿಭಟನೆ ನಡೆಸಿತು.

Friday, September 12, 2008

ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನೆ

ಕನ್ನಡಿಗರ ಮೇಲೆ ಕೇಂದ್ರ ಸರ್ಕಾರ ಹಿಂದಿ ಹೇರಿಕೆಯನ್ನು ವಿರೋಧಿಸಿ ಬೆಂಗಳೂರು,ಮೈಸೂರು, ಕೊಪ್ಪಳ, ಗದಗ.ಬೆಳಗಾವಿ,ಚಿತ್ರದುರ್ಗ ಮತ್ತು ರಾಜ್ಯಾದ್ಯಂತ ಇನ್ನಿತರ ಕಡೆಗಳಲ್ಲಿ ಪ್ರತಿಭಟನೆ ನಡೆಸಿದೆವು:
ಹೋರಾಟದ ಪತ್ರಿಕಾ ವರದಿಗಳು ಇಲ್ಲಿವೆ:

Tuesday, September 9, 2008

ಹಿಂದಿ ಹೇರಿಕೆಗೆ ನಮ್ಮ ಧಿಕ್ಕಾರ

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನವನ್ನು ಕೊಡದೆ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿರುವ ಕೇಂದ್ರ ಸರ್ಕಾರ, ನಮ್ಮ ಹಣದಲ್ಲಿ ,ಕನ್ನಡ ಮಕ್ಕಳ ಮೇಲೆ ಹಿಂದಿ ಭಾಷೆಯನ್ನು ಹೇರುತ್ತಿದೆ.
 ಸೆಪ್ಟಂಬರ್ ತಿಂಗಳಲ್ಲಿ ಹಿಂದಿ ಸಪ್ತಾಹದ ಮೂಲಕ ರಾಜ್ಯದ ಎಲ್ಲಾ ಕೇಂದ್ರ ಸರ್ಕಾರದ ಕಛೇರಿಗಳಲ್ಲಿ ಹಿಂದಿ ಬಳಸಬೇಕೆಂದು ಒತ್ತಾಯ ಮಾಡುತ್ತಿದೆ. ಈ ನಿಟ್ಟಿನಲ್ಲಿ ನಾವು ರಾಜ್ಯಾದ್ಯಂತ ಪ್ರತಿಭಟನೆಗಳ ಮೂಲಕ ಕನ್ನಡಿಗರಲ್ಲಿ ಜಾಗೃತಿ ಮೂಡಿಸಲಿದ್ದೇವೆ.

ಹೆಚ್ಚಿನ ಮಾಹಿತಿಗೆ ಕೆಳಗೆ ಇರುವ ಕಡತವನ್ನು ನೋಡಿ

ಕನ್ನಡದಲ್ಲೇ ನಾಮಫಲಕ

ಎಲ್ಲಾ ಅಂಗಡಿ , ಕೇಂದ್ರ ಮತ್ತು ರಾಜ್ಯ ಸರಕಾರದ ಎಲ್ಲ ಕಛೇರಿಗಳಲ್ಲಿನ ನಾಮಫಲಕಗಳು ಕನ್ನಡದಲ್ಲೇ ಇರಬೇಕು.