Sunday, June 22, 2014

ಬಿಬಿಎಂಪಿ ವಿಭಜನೆಗೆ ವಿರೋಧ ವ್ಯಕ್ತಪಡಿಸಿ ಮಹಾಪೌರರ ಜೊತೆ ಚರ್ಚೆ

ಕನ್ನಡೇತರ ವಲಸಿಗರಿಗೆ ಅನುಕೂಲ ಆಗುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜಿಸುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ವಿರೋಧಿಸುತ್ತದೆ.
ಮಹಾಪೌರರಿಗೆ ಸಲ್ಲಿಸುತ್ತಿರುವ ಪತ್ರ ಮತ್ತು ಅದರ ಚಿತ್ರಗಳು ಇಲ್ಲಿವೆ. ಜೊತೆಗೆ ಈ ವಿಷಯದ ಬಗ್ಗೆ ನಮ್ಮ ವಿರೋಧದ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 








































ವಿಜಯವಾಣಿ ವರದಿ.

 ಪ್ರಜಾವಾಣಿ ವರದಿ.

ಉದಯವಾಣಿ ವರದಿ.

 ಸಂಜೆವಾಣಿ ವರದಿ.

































ಡಿಎನ್ಎ ಪತ್ರಿಕೆ ವರದಿ.



























Thursday, June 5, 2014

ಟಿ.ಎ. ನಾರಾಯಣಗೌಡರ ೪೮ನೇ ಜನ್ಮದಿನದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ

ಜೂನ್ ೧೦ ರಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡರ ೪೮ನೆ ಜನ್ಮದಿನದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರವನ್ನು ಬೆಂಗಳೂರಿನಲ್ಲಿ ಏರ್ಪಡಿಸಲಾಗಿದೆ. ಈ ಸಾಮಾಜಿಕ ಕಳಕಳಿಯ ಕಾರ್ಯದಲ್ಲಿ ಎಲ್ಲ ಕನ್ನಡಿಗರೂ ಪಾಲ್ಗೊಳ್ಳಲು ನಮ್ಮ ಸವಿನಯ ಕರೆಯೋಲೆ ಮತ್ತು ಕಾರ್ಯಕ್ರಮದ ಹೆಚ್ಚಿನ ವಿವರ ಕೆಳಗಿನಂತಿದೆ:

ಸಮಯ : ಬೆಳಿಗ್ಗೆ ೧೧ಕ್ಕೆ
ಸ್ಥಳ : ಕಂಠೀರವ ಒಳಾಂಗಣ ಕ್ರೀಡಾಂಗಣ, ಬೆಂಗಳೂರು

ಹೆಚ್ಚಿನ ವಿವರಗಳು ಮತ್ತು ಆಮಂತ್ರಣ ಪತ್ರವನ್ನು ಕೆಳಗೆ ನೋಡಿ


 


ಕರ್ನಾಟಕದ ಸಂಸದರು ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಕ್ಕೆ ಕರವೇಯ ಅಭಿನಂದನೆ

ರಾಜ್ಯದಿಂದ ಲೋಕಸಭೆಗೆ ಆಯ್ಕೆಯಾಗಿರುವ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಕರ್ನಾಟಕದ ಸಂಸದರು ಲೋಕಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಅಭಿನಂದಿಸಿದೆವು. ಈ ಕುರಿತ ನಮ್ಮ ಪತ್ರಿಕಾಹೇಳಿಕೆ ಮತ್ತು ಪತ್ರಿಕಾ ವರದಿಯನ್ನು ಕೆಳಗೆ ನೋಡಿ:

 
 
ಕನ್ನಡಪ್ರಭ ವರದಿ:
 
 
ಉದಯವಾಣಿ ವರದಿ:
 

Wednesday, April 2, 2014

ಕರ್ನಾಟಕದಲ್ಲಿರುವ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡದ ಕಡ್ಡಾಯ ಬಳಕೆಗೆ ಆಗ್ರಹ

ಕರ್ನಾಟಕದಲ್ಲಿರುವ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡದ ಕಡ್ಡಾಯ ಬಳಕೆಯ ವಿಚಾರದಲ್ಲಿ ಕರ್ನಾಟಕ ಸರಕಾರ ದಿಟ್ಟ ಹೆಜ್ಜೆಯನ್ನಿಡುವಂತೆ ಒತ್ತಾಯಿಸುವ ಕರವೇ ಪತ್ರಿಕಾ ಪ್ರಕಟಣೆ.




ಬೆಂಗಳೂರಿನ ನಮ್ಮ ಮೆಟ್ರೋ ದಲ್ಲಿ ಹಿಂದಿ ಹೇರಿಕೆ ನಿಲ್ಲಿಸಲು ಆಗ್ರಹ ಪತ್ರ

ಬೆಂಗಳೂರು ಮೆಟ್ರೋ ನಡೆಸುತ್ತಿರುವ ಹಿಂದಿ ಹೇರಿಕೆಯನ್ನು ವಿರೋಧಿಸಿ ಹಾಗು ಬೆಂಗಳೂರು ಮೆಟ್ರೋನಲ್ಲಿರುವ ಉದ್ಯೋಗಗಳನ್ನ ಕನ್ನಡಿಗರಿಗೇ ನೀಡಬೇಕೆಂದು ಆಗ್ರಹಿಸಿ ನಾರಾಯಣಗೌಡರ ನೇತೃತ್ವದಲ್ಲಿ ಕರವೇಯ ಒಂದು ನಿಯೋಗ ಇಂದು ಬೆಂಗಳೂರು ಮೆಟ್ರೋದ ವ್ಯವಸ್ಥಾಪಕ ನಿರ್ದೇಶಕರನ್ನ ಭೇಟಿ ಮಾಡಿತು. ಅತಿ ತುರ್ತಾಗಿ ರಾಜ್ಯ ಸರಕಾರದ ಜೊತೆ ಇದರ ಬಗ್ಗೆ ಮಾತುಕತೆ ನಡೆಸಿ ಕನ್ನಡ ಪರವಾದ ನಿರ್ಧಾರ ತೆಗೆದುಕೊಳ್ಳುವೆವು ಎಂಬ ಆಶ್ವಾಸನೆಯನ್ನ ಬೆಂಗಳೂರು ಮೆಟ್ರೋದ ಆಡಳಿತ ಮಂಡಳಿ ನೀಡಿದೆ. ಕೆಲವು ದಿನಗಳ ಸಮಯ ಅವರಿಗೆ ನೀಡಿದ್ದು ಬೆಂಗಳೂರು ಮೆಟ್ರೋನವರು ಕನ್ನಡ - ಕನ್ನಡಿಗ ಪರವಾದ ಕ್ರಮಗಳನ್ನ ಕೈಗೊಳ್ಳದಿದ್ದರೆ ಮುಂದೆ ಉಗ್ರವಾದ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಬೆಂಗಳೂರು ಮೆಟ್ರೋದ ಆಡಳಿತ ಮಂಡಳಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ.