Friday, July 25, 2014
Wednesday, July 11, 2012
ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳಿಗೆ ನಾಯಕತ್ವ ತರಬೇತಿ ಕಾರ್ಯಾಗಾರ
ಪೋಸ್ಟ್ ಬರೆದವರು:
ಕರ್ನಾಟಕ ರಕ್ಷಣಾ ವೇದಿಕೆ
, ಸಮಯ:
Wednesday, July 11, 2012
ಗುಂಪುಗಳು: ಕರವೇ ಕಾರ್ಯಕ್ರಮಗಳು / KRV Programmes, ತರಬೇತಿ / Training, ಸಂಘಟನೆ / Organisation
Monday, December 20, 2010
ಫೇಸ್ ಬುಕ್ ನಲ್ಲಿ ಕರವೇ ಅಧ್ಯಕ್ಷರು
ಕಳೆದ ೧೦ ವರ್ಷಗಳಿಂದ ಟಿ.ಎ. ನಾರಾಯಣಗೌಡರ ನಾಯಕತ್ವದಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಅನ್ಯಾಯವಾದ ಸಮಯದಲ್ಲೆಲ್ಲಾ ಹೋರಾಟ ನಡೆಸುತ್ತಾ ಬಂದಿದ್ದೇವೆ. ಕರವೇ ಇಂದು ಕರ್ನಾಟಕದ ಒಂದು ಶಕ್ತಿಯಾಗಿ ಬೆಳೆಯಲು ನಾರಾಯಣಗೌಡರ ನಾಯಕತ್ವ ಪ್ರಮುಖ ಪಾತ್ರವನ್ನು ವಹಿಸಿದೆ.
ಅಂತರ್ಜಾಲದಲ್ಲಿರುವ ಕನ್ನಡಿಗರನ್ನು ತಲುಪಲು ನಾರಾಯಣಗೌಡರು ಫೇಸ್ ಬುಕ್ ನಲ್ಲಿ ತಮ್ಮ ಖಾತೆಯನ್ನು ತೆರೆದಿದ್ದು, ಇದು ನಾಡಿನ ಪ್ರಮುಖ ವಿಷಯಗಳ ಬಗ್ಗೆ ತಮ್ಮ ನಿಲುವುಗಳನ್ನು ನಿಮ್ಮೆಲ್ಲರೊಡನೆ ಹಂಚಿಕೊಳ್ಳಲು ಸಹಾಯಕವಾಗಲಿದೆ.
ಟಿ.ಎ.ನಾರಾಯಣಗೌಡರ ಫೇಸ್ ಬುಕ್ ಖಾತೆ-http://www.facebook.com/profile.php?id=100001680460191
ಪೋಸ್ಟ್ ಬರೆದವರು:
ಕರ್ನಾಟಕ ರಕ್ಷಣಾ ವೇದಿಕೆ
, ಸಮಯ:
Monday, December 20, 2010
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಸಂಘಟನೆ / Organisation
Sunday, October 3, 2010
ಟ್ವಿಟ್ಟರ್ ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ
ಕನ್ನಡದ ಬಂಧುಗಳೇ,
ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟಗಳಿಗೆ ನಿರಂತರ ಬೆಂಬಲ ನೀಡುತ್ತಾ ಬಂದಿರುವ ನೀವುಗಳು ಈಗ ಅಂತರ್ಜಾಲದಲ್ಲಿ ನಮ್ಮ ಸಂಪರ್ಕದಲ್ಲಿರುವುದು ತುಂಬಾ ಸಂತೋಷದ ವಿಷಯ. ಇದರ ಜೊತೆಗೆ ಕರ್ನಾಟಕ ರಕ್ಷಣಾ ವೇದಿಕೆ "ಟ್ವಿಟ್ಟರ್"ನಲ್ಲೂ ಸಹ ತನ್ನ ಖಾತೆಯನ್ನ ಹೊಂದಿದೆ, ಇಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟದ ಚುಟುಕು ಸುದ್ದಿಗಳು, ನಾಡಿನ ಪ್ರಮುಖ ವಿಷಯಗಳ ಬಗ್ಗೆ ನಮ್ಮ ನಿಲುವು ಹಾಗೂ ನಿಮ್ಮ ಧ್ವನಿಯನ್ನು ನಮಗೆ ಮುಟ್ಟಿಸಲು ಇರುವ ಒಂದು ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ. ನಮ್ಮನ್ನು ಟ್ವಿಟ್ಟರ್ ನಲ್ಲಿ ಹಿಂಬಾಲಿಸಲು ಈ ಕೊಂಡಿಗೆ ಭೇಟಿ ನೀಡಿ..
http://twitter.com/karave_krv
ಪೋಸ್ಟ್ ಬರೆದವರು:
ಕರ್ನಾಟಕ ರಕ್ಷಣಾ ವೇದಿಕೆ
, ಸಮಯ:
Sunday, October 03, 2010
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಸಂಘಟನೆ / Organisation
Monday, July 5, 2010
ಕರ್ನಾಟಕ ರಕ್ಷಣಾ ವೇದಿಕೆ - ಒಂದು ಪರಿಚಯ
ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು ಎನ್ನುವ ಘೋಷವಾಕ್ಯದೊಂದಿಗೆ ೧೯೯೯ರಲ್ಲಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ರಕ್ಷಣಾ ವೇದಿಕೆ ಇಂದು ನಾಡಿನ ಅತಿದೊಡ್ಡ ಬಲಿಷ್ಟ ಕನ್ನಡಪರ ಸಂಘಟನೆಯಾಗಿ, ಹೆಮ್ಮರವಾಗಿ ಬೆಳೆದು ನಿಂತಿದೆ. ರಾಜ್ಯಾಧ್ಯಕ್ಷರಾದ ಶ್ರೀ ಟಿ.ಎ.ನಾರಾಯಣಗೌಡರ ದಕ್ಷ ನಾಯಕತ್ವದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕನ್ನಡ ತಾಯಿಯ ಮಕ್ಕಳನ್ನು ಹಳದಿ ಕೆಂಪು ಬಾವುಟದ ಅಡಿಯಲ್ಲಿ ಸಂಘಟಿಸಲಾಗುತ್ತದೆ. ಇದೀಗ ರಾಜ್ಯಾದ್ಯಂತ ಸಾವಿರಾರು ಶಾಖೆಗಳನ್ನು ಹೊಂದಿರುವ ಕರ್ನಾಟಕ ರಕ್ಷಣಾ ವೇದಿಕೆಯ ನೋಂದಾಯಿತ ಸದಸ್ಯರ ಸಂಖ್ಯೆಯೇ ಐವತ್ತು ಲಕ್ಷಕ್ಕೂ ಹೆಚ್ಚು. ದಿನೇದಿನೇ ಸಂಘಟನೆಯು ನಾಡಿನ ಎಲ್ಲಾ ಜನತೆಯ ಪ್ರೀತಿ, ಅಭಿಮಾನ, ನಂಬಿಕೆಗಳನ್ನು ಹೆಚ್ಚು ಹೆಚ್ಚು ಗಳಿಸುತ್ತಿದ್ದು ಕನ್ನಡಿಗರೆದೆಯಲ್ಲಿ ’ ಸಮೃಧ್ಧವಾದ ನಾಳೆಗಳು ಕನ್ನಡಿಗರದ್ದಾಗಲಿವೆ ’ ಎನ್ನುವ ಭರವಸೆಗೆ ಕಾರಣವಾಗಿದೆ. ಕನ್ನಡ ಪರವಾದ ಹೋರಾಟಗಳನ್ನು ರಾಜಿ ರಹಿತವಾಗಿ, ರಾಜಕೀಯ ರಹಿತವಾಗಿ ನಡೆಸಿಕೊಂಡು ಬಂದಿರುವ ಕರ್ನಾಟಕ ರಕ್ಷಣಾ ವೇದಿಕೆಯ ನಿರ್ಭೀಡ ನಿಲುವು ಮತ್ತು ಪ್ರಾಮಾಣಿಕವಾದ ನಡೆಗಳಿಂದಾಗಿ ನಾಡಿನ ಮೂಲೆಮೂಲೆಗಳ ಕನ್ನಡಿಗರಿಂದ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ಈ ಬ್ಲಾಗಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮಾಡಿಕೊಂಡು ಬಂದಿರುವ ಹೋರಾಟಗಳ ಪತ್ರಿಕಾ ವರದಿಗಳು, ಸುದ್ದಿವಾಹಿನಿಗಳಲ್ಲಿ ಪ್ರಸಾರವಾದ ಚಿತ್ರದ ತುಣುಕುಗಳು ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಶ್ರೀ ಟಿ.ಎ.ನಾರಾಯಣ ಗೌಡರು ನಾಡನ್ನು ಉದ್ದೇಶಿಸಿ ಮಾತನಾಡಿರುವ ಚಿತ್ರದ ತುಣುಕುಗಳು ನೋಡಬಹುದು.
ಪೋಸ್ಟ್ ಬರೆದವರು:
ಕರ್ನಾಟಕ ರಕ್ಷಣಾ ವೇದಿಕೆ
, ಸಮಯ:
Monday, July 05, 2010
ಗುಂಪುಗಳು: ಸಂಘಟನೆ / Organisation
Monday, May 3, 2010
ಕರವೇ ನಲ್ನುಡಿ ಬಿಡುಗಡೆ
ಕರ್ನಾಟಕ ರಕ್ಷಣಾ ವೇದಿಕೆಯ ಮುಖವಾಣಿ ಕರವೇ ನಲ್ನುಡಿಯ ಬಿಡುಗಡೆಯನ್ನು ೪-೫-೨೦೧೦ ರಂದು ಚೌಡಯ್ಯ ಸ್ಮಾರಕ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಪೋಸ್ಟ್ ಬರೆದವರು:
ಕರ್ನಾಟಕ ರಕ್ಷಣಾ ವೇದಿಕೆ
, ಸಮಯ:
Monday, May 03, 2010
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಸಂಘಟನೆ / Organisation
Thursday, September 10, 2009
ಈಗ ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ಕ.ರ.ವೇ.
ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು ಎನ್ನುವ ಘೋಷವಾಕ್ಯದೊಂದಿಗೆ ೧೯೯೯ರಲ್ಲಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ರಕ್ಷಣಾ ವೇದಿಕೆ ಇಂದು ನಾಡಿನ ಅತಿದೊಡ್ಡ ಬಲಿಷ್ಠ ಕನ್ನಡಪರ ಸಂಘಟನೆಯಾಗಿ, ಹೆಮ್ಮರವಾಗಿ ಬೆಳೆದು ನಿಂತಿದೆ. ಇಂದಿನ ಸಂಪರ್ಕ ಯುಗದಲ್ಲಿ ಅಂತರ್ಜಾಲದಲ್ಲಿ ಕನ್ನಡಿಗರಿಗೆ ನಮ್ಮ ಹೋರಾಟಗಳು ಮತ್ತು ಕಾರ್ಯಕ್ರಮಗಳ ಬಗ್ಗೆ, ನಮ್ಮ ಬ್ಲಾಗ್ ಮತ್ತು ಅಂತರ್ಜಾಲ ತಾಣದಲ್ಲಿ ಮಾಹಿತಿಯನ್ನು ಕೊಡುತ್ತಾ ಬಂದಿದ್ದೇವೆ. ಇದರ ಜೊತೆಗೆ ಬಹು ಬಳಕೆಯಲ್ಲಿರುವ ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ಕರವೇ ತನ್ನ ಖಾತೆಯನ್ನು ಆರಂಭಿಸಿದೆ ಎಂದು ತಿಳಿಸಲು ಸಂತೋಷ ಪಡುತ್ತೇವೆ. ಅಲ್ಲಿಯೂ ಕೂಡ ನೀವು ನಮ್ಮೊಡನೆ ಸಂಪರ್ಕದಲ್ಲಿ ಇರಬೇಕೆಂದು ಕೋರುತ್ತೇವೆ.
ಟ್ವಿಟ್ಟರ್ ನಲ್ಲಿ ನಮ್ಮನ್ನು ಹಿಂಬಾಲಿಸಲು
http://twitter.com/karave_krv
ಫೇಸ್ ಬುಕ್ ಕರವೇ ಅಧಿಕೃತ ಗುಂಪು
http://www.facebook.com/search/?q=karnataka+rakshana+vedike&init=quick#/group.php?gid=162471231000&ref=search&sid=1086522947.2865514005..1
ಪೋಸ್ಟ್ ಬರೆದವರು:
ಕರ್ನಾಟಕ ರಕ್ಷಣಾ ವೇದಿಕೆ
, ಸಮಯ:
Thursday, September 10, 2009
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಸಂಘಟನೆ / Organisation
Thursday, April 2, 2009
ನಾಡೊಡೆಯುವ ಮತಬ್ಯಾಂಕ್ ರಾಜಕೀಯಕ್ಕೆ ನಮ್ಮ ವಿರೋಧ
ಲೋಕಸಭಾ ಚುನಾವಣೆಗಳು ಹತ್ತಿರವಾಗುತ್ತಿರುವಂತೆಯೇ ನಾಡಿನಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರವಾಗುತ್ತಿವೆ. ಇಂತಹ ಸಮಯದಲ್ಲಿ ಜನರ ಮನಸ್ಸನ್ನು ಗೆಲ್ಲುವ ಅನೇಕಾನೇಕ ತಂತ್ರಗಳನ್ನು ರಾಜಕೀಯ ಪಕ್ಷಗಳು ತೋರುವುದು ಸಹಜ. ಆದರೆ ಜನರನ್ನು ಸೆಳೆಯುವ ಈ ತಂತ್ರಗಾರಿಕೆಯಲ್ಲಿ ನಾಡುನುಡಿಯ ಹಿತವನ್ನೇ ಕಡೆಗಣಿಸುವ ರೀತಿಯಲ್ಲಿ ನಡೆದುಕೊಳ್ಳುವ ರಾಜಕೀಯ ಪಕ್ಷಗಳು, ತಾವು ತಲುಪಿರುವ ನೈತಿಕ ಅಧೋಗತಿಗೆ ಸಾಕ್ಷಿಯಾಗುತ್ತಿವೆ. ಕರ್ನಾಟಕದಲ್ಲಿ ಆಡಳಿತಾರೂಢ ಪಕ್ಷವಾದ ಭಾರತೀಯ ಜನತಾಪಕ್ಷ ಇಂತಹ ಹಲವಾರು ಕಾರ್ಯಕ್ರಮಗಳ ಮೂಲಕ ತನ್ನ ಬಣ್ಣ ಬಯಲುಮಾಡಿಕೊಂಡಿದೆ. ಈ ಬೆಳವಣಿಗೆಗಳು ನಾಡಿನ ಹಿತದೃಷ್ಟಿಯಿಂದ ಮಾರಕವಾದುದಾಗಿದ್ದು ಇದನ್ನು ರಾಜಕೀಯ ಪಕ್ಷಗಳು ಮನಗಾಣದಿರುವುದು ವಿಷಾದನೀಯವಾಗಿದೆ.
ಬೆಳಗಾವಿ ಮತ್ತು ಮರಾಠಿ : ಬೆಳಗಾವಿಯ ನಗರಪಾಲಿಕೆಯ ಹೊಸ ಕಟ್ಟಡದ ಮೇಲೆ - ಮರಾಠಿಗರ ಗುರುತೆಂದು ಎಂ.ಇ.ಎಸ್ ಬಳಸುತ್ತಿರುವ - ಕೇಸರಿ ಧ್ವಜವನ್ನು ಹಾರಿಸಲು ಅಲ್ಲಿನ ಸಂಸದರಾದ ಸುರೇಶ್ ಅಂಗಡಿಯವರು ಶಾಸಕ ಸಂಜಯ್ ಪಾಟೀಲರ ಜೊತೆಗೂಡಿ ಮುಂದಾದ ಘಟನೆ ಇತ್ತೀಚಿಗೆ ನಡೆದಿತ್ತು. ಆ ದಿನ ಅಂಗಡಿಯವರು ಮರಾಠಿ ಭಾಷಿಕ ಮತದಾರರನ್ನು ಮೆಚ್ಚಿಸುವ ಭ್ರಮೆಯಲ್ಲಿ ತಾವೂ ಮರಾಠಿಯಲ್ಲಿ ಭಾಷಣ ಮಾಡಿದ್ದರು. ಆ ಮೆರವಣಿಗೆಯಲ್ಲಿ ಕೆಲಪುಂಡರು ಕನ್ನಡದ ವಿರುದ್ಧ ಘೋಷಣೆ ಮಾಡುತ್ತಿದ್ದರೂ ಸಂಸದರು ಮೌನವಾಗಿದ್ದರು. ಇದು ಮರಾಠಿ ಪ್ರತ್ಯೇಕತೆಯನ್ನು ಎತ್ತಿಹಿಡಿದು ಮತಗಳಿಸಬೇಕೆಂಬ ಕುತಂತ್ರವಲ್ಲವೇ?
ಶಿವಮೊಗ್ಗೆ ಮತ್ತು ತಮಿಳು ಸಮ್ಮೇಳನ : ಕಳೆದ ವಾರ ಕನ್ನಡನಾಡಿನ ಒಳನಾಡಾದ ಶಿವಮೊಗ್ಗೆಯಲ್ಲಿ ತಮಿಳು ಭಾಷಿಕರ ಸಮ್ಮೇಳನವೊಂದು ನಡೆಯಿತು. ಇದರ ಹಿಂದೆಯೂ ಅಲ್ಲಿನ ಭಾಜಪ ಸಚಿವರಾದ ಈಶ್ವರಪ್ಪನವರ ಬೆಂಬಲವಿದ್ದುದು ಎದ್ದು ಕಾಣುತ್ತಿತ್ತು. ಸಚಿವರು ತಮಿಳು ಭಾಷಿಕರನ್ನು ಓಲೈಸಿ ಭಾಷಣ ಮಾಡಿದ್ದೂ ಆಯಿತು. ಶ್ರೀಯುತರು ತಮಿಳು ಜನರನ್ನು ಮತಬ್ಯಾಂಕ್ ಎಂಬಂತೆ ನಡೆಸಿಕೊಂಡರು.
ತೆಲುಗು ಸಮ್ಮೇಳನ ಮತ್ತು ಬೆಂಗಳೂರು : ನಿನ್ನೆ ಬೆಂಗಳೂರಿನಲ್ಲಿ ರಾಜ್ಯಸಂಪುಟದ ಸಚಿವರೊಬ್ಬರ ಮುಂದಾಳತ್ವದಲ್ಲಿ ತೆಲುಗು ಸಮ್ಮೇಳನವನ್ನೂ ನಡೆಸಲಾಯಿತು. ಪ್ರತಿಭಟಿಸಲು ಮುಂದಾದ ನಮ್ಮ ಸಂಘಟನೆಯ ಕಾರ್ಯಕರ್ತರ ಮೇಲೆ ಅಮಾನುಷವಾಗಿ ಹಲ್ಲೆ ನಡೆದ ಘಟನೆಯೂ ನಡೆಯಿತು.
ನಾಡಿನಲ್ಲಿ ಕನ್ನಡಿಗರ ಜೊತೆ ನಾನಾ ಭಾಷೆಗಳ ಜನರು ಬದುಕುತ್ತಿದ್ದಾರೆ. ತಲೆಮಾರುಗಳಿಂದ ಇಲ್ಲೇ ಬದುಕುತ್ತಾ ಕನ್ನಡಿಗರೇ ಆಗಿ ಹೋಗಿರುವ ಅವರನ್ನು ನೀನು ತಮಿಳ, ನೀನು ತೆಲುಗ, ನೀನು ಮರಾಠಿ ಎನ್ನುತ್ತಾ ಮುಖ್ಯವಾಹಿನಿಯಿಂದ ದೂರಮಾಡುತ್ತಿರುವ ರಾಜಕೀಯ ಪಕ್ಷಗಳ ನಡವಳಿಕೆ ಸಮಾಜವನ್ನು ಒಡೆಯುವ ಹೀನ ಕೃತ್ಯವಾಗಿದೆ. ಹೀಗೆ ಕನ್ನಡ ನಾಡಿನಲ್ಲಿ ಭಾಷಾ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡಿ ಮತಗಳಿಕೆಗಾಗಿ ನಾಡೊಡೆಯಲು ಮುಂದಾಗುವುದನ್ನು ಜನತೆ ಗಮನಿಸಬೇಕಾಗಿದೆ. ಕರ್ನಾಟಕ ರಕ್ಷನಾ ವೇದಿಕೆಯು ರಾಜಕೀಯ ಪಕ್ಷಗಳ ಇಂತಹ ಎಲ್ಲಾ ಕ್ರಮಗಳನ್ನೂ ಖಂಡತುಂಡವಾಗಿ ವಿರೋಧಿಸುತ್ತದೆ. ಇಂತಹ ನಾಡವಿರೋಧಿ ನಡವಳಿಕೆ ತೋರಿಸಲು ಮುಂದಾಗುವ ಯಾವುದೇ ರಾಜಕೀಯ ಪಕ್ಷಗಳನ್ನು ಖಂಡಿಸುತ್ತೇವೆ. ಕನ್ನಡಿಗರ ಪ್ರತಿಭಟನೆಗಳನ್ನು ಗಣನೆಗೆ ತೆಗೆದುಕೊಳ್ಳದೇ ಇಂತಹ ನಾಡೊಡೆಯುವ ಚಟುವಟಿಕೆಗಳನ್ನು ಮುಂದುವರೆಸುವ ಎಲ್ಲಾ ರಾಜಕೀಯ ಪಕ್ಷಗಳಿಗೆ ಬರುವ ಲೋಕಸಭಾ ಚುನಾವಣೆಯಲ್ಲಿ ಕನ್ನಡಿಗ ಮತದಾರ ತಕ್ಕಪಾಠವನ್ನು ಕಲಿಸುತ್ತಾನೆ.
ಪೋಸ್ಟ್ ಬರೆದವರು:
ಕರ್ನಾಟಕ ರಕ್ಷಣಾ ವೇದಿಕೆ
, ಸಮಯ:
Thursday, April 02, 2009
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಚುನಾವಣೆ / Election, ಸಂಘಟನೆ / Organisation, ಸ್ವಾಭಿಮಾನ / Self Respect
Thursday, January 15, 2009
ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶ - ಆಹ್ವಾನ ಪತ್ರಿಕೆ
ಪೋಸ್ಟ್ ಬರೆದವರು:
ಕರ್ನಾಟಕ ರಕ್ಷಣಾ ವೇದಿಕೆ
, ಸಮಯ:
Thursday, January 15, 2009
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಸಂಘಟನೆ / Organisation, ಸಮಾವೇಶ / Conference
Tuesday, January 6, 2009
ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶ-ಪತ್ರಿಕೆಯಲ್ಲಿ ಕಾರ್ಯಕ್ರಮಗಳ ಪಟ್ಟಿ
ಪೋಸ್ಟ್ ಬರೆದವರು:
ಕರ್ನಾಟಕ ರಕ್ಷಣಾ ವೇದಿಕೆ
, ಸಮಯ:
Tuesday, January 06, 2009
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಸಂಘಟನೆ / Organisation, ಸಮಾವೇಶ / Conference
Wednesday, December 10, 2008
ಉಚ್ಚ ನ್ಯಾಯಾಲಯದಲ್ಲಿ ಸಂದ ಜಯ
ಕರ್ನಾಟಕ ರಕ್ಷಣಾ ವೇದಿಕೆಯು ನಾಡಿನ ಅತಿ ದೊಡ್ಡ ಸಾಮಾಜಿಕ ಸಂಘಟನೆಯಾಗಿದ್ದು ಹತ್ತಾರು ಲಕ್ಷ ಸದಸ್ಯರನ್ನು ಹೊಂದಿದೆ. ತನ್ನ ಕನ್ನಡ ಪರ ಕಾಳಜಿಯಿಂದ ನಾಡಿನ ಜನತೆಯ ಮೆಚ್ಚಿನ ಸಂಘಟನೆಯಾಗುವುದರ ಜೊತೆಯಲ್ಲೇ ಕನ್ನಡಿಗರ ನಾಳೆಗಳ ಆಶಾಕಿರಣವಾಗಿದೆ. ಸಂಘಟನೆಯ ಬೆಳವಣಿಗೆಯನ್ನು ತಮ್ಮ ಸ್ವಾರ್ಥಕ್ಕೆ ಬಳಸುವ ಉದ್ದೇಶದಿಂದ ಕೆಲವ್ಯಕ್ತಿಗಳು ಸಂಘಟನೆಯ ಹೆಸರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದರು. ತಮ್ಮ ಕೆಟ್ಟ ನಡವಳಿಕೆಯಿಂದಾಗಿ ಸಂಘಟನೆಯಿಂದ ಹೊರಹಾಕಲ್ಪಟ್ಟಿದ್ದರೂ ಅನಧಿಕೃತವಾಗಿ ತಮ್ಮಗಳನ್ನೇ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳೆಂದು ಬಿಂಬಿಸಿಕೊಳ್ಳುತ್ತಿದ್ದರು.
ಹೀಗೆ ಕರ್ನಾಟಕ ರಕ್ಷಣಾ ವೇದಿಕೆಯ ಹೆಸರನ್ನು ದುರುಪಯೋಗಿಸಿಕೊಳ್ಳುವುದನ್ನು ತಡೆಯಲು ದಿನಾಂಕ ೧೮.೦೯.೨೦೦೬ರಂದು ಶ್ರೀ ನಾರಾಯಣಗೌಡರ ನೇತೃತ್ವವನ್ನು ಮಾನ್ಯ ಮಾಡುವ ಆದೇಶವನ್ನು ಹೊರಡಿಸುವ ಮೂಲಕ ಜಿಲ್ಲಾ ನೋಂದಣಾಧಿಕಾರಿಗಳು, ಸಂಘ ಮತ್ತು ಸಂಸ್ಥೆ, ಬೆಂಗಳೂರು ಇವರು ಕ್ರಮ ಕೈಗೊಂಡಿದ್ದರು.
ಜಿಲ್ಲಾ ನೋಂದಣಾಧಿಕಾರಿಗಳ ಈ ಆದೇಶವನ್ನು ರಾಜ್ಯ ಹೈಕೋರ್ಟಿನಲ್ಲಿ ಶಿವರಾಮೇಗೌಡ ಮತ್ತಿತರರು ಪ್ರಶ್ನಿಸಿದ್ದರು. ಸಂಘಟನೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ನಂತರ ಮಾನ್ಯ ರಾಜ್ಯ ಉಚ್ಚನ್ಯಾಯಾಲಯ ಇವರುಗಳ ತಕರಾರು ಅರ್ಜಿಯನ್ನು ವಜಾ ಮಾಡಿ ಜಿಲ್ಲಾ ನೋಂದಣಾಧಿಕಾರಿಗಳು ನೀಡಿದ್ದ ಆದೇಶವನ್ನು ಎತ್ತಿಹಿಡಿದಿದೆ.
ಪೋಸ್ಟ್ ಬರೆದವರು:
ಕರ್ನಾಟಕ ರಕ್ಷಣಾ ವೇದಿಕೆ
, ಸಮಯ:
Wednesday, December 10, 2008
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಸಂಘಟನೆ / Organisation
Monday, July 7, 2008
ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ
ಪೋಸ್ಟ್ ಬರೆದವರು:
ಕರ್ನಾಟಕ ರಕ್ಷಣಾ ವೇದಿಕೆ
, ಸಮಯ:
Monday, July 07, 2008
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಸಂಘಟನೆ / Organisation
Thursday, March 20, 2008
ರಾಜ್ಯ ವ್ಯಾಪಿ ಸ್ವಾಭಿಮಾನಿ ಜಾಗೃತಿ ಜಾಥಾ
ಪೋಸ್ಟ್ ಬರೆದವರು:
ಕರ್ನಾಟಕ ರಕ್ಷಣಾ ವೇದಿಕೆ
, ಸಮಯ:
Thursday, March 20, 2008
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಸಂಘಟನೆ / Organisation, ಸಮಾವೇಶ / Conference
Tuesday, November 27, 2007
೬ನೇ ಸ್ವಾಭಿಮಾನಿ ಕನ್ನಡಿಗರ ಸಮಾವೇಶ - ಆಮಂತ್ರಣ
ಪೋಸ್ಟ್ ಬರೆದವರು:
ಕರ್ನಾಟಕ ರಕ್ಷಣಾ ವೇದಿಕೆ
, ಸಮಯ:
Tuesday, November 27, 2007
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಸಂಘಟನೆ / Organisation, ಸಮಾವೇಶ / Conference
Saturday, September 8, 2007
ರಾಮನಗರದಲ್ಲಿ ಶಾಖೋದ್ಘಾಟನೆ
ಪೋಸ್ಟ್ ಬರೆದವರು:
ಕರ್ನಾಟಕ ರಕ್ಷಣಾ ವೇದಿಕೆ
, ಸಮಯ:
Saturday, September 08, 2007
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಸಂಘಟನೆ / Organisation