Showing posts with label ಬೆಂಗಳೂರು ಮೆಟ್ರೋ / Bengaluru metro. Show all posts
Showing posts with label ಬೆಂಗಳೂರು ಮೆಟ್ರೋ / Bengaluru metro. Show all posts

Monday, June 23, 2014

ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ವಿರುದ್ಧ ಮಾಡಿದ ಪ್ರತಿಭಟನೆಯ ಪತ್ರಿಕಾ ವರದಿಗಳು

ಕರ್ನಾಟಕ ಸರಕಾರದ ಬೆಂಗಳೂರು ಮೆಟ್ರೋ ಸಂಸ್ಥೆಯಲ್ಲಿ ಕರ್ನಾಟಕ ಸರಕಾರದ ಭಾಷಾ ನೀತಿಯನ್ನು ಉಲ್ಲಂಘಿಸಿ ಹಿಂದಿಯನ್ನು ಮೆರೆಸುತ್ತಿರುವುದರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಸತತವಾಗಿ ಪ್ರತಿಭಟಿಸುತ್ತ ಬಂದಿದೆ.

ಬೆಂಗಳೂರು ಮೆಟ್ರೋ ಸಂಸ್ಥೆಯ ಅನವಶ್ಯಕ ಹಿಂದಿ ಬಳಕೆಯನ್ನು ವಿರೋಧಿಸಿ ಹಾಗು ಕನ್ನಡಿಗರಿಗೆ ಉದ್ಯೋಗದಲ್ಲಿ ಸಿಂಹಪಾಲು ಸಿಗಬೇಕೆಂದು ಆಗ್ರಹಿಸಿ ಮಾಡಿದ ಪ್ರತಿಭಟನೆಯ ಪತ್ರಿಕಾ ವರದಿಗಳು:


ಮೆಟ್ರೋ ವಿರುದ್ಧ ಪ್ರತಿಭಟನೆಯ ವಿಜಯವಾಣಿ ವರದಿ.















ಮೆಟ್ರೋ ವಿರುದ್ಧ ಪ್ರತಿಭಟನೆಯ ಕನ್ನಡಪ್ರಭ ವರದಿ.






























ಮೆಟ್ರೋ ವಿರುದ್ಧ ಪ್ರತಿಭಟನೆಯ ಉದಯವಾಣಿ ವರದಿ.























ಮೆಟ್ರೋ ವಿರುದ್ಧ ಪ್ರತಿಭಟನೆಯ ಸಂಜೆವಾಣಿ ವರದಿ..





































ಮೆಟ್ರೋ ವಿರುದ್ಧ ಪ್ರತಿಭಟನೆಯ ಈಸಂಜೆ ವರದಿ.

ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ನಿಲ್ಲಿಸುವಂತೆ ಅಧಿಕಾರಿಗಳಿಗೆ ಮನವಿ

ಕರ್ನಾಟಕ ಸರಕಾರದ ಬೆಂಗಳೂರು ಮೆಟ್ರೋ ಸಂಸ್ಥೆಯಲ್ಲಿ ಕರ್ನಾಟಕ ಸರಕಾರದ ಭಾಷಾ ನೀತಿಯನ್ನು ಉಲ್ಲಂಘಿಸಿ ಹಿಂದಿಯನ್ನು ಮೆರೆಸುತ್ತಿರುವುದರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಸತತವಾಗಿ ಪ್ರತಿಭಟಿಸುತ್ತ ಬಂದಿದೆ. 

ಬೆಂಗಳೂರು ಮೆಟ್ರೋ ಸಂಸ್ಥೆಯ ಅನವಶ್ಯಕ ಹಿಂದಿ ಬಳಕೆಯನ್ನು ವಿರೋಧಿಸಿ ಹಾಗು ಕನ್ನಡಿಗರಿಗೆ ಉದ್ಯೋಗದಲ್ಲಿ ಸಿಂಹಪಾಲು ಸಿಗಬೇಕೆಂದು ಆಗ್ರಹಿಸಿ ಈಗ ಬೆಂಗಳೂರು ಮೆಟ್ರೋ ಕಚೇರಿಯ ಮುಂದೆ ನಾರಾಯಣಗೌಡರ ನಾಯಕತ್ವದಲ್ಲಿ ನೂರಾರು ಕಾರ್ಯಕರ್ತರು ಪ್ರತಿಭಟಿಸುತ್ತಿದ್ದಾರೆ.

ಹೋರಾಟದ ಸಂದರ್ಭದಲ್ಲಿ ಬೆಂಗಳೂರು ಮೆಟ್ರೋದ ಹಿರಿಯ ಅಧಿಕಾರಿಗಳಿಗೆ ನಾವು ನೀಡಿದ ಮನವಿ ಪತ್ರ.








































ನಮ್ಮ ಮೆಟ್ರೋದಲ್ಲಿನ ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನೆ

ಕರ್ನಾಟಕ ಸರಕಾರದ ಬೆಂಗಳೂರು ಮೆಟ್ರೋ ಸಂಸ್ಥೆಯಲ್ಲಿ ಕರ್ನಾಟಕ ಸರಕಾರದ ಭಾಷಾ ನೀತಿಯನ್ನು ಉಲ್ಲಂಘಿಸಿ ಹಿಂದಿಯನ್ನು ಮೆರೆಸುತ್ತಿರುವುದರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಸತತವಾಗಿ ಪ್ರತಿಭಟಿಸುತ್ತ ಬಂದಿದೆ. 

ಬೆಂಗಳೂರು ಮೆಟ್ರೋ ಸಂಸ್ಥೆಯ ಅನವಶ್ಯಕ ಹಿಂದಿ ಬಳಕೆಯನ್ನು ವಿರೋಧಿಸಿ ಹಾಗು ಕನ್ನಡಿಗರಿಗೆ ಉದ್ಯೋಗದಲ್ಲಿ ಸಿಂಹಪಾಲು ಸಿಗಬೇಕೆಂದು ಆಗ್ರಹಿಸಿ ಈಗ ಬೆಂಗಳೂರು ಮೆಟ್ರೋ ಕಚೇರಿಯ ಮುಂದೆ ನಾರಾಯಣಗೌಡರ ನಾಯಕತ್ವದಲ್ಲಿ ನೂರಾರು ಕಾರ್ಯಕರ್ತರು ಪ್ರತಿಭಟಿಸಿದರು.









Wednesday, April 2, 2014

ಬೆಂಗಳೂರಿನ ನಮ್ಮ ಮೆಟ್ರೋ ದಲ್ಲಿ ಹಿಂದಿ ಹೇರಿಕೆ ನಿಲ್ಲಿಸಲು ಆಗ್ರಹ ಪತ್ರ

ಬೆಂಗಳೂರು ಮೆಟ್ರೋ ನಡೆಸುತ್ತಿರುವ ಹಿಂದಿ ಹೇರಿಕೆಯನ್ನು ವಿರೋಧಿಸಿ ಹಾಗು ಬೆಂಗಳೂರು ಮೆಟ್ರೋನಲ್ಲಿರುವ ಉದ್ಯೋಗಗಳನ್ನ ಕನ್ನಡಿಗರಿಗೇ ನೀಡಬೇಕೆಂದು ಆಗ್ರಹಿಸಿ ನಾರಾಯಣಗೌಡರ ನೇತೃತ್ವದಲ್ಲಿ ಕರವೇಯ ಒಂದು ನಿಯೋಗ ಇಂದು ಬೆಂಗಳೂರು ಮೆಟ್ರೋದ ವ್ಯವಸ್ಥಾಪಕ ನಿರ್ದೇಶಕರನ್ನ ಭೇಟಿ ಮಾಡಿತು. ಅತಿ ತುರ್ತಾಗಿ ರಾಜ್ಯ ಸರಕಾರದ ಜೊತೆ ಇದರ ಬಗ್ಗೆ ಮಾತುಕತೆ ನಡೆಸಿ ಕನ್ನಡ ಪರವಾದ ನಿರ್ಧಾರ ತೆಗೆದುಕೊಳ್ಳುವೆವು ಎಂಬ ಆಶ್ವಾಸನೆಯನ್ನ ಬೆಂಗಳೂರು ಮೆಟ್ರೋದ ಆಡಳಿತ ಮಂಡಳಿ ನೀಡಿದೆ. ಕೆಲವು ದಿನಗಳ ಸಮಯ ಅವರಿಗೆ ನೀಡಿದ್ದು ಬೆಂಗಳೂರು ಮೆಟ್ರೋನವರು ಕನ್ನಡ - ಕನ್ನಡಿಗ ಪರವಾದ ಕ್ರಮಗಳನ್ನ ಕೈಗೊಳ್ಳದಿದ್ದರೆ ಮುಂದೆ ಉಗ್ರವಾದ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಬೆಂಗಳೂರು ಮೆಟ್ರೋದ ಆಡಳಿತ ಮಂಡಳಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ.









Wednesday, December 14, 2011

ಮೆಟ್ರೋದಲ್ಲಿ ಕನ್ನಡಿಗರಿಗೆ ಆದ್ಯತೆ ಬಗ್ಗೆ ಕರವೇ ನಡೆಸಿದ ಹೋರಾಟಕ್ಕೆ ಬಿ.ಎಂ.ಆರ್.ಸಿ.ಎಲ್. ಪ್ರತಿಕ್ರಿಯೆ

ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಕನ್ನಡಿಗರಿಗೆ ಕಡ್ಡಾಯ ಉದ್ಯೋಗ ನೀಡಬೇಕು, ಎಲ್ಲಾ ಹಂತಗಳಲ್ಲಿಯೂ ಕನ್ನಡವನ್ನು ಬಳಸಬೇಕು ಮತ್ತು ಅನಗತ್ಯವಾದ ಹಿಂದಿ ಬಳಕೆಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ಬೆಂಗಳೂರಿನಲ್ಲಿರುವ ಬಿ.ಎಂ.ಅರ್.ಸಿ.ಎಲ್ ಮುಖ್ಯ ಕಛೇರಿಯ ಮುಂದೆ ನಾವು ಡಿಸೆಂಬರ್ ೨, ೨೦೧೧ ರಂದು ಪ್ರತಿಭಟನೆ ನಡೆಸಿದ್ದೆವು. ಕನ್ನಡಿಗರ ಪರವಾಗಿ ನಾವು ಮಾಡಿದ್ದ ಈ ಹಕ್ಕೊತ್ತಾಯ ಪರಿಣಾಮ ಬೀರಿದ್ದು, ಪ್ರತಿಭಟನೆ ವೇಳೆ ನಾವು ಮನವಿಪತ್ರದಲ್ಲಿ ಪ್ರಸ್ತಾಪಿಸಿದ್ದ ಕೆಲವೊಂದು ವಿಷಯಗಳಿಗೆ ಬಿ.ಎಂ.ಆರ್.ಸಿ.ಎಲ್. ಕಂಪನಿ ಪ್ರತಿಕ್ರಿಯೆ ನೀಡಿದೆ.

ಬಿ.ಎಂ.ಆರ್.ಸಿ.ಎಲ್ ಕಂಪನಿಯ ಕಾರ್ಯದರ್ಶಿ ಮತ್ತು ಪ್ರಧಾನ ವ್ಯವಸ್ಥಾಪಕರು ಪ್ರತಿಕ್ರಿಯೆ ನೀಡಿ ಕಳಿಸಿರುವ ಪತ್ರದ ಪ್ರತಿಯನ್ನು ಕೆಳಗೆ ಲಗತ್ತಿಸಲಾಗಿದೆ: