Showing posts with label ಎಂ.ಇ.ಎಸ್ / MES. Show all posts
Showing posts with label ಎಂ.ಇ.ಎಸ್ / MES. Show all posts

Monday, December 1, 2014

ಮರಾಠಿ ಮಹಾಮೇಳಾವಕ್ಕೆ ಅನುಮತಿ ಕೊಡಬಾರದೆಂದು ಒತ್ತಾಯ

ಬೆಳಗಾವಿ ಜಿಲ್ಲೆಯಲ್ಲಿ ಕರ್ನಾಟಕ ಸರ್ಕಾರದ ಅಧಿವೇಶನ ನಡೆಯುವ ಸಂದರ್ಭದಲ್ಲೇ ಎಂ.ಈ.ಎಸ್ ಮರಾಠಿ ಮಹಾಮೇಳಾವವನ್ನು ಮಾಡುತ್ತೇವೆಂದು ಹೇಳಿರುವ ಕ್ರಮವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಬೆಳಗಾವಿ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ನಮ್ಮ ಕಾರ್ಯಕರ್ತರು ರಾಜ್ಯ ಸರ್ಕಾರದ ಪ್ರತಿನಿಧಿಗಳಿಗೆ ಮಹಾಮೇಳಾವಕ್ಕೆ ಅನುಮತಿ ಕೊಡಬಾರದೆಂದು ಮನವಿ ಸಲ್ಲಿಸಿದರು








Friday, August 22, 2014

ಎಂ.ಇ.ಎಸ್. ವಿರುದ್ಧ ಬೆಳಗಾವಿಯಲ್ಲಿ ಪ್ರತಿಭಟನೆ

೨೧-೦೮-೨೦೧೪ ರಂದು ಬೆಳಗಾವಿಗೆ ನಾನಾ ಜಿಲ್ಲೆಗಳಿಂದ ಆಗಮಿಸಿದ್ದ ನಮ್ಮ ವೇದಿಕೆ ಕಾರ್ಯಕರ್ತರು, ಎಂ.ಇ.ಎಸ್ ವಿರುದ್ಧ ಅಧ್ಯಕ್ಷರಾದ ನಾರಾಯಣ ಗೌಡರ ನೇತೃತ್ವದಲ್ಲಿ ಘೋಷಣೆ ಕೂಗಿದರು.

ಪತ್ರಿಕಾ ವರದಿಗಳನ್ನು ಇಲ್ಲಿ ನೋಡಿ-

ವಿಜಯಕರ್ನಾಟಕ ವರದಿ






ಕನ್ನಡಪ್ರಭ ವರದಿ



ವಿಜಯವಾಣಿ ವರದಿ



Thursday, August 21, 2014

ಎಂ.ಇ.ಎಸ್. ನಿಷೆಧಕ್ಕೆ ಆಗ್ರಹ

ಕನ್ನಡಿಗರ ಮತ್ತು ಕರ್ನಾಟಕದ ವಿರುದ್ಧ ಪದೇ ಪದೇ ಹೇಳಿಕೆಗಳನ್ನು ಕೊಟ್ಟು ಬೆಳಗಾವಿಯ ಶಾಂತಿಯನ್ನು ಕದಡುವ ಮತ್ತು ಕನ್ನಡಿಗರ ಸ್ವಾಭಿಮಾನಕ್ಕೆ ಪೆಟ್ಟು ಕೊಡುತ್ತಿರುವ ಎಂ.ಇ.ಎಸ್. ನಂತಹ ಪುಂಡ ಸಂಘಟನೆಯನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಟಿ.ಎ. ನಾರಾಯಣ ಗೌಡರು ಆಗ್ರಹಿಸಿದರು.

ಪತ್ರಿಕಾ ವರದಿಗಳನ್ನು ಇಲ್ಲಿ ನೋಡಿ-




ಎಂ.ಇ.ಎಸ್. ನಾಡ ವಿರೋಧಿ ಧೊರಣೆಯನ್ನು ಖಂಡಿಸಿ ನಡೆದ ಪ್ರತಿಭಟನೆ

೨೦-೦೮-೨೦೧೪ ರಂದು ಬೆಳಗಾವಿಯಲ್ಲಿ ಎಂ.ಇ.ಎಸ್. ನಾಡ ವಿರೋಧಿ ಧೊರಣೆಯನ್ನು ಖಂಡಿಸಿ ನಡೆದ ಹೋರಾಟ





Wednesday, August 20, 2014

ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳ ಮಹಾ ಅಧಿವೇಶನ - ಪತ್ರಿಕಾ ಪ್ರಕಟಣೆ

೨೦-೦೮-೨೦೧೪ ರಂದು ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳ ಮಹಾ ಅಧಿವೇಶನ ನಡೆಯಿತು. ಸಭೆಯ ಮುಂಚೆ ಪತ್ರಿಕಾ ಗೋಷ್ಠಿ ನಡೆಯಿತು. ಆ ಸಂದರ್ಭದಲ್ಲಿ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಲಾಯಿತು.





Sunday, August 3, 2014

ಬೆಳಗಾವಿಗೆ ಹೊರೆಟಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣ ಗೌಡರು ಮತ್ತು ನಮ್ಮ ಕಾರ್ಯಕರ್ತರ ಬಂಧನ

02-08-2014 ರಂದು ಎಂ.ಇ.ಎಸ್. ಪುಂಡಾಟಿಕೆಯನ್ನು ವಿರೋಧಿಸಲು ಬೆಳಗಾವಿಗೆ ಹೊರೆಟಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣ ಗೌಡರು ಮತ್ತು ನಮ್ಮ ಕಾರ್ಯಕರ್ತರ ಬಂಧನ

ಪತ್ರಿಕಾ ವರದಿಯನ್ನು ಇಲ್ಲಿ ನೋಡಿ


Wednesday, July 30, 2014

ಬೆಳಗಾವಿಯಲ್ಲಿನ ಎಂ.ಈ.ಎಸ್ ಪುಂಡಾಟಿಕೆಯ ವಿರುದ್ಧ ಬೆಂಗಳೂರಿನಲ್ಲಿ ನಡೆಸಿದ ಬೃಹತ್ ಪ್ರತಿಭಟನಾ ಮೆರವಣಿಗೆಯ ಪತ್ರಿಕಾ ವರದಿ

ಬೆಳಗಾವಿಯಲ್ಲಿ ನಡೆಯುತ್ತಿರುವ ಎಂ.ಈ.ಎಸ್. ಪುಂಡಾಟಿಕೆಯ ವಿರುದ್ಧ ನಾವು ೨೮-೦೭-೨೦೧೪ ಸೋಮವಾರ ನಡೆಸಿದ ಬೃಹತ್ ಪ್ರತಿಭಟನಾ ಮೆರವಣಿಗೆಯ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:

ಉದಯವಾಣಿ ವರದಿ:



ಕನ್ನಡಪ್ರಭ ವರದಿ:

ಪ್ರಜಾವಾಣಿ ವರದಿ:
ವಿಜಯಕರ್ನಾಟಕ ವರದಿ:

ವಿಜಯವಾಣಿ ವರದಿ:



ಇದೇ ವಿಷಯವಾಗಿ ನಾವು ಮುಖ್ಯಮಂತ್ರಿಗಳಿಗೆ ನೀಡಿದ ಮನವಿಪತ್ರವನ್ನು ಕೆಳಗೆ ನೋಡಿ:







Monday, July 28, 2014

ಬೆಳಗಾವಿಯಲ್ಲಿನ ಎಂ.ಈ.ಎಸ್ ಪುಂಡಾಟಿಕೆಯ ವಿರುದ್ಧ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ವಿಧಾನಸೌಧ ಮುತ್ತಿಗೆ

ಬೆಳಗಾವಿಯಲ್ಲಿ ಎಂ.ಈ.ಎಸ್ ಅವರ ಪುಂಡಾಟಿಕೆಯ ವಿರುದ್ಧ ಪ್ರತಿಭಟನೆ : ೨೮-೦೭-೨೦೧೪ ಸೋಮವಾರ ಬೆಳಿಗ್ಗೆ ೧೦:೩೦ ಕ್ಕೆ ಬೆಂಗಳೂರಿನ ಟೌನ್ ಹಾಲ್ ಬಳಿಯಿಂದ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದೆವು.

ಕರ್ನಾಟಕ ಸರಕಾರ ಎಂ.ಈ.ಎಸ್ ಹಾಗು ಶಿವಸೇನೆಯ ಪುಂಡರ ವಿರುದ್ಧ ಗಟ್ಟಿಯಾದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ಬೆಂಗಳೂರಿನ ಟೌನ್ ಹಾಲ್ ನಿಂದ ಹೊರಟ ಪ್ರತಿಭಟನಾ ಮೆರವಣಿಗೆಯ ಕೆಲವು ಚಿತ್ರಗಳು ಇಲ್ಲಿವೆ:













Sunday, July 27, 2014

ಬೆಳಗಾವಿಯಲ್ಲಿ ಎಂ.ಈ.ಎಸ್ ಮತ್ತು ಶಿವಸೇನೆಯು ನಡೆಸುತ್ತಿರುವ ಪುಂಡಾಟಿಕೆ ಖಂಡಿಸಿ ರಾಜ್ಯವ್ಯಾಪಿ ಪ್ರತಿಭಟನೆ

ಬೆಳಗಾವಿಯಲ್ಲಿ ಎಂ.ಈ.ಎಸ್ ಮತ್ತು ಶಿವಸೇನೆಯು ನಡೆಸುತ್ತಿರುವ ಪುಂಡಾಟಿಕೆಯನ್ನು ವಿರೋಧಿಸಿ ರಾಜ್ಯವ್ಯಾಪಿ ಪ್ರತಿಭಟನೆಯನ್ನು ನಡೆಸಿದೆವು. ವಿವಿಧ ಜಿಲ್ಲೆಗಳಲ್ಲಿ ನಡೆದ ಪ್ರತಿಭಟನೆಯ ಕೆಲ ಚಿತ್ರಗಳನ್ನು ಇಲ್ಲಿ ನೋಡಿ:

ಗದಗ ಜಿಲ್ಲೆ:
ಶಿವಸೇನೆ ಮತ್ತು ಎಂ.ಈ.ಎಸ್ ಪುಂಡಾಟಿಕೆಯನ್ನು ವಿರೋಧಿಸಿ ನಮ್ಮ ಗದಗ ಜಿಲ್ಲೆಯ ಕಾರ್ಯಕರ್ತರು ಜಿಲ್ಲಾಧ್ಯಕ್ಷರಾದ ಹನುಮಂತಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಕುಮಾರ್ ಬ್ಯಾಲಿ ಅವರ ನೇತೃತ್ವದಲ್ಲಿ ಗದಗಿನ ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟಿಸಿದರು. ಅದರ ಚಿತ್ರಗಳು ಇಲ್ಲಿವೆ:




ಗದಗ ಜಿಲ್ಲೆ, ಶಿರಹಟ್ಟಿ ತಾಲೂಕು:
ಶಿವಸೇನೆ ಮತ್ತು ಎಂ.ಈ.ಎಸ್ ಪುಂಡಾಟಿಕೆಯನ್ನು ವಿರೋಧಿಸಿ ನಮ್ಮ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಾರ್ಯಕರ್ತರು ತಾಲೂಕು ಅಧ್ಯಕ್ಷ ಶರಣು ಅವರ ನೇತೃತ್ವದಲ್ಲಿ ಪ್ರತಿಭಟಿಸಿದರು. ಅದರ ಚಿತ್ರಗಳು ಇಲ್ಲಿವೆ.



ಮಂಡ್ಯ ಜಿಲ್ಲೆ: 
ಎಂ.ಈ.ಎಸ್ ಮತ್ತು ಶಿವಸೇನೆಯ ಪುಂಡಾಟಿಕೆಯನ್ನು ವಿರೋಧಿಸಿ ನಮ್ಮ ಮಂಡ್ಯ ಜಿಲ್ಲೆ ಕಾರ್ಯಕರ್ತರು ಜಿಲ್ಲಾಧ್ಯಕ್ಷ ಉಮಾಶಂಕರ್, ಮದ್ದೂರು ತಾಲೂಕು ಅಧ್ಯಕ್ಷ ಅಶೋಕ್ ಅವರ ನೇತೃತ್ವದಲ್ಲಿ ಶಿವಸೇನೆ ಮುಖ್ಯಸ್ತ ಉದ್ಧವ ಠಾಕ್ರೆ ಪ್ರತಿಕೃತಿ ದಹಿಸಿ ಪ್ರತಿಭಟಿಸಿದರು.






ಯಾದಗಿರಿ ಜಿಲ್ಲೆ: 
ಎಂ.ಈ.ಎಸ್ ಮತ್ತು ಶಿವಸೇನೆಯ ಪುಂಡಾಟಿಕೆಯನ್ನು ವಿರೋಧಿಸಿ ನಮ್ಮ ಕಾರ್ಯಕರ್ತರು ಜಿಲ್ಲಾಧ್ಯಕ್ಷರಾದ ಭೀಮೂ ನಾಯಕ್ ಅವರ ನೇತೃತ್ವದಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಶಿವಸೇನೆ ಮುಖ್ಯಸ್ತ ಉದ್ಧವ ಠಾಕ್ರೆ ಪ್ರತಿಕೃತಿ ದಹಿಸಿ ಪ್ರತಿಭಟಿಸಿದರು.




ಬಿಜಾಪುರ ಜಿಲ್ಲೆ:
ಎಂ.ಈ.ಎಸ್ ಮತ್ತು ಶಿವಸೇನೆಯ ಪುಂಡಾಟಿಕೆಯನ್ನು ವಿರೋಧಿಸಿ ನಮ್ಮ ಕಾರ್ಯಕರ್ತರು ಉತ್ತರ ಕರ್ನಾಟಕ ಅಧ್ಯಕ್ಷರಾದ ಸಂತೋಷ ಪಟೀಲ ಅವರ ನೇತೃತ್ವದಲ್ಲಿ ಬಿಜಾಪುರ ಜಿಲ್ಲೆಯ ಸಿಂಧಗಿ ತಾಲೂಕಿನಲ್ಲಿ ಪ್ರತಿಭಟಿಸಿದರು.