Showing posts with label ಸಾಮಾಜಿಕ ಕಾಳಜಿ / Societal Cause. Show all posts
Showing posts with label ಸಾಮಾಜಿಕ ಕಾಳಜಿ / Societal Cause. Show all posts

Thursday, September 25, 2014

ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 2013-2014 ರ ಸಾಲಿನಲ್ಲಿ ಮಾಡಿದ ಕೆಲಸಕ್ಕೆ ದಕ್ಕಬೇಕಾದ ಹಣದ ವಿಷಯವಾಗಿ ಪ್ರತಿಭಟನೆ

ಯಾದಗಿರಿ ತಾಲ್ಲೂಕಿನಲ್ಲಿ ಬರುವ 11 ಗ್ರಾಮ ಪಂಚಾಯಿತಿಗಳಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 2013-2014 ರ ಸಾಲಿನಲ್ಲಿ ಮಾಡಿದ ಕೆಲಸಕ್ಕೆ ಕೊಡಬೇಕಾದ ಹಣವನ್ನು ಇನ್ನೂ ಪಾವತಿಸದ ವಿಷಯವಾಗಿ ಜಿಲ್ಲಾ ಪಂಚಾಯಿತಿ ಕಚೇರಿಯ ಮುಂದೆ ಪ್ರತಿಭಟಿಸಿ ಕೂಡಲೇ ಹಣ ಬಿಡುಗಡೆ ಮಾಡುವಂತೆ ಕರವೇ ಕಾರ್ಯಕರ್ತರು ಒತ್ತಾಯಿಸಿದರು.






Wednesday, July 23, 2014

ಗೋವಾದ ಬೈನಾ ಕಡಲತೀರದ ಕನ್ನಡಿಗರ ಮನೆ ನೆಲಸಮ ಮಾಡಿದ ಗೋವಾ ಸರ್ಕಾರದ ಕ್ರಮ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ

ಗೋವಾ ಸರ್ಕಾರ ಬೈನಾ ಕಡಲ ತೀರದಲ್ಲಿ ನೆಲೆಸಿರುವ ಕನ್ನಡಿಗರ ಮನೆಗಳನ್ನು ನೆಲಸಮ ಮಾಡಿ ಯವುದೇ ಬದಲಿ ವ್ಯವಸ್ಥೆಯನ್ನು ಮಾಡದೆ ಇರುವುದರಿಂದ ಅಲ್ಲಿನ ಕನ್ನಡಿಗರು ನಿರಾಶ್ರಿತರಾಗಿದ್ದಾರೆ. ಗೋವಾ ಸರ್ಕಾರದ ಈ ಕ್ರಮವನ್ನು ಖಂಡಿಸಿ ನಮ್ಮ ಕಾರ್ಯಕರ್ತರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಸಿದ ಪ್ರತಿಭಟನೆಯ ವಿವರಗಳನ್ನು ಕೆಳಗೆ ನೋಡಿ:

ಚಿಕ್ಕಬಳ್ಳಾಪುರ ಜಿಲ್ಲೆ:
ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರಾದ ಎಂ. ಆರ್. ಲೋಕೇಶ್ ಅವರ ನೇತೃತ್ವದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರತಿಭಟಿಸಿದರು.





ಗದಗ ಜಿಲ್ಲೆ:
ಗದಗ ಜಿಲ್ಲಾಧ್ಯಕ್ಷರಾದ ಹನುಮಂತಪ್ಪ ಅವರ ನೇತೃತ್ವದಲ್ಲಿ ಗದಗ ಜಿಲ್ಲೆಯಲ್ಲಿ ಪ್ರತಿಭಟಿಸಿದರು.



ಯಾದಗಿರಿ ಜಿಲ್ಲೆ:
ಯಾದಗಿರಿ ಜಿಲ್ಲಾಧ್ಯಕ್ಷರಾದ ಭೀಮೂ ನಾಯಕ್ ಅವರ ನೇತೃತ್ವದಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಪ್ರತಿಭಟಿಸಿದರು.



ಉತ್ತರ ಕನ್ನಡ ಜಿಲ್ಲೆ:
ಉತ್ತರ ಕನ್ನಡ ಜಿಲ್ಲೆಯ ಕಾರ್ಯಕರ್ತರು ಜಿಲ್ಲಾಧ್ಯಕ್ಷರಾದ ಭಾಸ್ಕರ್ ಪಟಗಾರ್ ಅವರ ನೇತೃತ್ವದಲ್ಲಿ ಪ್ರತಿಭಟಿಸಿದರು.


ಹಾಸನ ಜಿಲ್ಲೆ:
ಹಾಸನ ಜಿಲ್ಲೆಯಲ್ಲಿ ಜಿಲ್ಲಾಧ್ಯಕ್ಷರಾದ ಮನು ಕುಮಾರ್ ಅವರ ನೇತೃತ್ವದಲ್ಲಿ ಪ್ರತಿಭಟಿಸಿದರು.

ಶಿವಮೊಗ್ಗ ಜಿಲ್ಲೆ:
ಶಿವಮೊಗ್ಗ ಜಿಲ್ಲಾದ್ಯಕ್ಷರಾದ ವೆಂಕಟೇಶ್ ಹೆಗಡೆ ಅವರ ನೇತೃತ್ವದಲ್ಲಿ ಪ್ರತಿಭಟಿಸಿದರು.



Thursday, June 5, 2014

ಟಿ.ಎ. ನಾರಾಯಣಗೌಡರ ೪೮ನೇ ಜನ್ಮದಿನದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ

ಜೂನ್ ೧೦ ರಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡರ ೪೮ನೆ ಜನ್ಮದಿನದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರವನ್ನು ಬೆಂಗಳೂರಿನಲ್ಲಿ ಏರ್ಪಡಿಸಲಾಗಿದೆ. ಈ ಸಾಮಾಜಿಕ ಕಳಕಳಿಯ ಕಾರ್ಯದಲ್ಲಿ ಎಲ್ಲ ಕನ್ನಡಿಗರೂ ಪಾಲ್ಗೊಳ್ಳಲು ನಮ್ಮ ಸವಿನಯ ಕರೆಯೋಲೆ ಮತ್ತು ಕಾರ್ಯಕ್ರಮದ ಹೆಚ್ಚಿನ ವಿವರ ಕೆಳಗಿನಂತಿದೆ:

ಸಮಯ : ಬೆಳಿಗ್ಗೆ ೧೧ಕ್ಕೆ
ಸ್ಥಳ : ಕಂಠೀರವ ಒಳಾಂಗಣ ಕ್ರೀಡಾಂಗಣ, ಬೆಂಗಳೂರು

ಹೆಚ್ಚಿನ ವಿವರಗಳು ಮತ್ತು ಆಮಂತ್ರಣ ಪತ್ರವನ್ನು ಕೆಳಗೆ ನೋಡಿ


 


Wednesday, June 5, 2013

ಕರವೇ ರಾಜ್ಯಾಧ್ಯಕ್ಷರ ಜನ್ಮದಿನದ ಪ್ರಯುಕ್ತ ಜೂನ್ ೧೦ ರಂದು ರಾಜ್ಯಾದ್ಯಂತ ಬೃಹತ್ ರಕ್ತದಾನ ಶಿಬಿರ

ಜೂನ್ ೧೦, ೨೦೧೩ ರಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ನಾರಾಯಣಗೌಡರ ೪೭ನೇ ಜನ್ಮದಿನದ ಪ್ರಯುಕ್ತ ಬೆಂಗಳೂರಿನಲ್ಲಿ ಹಾಗು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ. ನಮ್ಮ ಸಂಘಟನೆಯ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಇದರಲ್ಲಿ ಭಾಗವಹಿಸಲಿದ್ದಾರೆ. ಬೆಂಗಳೂರಿನಲ್ಲಿ ನಡೆಯುವ ಈ ಕಾರ್ಯಕ್ರಮದ ವಿವರಗಳು ಇಂತಿವೆ:



Friday, June 15, 2012

ಜೂನ್ ೧೦ ರ ಬೃಹತ್ ರಕ್ತದಾನ ಶಿಬಿರದಲ್ಲಿ ಕ.ರ.ವೇ. ಕಾರ್ಯಕರ್ತರು ರಕ್ತದಾನ ಮಾಡಿದರು

ಜೂನ್ ೧೦, ನಮ್ಮ ರಾಜ್ಯಾಧ್ಯಕ್ಷರಾದ ನಾರಾಯಣ ಗೌಡರ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಆ ದಿನ ವಿಶೇಷವಾಗಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.

ನಮ್ಮ ಕ.ರ.ವೇ. ಕಾರ್ಯಕರ್ತರು ಕಿದ್ವಾಯಿ, ವಿಕ್ಟೋರಿಯ ಮತ್ತು ನಿಮಾನ್ಸ್ ಆಸ್ಪತ್ರೆಗಳಿಗೆ ರಕ್ತದಾನ ಮಾಡಿದರು.

ಇದರ ವರದಿಯನ್ನು ಇಲ್ಲಿ ನೋಡಿ -
 

Monday, March 12, 2012

ಕರವೇ ಹೋರಾಟಗಳ ಸಮಗ್ರ ಚಿತ್ರಣ : ೩. ನಾಡಿನ ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ

ನಾಡಿನ ರೈತ ಸಮುದಾಯದ ಸಮಸ್ಯೆಗಳಿಗೆ ಸದಾ ಕರ್ನಾಟಕ ರಕ್ಷಣಾ ವೇದಿಕೆಯು ಸ್ಪಂದಿಸುತ್ತಿದ್ದು ರೈತಪರವಾದ ಅನೇಕ ಹೋರಾಟಗಳನ್ನು ನಡೆಸುತ್ತಾ ಬಂದಿದೆ.
ದುಡಿದ ದುಡಿಮೆಯನ್ನೆಲ್ಲಾ ಕರಗಿಸಿ ಮನೆಗಳನ್ನು ಮುಳುಗಿಸುತ್ತಿದ್ದ, ನಾಡಿನ ರೈತ ಕುಟುಂಬಗಳ ಸಾಲು ಸಾಲು ಸಾವಿಗೆ ಕಾರಣವಾಗಿದ್ದ ಆನ್ ಲೈನ್ ಲಾಟರಿಯು ನಿಷೇಧವಾಗಲು ಕರ್ನಾಟಕ ರಕ್ಷಣಾ ವೇದಿಕೆ ನಡೆಸಿದ ಉಗ್ರಹೋರಾಟ ಬಹುಪಾಲು ಕಾರಣವೆನ್ನಬಹುದು. ಅಂದು ಹಳ್ಳಿ ಹಳ್ಳಿಗಳಲ್ಲಿ ಜನಜಾಗೃತಿ ಮೂಡಿಸಿ ಆನ್ ಲೈನ್ ಲಾಟರಿ ನಿಷೇಧವಾಗುವಂತೆ ಮಾಡಲಾಯಿತು.
ತೆಂಗು ಬೆಳೆಗೆ ನುಸಿ ಪೀಡೆ ಬಂದು ನಾಡಿನ ರೈತ ತತ್ತರಿಸುತ್ತಿದ್ದಾಗ ತಾತ್ಕಾಲಿಕ ಪರಿಹಾರವಾಗಿ ಕಡೆಪಕ್ಷ ನೀರಾವನ್ನಾದರೂ ಇಳಿಸಿ ಮಾರಲು ಅನುಮತಿ ನೀಡುವಂತೆ ಸರ್ಕಾರದ ಮೇಲೆ ಒತ್ತಡ ತರಲು ನಾಡಿನೆಲ್ಲೆಡೆ ರೈತ ಬಾಂಧವರೊಂದಿಗೆ ಸೇರಿ ನೀರಾ ಚಳವಳಿಯನ್ನು ನಡೆಸಲಾಯಿತು.
ರಸಗೊಬ್ಬರ ಕೊರತೆ, ಕಳಪೆ ಬೀಜದ ಸಮಸ್ಯೆಗಳಿಗೆ ಸ್ಪಂದಿಸಿ ನಾಡಿನಾದ್ಯಂತ ನಾನಾ ಕಡೆಗಳಲ್ಲಿ ಜಾಥಾಗಳನ್ನೂ, ಪ್ರತಿಭಟನೆಗಳನ್ನೂ ಸಂಘಟಿಸಲಾಯಿತು. ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಗೆ ರೈತ ಮುಂದಾದಾಗ ಬೃಹತ್ ಪಂಜಿನ ಮೆರವಣಿಗೆ ನಡೆಸಿ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಲಾಯಿತು.
ಕೃಷ್ಣಾ ನದಿಯಲ್ಲಿ ಪ್ರವಾಹ ಉಂಟಾಗಿ ಆ ಭಾಗದ ಜನತೆ ತತ್ತರಿಸುತ್ತಿದ್ದಾಗ, ಗದಗ ಜಿಲ್ಲೆಯಲ್ಲಿ ನೆರೆಯಿಂದ ಕಂಗಾಲಾಗಿದ್ದಾಗ ಕರ್ನಾಟಕ ರಕ್ಷಣಾ ವೇದಿಕೆಯು ಸ್ಥಳೀಯ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ಪರಿಹಾರ ವಿತರಣೆ ಕಾರ್ಯ ಸುಸೂತ್ರವಾಗಿ ನಡೆಯಲು ಕಾರಣವಾಯಿತು.
ನಮ್ಮ ರೈತರ ಅಸ್ತಿತ್ವಕ್ಕೇ ಧಕ್ಕೆ ತರುತ್ತಿದ್ದ, ನೆರೆರಾಜ್ಯಗಳಿಂದ ಆಗುತ್ತಿದ್ದ ಕಳಪೆ ಹಾಲು ಪೂರೈಕೆಯ ವಿರುದ್ಧವಾಗಿ ದಿಟ್ಟ ಹೋರಾಟ ನಡೆಸಲಾಯಿತು. ಬೆಂಗಳೂರಿನಲ್ಲಿ ಹೊಸದಾಗಿ ಬಿ.ಡಿ.ಎ. ಆರಂಭಿಸಲು ಯೋಜಿಸಿದ್ದ ಅರ್ಕಾವತಿ ಬಡಾವಣೆಗಾಗಿ ಸುತ್ತಲಿನ ಹಳ್ಳಿಗಳ ನೂರಾರು ರೈತಾಪಿ ಜನರನ್ನು ಒಕ್ಕಲೆಬ್ಬಿಸುವ, ಸಾವಿರಾರು ಎಕರೆ ಜಮೀನು ವಶಪಡಿಸಿಕೊಳ್ಳುವ ಸರ್ಕಾರದ ನಿರ್ಧಾರದ ವಿರುದ್ಧ ಉಗ್ರವಾಗಿ ಪ್ರತಿಭಟಿಸಲಾಯ್ತು.
ಅಂತರರಾಜ್ಯ ನದಿ ಹಂಚಿಕೆಯಾಗಿರಲೀ, ನೀರಾವರಿ ಯೋಜನೆಗಳ ಅನುಷ್ಠಾನದ ವಿಷಯವಾಗಿರಲೀ ಮಣ್ಣಿನ ಮಕ್ಕಳ ಹಿತ ಕಾಯಲು ಕರ್ನಾಟಕ ರಕ್ಷಣಾ ವೇದಿಕೆ ಅನೇಕಾನೇಕ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದು, ರಾಜ್ಯ ರೈತಸಂಘದೊಂದಿಗೆ ವಿಷಯಾಧಾರಿತ ಹೋರಾಟಗಳಲ್ಲಿ ಕೈಜೋಡಿಸಿದೆ. ಇಂದಿನ ಜಾಗತೀಕರಣದ ಸವಾಲುಗಳನ್ನು ಎದುರಿಸಲು ನಮ್ಮ ನಾಡಿನ ರೈತರಿಗೆ ಬೇಕಾಗಿರುವ ಪರಿಣಿತಿ, ತಂತ್ರಜ್ಞಾನ, ಮಾಹಿತಿಗಳ ಬಗ್ಗೆ ತರಬೇತಿ ನೀಡುವ, ಬೆಳೆದ ಬೆಳೆಗೆ ಸೂಕ್ತ ಲಾಭ ಗಳಿಸಲು ಅನುಕೂಲವಾಗುವ, ತಮ್ಮ ಬೆಳೆಗೆ ಮಾರುಕಟ್ಟೆ ಗಳಿಸಿಕೊಳ್ಳುವ, ವಿಸ್ತರಿಸಿಕೊಳ್ಳುವ ಎಲ್ಲಾ ಕೌಶಲ್ಯಗಳ ಬಗ್ಗೆ ತರಬೇತಿ ನೀಡುವ ಯೋಜನೆಗಳನ್ನು ರೂಪಿಸುತ್ತಿದೆ. ನಾಡಿನ ರೈತರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವೆಡೆ ಮುಂದೆಯೂ ಅನೇಕ ಹೋರಾಟಗಳನ್ನು ಮಾಡಲಾಗುವುದು.

Sunday, August 8, 2010

ಕ.ರ.ವೇ. ಇಂದ ಕವನ ಸಂಕಲನಗಳ ಬಿಡುಗಡೆ

ಕನ್ನಡ ನಾಡಿನ ನೆಲ, ಜಲ, ನಾಡಿನ ಜ್ವಲಂತ ಸಮಸ್ಯೆಗಳು ಮತ್ತು ಕನ್ನಡ ನಾಡಿನ ಇತಿಹಾಸ, ಕಲೆ, ಸಂಸ್ಕೃತಿ ಹಾಗೂ ಇತರೆ ವಿಷಯಗಳು ಸಾಹಿತ್ಯದ ರೂಪದಲ್ಲಿ ಹೊರಬಂದಲ್ಲಿ ಆ ವಿಷಯಗಳು ಹೆಚ್ಚು ಜನರನ್ನು ತಲುಪುತ್ತವೆ. ಈ ನಿಟ್ಟಿನಲ್ಲಿ ಕರವೇ ಕನ್ನಡದ ಉದಯೋನ್ಮುಖ ಬರಹಗಾರರನ್ನು ಪ್ರೋತ್ಸಾಹಿಸಲು 'ಗಂಗಾ' ಪ್ರಕಾಶನವನ್ನು ಹುಟ್ಟು ಹಾಕಿ, ಪುಸ್ತಕಗಳನ್ನ ನಾಡಿನ ಜನರಿಗೆ ತಲುಪಿಸುವ ಪಣ ತೊಟ್ಟಿದೆ.

ಇದರ ಮೊದಲ ಹೆಜ್ಜೆಯಾಗಿ ನಿವೃತ್ತ ಸರಕಾರಿ ಅಧಿಕಾರಿ ಮಲ್ಲಿಕಾರ್ಜುನಪ್ಪ ನವರು ಬರೆದಿರುವ 'ಚಿತ್ತ ಎತ್ತ' ಮತ್ತು 'ಭಾವಯಾನ' ಎಂಬ ಕವನ ಸಂಕಲನಗಳನ್ನು ರಾಜ್ಯಾಧ್ಯಕ್ಷರಾದ ಟಿ.ಏ ನಾರಾಯಣಗೌಡರು ಬಿಡುಗಡೆಗೊಳಿಸಿದರು. ಈ ಸಮಯದಲ್ಲಿ ಭಾಗವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಲ್ಲೂರು ಪ್ರಸಾದ್ ಕರವೇಯ 'ಗಂಗಾ' ಪ್ರಕಾಶನಕ್ಕೆ ಎಲ್ಲಾ ರೀತಿಯ ಬೆಂಬಲ ನೀಡಲಾಗುವುದೆಂದು ತಿಳಿಸಿದರು.


Saturday, January 2, 2010

ಚಾಮರಾಜನಗರದ ಜಿಲ್ಲಾ ಆಸ್ಪತ್ರೆ ವ್ಯವಸ್ಥೆ ಸರಿಪಡಿಸಿ - ಕ.ರ.ವೇ.

ಚಾಮರಾಜನಗರದ ಜಿಲ್ಲಾ ಆಸ್ಪತ್ರೆ ವ್ಯವಸ್ಥೆ ಹದಗೆಟ್ಟಿದ್ದು, ಆಸ್ಪತ್ರೆಗೆ ಬರುವ ಜನರು ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಇದನ್ನು ಸರಿಪಡಿಸುವಂತೆ ಚಾಮರಾಜನಗರದ ಜಿಲ್ಲಾ ಆಸ್ಪತ್ರೆ ಎದುರು ನಮ್ಮ ಜಿಲ್ಲಾ ಘಟಕದ ಕಾರ್ಯಕರ್ತರು ಡಿಸೆಂಬರ್ 23 ರಿಂದ ನಾಲ್ಕು ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ ಪ್ರತಿಭಟಿಸಿದರು. ಉಪವಾಸ ಸತ್ಯಾಗ್ರಹದಲ್ಲಿ ಡಿಸೆಂಬರ್ 26 ರಂದು ಟಿ.ಏ. ನಾರಾಯಣ ಗೌಡರು ಪಾಲ್ಗೊಂಡಿದ್ದರು.

ಸತ್ಯಾಗ್ರಹದ ವರದಿಯನ್ನು ಇಲ್ಲಿ ನೋಡಿ.

Courtesy : The Hindu

‘Take steps to improve condition of hospital’
Correspondent
CHAMARAJANAGAR: President of Karnataka Rakshana Vedike T.A. Narayana Gowda has warned that a Statewide agitation will be launched if the district in-charge Minister and the Health Minister fail to take steps to improve the condition of the district hospital here within 24 hours.
Addressing presspersons after participating in an indefinite dharna being staged by members of the district unit of the vedike here on Saturday, he said that the Chief Minister would be appraised of the pathetic condition of the district hospital.
Taluk secretary of the vedike D. Nagendra said the vedike would give a call for Chamarajanagar bandh on Tuesday if the Health Minister failed to visit the hospital by then.
The fast by vedike members entered fourth day on Saturday. The condition of three members of the vedike, who were on fast, worsened and they were admitted to hospital.
Courtesy : Times of India

Karnataka Rakshana Vedike withdraws hunger strike



CHAMARAJNAGAR: The activists of Karnataka Rakshana Vedike withdrew their hunger strike on Sunday following welfare top brass. They were demanding better facilities at the district government hospital.

Senior officials from the department held discussion with the protestors. The mediation helped as the protesters withdrew the strike following directions from the organization president Narayana Gowda.

Senior officials from the department Sumuda Desai met the four protesters who were taken ill on Saturday. She later held discussion with the leaders of the organisation and persuaded them to withdraw the strike assuring that she will do what is needed. But the protestors insisted a written assurance. When it was made available, they contacted Gowda and withdrew the strike late on Saturday night.

However, the farmers protest that led to transfer of DC Manojkumar Meena and SP T D Pawar entered the 22nd day on Sunday. Though chief minister B S Yeddyurappa intervened and asked them to withdraw the protest, they did not heed his request. The CM has conveyed to the farmer leaders that he will send water resources minister Basavaraj Bommai, energy minister K S Eshwarappa and urban development and parliamentary affairs minister S Suresh Kumar to hold discussion with them on December 30.

Thursday, December 24, 2009

ಗಾರ್ಮೆಂಟ್ಸ್ ನೌಕರರಿಗೆ ಬಿ.ಪಿ.ಎಲ್. ಕಾರ್ಡ್ ನೀಡಬೇಕು - ಕ.ರ.ವೇ.

ಬಡತನ ಸೇರಿದಂತೆ ಹಲವಾರು ಸಮಸ್ಯೆಗಳಿಂದ ಬಳಲುತ್ತಿರುವ ಗಾರ್ಮೆಂಟ್ಸ್ ನೌಕರರಿಗೆ ಬಿ.ಪಿ.ಎಲ್. ಕಾರ್ಡ್ ನೀಡಬೇಕೆಂದು ಒತ್ತಾಯಿಸಿ ಡಿಸೆಂಬರ್. 23 ನೇ ತಾರೀಕಿನಂದು ಟಿ.ಏ. ನಾರಾಯಣ ಗೌಡರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ದೊಡ್ಡ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.

ಗಾರ್ಮೆಂಟ್ಸ್ ನೌಕರರ ಬಿ.ಪಿ.ಎಲ್. ಕಾರ್ಡ್ಗಾಗಿ ಕ.ರ.ವೇ . ನಡೆಸಿದ ಮೆರವಣಿಗೆ ವರದಿಯನ್ನು ಇಲ್ಲಿ ನೋಡಿ.




Tuesday, October 13, 2009

ಕರವೇ ಇಂದ ಐವರು ಅನಾಥ ಮಕ್ಕಳ ದತ್ತು ಸ್ವೀಕಾರ

ಉತ್ತರ ಕರ್ನಾಟಕದಲ್ಲಿ ಉಂಟಾದ ಭೀಕರ ಪ್ರವಾಹದಲ್ಲಿ ತಂದೆತಾಯಿಯರನ್ನು ಕಳೆದುಕೊಂಡು ಅನಾಥರಾಗಿರುವ ೫ ಮಕ್ಕಳನ್ನು ನಮ್ಮ ವೇದಿಕೆ ದತ್ತು ಪಡೆದುಕೊಳ್ಳಲಿದೆ. ಗದಗ ಜಿಲ್ಲೆಯ ೩ ಮಕ್ಕಳು, ರಾಯಚೂರು ಹಾಗು ಕಲ್ಬುರ್ಗಿ ಜಿಲ್ಲೆಯ ತಲಾ ಒಂದು ಮಗುವನ್ನು ದತ್ತು ಪಡೆಯಲಾಗುವುದು.



Monday, October 12, 2009

ಬಾಗಲಕೋಟೆ, ಕೊಪ್ಪಳ, ವಿಜಾಪುರ, ಗದಗ, ಕಲ್ಬುರ್ಗಿ, ರಾಯಚೂರಿನಲ್ಲಿ ಕ.ರ.ವೇ. ಸಹಾಯ ಹಸ್ತ - ಚಿತ್ರಗಳು

ಬಾಗಲಕೋಟೆ, ಕೊಪ್ಪಳ, ವಿಜಾಪುರ, ಗದಗ್, ಕಲ್ಬುರ್ಗಿ, ರಾಯಚೂರಿನಲ್ಲಿ ಕ.ರ.ವೇ.ಇಂದ ನೆರೆಯಲ್ಲಿ ಸತ್ತವರ ಕುಟುಂಬದ ಸದಸ್ಯರಿಗೆ ೫೦೦೦ ರು. ನಗದನ್ನು ವಿತರಿಸಲಾಯಿತು.

ಇದರ ಚಿತ್ರಗಳನ್ನು ಇಲ್ಲಿ ನೋಡಿ


ಬಾಗಲಕೋಟೆ









ಕೊಪ್ಪಳ




ವಿಜಾಪುರ







ಗದಗ







ಕಲ್ಬುರ್ಗಿ






ರಾಯಚೂರು


ಕಲ್ಬುರ್ಗಿಯಲ್ಲಿ ನೆರೆ ಸಂತ್ರಸ್ತರಿಗೆ ಕ.ರ.ವೇ. ಇಂದ ಪರಿಹಾರ ವಿತರಣೆ

ಕಲ್ಬುರ್ಗಿಯಲ್ಲಿ ನೆರೆ ಹಾವಳಿಗೆ ತುತ್ತಾದ ಸಂತ್ರಸ್ತರಿಗೆ ನಮ್ಮ ವೇದಿಕೆಯ ವತಿ ಇಂದ ಪರಿಹಾರ ವಿತರಣೆ ಮಾಡಲಾಯಿತು.

ಇದರ ವರದಿಯನ್ನು ಇಲ್ಲಿ ನೋಡಿ

ಬಾಗಲಕೋಟೆಯಲ್ಲಿ ನೆರೆ ಸಂತ್ರಸ್ತರಿಗೆ ಕ.ರ.ವೇ. ಇಂದ ಪರಿಹಾರ ವಿತರಣೆ

ಬಾಗಲಕೋಟೆಯಲ್ಲಿ, ನೆರೆ ಹಾವಳಿಗೆ ತುತ್ತಾದ ಸಂತ್ರಸ್ತರಿಗೆ ನಮ್ಮ ವೇದಿಕೆಯ ವತಿ ಇಂದ ಪರಿಹಾರ ವಿತರಣೆ ಮಾಡಲಾಯಿತು.

ಇದರ ವರದಿಯನ್ನು ಇಲ್ಲಿ ನೋಡಿ