Showing posts with label ಕರವೇ ಮಾಧ್ಯಮ ಮತ್ತು ಪ್ರಕಾಶನ / KRV Media and Publications. Show all posts
Showing posts with label ಕರವೇ ಮಾಧ್ಯಮ ಮತ್ತು ಪ್ರಕಾಶನ / KRV Media and Publications. Show all posts

Thursday, December 29, 2011

ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ "ನೇರನುಡಿ" ಪುಸ್ತಕ ಬಿಡುಗಡೆ ಕಾರ್ಯಕ್ರಮ

ಕರವೇ ನಲ್ನುಡಿಯಲ್ಲಿ ಪ್ರಕಟಗೊಳ್ಳುತ್ತಿದ್ದ "ನೇರನುಡಿ" ಅಂಕಣಗಳ ಸಂಕಲವನ್ನು ೨೬-೧೨-೨೦೧೧ ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪುಸ್ತಕರೂಪದಲ್ಲಿ ಹೊರತರಲಾಯಿತು. ೭೮ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಸಿ.ಪಿ.ಕೆ. ಹಾಗು ಗಣ್ಯರಾದ ಸಚಿವ ಆರ್. ಅಶೋಕ್, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಡಾ. ನಲ್ಲೂರು ಪ್ರಸಾದ್, ರಂಜಾನ್ ದರ್ಗ, ಡಾ. ನಟರಾಜ್ ಹುಳಿಯಾರ್ ಹಾಜರಿದ್ದರು.

ಇದರ ವರದಿಯನ್ನು ಇಲ್ಲಿ ನೋಡಿ.



Sunday, August 8, 2010

ಕ.ರ.ವೇ. ಇಂದ ಕವನ ಸಂಕಲನಗಳ ಬಿಡುಗಡೆ

ಕನ್ನಡ ನಾಡಿನ ನೆಲ, ಜಲ, ನಾಡಿನ ಜ್ವಲಂತ ಸಮಸ್ಯೆಗಳು ಮತ್ತು ಕನ್ನಡ ನಾಡಿನ ಇತಿಹಾಸ, ಕಲೆ, ಸಂಸ್ಕೃತಿ ಹಾಗೂ ಇತರೆ ವಿಷಯಗಳು ಸಾಹಿತ್ಯದ ರೂಪದಲ್ಲಿ ಹೊರಬಂದಲ್ಲಿ ಆ ವಿಷಯಗಳು ಹೆಚ್ಚು ಜನರನ್ನು ತಲುಪುತ್ತವೆ. ಈ ನಿಟ್ಟಿನಲ್ಲಿ ಕರವೇ ಕನ್ನಡದ ಉದಯೋನ್ಮುಖ ಬರಹಗಾರರನ್ನು ಪ್ರೋತ್ಸಾಹಿಸಲು 'ಗಂಗಾ' ಪ್ರಕಾಶನವನ್ನು ಹುಟ್ಟು ಹಾಕಿ, ಪುಸ್ತಕಗಳನ್ನ ನಾಡಿನ ಜನರಿಗೆ ತಲುಪಿಸುವ ಪಣ ತೊಟ್ಟಿದೆ.

ಇದರ ಮೊದಲ ಹೆಜ್ಜೆಯಾಗಿ ನಿವೃತ್ತ ಸರಕಾರಿ ಅಧಿಕಾರಿ ಮಲ್ಲಿಕಾರ್ಜುನಪ್ಪ ನವರು ಬರೆದಿರುವ 'ಚಿತ್ತ ಎತ್ತ' ಮತ್ತು 'ಭಾವಯಾನ' ಎಂಬ ಕವನ ಸಂಕಲನಗಳನ್ನು ರಾಜ್ಯಾಧ್ಯಕ್ಷರಾದ ಟಿ.ಏ ನಾರಾಯಣಗೌಡರು ಬಿಡುಗಡೆಗೊಳಿಸಿದರು. ಈ ಸಮಯದಲ್ಲಿ ಭಾಗವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಲ್ಲೂರು ಪ್ರಸಾದ್ ಕರವೇಯ 'ಗಂಗಾ' ಪ್ರಕಾಶನಕ್ಕೆ ಎಲ್ಲಾ ರೀತಿಯ ಬೆಂಬಲ ನೀಡಲಾಗುವುದೆಂದು ತಿಳಿಸಿದರು.


Tuesday, May 4, 2010

ಕರವೇ ನಲ್ನುಡಿ ಬಿಡುಗಡೆ

ಕರ್ನಾಟಕ ರಕ್ಷಣಾ ವೇದಿಕೆಯ ಮುಖವಾಣಿ 'ಕರವೇ ನಲ್ನುಡಿ' ಯನ್ನು ೪-೫-೨೦೧೦ ರಂದು ಬಿಡುಗಡೆ ಮಾಡಲಾಯಿತು. ಪುಸ್ತಕ ಬಿಡುಗಡೆ ಸಮಾರಂಭದ ಪತ್ರಿಕ ವರದಿಯನ್ನು ನೊಡಿ-




Tuesday, April 27, 2010

ಜಗ್ಗಲ್ಲ, ಹೋರಾಟ ಬಿಡಲ್ಲ - ಟಿ. ಎ. ನಾರಾಯಣ ಗೌಡ

೧೦ ವರ್ಷದಿಂದ ಹೋರಾಟಗಳನ್ನು ಮಾಡಿಕೊಂಡು ಬಂದಿರುವ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರ ಮೇಲೆ ಎಲ್ಲಾ ಸರಕಾರಗಳು ಮೊಕದ್ದಮೆಗಳನ್ನು ಹಾಕುತ್ತಾ ಬಂದಿವೆ. ಇದುವರೆಗು ಕರವೇ ಕಾರ್ಯಕರ್ತರ ಮೇಲಿರುವ ಮೊಕ್ಕದ್ದಮೆಗಳು ೧೦೦೦ಕ್ಕೂ ಹೆಚ್ಚು. ಕನ್ನಡ ಪರವಾದ ಹೋರಾಟಗಳನ್ನು ಮಾಡಿಕೊಂಡು ಬಂದಿರುವ ಕನ್ನಡ ಸಂಘಟನೆಗಳ ಮೇಲಿರುವ ಮೊಕದ್ದಮೆಗಳನ್ನು ಸರಕಾರ ಹಿಂತೆಗೆದುಕೊಳ್ಳಬೇಕು ಎಂಬ ಕೂಗು ಕೇಳಿಬರುತ್ತಿರುವ ಈ ಸಂಧರ್ಭದಲ್ಲಿ ನಮ್ಮ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ಟಿ. ಎ. ನಾರಾಯಣಗೌಡರು ಪತ್ರಿಕೊಯೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಪತ್ರಿಕಾ ಸಂದರ್ಶನವನ್ನು ನೋಡಿ:

Monday, September 21, 2009

ಕನ್ನಡ ನಾಡು-ನುಡಿ ಯನ್ನು ಬಿಂಬಿಸುವಂತಹ ಕೃತಿಗಳನ್ನು ಪ್ರಕಟಿಸಲು ನಿರ್ಧಾರ - ಕ.ರ.ವೇ.

ಕರ್ನಾಟಕ ಏಕೀಕರಣಕ್ಕೆ ಹೋರಾಟ ಮಾಡಿದ ಧೀಮಂತ ಕನ್ನಡಿಗರು, ಗಡಿ ಭಾಗದಲ್ಲಿ ಕನ್ನಡ ನುಡಿ ಅಭಿವೃದ್ಧಿಗೆ ಶ್ರಮಿಸಿದವರು, ಜಿಲ್ಲೆಗಳ ಐತಿಹಾಸಿಕ ಪರಂಪರೆ, ನೆಲ-ಜಲ ವಿವಾದಗಳು, ಈ ವಿವಾದಗಳಿಂದ ಕನ್ನಡ ನಾಡಿಗೆ ಆಗಿರುವ ಅನ್ಯಾಯ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನಗಳು, ಖರ್ಚು-ವೆಚ್ಚ, ಕರುನಾಡಿಗಾಗಿ ಸದಾ ತುಡಿಯುತ್ತಿದ್ದ ರಾಜರು, ರಾಜ ಮನೆತನಗಳು ಸೇರಿದಂತೆ ಮತ್ತಿತರೆ ಅಂಶಗಳನ್ನು ಒಳಗೊಂಡ ಕೃತಿಗಳನ್ನು; ಆರ್ಥಿಕವಾಗಿ ದುರ್ಬಲರಾಗಿರುವ ಸಾಹಿತಿಗಳು ಪ್ರಕಟಿಸಲು ಇಚ್ಚಿಸಿದ್ದಲ್ಲಿ, ನಮ್ಮ ವೇದಿಕೆ ಅವನ್ನು ಪ್ರಕಟಿಸಲು ಮುಂದಾಗಲಿದೆ.

ಇದರ ವರದಿಯನ್ನು ಇಲ್ಲಿ ನೋಡಿ.

"ಸಿಂಹ ಘರ್ಜನೆ" - ಟಿ.ಏ. ನಾರಾಯಣ ಗೌಡರ ಬದುಕು, ಹೋರಾಟದ ಹಾದಿಯ ಬಗ್ಗೆ ಬರೆದಿರುವ ಹೊತ್ತಿಗೆ ಬಿಡುಗಡೆ











"ಸಿಂಹ ಘರ್ಜನೆ" - ಟಿ.ಏ. ನಾರಾಯಣ ಗೌಡರ ಬದುಕು, ಹೋರಾಟದ ಹಾದಿಯ ಬಗ್ಗೆ ಬರೆದಿರುವ ಹೊತ್ತಿಗೆ ಬಿಡುಗಡೆ ಸಮಾರಂಭ ಆ. ೧ ನೇ ತಾರೀಕಿನಂದು ರವೀಂದ್ರ ಕಲಾಕ್ಷೇತ್ರದಲ್ಲಿ ನೆರೆವೇರಿತು.

ಇದರ ವರದಿಯನ್ನು ಇಲ್ಲಿ ನೋಡಿ.