Showing posts with label ಸಮಾವೇಶ / Conference. Show all posts
Showing posts with label ಸಮಾವೇಶ / Conference. Show all posts

Wednesday, August 20, 2014

ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳ ಮಹಾ ಅಧಿವೇಶನ - ಸಭೆಯ ಕೆಲವು ಚಿತ್ರಗಳು

20-08-2014 ರಂದು ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳ ಮಹಾ ಅಧಿವೇಶನ ನಡೆಯಿತು.

ಸಭೆಯ ಕೆಲವು ಚಿತ್ರಗಳು ಇಲ್ಲಿವೆ





ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳ ಮಹಾ ಅಧಿವೇಶನ - ಪತ್ರಿಕಾ ಪ್ರಕಟಣೆ

೨೦-೦೮-೨೦೧೪ ರಂದು ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳ ಮಹಾ ಅಧಿವೇಶನ ನಡೆಯಿತು. ಸಭೆಯ ಮುಂಚೆ ಪತ್ರಿಕಾ ಗೋಷ್ಠಿ ನಡೆಯಿತು. ಆ ಸಂದರ್ಭದಲ್ಲಿ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಲಾಯಿತು.





Friday, November 30, 2012

೨೦೧೨ ರ ರಾಜ್ಯಮಟ್ಟದ ಗಡಿನಾಡ ಕನ್ನಡಿಗರ ಜಾಗೃತಿ ಸಮಾವೇಶ - ಪತ್ರಿಕಾವರದಿ

ಕನ್ನಡ ಚಳವಳಿಗೆ 50 ವರ್ಷ ತುಂಬಿದ ಸಂದರ್ಭದಲ್ಲಿ ೩೦-೧೧-೨೦೧೨ ರಂದು ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿಯಲ್ಲಿ ರಾಜ್ಯಮಟ್ಟದ "ಗಡಿನಾಡ ಕನ್ನಡಿಗರ ಜಾಗೃತಿ ಸಮಾವೇಶ" ನಡೆಸಿತು.

ಸಮಾವೇಶದಲ್ಲಿ ಬೃಹತ್ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಮೆರವಣಿಗೆಗೆ ನಾಗನೂರು ರುದ್ರಾಕ್ಷಿಮಠ ಸಿದ್ದರಾಮ ಸ್ವಾಮೀಜಿ ಹಾಗು ಕಾರಂಜಿ ಗುರುಸಿದ್ದ ಸ್ವಾಮಿಜಿ ಚಾಲನೆ ನೀಡಿದರು. ರಾಜ್ಯದ ನಾನ ಕಡೆಯಿಂದ ಸಹಸ್ರಾರು ಸಂಖ್ಯೆಯಲ್ಲಿ  ಆಗಮಿಸಿದ್ದ ವೇದಿಕೆ ಕಾರ್ಯಕರ್ತರು ಹಾಗು ಅಭಿಮಾನಿಗಳು ಈ ಮೆರವಣಿಗೆಯಲ್ಲಿ ಪಾಲ್ಗೊಂಡರು. ಅಶೋಕ ವೃತ್ತದಿಂದ ಆರಂಭವಾದ ಬೃಹತ್ ಮೆರವಣಿಗೆ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ವೃತ್ತ, ಜಿಲ್ಲಾಧಿಕಾರಿ ಕಚೇರಿ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಮಾರ್ಗವಾಗಿ ಸಿಪಿಎಡ್ ಮೈದಾನ ತಲುಪಿತು.

ಸಂಜೆ ಜಾನಪದ ರಸ ಸಂಜೆ ಕಾರ್ಯಕ್ರಮಕ್ಕೆ ಕರ್ನಾಟಕದ ಉಪಮುಖ್ಯಮಂತ್ರಿ ಹಾಗು ಗೃಹ ಸಚಿವರಾದ ಆರ್. ಅಶೋಕ್ ಚಾಲನೆ ನೀಡಿದರು. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಚಂಚಲಿ ಸಿದ್ದಸಂಸ್ಥಾನಮಠದ ಅಲ್ಲಮಪ್ರಭುಶ್ರೀ, ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯಮೃತ್ಯುಂಜಯಶ್ರೀ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರರಾದ ರಾಘವೇಂದ್ರ ಜೋಶಿ, ರಾಮಚಂದ್ರ ಢವಳಿ, ಕಲ್ಲಪ್ಪಣ್ಣ ಸಂಗೊಳ್ಳಿ, ಸಾವಿತ್ರಿ ಅಪ್ಪುಗೋಳರನ್ನು ಸನ್ಮಾನಿಸಲಾಯಿತು.

ಇದರ ಪತ್ರಿಕಾವರದಿಗಳನ್ನು ಇಲ್ಲಿ ನೋಡಿ-

ಕನ್ನಡ ಪ್ರಭ ವರದಿ -



Thursday, November 29, 2012

ಗಡಿನಾಡ ಕನ್ನಡಿಗರ ಜಾಗೃತಿ ಸಮಾವೇಶ ಬೆಳಗಾವಿ ಸಜ್ಜು

ಇಂದು (೩೦-೧೧-೨೦೧೨) ನಮ್ಮ ವೇದಿಕೆ ನಡೆಸುತ್ತಿರುವ "ಗಡಿನಾಡ ಕನ್ನಡಿಗರ ಜಾಗೃತಿ ಸಮಾವೇಶ" ಕ್ಕೆ ಬೆಳಗಾವಿ ಸಜ್ಜಾಗಿ ನಿಂತಿದೆ.

ಇದರ ಬಗ್ಗೆ ಇಂದಿನ ಕನ್ನಡಪ್ರಭಾದಲ್ಲಿ ವರದಿ -


Saturday, August 18, 2012

ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ ಬೆಂಗಳೂರು ಮಹಾನಗರ ಕಾರ್ಯಕರ್ತರ ಬೃಹತ್ ಸಮಾವೇಶದ ಪತ್ರಿಕಾ ವರದಿಗಳು

೧೮-೦೮-೨೦೧೨ ರಂದು ನಡೆದ ಬೆಂಗಳೂರು ಮಹಾನಗರ ಕಾರ್ಯಕರ್ತರ ಬೃಹತ್ ಸಮಾವೇಶ ಮೆರವಣಿಗೆಯೊಂದಿಗೆ ಸ್ವಾತಂತ್ರ್ಯ ಯೋಧರ ಉದ್ಯಾನವನದಿಂದ ಶುರುವಾಯಿತು. ಮೆರವಣಿಗೆಯಲ್ಲಿ ಸಾವಿರಾರು ಜನ ಭಾಗವಹಿಸಿದರು. ಮೆರವಣಿಗೆ ಅರಮನೆ ಮೈದಾನ ಮುಟ್ಟಿದ್ದು ಮಧ್ಯಾಹ್ನ ೧:೩೦ ಗಂಟೆಗೆ.

ಮಧ್ಯಾಹ್ನ ೨ ಕ್ಕೆ ಕರವೇ ಬೆಂಗಳೂರು ನಗರ ಜಿಲ್ಲಾ ಕಾರ್ಯಕರ್ತರ ಸಮವೇಶವನ್ನು ಶ್ರೀ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಗಳು ಹಾಗೂ ಶ್ರೀ ಶ್ರೀ ಸುರೇಶ್ವರಾನಂದ ಭಾರತಿ ಮಹಾಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ನಡೆಸಲಾಯಿತು. ಸಮಾವೇಶವನ್ನು ಕೇಂದ್ರ ಸಚಿವರಾಗಿರುವ ಶ್ರೀ ಮುನಿಯಪ್ಪನವರು ಉದ್ಘಾಟಿಸಿದರು. ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರು, ರಾಜ್ಯ ರೈತ ಮುಖಂಡರಾದ ಶ್ರೀ ಕೋಡಿಹಳ್ಳಿ ಚಂದ್ರಶೇಖರ್, ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಡಾ. ನಲ್ಲೂರ್ ಪ್ರಸಾದ್, ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ನಗರದ ಅಧ್ಯಕ್ಷರಾದ ಶ್ರೀ ಟಿ. ತಿಮ್ಮೇಶ್, ಸಮತಾ ಸೈನಿಕ ದಳದ ಅಧ್ಯಕ್ಷರಾದ ಎಂ. ವೆಂಕಟಸ್ವಾಮಿ, ಮಾಜಿ ಸಚಿವರು, ಶಿವಾಜಿನಗರದ ಶಾಸಕರಾಗಿರುವ ಶ್ರೀ ರೋಷನ್ ಬೇಗ್ ಸೇರಿದಂತೆ ವೇದಿಕೆಯಲ್ಲಿ ನಾಡಿನ ಹಲವು ಪ್ರಮುಖರು ಭಾಗವಹಿಸಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದರು.

ಸಂಜೆ ೫ ಗಂಟೆಗೆ ಶುರುವಾದ ಸಮಾರೋಪ ಸಮಾರಂಭ ಡಾ| ಬಾಲಗಂಗಾಧರ ನಾಥ ಸ್ವಾಮೀಜಿ ಮತ್ತು ಜಯಮೃತ್ಯುಂಜಯ ಸ್ವಾಮೀಜಿ ಯವರ ಸಮ್ಮುಖದಲ್ಲಿ ನಡೆಯಿತು. ನಿಕಟಪೂರ್ವ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದ ಗೌಡರು, ಸಚಿವರಾದ ಅರವಿಂದ ಲಿಂಬಾವಳಿ, ಗೃಹ ಮತ್ತು ಸಾರಿಗೆ ಸಚಿವರಾದ ಆರ್. ಆಶೋಕ್ , ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುಂಡಲೀಕ ಹಾಲಂಬಿ, ಶಾಸಕರು ಹಾಗು ಮಾಜಿ ಮಂತ್ರಿಗಳಾದ ಡಿ.ಕೆ. ಶಿವಕುಮಾರ್, ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದರು. ಸಮಾರಂಭದಲ್ಲಿ ಚಿತ್ರನಟಿ ತಾರ ಮತ್ತು ಶ್ರೀಮತಿ ನಾಗಲಕ್ಷ್ಮಿ ಪುಟ್ಟಣ್ಣ ಕಣಗಾಲ್ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.

ಸಮಾವೇಶದ ವರದಿಗಳನ್ನು ಇಲ್ಲಿ ನೋಡಿ -

ಸಂಜೆವಾಣಿ ವರದಿ -



ಕನ್ನಡ ಪ್ರಭ ವರದಿ -

ಉದಯವಾಣಿ ವರದಿ -

ವಿಜಯ ಕರ್ನಾಟಕ ವರದಿ -



ಪ್ರಜಾವಾಣಿ ವರದಿ -


 ಈಸಂಜೆ ವರದಿ -



Wednesday, August 15, 2012

೨೦೧೨ ರ ಬೆಂಗಳೂರು ಮಹಾನಗರ ಕಾರ್ಯಕರ್ತರ ಬೃಹತ್ ಸಮಾವೇಶದ ಆಮಂತ್ರಣ

ಆಗಸ್ಟ್ ೧೮ ರಂದು ಬೆಂಗಳೂರು ಮಹಾನಗರ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಅರಮನೆ ಮೈದಾನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ ೧೧ ಕ್ಕೆ ಸ್ವಾತಂತ್ರ್ಯ ಯೋಧರ ಉದ್ಯಾನವನದಿಂದ ಅರಮನೆ ಮೈದಾನದ ವರೆಗು ದೊಡ್ಡ ಮೆರವಣಿಗೆಯನ್ನು ಕೂಡ ಹಮ್ಮಿಕೊಳ್ಳಲಾಗಿದೆ. ನಂತರ ಕಾರ್ಯಕ್ರಮ ಅರಮನೆ ಮೈದಾನದಲ್ಲಿ ಮುಂದುವರಿಯಲಿದೆ.

ತಾವೆಲ್ಲರೂ ಈ ಮೆರವಣಿಗೆ ಹಾಗು ಸಮಾವೇಶದಲ್ಲಿ ಪಾಲ್ಗೊಂಡು ಈ ಸಮಾವೇಶವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.




Monday, January 19, 2009

ಜಾಗೃತಿ ಸಮಾವೇಶದ ವರದಿಗಳು







Thursday, January 15, 2009

ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶ - ಆಹ್ವಾನ ಪತ್ರಿಕೆ

ವಿಚಾರ ಸಂಕಿರಣ:






















ಜನಪದೋತ್ಸವ:

























ಸಮಾರೋಪ ಸಮಾರಂಭ

Sunday, January 11, 2009

Sunday, December 16, 2007

೬ನೇ ಸ್ವಾಭಿಮಾನಿ ಕನ್ನಡಿಗರ ಸಮಾವೇಶದ ದೃಶ್ಯ ಚಿತ್ರಗಳು

ಸಮಾವೇಶದಲ್ಲಿ ವಿವಿಧ ಜನಪದ ತಂಡಗಳು


ಪಾಟೀಲ ಪುಟ್ಟಪ್ಪನವರಿಗೆ ಸ್ವಾಭಿಮಾನಿ ಕನ್ನಡಿಗ ಪ್ರಶಸ್ತಿ ಪುರಸ್ಕಾರ

ಸಮಾವೇಶದ ಮೆರವಣಿಗೆ, ಉದ್ಘಾಟನೆ, ಸಮಾರೋಪದ ರಸ ಕ್ಷಣಗಳು

Sunday, December 9, 2007