Showing posts with label ಕಾವೇರಿ / Cauvery. Show all posts
Showing posts with label ಕಾವೇರಿ / Cauvery. Show all posts

Thursday, September 5, 2013

ಕರ್ನಾಟಕದ ಯೋಜನೆಗಳಿಗೆ ಅಡ್ಡಗಾಲು ಹಾಕುತ್ತಿರುವ ತಮಿಳು ನಾಡು ಸರಕಾರದ ವಿರುದ್ಧ ಪ್ರತಿಭಟನೆ

ಕರ್ನಾಟಕದ ಕಾವೇರಿ ನದಿ ಪಾತ್ರದ ಯೋಜನೆಗಳಿಗೆ ವಿರೋಧ ವ್ಯಕ್ತಪಡಿಸಿ ಪ್ರಧಾನ ಮಂತ್ರಿಗಳಿಗೆ ತಮಿಳು ನಾಡು ಮುಖ್ಯಮಂತ್ರಿ ಜಯಲಲಿತ ಪತ್ರವನ್ನು ಬರೆದಿದ್ದಾರೆ. ಕರ್ನಾಟಕದ ಯೋಜನೆಗಳಿಗೆ ಅಡ್ಡಗಾಲು ಹಾಕುತ್ತಿರುವ ತಮಿಳು ನಾಡು ಸರಕಾರದ ಈ ನಿಲುವನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸುತ್ತದೆ.

ಇದರ ವಿರುದ್ಧ ನಮ್ಮ ಕಾರ್ಯಕರ್ತರು ಮೈಸೂರು ಹಾಗು ಕೋಲಾರದಲ್ಲಿ ಇಂದು ಪ್ರತಿಭಟಿಸುತ್ತಿದ್ದಾರೆ. ಮೈಸೂರಿನ ಪ್ರತಿಭಟನೆಯ ಕೆಲವು ಚಿತ್ರಗಳು ಇಲ್ಲಿವೆ.





Thursday, February 14, 2013

ಕಾವೇರಿ ನ್ಯಾಯಮಂಡಳಿ ಅಂತಿಮ ತೀರ್ಪು ಕೇಂದ್ರ ಸರಕಾರ ಗೆಜೆಟ್ನಲ್ಲಿ ಪ್ರಕಟಿಸದಂತೆ ಹೋರಾಟ

ಕಾವೇರಿ ನ್ಯಾಯಮಂಡಳಿ ಅಂತಿಮ ತೀರ್ಪು ಕೇಂದ್ರ ಸರಕಾರ ಗೆಜೆಟ್ನಲ್ಲಿ ಪ್ರಕಟಿಸದಂತೆ ಒತ್ತಾಯಿಸಿ ನೆನ್ನೆ ಬೆಂಗಳೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಬೃಹತ್ ಪ್ರತಿಭಟನೆ ನಡೆಸಿದವು. ಹೋರಾಟದ ಪತ್ರಿಕಾ ವರದಿಗಳು ಇಲ್ಲಿವೆ


ಈ ಸಂಜೆ ವರದಿ:

ಕನ್ನಡಪ್ರಭ ವರದಿ:



 







































ವಿಜಯವಾಣಿ ವರದಿ:

Friday, October 5, 2012

ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಿ ಎಂದು ಆದೇಶ ಹೊರಡಿಸಿದ ಕೇಂದ್ರ ಸರಕಾರ ಹಾಗು ಆ ಆದೇಶವನ್ನು ಪಾಲಿಸಿ ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸಿದ ರಾಜ್ಯ ಸರಕಾರದ ಕ್ರಮವನ್ನು ವಿರೋಧಿಸಿ ೦೫-೧೦-೨೦೧೨ ರಂದು ನಮ್ಮ ವೇದಿಕೆಯಿಂದ ಬೃಹತ್ ಮೆರವಣಿಗೆ

ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಿ ಎಂದು ಆದೇಶ ಹೊರಡಿಸಿದ ಕೇಂದ್ರ ಸರಕಾರ ಹಾಗು ಆ ಆದೇಶವನ್ನು ಪಾಲಿಸಿ ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸಿದ ರಾಜ್ಯ ಸರಕಾರದ ವಿರುದ್ಧ ೦೫-೧೦-೨೦೧೨ ರಂದು ನಮ್ಮ ವೇದಿಕೆಯು ಬೃಹತ್ ಮೆರವಣಿಗೆಯನ್ನು ಬೆಂಗಳೂರಿನಲ್ಲಿ ಹಮ್ಮಿಕೊಂಡಿತ್ತು. ಮೆರವಣಿಗೆಯಲ್ಲಿ ೨೫,೦೦೦ ಹೆಚ್ಚು ಜನ ಪಾಲ್ಗೊಂಡು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಮೆರವಣಿಗೆಯು ನ್ಯಾಷನಲ್ ಕಾಲೇಜ್ ಮೈದಾನದಿಂದ ಶುರುವಾಗಿ, ಸಜ್ಜನ್ ರಾವ್ ವೃತ್ತ, ಜೆ.ಸಿ. ರಸ್ತೆ, ಪುರಭವನ, ಮೈಸೂರು ಬ್ಯಾಂಕ್ ವೃತ್ತ, ಸೆಂಟ್ರಲ್ ಕಾಲೇಜ್ ಮೂಲಕ ಸ್ವಾತಂತ್ರ್ಯಉದ್ಯಾನವನ ತಲುಪಿ ಅಲ್ಲಿಂದ ರಾಜಭವನದತ್ತ ಸಾಗಿತು.

ಮೆರವಣಿಗೆಯಲ್ಲಿ ಆದಿಚುಂಚನಗಿರಿ ಶ್ರೀಗಳಾದ ಬಾಲಗಂಗಾಧರ ಸ್ವಾಮಿಜಿ, ಪಂಚಮಸಾಲಿ ಮಠದ ಅಧ್ಯಕ್ಷರಾದ ಜಯಮೃತ್ಯುಂಜಯ ಸ್ವಾಮಿಜಿ, ಗೋಸಾಯಿಮಠದ ಶ್ರೀಸುರೇಶನಂದ ಸ್ವಾಮಿಜಿ, ಶ್ರೀ ನಂಜಾವಧೂತ ಸ್ವಾಮೀಜಿ, ಮಾಜಿ ಸಂಸದ ಅಂಬರೀಶ್, ಸಮತಾ ಸೈನಿಕ ದಳದ ಅಧ್ಯಕ್ಷರಾದ ಎಂ. ವೆಂಕಟಸ್ವಾಮಿ, ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್, ಕನ್ನಡ ಸಾಹಿತ್ಯ ಪರಿಷತ್ ನ ನಿಕಟಪೂರ್ವ ಅಧ್ಯಕ್ಷರಾದ ಡಾ|| ನಲ್ಲೂರು ಪ್ರಸಾದ್, ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ನಗರ ಅಧ್ಯಕ್ಷರಾದ ತಿಮ್ಮೇಶ್, ಚಲನಚಿತ್ರ ವಾಣೀಜ್ಯ ಮಂಡಳಿ ಅಧ್ಯಕ್ಷರಾದ ಬಿ. ವಿಜಯಕುಮಾರ್, ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಮುನಿರತ್ನ ನಾಯ್ಡು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಬಿ,ಎನ್.ವಿ. ಸುಬ್ರಹ್ಮಣ್ಯ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಟಿ.ಎ. ನಾರಾಯಣಗೌಡರು ಉಪಸ್ಥಿತರಿದ್ದರು.

ಮೆರವಣಿಗೆಯ ಪತ್ರಿಕಾ ವರದಿಗಳನ್ನು ಇಲ್ಲಿ ನೋಡಿ -

ಕನ್ನಡ ಪ್ರಭ ವರದಿ -



ಪ್ರಜಾವಾಣಿ ವರದಿ -




ವಿಜಯ ಕರ್ನಾಟಕ ವರದಿ -

ಈಸಂಜೆ ವರದಿ -


ಸಂಜೆವಾಣಿ ವರದಿ -



ಉದಯವಾಣಿ ವರದಿ - 

ಡಿ ಎನ್ ಎ ವರದಿ -

ಡೆಕ್ಕನ್ ಹೆರಾಲ್ಡ್ ವರದಿ -

Thursday, October 4, 2012

ನಮ್ಮ ಕಾರ್ಯಕರ್ತರಿಂದ ೦೫-೧೦-೨೦೧೨ ರಂದು ಬೆಳಿಗ್ಗೆ ೧೦:೩೦ ನ್ಯಾಷನಲ್ ಕಾಲೇಜ್ ಮೈದಾನದಿಂದ ಮೆರವಣಿಗೆ

ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಿ ಎಂದು ಆದೇಶ ಹೊರಡಿಸಿದ ಕೇಂದ್ರ ಸರಕಾರ ಹಾಗು ಆ ಆದೇಶವನ್ನು ಪಾಲಿಸಿ ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸಿದ ರಾಜ್ಯ ಸರಕಾರದ ವಿರುದ್ಧ ನಮ್ಮ ಕಾರ್ಯಕರ್ತರು ಇಂದು (೦೫-೧೦-೨೦೧೨) ದೊಡ್ಡ ಮೆರವಣಿಗೆಯನ್ನು ನಮ್ಮ ಅಧ್ಯಕ್ಷರಾದ ಟಿ.ಎ. ನಾರಾಯಣ ಗೌಡರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದಾರೆ.


ಬೆಳಿಗ್ಗೆ ೧೦:೩೦ ಕ್ಕೆ ನ್ಯಾಷನಲ್ ಕಾಲೇಜ್ ಮೈದಾನದಿಂದ ಶುರುವಾಗುವ ಮೆರವಣಿಗೆ ರಾಜಭವನದತ್ತ ಸಾಗಲಿದೆ.

ಇದರ ಪತ್ರಿಕಾ ವರದಿಗಳನ್ನು ಇಲ್ಲಿ ನೋಡಿ

ಕನ್ನಡಪ್ರಭ ವರದಿ -  


ವಿಜಯ ಕರ್ನಾಟಕ ವರದಿ -

ಕಾವೇರಿ ನದಿ ಪ್ರಾಧಿಕಾರ ನೀಡಿರುವ ಕರ್ನಾಟಕ ವಿರೋಧಿ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಒತ್ತಾಯಿಸಿ ಮೆರವಣಿಗೆ

ಕಾವೇರಿ ನದಿ ಪ್ರಾಧಿಕಾರ ನೀಡಿರುವ ಕರ್ನಾಟಕ ವಿರೋಧಿ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಒತ್ತಾಯಿಸಿ ರಾಜಭವನ ಮುತ್ತಿಗೆ ಹೋರಾಟವನ್ನು ಬೆಂಗಳೂರಿನಲ್ಲಿ ಅಕ್ಟೋಬರ್ 5, ಶುಕ್ರವಾರ ಹಮ್ಮಿಕೊಂಡಿದ್ದೇವೆ. ಸಾವಿರಾರು ಕಾರ್ಯಕರ್ತರು ಈ ಹೋರಾಟದಲ್ಲಿ ಭಾಗವಹಿಸಲಿದ್ದಾರೆ. ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಿಂದ ರಾಜಭವನದವರೆಗೆ ಬೃಹತ್ ಮೆರವಣಿಗೆ ನಡೆಯಲಿದೆ. ಈ ಬೃಹತ್ ಮೆರವಣಿಗೆ ಬೆಳಿಗ್ಗೆ 10:30 ಕ್ಕೆ ಶುರು ಆಗಲಿದೆ.

ದಿನಾಂಕ - ಅಕ್ಟೋಬರ್ 5, ಶುಕ್ರವಾರ

ಸಮಯ - ಬೆಳಿಗ್ಗೆ 10:30

ಮೆರವಣಿಗೆ ಹೊರಡುವ ಸ್ಥಳ - ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನ

ಕಾವೇರಿ ನೀರು ಕುಡಿಯುವ ಬೆಂಗಳೂರಿನ ನಾಗರಿಕರೇ ಬನ್ನಿ, ಹೋರಾಟದಲ್ಲಿ ಭಾಗವಹಿಸಿ.  

Wednesday, October 3, 2012

ಅಕ್ಟೋಬರ್ ೫ ರಂದು ಬೃಹತ್ ರಾಲಿ, ರಾಜಭವನ ಮುತ್ತಿಗೆ

ನಮ್ಮ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಕಾರ್ಯಕರ್ತರ ಸಭೆ ನಡೆಯಿತು. ಈ ಸಭೆಯಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದರ ವಿಷಯವಾಗಿ ಚರ್ಚೆ ನಡೆಯಿತು.

ಅಕ್ಟೋಬರ್ ೫, ೨೦೧೨, ಶುಕ್ರವಾರದ ದಿನ ಬೆಂಗಳೂರಿನ ನ್ಯಾಶನಲ್ ಕಾಲೇಜು ಕ್ರೀಡಾಂಗಣದಿಂದ ರಾಜಭವನದ ವರೆಗೆ ಬೃಹತ್ ಕಲ್ನಡಿಗೆ ಜಾಥವನ್ನು ಏರ್ಪಡಿಸಲಾಗುವುದು ಅಂತ ತೀರ್ಮಾನಿಸಲಾಯಿತು.


ಕಾವೇರಿ ನೀರು ಬಿಡುಗಡೆ ವಿರೋಧಿಸಿ ಹಾಸನ ಚಾಮರಾಜನಗರದಲ್ಲಿ ಹೋರಾಟ

ತಮಿಳುನಾಡಿಗೆ ಬಿಡುಗಡೆ ಮಾಡುತ್ತಿರುವ ಕಾವೇರಿ ನೀರನ್ನು ಈ ಕೂಡಲೇ ನಿಲ್ಲಿಸಬೇಕೆಂದು ನಮ್ಮ ಕಾರ್ಯಕರ್ಯತರು ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಹೋರಾಟ ಮಾಡಿದರು.


ಕನ್ನಡಪ್ರಭ ವರದಿ:






















































Tuesday, October 2, 2012

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಮುತ್ತಿಗೆ

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಿರುವುದನ್ನು ಖಂಡಿಸಿ ನಮ್ಮ ಕಾರ್ಯಕರ್ತರು ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಮುತ್ತಿಗೆ ಹಾಕಿದರು

ಈ ಸಂಜೆ ಚಿತ್ರ:



















ಕೋಲಾರದಲ್ಲಿ ಪ್ರತಿಭಟನೆ:


Monday, October 1, 2012

ಕಾವೇರಿ ನೀರು ಬಿಟ್ಟಿದ್ದನ್ನು ಪ್ರಶ್ನಿಸಿ ರಾಜ್ಯಾದ್ಯಂತ ಪ್ರತಿಭಟನೆ

ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಿ ಎಂದು ಆದೇಶ ಹೊರಡಿಸಿದ ಕೇಂದ್ರ ಸರಕಾರ ಹಾಗು ಆ ಆದೇಶವನ್ನು ಪಾಲಿಸಿ ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸಿದ ರಾಜ್ಯ ಸರಕಾರದ ವಿರುದ್ಧ ನಮ್ಮ ಕಾರ್ಯಕರ್ತರು ಮಂಡ್ಯ, ಮೈಸೂರು, ತುಮಕೂರು, ಮದ್ದೂರು, ಕೋಲಾರ, ಕೊಡಗು, ಹಾಸನ, ದಾವಣಗೆರೆ, ಚಿತ್ರದುರ್ಗ, ಚನ್ನಪಟ್ಟಣ, ಬೆಂಗಳೂರು ಹಾಗು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು.

ಇದರ ಪತ್ರಿಕಾ ವರದಿಯನ್ನು ಇಲ್ಲಿ ನೋಡಿ -
 
ಮಂಡ್ಯ -
 

ಮೈಸೂರು -



ತುಮಕೂರು -



ಮದ್ದೂರು -



ಕೋಲಾರ -


 
ಕೊಡಗು -
 

ಹಾಸನ -



ದಾವಣಗೆರೆ -



ಚಿತ್ರದುರ್ಗ -



ಚನ್ನಪಟ್ಟಣ -




ಬೆಂಗಳೂರು -



Sunday, September 30, 2012

ತಮಿಳು ನಾಡಿಗೆ ಕಾವೇರಿ ನೀರು - ಕೇಂದ್ರ ಸರಕಾರ ಹಾಗು ರಾಜ್ಯ ಸರಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ

ಕರ್ನಾಟಾಕಕ್ಕೆ ಕುಡಿಯಲು ನೀರು ಇಲ್ಲದೆ ಬರದ ಪರಿಸ್ಥಿತಿ ಇರುವಾಗ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಿ ಎಂದು ಆದೇಶ ಹೊರಡಿಸಿದ ಕೇಂದ್ರ ಸರಕಾರ ಹಾಗು ಆ ಆದೇಶವನ್ನು ಪಾಲಿಸಿ ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸಿದ ರಾಜ್ಯ ಸರಕಾರದ ವಿರುದ್ಧ ನಮ್ಮ ಕಾರ್ಯಕರ್ತರು ಬೆಂಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಹಾವೇರಿ, ಕೋಲಾರ, ಮದ್ದೂರು ಹಾಗು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು.
ಇದರ ಪತ್ರಿಕಾ ವರದಿಗಳನ್ನು ಇಲ್ಲಿ ನೋಡಿ.    

ಬೆಂಗಳೂರು -  

ಮೈಸೂರು -

ಮಂಡ್ಯ -


ಚಾಮರಾಜನಗರ -

ಹಾಸನ -


ಹಾವೇರಿ -


ಕೋಲಾರ -

ಮದ್ದೂರು -

ಈಸಂಜೆ ವರದಿ -


DNA ವರದಿ -




Friday, September 28, 2012

ಕಾವೇರಿ ವಿಚಾರ ಕುರಿತು ಕರ್ನಾಟಕ ವಿರೋಧಿ ಕೆಲಸ ಮಾಡುತ್ತಿರುವ ಕೇಂದ್ರ ಮತ್ತು ತಮಿಳುನಾಡು ಸರ್ಕಾರಗಳ ಕ್ರಮ ಖಂಡಿಸಿ ಪಂಜಿನ ಮೆರವಣಿಗೆ

ಕಾವೇರಿ ವಿಚಾರ ಕುರಿತು ಕರ್ನಾಟಕ ವಿರೋಧಿ ಕೆಲಸ ಮಾಡುತ್ತಿರುವ ಕೇಂದ್ರ ಮತ್ತು ತಮಿಳುನಾಡು ಸರ್ಕಾರಗಳ ಕ್ರಮ ಖಂಡಿಸಿ ೨೯-೦೯-೨೦೧೨ ರ ಸಂಜೆ ನಮ್ಮ ಕಾರ್ಯಕರ್ತರು ಬೆಂಗಳೂರಿನ ಬಿ.ಬಿ.ಎಂ.ಪಿ. ಕೇಂದ್ರ ಕಚೇರಿಯಿಂದ ಸ್ವಾತಂತ್ರ್ಯ ಉದ್ಯಾನದ ವರೆಗೆ ಪಂಜಿನ ಮೆರವಣಿಗೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.

ಇದರ ಪತ್ರಿಕಾ ವರದಿಗಳನ್ನು ಇಲ್ಲಿ ನೋಡಿ.

ಕನ್ನಡಪ್ರಭ ವರದಿ -


ಉದಯವಾಣಿ ವರದಿ -

ಪ್ರಜಾವಾಣಿ ವರದಿ - 

Thursday, September 27, 2012

ಪ್ರಧಾನಿ ಮನಮೋಹನ್ ಸಿಂಗ್ ಅವರು ಕಾವೇರಿ ನೀರು ಬಿಡುವಂತೆ ಆದೇಶಿಸಿದ್ದನ್ನು ವಿರೋಧಿಸಿ ಅತ್ತಿಬೆಲೆ ಬಳಿ ಹೊಸೂರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು

ಪ್ರಧಾನಿ ಮನಮೋಹನ್ ಸಿಂಗ್ ಅವರು ಅಕ್ಟೋಬರ್ ೧೫ರ ವರೆಗು ಪ್ರತಿನಿತ್ಯ ೯೦೦೦ ಕುಸೆಕ್ಸ್ ಕಾವೇರಿ ನೀರು ಬಿಡುವಂತೆ ಆದೇಶಿಸಿದ್ದನ್ನು ವಿರೋಧಿಸಿ ೨೭-೦೯-೨೦೧೨ ರಂದು ನಮ್ಮ ಕಾರ್ಯಕರ್ತರು ಅತ್ತಿಬೆಲೆ ಬಳಿ ಹೊಸೂರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಇದರ ಪತ್ರಿಕಾ ವರದಿಗಳನ್ನು ಇಲ್ಲಿ ನೋಡಿ.


ಸಂಜೆವಾಣಿ ವರದಿ -
ಈ ಸಂಜೆ ವರದಿ -




ಕನ್ನಡಪ್ರಭ ವರದಿ -

Wednesday, September 26, 2012

ಪ್ರಧಾನಿ ಮನಮೋಹನ್ ಸಿಂಗ್ ಅವರು ಕಾವೇರಿ ನೀರು ಬಿಡುವಂತೆ ಆದೇಶಿಸಿದ್ದನ್ನು ವಿರೋಧಿಸಿ ಕೇಂದ್ರೀಯ ಸಧನಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ

ಪ್ರಧಾನಿ ಮನಮೋಹನ್ ಸಿಂಗ್ ಅವರು ಅಕ್ಟೋಬರ್ ೧೫ರ ವರೆಗು ಪ್ರತಿನಿತ್ಯ ೯೦೦೦ ಕುಸೆಕ್ಸ್ ಕಾವೇರಿ ನೀರು ಬಿಡುವಂತೆ ಆದೇಶಿಸಿದ್ದನ್ನು ವಿರೋಧಿಸಿ ೨೬-೦೯-೨೦೧೨ ರಂದು ನಮ್ಮ ಕಾರ್ಯಕರ್ತರು ಕೇಂದ್ರೀಯ ಸಧನಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಇದರ ಪತ್ರಿಕಾ ವರದಿಗಳನ್ನು ಇಲ್ಲಿ ನೋಡಿ.

ಕನ್ನಡಪ್ರಭ ವರದಿ -
 


ವಿಜಯ ಕರ್ನಾಟಕ ವರದಿ -