Saturday, May 19, 2012
Thursday, May 10, 2012
ಬೆಳಗಾವಿಯಲ್ಲಿ ಕನ್ನಡ ಬಾವುಟ ಸಟ್ಟುಹಾಕಿದ್ದನ್ನು ಖಂಡಿಸಿ ಬೀದರ್ ನಲ್ಲಿ ಪ್ರತಿಭಟನೆ
ಬೆಳಗಾವಿ ಜಿಲ್ಲೆಯಲ್ಲಿ ಕನ್ನಡ ಬಾವುಟವನ್ನು ಕೆಲವು ಕಿಡಿಗೇಡಿಗಳು ಸುಟ್ಟು ಹಾಕಿದ್ದನ್ನು ಖಂಡಿಸುತ್ತ, ಬೀದರ್ ಜಿಲ್ಲೆಯಲ್ಲಿ ನಮ್ಮ ಕಾರ್ಯಕರ್ತರು ೦೫-೦೫-೨೦೧೨ ರಂದು ಪ್ರತಿಭಟನೆ ನಡೆಸಿದರು.
ಇದರ ವರದಿಗಳನ್ನು ಇಲ್ಲಿ ನೋಡಿ.
ಕನ್ನಡಪ್ರಭ ವರದಿ:
ವಿಜಯ ಕರ್ನಾಟಕ ವರದಿ:
ಪೋಸ್ಟ್ ಬರೆದವರು:
ಕರ್ನಾಟಕ ರಕ್ಷಣಾ ವೇದಿಕೆ
, ಸಮಯ:
Thursday, May 10, 2012
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಗಡಿ / Border, ಬೆಳಗಾವಿ / BeLagavi
Friday, May 4, 2012
ಬೆಳಗಾವಿಯಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ - ಕರವೇಯಿಂದ ಪ್ರತಿಭಟನೆ
ಬೆಳಗಾವಿಯಲ್ಲಿ ಕಿಡಿಗೇಡಿಗಳು ಕನ್ನಡದ ಬಾವುಟಕ್ಕೆ ಬೆಂಕಿ ಹಾಕಿದ್ದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಕಾರ್ಯಕರ್ತರೊಡನೆ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದೆವು.
ಪ್ರತಿಭಟನೆಯ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:
ವಿಜಯಕರ್ನಾಟಕ ವರದಿ:
ಕನ್ನಡಪ್ರಭ ವರದಿ:
ವಿಜಯವಾಣಿ ವರದಿ:
ಪೋಸ್ಟ್ ಬರೆದವರು:
ಕರ್ನಾಟಕ ರಕ್ಷಣಾ ವೇದಿಕೆ
, ಸಮಯ:
Friday, May 04, 2012
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಗಡಿ / Border, ಬೆಳಗಾವಿ / BeLagavi
Sunday, April 15, 2012
ಬೆಳಗಾವಿ ಕುರಿತು ಎಂ.ಇ.ಎಸ್. ಗೆ ಮಹಾರಾಷ್ಟ್ರ ಸರ್ಕಾರದ ಬೆಂಬಲ ಖಂಡಿಸಿ ಪ್ರತಿಭಟನೆ
ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವಂತೆ ಪಿತೂರಿ ನಡೆಸಿ ಮುಂಬಯಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ನಾಡದ್ರೋಹಿ ಎಂ.ಇ.ಎಸ್. ಸಂಘಟನೆಗೆ ಮಹಾರಾಷ್ಟ್ರ ಸರ್ಕಾರದ ಶಾಸಕರು ಬೆಂಬಲ ಸೂಚಿಸಿದ್ದನ್ನು ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ ನೆನ್ನೆ ಏಪ್ರಿಲ್ ೧೪, ೨೦೧೨ - ಶನಿವಾರದಂದು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿತು.
ಪ್ರತಿಭಟನೆ ವೇಳೆ ಗಡಿ ಭಾಗದಲ್ಲಿ ಸೌಹಾರ್ದಕ್ಕೆ ಧಕ್ಕೆ ಉಂಟು ಮಾಡಲು ಬೆಂಬಲ ನೀಡುತ್ತಿರುವ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು. ನಾವು ನಡೆಸಿದ ಪ್ರತಿಭಟನೆಯ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:
ಕನ್ನಡಪ್ರಭ ವರದಿ:
ವಿಜಯಕರ್ನಾಟಕ ವರದಿ:

ಪೋಸ್ಟ್ ಬರೆದವರು:
ಕರ್ನಾಟಕ ರಕ್ಷಣಾ ವೇದಿಕೆ
, ಸಮಯ:
Sunday, April 15, 2012
ಗುಂಪುಗಳು: ಕರ್ನಾಟಕ ರಕ್ಷಣಾ ವೇದಿಕೆ / Karnataka Rakshana Vedike, ಬೆಳಗಾವಿ / BeLagavi
Tuesday, April 10, 2012
ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ಮತ್ತು ಕನ್ನಡಿಗರ ಉದ್ಯೋಗಕ್ಕಾಗಿ ನಡೆಸಿದ ಹೋರಾಟಕ್ಕೆ ಜಯ
ಬೆಂಗಳೂರು ಅಂತರಾಷ್ಹ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾರಂಭ ಮುಂಚೆಯೇ, ೨೦೦೮ ರ ಮೇ ವೇಳೆಗೇ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರನ್ನು ಇಡಬೇಕೆಂಬ ಮತ್ತು ಅಲ್ಲಿ ಎಲ್ಲ ರೀತಿಯಲ್ಲಿ ಕನ್ನಡಕ್ಕೆ ಆದ್ಯತೆ ಹಾಗೂ ಅಲಿನ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಸಿಂಹಪಾಲು ದೊರೆಯಬೇಕೆಂಬ ಬೇಡಿಕೆಗಳೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆಯು ತನ್ನ ಹೋರಾಟ ಆರಂಭಿಸಿತ್ತು.
ಹೋರಾಟದ ವೇಳೆ ನಾವು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಮುಂದಿಟ್ಟಿದ್ದ ಕೆಲವು ಪ್ರಮುಖ ಬೇಡಿಕೆಗಳು ಹೀಗಿವೆ:
೧. ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರನ್ನು ಇಡಬೇಕು
೨. ವಿಮಾನ ನಿಲ್ದಾಣದಲ್ಲಿರುವ ಉದ್ಯೋಗಗಳು ಕನ್ನಡಿಗರಿಗೆ ದೊರಕಬೇಕು. ವಿಮಾನ ನಿಲ್ದಾಣಕ್ಕೆ ೪೦೦೦ ಎಕರೆ ಭೂಮಿ ನೀಡಿದ ೩೦೦೦ ರೈತ ಕುಟುಂಬದವರಿಗೆ ಆದ್ಯತೆ ನೀಡಬೇಕು.
೩. ವಿಮಾನ ನಿಲ್ದಾಣ ದಲ್ಲಿರುವ ನಾಮಫಲಕಗಳು ಮತ್ತು ಗ್ರಾಹಕ ಸೇವೆ ಕನ್ನಡದಲ್ಲಿರಬೇಕು.
೨೦೦೮ ರಲ್ಲಿ ಆರಂಭವಾದ ಈ ಹೋರಾಟವನ್ನು ಕರ್ನಾಟಕ ರಕ್ಷಣಾ ವೇದಿಕೆಯು ನಿರಂತರವಾಗಿ ನಡೆಸಿಕೊಂಡು, ಹಲವು ಪ್ರತಿಭಟನಾ ನಡಿಗೆಗಳು, ಸರ್ಕಾರಕ್ಕೆ ಮತ್ತು ವಿಮಾನ ನಿಲ್ದಾಣದ ಮುಖ್ಯ ಅಧಿಕಾರಿಗಳಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸುವಿಕೆ ಹಾಗೂ ಇತರೆ ಹಲವು ಹೋರಾಟಗಳನ್ನು ಮಾಡಿದ್ದರ ಫಲವಾಗಿ ಇಂದು ನಮ್ಮ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ "ನಾಡಪ್ರಭು ಕೆಂಪೇಗೌಡರ" ಹೆಸರನ್ನು ಇಡಲು ಸರ್ಕಾರ ತೀರ್ಮಾನಿಸಿದೆ. ಇದು ಕರವೇ ಹೋರಾಟಕ್ಕೆ ಮತ್ತು ಸಮಸ್ತ ಕನ್ನಡಿಗರಿಗೆ ಸಂದ ಜಯ.
ಇಷ್ಟೇ ಅಲ್ಲದೆ, ಈಗಾಗಲೆ ಭರ್ತಿಯಾಗಿರುವ ಹಲವಾರು ಹುದ್ದೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ದೊರೆತಿದೆ. ಮುಂದೆಯೂ ವಿಮಾನ ನಿಲ್ದಾಣದಲ್ಲಿ ಶುರುವಾಗುವ ಇತರ ಉದ್ಯೋಗಾವಕಾಶಗಳಲ್ಲೂ ಕನ್ನಡಿಗರಿಗೆ ಆದ್ಯತೆ ದೊರಕಿಸಿಕೊಳ್ಳಲು ಹೋರಾಟಗಳನ್ನು ನಡೆಸಲಾಗುವುದು. ಜೊತೆಗೆ, ಇಡೀ ವಿಮಾನ ನಿಲ್ದಾಣದಲ್ಲಿ ಕನ್ನಡದ ವಾತಾವಾರಣ, ಕನ್ನಡದಲ್ಲಿ ದೊಡ್ಡದಾದ ನಾಮಫಲಕಗಳು ಮತ್ತು ಎಲ್ಲ ಗ್ರಾಯಕ ಸೇವೆ ಕನ್ನಡದಲ್ಲಿ ಸಿಗುವಂತಾಗಲು ಕರ್ನಾಟಕ ರಕ್ಷಣಾ ವೇದಿಕೆಯು ಹೋರಾಟ ನಡೆಸಲಿದೆ.
ಈ ವಿಚಾರವಾಗಿ ನಾವು ಇದುವರೆಗೂ ನಡೆಸಿರುವ ಕೆಲ ಮುಖ್ಯ ಹೊರಾಟಗಳ ವಿವರ ಮತ್ತು ಪತ್ರಿಕಾ ವರದಿಗಳು ಇಂತಿವೆ:
- ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ ಕನ್ನಡಿಗರಿಗೆ ಉದ್ಯೋಗ ಮತ್ತು ಕೆಂಪೇಗೌಡರ ಹೆಸರನ್ನು ಇಡುವಂತೆ ಒತ್ತಾಯಿಸಲು ನಡೆಸಿದ ಪೂರ್ವಭಾವಿ ಸಭೆ
- ಅಂತರಾಷ್ಟ್ರೀಯ ವಿಮಾನನಿಲ್ದಾಣ- ಹಕ್ಕೊತ್ತಾಯ ಪತ್ರ
- ಬೆಂಗಳೂರು ಅಂತರಾಷ್ಹ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕೆಂದು ಹೋರಾಟ
- ಬೆಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡಿಗರಿಗೆ ಆದ್ಯತೆಯಂದ ನಾರಾಯಣ ಗೌಡರ ಬಂಧನ
- ಏರ್ಪೊರ್ಟ್ - ಕನ್ನಡಿಗರ ಬೇಡಿಕೆಗಳು ಈಡೇರದಿದ್ದಲ್ಲಿ ಉಗ್ರ ಹೋರಾಟ
- ಬೆಂಗಳೂರು ಇಂಟರ್ನ್ಯಷನಲ್ ಏರ್ಪೊಟ್ ಲಿಮಿಟೆದ್ (ಬಿ.ಐ.ಏ.ಎಲ್.) ಗೆ ನೀಡಿದ ಹಕ್ಕೊತ್ತಾಯ ಪತ್ರ
ಪೋಸ್ಟ್ ಬರೆದವರು:
ಕರ್ನಾಟಕ ರಕ್ಷಣಾ ವೇದಿಕೆ
, ಸಮಯ:
Tuesday, April 10, 2012
ಗುಂಪುಗಳು: ಉದ್ಯೋಗ / Employment, ಬಿಐಎಎಲ್ / BIAL






