Friday, January 18, 2013

ತಾಳವಾಡಿಯ ಕನ್ನಡ ಶಾಲೆಗಳಲ್ಲಿ ತಮಿಳುನಾಡಿನ ದರ್ಬಾರಿನ ಕ್ರಮ ವಿರೋಧಿಸಿ ಪ್ರತಿಭಟನೆ

ತಮಿಳುನಾಡಿನ ತಾಳವಾಡಿಯಲ್ಲಿ ಕನ್ನಡಿಗರೇ ಹೆಚ್ಚಿರುವ ಪ್ರದೇಶಗಳ ಕನ್ನಡ ಶಾಲೆಗಳಲ್ಲಿ ಒತ್ತಾಯಪೂರಕವಾಗಿ ತಮಿಳನ್ನು ಪ್ರಥಮ ಭಾಷೆಯನ್ನಾಗಿ ಕಲಿಯುವಂತೆ ಆದೇಶ ಹೊರಡಿಸಿರುವ ತಮಿಳುನಾಡು ಸರಕಾರದ ಕ್ರಮ ಖಂಡಿಸಿ ನಮ್ಮ ಚಾಮರಾಜನಗರ ಜಿಲ್ಲಾ ಘಟಕದ ನೂರಾರು ಕಾರ್ಯಕರ್ತರು ದಿನಾಂಕ ೧೭-೦೧-೨೦೧೩ ರ ಗುರುವಾರ ಪ್ರತಿಭಟಿಸಿದರು.

ತಾಳವಾಡಿಯಲ್ಲಿ ಕನ್ನಡಿಗರು ಪ್ರತಿಭಟಿಸಿದರು ಎಂದು ಅವರ ಮೇಲೆ ದೌರ್ಜನ್ಯವೆಸೆಗಿರುವ ತಮಿಳುನಾಡು ಪೋಲಿಸರ ವರ್ತನೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸುತ್ತದೆ ಹಾಗು ಇದರ ಬಗ್ಗೆ ಸಂಬಂಧಪಟ್ಟ ಸರಕಾರಗಳು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಕರವೇ ತೀವ್ರ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಈ ಸಂದರ್ಭದಲ್ಲಿ ನಮ್ಮ ಜಿಲ್ಲಾಧ್ಯಕ್ಷ ಎಚ್ಚರಿಕೆ ನೀಡಿದರು.


ನಮ್ಮ ಪ್ರತಿಭಟನೆ ಕುರಿತ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:

ಉದಯವಾಣಿ ವರದಿ:


ಪ್ರಜಾವಾಣಿ ವರದಿ:

ವಿಜಯಕರ್ನಾಟಕ ವರದಿ:

ಕನ್ನಡಪ್ರಭ ವರದಿ: